ನಟ ಸರಿಗಮ ವಿಜಿ ಇನ್ನೂ ನೆನಪು ಮಾತ್ರ

Share

ನಟ ಸರಿಗಮ ವಿಜಿ ಇನ್ನೂ ನೆನಪಮಾತ್ರ

News desk date 15-01-2025:

ಬೆಂಗಳೂರು, ಜ,15- ಬಹುದಿನಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಚಿತ್ರ ನಟ ಸರಿಗಮ ವಿಜಿ ಕೊನೆಯಿಸಿರೆಳದಿದ್ದಾರೆ.
ಅವರಿಗೆ 76 ವರ್ಷ ವಯಸ್ಸಾಗಿತ್ತು.
ತಮ್ಮ ವಿಭಿನ್ನ ನಟನೆಯಿಂದ ಜನಮಾನಸದಲ್ಲಿ ಅಚ್ಚಗದಗಳೆಯದೆ ಉಳಿದಿದ್ದ ಅವರ ಪಾತ್ರಗಳೇ ವೈಶಿಷ್ಟ್ಯ ಪಡೆದಿದ್ದವು,ಸರಿಗಮ ವಿಜಿ ಎಂದೇ ಜನಪ್ರಿಯತೆ ಪಡೆದಿರುವ ಅವರ ಪೂರ್ತಿ ಹೆಸರು ಆರ್‌. ವಿಜಯ್‌ ಕುಮಾರ್‌. ಮೊದಲು ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಇವರನ್ನು ಸರಿಗಮ ವಿಜಿ ಕರೆಯಲಾಗುತ್ತಿತ್ತು. 1980ರಲ್ಲಿ ಗೀತಪ್ರಿಯಾ ನಿರ್ದೇಶನದ ಬೆಳವಳದ ಮಡಿಲಲ್ಲಿ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವುದರ ಮೂಲಕ ನಟನಾಗಿ ಕಾಲಿಟ್ಟ ಸರಿಗಮ ವಿಜಿ ಬಳಿಕ ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶನದಲ್ಲಿಯೂ ಅತೀವ ಆಸಕ್ತಿ ಹೊಂದಿದ್ದ ಅವರು, 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಾರೆ. ಅಲ್ಲದೇ 2,400 ಧಾರಾವಾಹಿಗಳಲ್ಲಿ ನಿರ್ದೇಶನದ ಜೊತೆಗೆ ನಟನೆ ಮಾಡಿದ್ದಾರೆ. ಅಲ್ಲದೇ 1390ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದು, ಇವರ ನಿರ್ದೇಶನದ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲಿಯೂ ಪ್ರದರ್ಶನ ಕಂಡಿವೆ.

ಮದುವೆ ಮಾಡಿ ನೋಡು, ಬೆಳುವಲದ ಮಡಿಲಲ್ಲಿ, ಕಪ್ಪು ಕೋಲ, ಪ್ರತಾಪ್, ಮನ ಮೆಚ್ಚಿದ ಸೊಸೆ, ಕೆಂಪಯ್ಯ ಐಪಿಎಸ್‌, ಜಗತ್ ಕಿಲಾಡಿ, ಯಮಲೋಕದಲ್ಲಿ ವೀರಪ್ಪನ್, ದುರ್ಗಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಸರಿಗಮ ವಿಜಿ ನಟಿಸಿದ್ದರು. ಇವರ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ ಚಿತ್ರಗಳೇ ಹೆಚ್ಚಾಗಿದೆ. ಸರಿಗಮ ವಿಜಿ ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಹಿರಿಯ ನಟರು ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅವರಿಗೆ ಕಳೆದ ಕೆಲ ದಿನಗಳಿಂದಲೂ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಏಕಾಏಕಿ ಶ್ವಾಸಕೋಶದಲ್ಲಿ ಸಮಸ್ಯೆ ಎದುರಾಗಿದೆ. ಕೂಡಲೇ ಅವರನ್ನು ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲೇ ಇದ್ದ ಅವರಿಗೆ ತಜ್ಞ ವೈದ್ಯರಿಂದ ನ್ಯುಮೋನಿಯಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಕೊಡಿಸಲಾಗಿತ್ತು. ಈ ನಡುವೆ ಹಿರಿಯ ನಟ ಸರಿಗಮ ವಿಜಿ ಆರೋಗ್ಯ ಸ್ಥಿತಿ ಗಂಭೀರ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಬಗ್ಗೆ ಅವರ ಪುತ್ರನೇ ಸ್ಪಷ್ಟನೆ ಕೂಡ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

Girl in a jacket
error: Content is protected !!