ಬಿ.ಎಸ್.ವೈ ಪೋಕ್ಸೋ ಪ್ರಕರಣ,  ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Share

ಬಿ.ಎಸ್.ವೈ ಪೋಕ್ಸೋ ಪ್ರಕರಣ,  ತೀರ್ಪು ಕಾಯ್ದಿರಿಸಿದ ಹೈಕೋರ್ಟ್

 

ಬೆಂಗಳೂರು, ಜ,17-ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣವನ್ನು ರದ್ದು ಪಡಿಸುವಂತೆ ಮಾಡಿಕೊಂಡಿದ್ದ ಮನವಿಯನ್ನು ಹೈಕೋರ್ಟ್ ಕಾಯ್ದಿರಿಸಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರವು, ದೂರುದಾರರ ಮರಣದ ನಂತರ ಯಡಿಯೂರಪ್ಪ ಅವರು ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸುವಂತೆ ‘ಯೋಚಿಸಿ’ ಅರ್ಜಿ ಸಲ್ಲಿಸಿದ್ದಾರೆ ಎಂಬ ಹೇಳಿದೆ. ಪೋಕ್ಸೋ ಪ್ರಕರಣ ರದ್ದತಿಗೆ
ರಾಜ್ಯ ಸರ್ಕಾರದ ವಾದವನ್ನು ವಿರೋಧಿಸಿದ ಯಡಿಯೂರಪ್ಪ, ದೂರುದಾರರು ಯಾವಾಗ ಸಾಯುತ್ತಾರೆಂದು ಅವರಿಗೆ ಹೇಳಿರಲಿಲ್ಲ, ತಾನು ಜಾದೂಗಾರನಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅಷ್ಟೆ ಅಲ್ಲದೆ, ಆಪಾದಿತ ಘಟನೆ ಮತ್ತು ಎಫ್‌ಐಆರ್ ನೋಂದಣಿಯ ನಡುವಿನ ಒಂದೂವರೆ ತಿಂಗಳ ಅವಧಿಯನ್ನು ಅವರು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ 17 ವರ್ಷದ ಬಾಲಕಿಯ ತಾಯಿ (ದೂರುದಾರರು) ಯಡಿಯೂರಪ್ಪ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಲ್ಲಿಸಿದ ದೂರಿನ ಪ್ರಕಾರ ಮಾರ್ಚ್ 14, 2024 ರಂದು ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಯಿತು, ಅಲ್ಲಿ ಎಫ್‌ಐಆರ್ ಅನ್ನು ಮರು ದಾಖಲಿಸಿ ಆರೋಪಪಟ್ಟಿ ಸಲ್ಲಿಸಲಾಯಿತು.

ಪ್ರಕರಣವನ್ನು ರದ್ದುಗೊಳಿಸುವ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರ ಯಡಿಯೂರಪ್ಪ ದೂರುದಾರರ ಮರಣದವರೆಗೆ ಕಾಯುತ್ತಿದ್ದರು ಎಂಬ ರಾಜ್ಯ ಸರ್ಕಾರ ವಾದವನ್ನು ವಿರೋಧಿಸಿದ ಮಾಜಿ ಸಿಎಂ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ್, “ಅವರು ಯಾವಾಗ ಕೊನೆಯುಸಿರೆಳೆಯುತ್ತಾರೆಂದು ನನಗೆ ಹೇಳಲಿಲ್ಲ. ನಾನು ಜಾದೂಗಾರನಲ್ಲ” ಎಂದು ಹೇಳಿದ್ದಾರೆ.

Girl in a jacket
error: Content is protected !!