ಬೊಸಿಯಾ ರಾಷ್ಟ್ರೀಯ ಚಾಂಪಿಯನ್ ಶಿಪ್ ಕ್ರೀಡೆ; ಕರ್ನಾಟಕದ‌ ಅನ್ನಪೂರ್ಣ ಚಾಂಪಿಯನ್

Share

ಬೊಸಿಯಾ ರಾಷ್ಟ್ರೀಯ ಚಾಂಪಿಯನ್ ಶಿಪ್ ಕ್ರೀಡೆ; ಕರ್ನಾಟಕದ‌ ಅನ್ನಪೂರ್ಣ ಚಾಂಪಿಯನ್

ಬೆಂಗಳೂರು, ಜ,16-ಆಂಧ್ರಪ್ರದೇಶದ ವಿಶಾಖ ಪಟ್ಟಣದಲ್ಲಿ ನಡೆದ 9 ನೇ ರಾಷ್ಟೀಯ ಪ್ಯಾರಾ ಬೊಸಿಯಾ ( BOCCIA) ರಾಷ್ಟೀಯ ಚಾಂಪಿಯನ್ ಶಿಪ್ ಕ್ರೀಡಾ ಕೂಟದಲ್ಲಿ ಬೆಂಗಳೂರಿನ ಅನ್ನಪೂರ್ಣ ಅವರು ಚಿನ್ನದ ಪದಕ‌ ಗೆಲ್ಲುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ.

ಜನವರಿ ‌8 ರಿಂದ 16 ರ ತನಕ ಆಂಧ್ರಪ್ರದೇಶದ ವಿಶಾಖ ಪಟ್ಟಣದಲ್ಲಿ ಬೊಸಿಯಾ ಸ್ಪೋರ್ಟ್ಸ್ ಫೆಡರೇಷನ್ ಆಫ್‌ ಇಂಡಿಯಾ ಹಾಗೂ‌ ಪ್ಯಾರಾ ಒಲಿಂಪಿಕ್ ಕಮಿಟಿ ಆಫ್ ಇಂಡಿಯಾ ಜಂಟಿಯಾಗಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಆಯೋಜಿಸಿತ್ತು.

ಅನ್ನಪೂರ್ಣ ಅವರು ಸಚಿವಾಲಯದಲ್ಲಿ ಹಿರಿಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭವಿಷ್ಯದಲ್ಲಿ ಏಷ್ಯನ್ ಕೀಡಾ ಕೂಟದಲ್ಲಿ ಭಾಗವಹಿಸಿ ಚಿನ್ನ ಗೆಲ್ಲುವ ಗುರಿಹೊಂದಿದ್ದಾರೆ.

ಈ ಹಿಂದೆ ಹಲವಾರು ಬಾರಿ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದೆ ಆಗ‌‌ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಈ ಬಾರಿ ಚಿನ್ನದ ಪದಕ ಗೆದ್ದಿರುವುದು ಸಂತಸ ತಂದಿದೆ ಎಂದು ಅನ್ನಪೂರ್ಣ ಹೇಳಿದರು.

Girl in a jacket
error: Content is protected !!