ಅನಂತ್‌ನಾಗ್‌ಗೆ ಪದ್ಮಭೂಷಣ ಸಂಗೀತ ದಿಗ್ಗಜ ಲಕ್ಷ್ಮೀನಾರಾಯಣಗೆ ಪದ್ಮವಿಭೂಷಣ ಗೌರವ
by ಕೆಂಧೂಳಿ
ಬೆಂಗಳೂರು ಜ.೨೬-ಕೇಂದ್ರ ಸರ್ಕಾರ ೨೦೫ನೇ ಸಾಲಿನ ದಿಗ್ಗಜರಿಗೆ ನೀಡುವ ಪದ್ಮಭೂಷಣ,ವಿಭೂಷಣ ಪ್ರಶಸ್ತಿಗಳನ್ನು ಘೋಷಿಸಿದ್ದು ಈ ಬಾರಿ ಕನ್ನಡದ ಖ್ಯಾತ ನಟ ಅನಂತ್‌ನಾಗ್ ಅವರಿಗ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಹಾಗೆಯೇ ಕರ್ನಾಟಕದ ಸಂಗೀತ ಕ್ಷೇತ್ರದ ದಿಗ್ಗಜ ಸುಬ್ರಮಣಿಯಂ ಲಕ್ಷ್ಮೀನಾರಾಯಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿಗೌರವಿಸಲಾಗಿದೆ.
ಭಾರತದಲ್ಲಿ ಸುಜುಕಿ ಕಂಪನಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಜುಕಿ ಕಂಪನಿಯ ಮಾಜಿ ಚೇರ್ಮನ್ , ಇತ್ತೀಚೆಗೆ ನಿಧನರಾದ ಜಪಾನ್‌ನ ಒಸಾಮು ಸುಜುಕಿ ಅವರಿಗೆ ಪದ್ಮವಿಭೂಷಣದ ಮೂಲಕ ಭಾರತ ಗೌರವ ಸಲ್ಲಿಸಿದೆ. ಪ್ರತಿ ಬಾರಿ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದ್ದವು. ಅದರಲ್ಲೂ ದಶಕಗಳ ಕಾಲ ಕಲಾಸೇವೆಯಲ್ಲಿದ್ದ ಅನಂತ್ ನಾಗ್ ಅವರ ವಿಚಾರ ಬಂದಾಗ ಕೇಂದ್ರ ಸರ್ಕಾರ ಅವರಿಗೆ ಸಲ್ಲಬೇಕಾದ ಮನ್ನಣೆ ನೀಡಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದ್ದವು. ಈಗ ಕನ್ನಡಿಗರ ದಶಕಗಳ ಬೇಡಿಕೆಯನ್ನುಕೇಂದ್ರ ಸರ್ಕಾರ ಪೂರೈಸಿದ್ದು, ೭ ಮಂದಿಗೆ ಪದ್ಮವಿಭೂಷಣ ೧೯ ಮಂದಿಗೆ ಪದ್ಮಭೂಷಣ ೧೧೩ ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಪದ್ಮಭೂಷಣ ಪ್ರಶಸ್ತಿ ಪುರಸ್ಕತರಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಅನಂಗ್ ಒಬ್ಬರಾಗಿದ್ದಾರೆ. ಪತ್ರಕರ್ತ ಎ.ಸೂರ್ಯ ಪ್ರಕಾಶ್ ಅವರಿಗೂ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತೆಲಂಗಾಣದ ಡಾ.ಡಿ. ನಾಗೇಶ್ವರ್ ರೆಡ್ಡಿ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ, ಚಂಡೀಗಢದ ನಿವೃತ್ತ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರಿಗೆ ಸಾರ್ವಜನಿಕ ವ್ಯವಹಾರಗಳಲ್ಲಿ, ಗುಜರಾತ್‌ನ ಕುಮುದಿನಿ ರಜನೀಕಾಂತ್ ಲಖಿಯಾ ಅವರಿಗೆ ಕಲಾ ಕ್ಷೇತ್ರದಲ್ಲಿ, ಕರ್ನಾಟಕದ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಕಲಾ ಕ್ಷೇತ್ರದಲ್ಲಿ. ಕೇರಳದ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ಮರಣೋತ್ತರವಾಗಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ, ಜಪಾನ್‌ನ ಒಸಾಮು ಸುಜುಕಿ ಅವರಿಗೆ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಮರಣೋತ್ತರವಾಗಿ, ಬಿಹಾರದ ಶಾರದಾ ಸಿನ್ಹಾ ಅವರಿಗೆ ಕಲಾ ಕ್ಷೇತ್ರದಲ್ಲಿ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.