ಬೇಗೂರು ಕಾಲೋನಿ” ಚಿತ್ರದ “ರಾ ರಾ ರಾಘವ” ಗೀತೆ ಬಿಡುಗಡೆ

Share

“ಬೇಗೂರು ಕಾಲೋನಿ” ಚಿತ್ರದ “ರಾ ರಾ ರಾಘವ” ಗೀತೆ ಬಿಡ

By manjunath

ಶ್ರೀಮಾ ಸಿನಿಮಾಸ್ ಲಾಂಛನದಲ್ಲಿ ಎಂ ಶ್ರೀನಿವಾಸ್ ಬಾಬು ಅವರು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಹಾಗೂ “ಬಿಗ್ ಬಾಸ್” ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ “ಬೇಗೂರು ಕಾಲೋನಿ” ಚಿತ್ರಕ್ಕಾಗಿ ಬಹದ್ದೂರ್ ಚೇತನ್ ಕುಮಾರ್ ಬರೆದಿರುವ “ರಾ ರಾ ರಾಘವ” ಎಂಬ ಹಾಡು ಸಂಕ್ರಾಂತಿ ಹಬ್ಬದ ಶುಭದಿನ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಯಿತು. ಚಿತ್ರದಲ್ಲಿ ನಾಯಕನ‌ನ್ನು ಪರಿಚಯಿಸುವ ಈ ಗೀತೆಯನ್ನು ತಮ್ಮ ಅಮೋಘ ಗಾಯನದ ಮೂಲಕ ಜನಪ್ರಿರಾಗಿರುವ ಅಂತೋನಿ ದಾಸ್ ಹಾಡಿದ್ದಾರೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ.

“ರಾಜೀವ” ಚಿತ್ರದ ನಂತರ ರಾಜೀವ್ ಹನು ಹಾಗೂ ಫ್ಲೈಯಿಂಗ್ ಕಿಂಗ್ ಮಂಜು ಅವರ ಕಾಂಬಿನೇಶನ್ ನಲ್ಲಿ ಈ ಚಿತ್ರ ಮೂಡಿಬಂದಿದೆ. “ಹೋರಾಟಕ್ಕೆ ಹೊಡೆದಾಟಕ್ಕೆ ಬಲಿಯಾಗೋದು ಬಡವರ ಮಕ್ಕಳೇ” ಎಂಬ ಅಡಿಬರಹವಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲ ಮೂಡಿಸಿದೆ. ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ.

ರಾಜೀವ್ ಹನು “ಬೇಗೂರು ಕಾಲೋನಿ” ಚಿತ್ರದ ನಾಯಕರಾಗಿ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಕೂಡ ಅಭಿನಯಿಸಿದ್ದಾರೆ. ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೊಸಾನಿ ಕೃಷ್ಣ, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆರು ಹಾಡುಗಳಿರುವ “ಬೇಗೂರು ಕಾಲೋನಿ”ಗೆ ಅಭಿನಂದನ್ ಕಶ್ಯಪ್ ಸಂಗೀತ ನೀಡಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಹಣ ಹಾಗೂ ಪ್ರಮೋದ್ ತಲ್ವಾರ್ ಅವರ ಸಂಕಲನವಿರುವ ಈ ಚಿತ್ರಕ್ಕೆ ತ್ರಿವೇದಿ ನಾಗ್ ಮತ್ತು ಫ್ಲೈಯಿಂಗ್ ಕಿಂಗ್ ಮಂಜು ಅವರ ನಿರ

Girl in a jacket
error: Content is protected !!