ಭಾರತೀಯ ಕ್ರೀಡೆಯಲ್ಲಿ ಅಂಡರ್ ವರ್ಲ್ಡ್ ಅರಾಜಕತೆ!ಕಬಡ್ಡಿ ಪಟು ಬಲಿಯಾಗುದ್ದು ಹೇಗೆ?

Share

 

ಭಾರತೀಯ ಕ್ರೀಡೆಯಲ್ಲಿ ಅಂಡರ್ ವರ್ಲ್ಡ್ ಅರಾಜಕತೆ!ಕಬಡ್ಡಿ ಪಟು ಬಲಿಯಾಗುದ್ದು ಹೇಗೆ?

Writing; ಪರಶಿವ ಧನಗೂರು

ಮಾರ್ಚ್ ಹದಿನಾಲ್ಕು ಇಸವಿ ಎರಡು ಸಾವಿರದ ಇಪ್ಪತ್ತೆರಡು ಭಾರತದಲ್ಲಿ ಕಬಡ್ಡಿ ಸತ್ತ ದಿನ! ಅಂತಾರಾಷ್ಟ್ರೀಯ ಖ್ಯಾತಿಯ ಕಬಡ್ಡಿ ಪಟು, ಅಭಿಮಾನಿಗಳಿಂದ ಗ್ಲಾಡಿಯೇಟರ್ ಎಂದೇ ಕರೆಸಿಕೊಳ್ಳುತ್ತಿದ್ದ ಸಂದೀಪ್ ನಂಗಲ್ ದುಷ್ಕರ್ಮಿಗಳ ಗುಂಡಿಗೆ, ಹಾಡುಹಗಲೇ ಆಟದ ಮೈದಾನದಲ್ಲೇ ಬಲಿಯಾಗಿದ್ದಾರೆ! ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆರಿರುವ ಆಮ್ ಆದ್ಮಿ ಪಕ್ಷ ಮೊದಲಬಾರಿಗೆ ಪಂಜಾಬ್ ನಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಪಂಜಾಬ್ ನಲ್ಲಿ ಜಂಗಲ್ ಜಾರಿಯಾದಂತೇ ಕಾಣುತ್ತಿದೆ! ಪಂಜಾಬಿನ ಜಲಂಧರ್‌ನಲ್ಲಿ ನಡೆಯುತ್ತಿದ್ದ ಕಬಡ್ಡಿ ಕಪ್ ಟೂರ್ನಿ ವೇಳೆ ದುಷ್ಕರ್ಮಿಗಳು ನಂಗಲ್ ರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದಾರೆ. ಬರೋಬ್ಬರಿ ೨೦ ಗುಂಡುಗಳು ಸಂದೀಪ್ ನಂಗಲ್ ದೇಹ ಹೊಕ್ಕಿದೆ! ಪರಿಣಾಮ ಭಾರತೀಯರ ಕಬಡ್ಡಿ ಲೆಜೆಂಡ್ ಸಂದೀಪ್ ನಂಗಲ್ ಆಂಬಿಯಾನ್ ಸ್ಥಳದಲ್ಲೇ ನಿಧನರಾಗಿದ್ದಾರೆ. ಕಬಡ್ಡಿ ಟೂರ್ನಿ ನಡೆಯುತ್ತಿದ್ದ ವೇಳೆ ಆಗಮಿಸಿದ ಐವರು ಅಪರಿಚಿತರು ಏಕಾಏಕಿ ೪೦ ವರ್ಷದ ಸಂದೀಪ್ ನಂಗಲ್ ರಿಗೇ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ. ಈ ವೇಳೆ ಕಬಡ್ಡಿ ಟೂರ್ನಿ ನೋಡಲು ಆಗಮಿಸಿದ್ದ ಹಾಗೂ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕಬಡ್ಡಿ ಪಟುಗಳು ಪ್ರಾಣ ರಕ್ಷಣೆಗಾಗಿ ಜಾಗಸಿಕ್ಕ ಕಡೆಗೆ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ! ಆಗ ನೇರವಾಗಿ ಕಬಡ್ಡಿ ಪಟು ಸಂದೀಪ್ ನಂಗಲ್ ನ ಎದೆ ಮತ್ತು ತಲೆ ಭಾಗಕ್ಕೆ ೨೦ ಗುಂಡುಗಳನ್ನು ನುಗ್ಗಿಸಿದ ಕೊಲೆಗಡುಕರು ಪರಾರಿಯಾಗಿದ್ದಾರೆ. ಗುಂಡಿನ ದಾಳಿ ಬೆನ್ನಲ್ಲೇ ಸಂದೀಪ್ ನಂಗಲ್‌ ನನ್ನು ಸಮೀಪದ ನಾಕೋಡರ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

 

 

ಆದರೆ ಅಷ್ಟರಲ್ಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಕಳೆದೊಂದು ದಶಕದಿಂದ ದೇಶ ವಿದೇಶಗಳಲ್ಲಿ ಕಬಡ್ಡಿ ಟೂರ್ನಿಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಸಾಬೀತು ಮಾಡಿರುವ ಈ ಅಂತಾರಾಷ್ಟ್ರೀಯ ಪ್ರತಿಭೆ ಸಂದೀಪ್ ನಂಗಲ್ ಕೆನಡಾ, ಅಮೆರಿಕ, ಲಂಡನ್ ಸೇರಿದಂತೆ ಹಲವು ರಾಷ್ಟಗಳ ಲೀಗ್ ಟೂರ್ನಿಗಳಲ್ಲಿ ಆಡಿದ್ದಾರೆ. ತನ್ನ ತಾಯ್ ನೆಲವಾದ ಪಂಜಾಬ್ ರಾಜ್ಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದಾರೆ.
ಸಂದೀಪ್ ನಂಗಲ್ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರೂ, ಕಬಡ್ಡಿ ಮೇಲಿನ ಅತೀವ ಆಸಕ್ತಿ ಪ್ರೀತಿಯಿಂದ ಸಂದೀಪ್ ನಂಗಲ್ ಈಗಲೂ ತನ್ನ ಹುಟ್ಟೂರಿನ ಎಲ್ಲಾ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು! ಜಲಂಧರಲ್ಲಿ ಹಲವು ಕಬಡ್ಡಿ ಟೂರ್ನಮೆಂಟ್‌ಗಳನ್ನು ಸಂದೀಪ್ ಆಯೋಜಿಸುತ್ತಿದ್ದರು‌. ಇದೇ ರೀತಿ ಜಲಂಧರ್‌ನಲ್ಲಿ ಮಾರ್ಚ್ ಹದಿನಾಲ್ಕರಂದು ಆಯೋಜಿಸಿದ್ದ ಕಬಡ್ಡಿ ಕಪ್ ಟೂರ್ನಿಗಾಗಿ ವಿಶೇಷ ತಯಾರಿ ಮಾಡಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದರೆ ದುಷ್ಕರ್ಮಿಗಳು ಅಂದೇ ನಂಗಲ್ ಮೇಲೆ ಗುಂಡಿನ ಸುರಿಮಳೆಗೈದು ಪ್ರಾಣ ತೆಗೆದಿದ್ದಾರೆ. ಇಂತಹ ಅಮಾನವೀಯ ಕ್ರತ್ಯಗಳ ವಿರುದ್ಧ ಭಾರತದ ಎಲ್ಲಾ ಮಾನವೀಯ ಮೌಲ್ಯವುಳ್ಳ ಮನುಸ್ಸುಗಳು ಧ್ವನಿ ಎತ್ತಿ ನಿಲ್ಲಬೇಕಿದೆ. ಕೊಲೆಗಡುಕರಿಗೆ ಮರಣದಂಡನೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಬೇಕಿದೆ. ಈಗಾಗಲೇ ಪ್ರಪಂಚದಾದ್ಯಂತ ಇರುವ ಸಂದೀಪ್ ನಂಗಲ್ ಅಭಿಮಾನಿಗಳು ಈ ಕೊಲೆಯ ಹಿಂದಿರುವ ಕ್ರೂರ ಪಾತಕಿಗಳನ್ನು ಪತ್ತೆಹಚ್ಚಿ ಎನ್ ಕೌಂಟರ್ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂದೀಪ್ ತಂಗಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ತನ್ನಣ್ಣ ಸಂದೀಪ್ ನಂಗಲ್ ಕೊಲೆಯ ಹಿಂದೆ ಅಂಡರ್ ವರ್ಲ್ಡ್ ಡಾನ್ ಗಳ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ! ಅಂತಾರಾಷ್ಟ್ರೀಯ ಕಬಡ್ಡಿ ಪಟು ಸಂದೀಪ್ ನಂಗಲ್ ಮೇಲಿನ ದಾಳಿಯ ಹಿಂದೆ ಪಂಜಾಬ್ ನವನೇ ಆದ ಲಾರೆನ್ಸ್ ಬಿಸ್ನೋಯ್(ವಿಷ್ಣು) ದೆಹಲಿಯ ಕುಖ್ಯಾತ ಗ್ಯಾಂಗ್ ಸ್ಟರ್ ಹೆಸರು ಕೇಳಿಬರುತ್ತಿದೆ! ಹಿಂದಿ ಸಿನೆಮಾ ನಟ ಸಲ್ಮಾನ್ ಖಾನ್ ನನ್ನು ಫೈರ್ ಮಾಡಿ ಕೊಲ್ಲುವುದಾಗಿ ಓಪನ್ ಸ್ಟೇಟ್ ಮೆಂಟ್ ನೀಡಿದ್ದ ಈ ಖತರ್ನಾಕ್ ಸುಫಾರಿ ಕಿಲ್ಲರ್ ತಾನು ಪೂಜಿಸುವ ಕ್ರಷ್ಣ ಮ್ರಗ ಬೇಟೆಯಾಡಿ ಸಾಯಿಸಿದ್ದಕ್ಕಾಗಿ ಸಲ್ಮಾನ್ ಖಾನ್ ಮೇಲೆ ಕೆಂಡಕಾರುತ್ತಿದ್ದ! ತನ್ನನ್ನು ತಾನು ರಾಬಿನ್ ಹುಡ್ ಎಂದು ಕರೆದು ಕೊಳ್ಳುವ ಈ ಗ್ಯಾಂಗ್ ಸ್ಟರ್ ಬಿಸ್ನೋಯ್ ಚರಿತ್ರೆ ಭಯಾನಕವಾಗಿಯೇ ಇದೆ. ಇನ್ನುಮುಂದೆ ಈ ದೇಶದಲ್ಲಿ ಸಿನಿಮಾ ಸೆಲೆಬ್ರಿಟಿಗಳು, ಸೆಲೆಬ್ರಿಟಿ ಕ್ರೀಡಾಪಟುಗಳು, ಓಡಾಡಬೇಕಾದರೇ, ಟೂರ್ನಿಮೆಂಟ್ ಆಡಬೇಕಿದ್ದರೇ, ಗನ್ ಮೆನ್ ಗಳ ರಕ್ಷಣೆಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ! ಕಬಡ್ಡಿ ಕ್ಲಬ್ ಜೊತೆಗಿನ ಮನಸ್ತಾಪವೂ ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಬಡ್ಡಿ ಕ್ಲಬ್ ಮತ್ತು ಫೆಡರೇಷನ್ ಗಲಾಟೆಯ ಹಿನ್ನೆಲೆಯಲ್ಲಿಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಈಗಾಗಲೇ ಪಂಜಾಬಿನ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ, ಯೂಟ್ಯೂಬ್ ಚಾನಲ್ ಗಳಲ್ಲಿಯೂ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಸ್ನೋಯ್ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಸುದ್ದಿ ಬಿತ್ತರಿಸಲಾಗುತ್ತಿದೆ. ದೆಹಲಿಯ ತಿಹಾರ್ ಜೈಲಿನಲ್ಲಿ ಕುಳಿತು ಇಂಟರ್ ನೆಟ್ ಕಾಲ್ ಮೂಲಕ ಬೆದರಿಕೆ ಕರೆ ಹಾಕಿ ಬಿಸಿನೆಸ್ ಮ್ಯಾನ್ ಗಳಿಂದ, ಸಿನಿಮಾ ನಟರಿಂದ, ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳಿಂದ ಹಣ ವಸೂಲಿ ಮಾಡುತ್ತಾ, ಅದೂ ಸಾಲದಿದ್ದಾಗ ತನ್ನ ಶಾರ್ಪ್ ಶೂಟರ್ ಗಳನ್ನಿಟ್ಟು ಸುಫಾರಿ ಕೊಲೆಗಳನ್ನು ಮಾಡಿಸುತ್ತಾ ಉತ್ತರ ಭಾರತದ ಹಲವು ರಾಜ್ಯಗಳ ಪೊಲೀಸರಿಗೆ ತಲೆನೋವಾಗಿರುವ ಬಿಸ್ನೋಯ್ ಒಬ್ಬ ಸೂಪರ್ ಸ್ಟಾರ್ ಪ್ಲೇಯರ್ ಸಾವಿಗೆ ಪರೋಕ್ಷ ಬೆಂಬಲ ನೀಡಿರುವ ಅನುಮಾನಗಳು ಹಬೆಯಾಡುತ್ತಿವೆ!

ಭಾರತೀಯ ಕ್ರೀಡೆಯಲ್ಲಿ ಅಂಡರ್ ವರ್ಲ್ಡ್ ಅರಾಜಕತೆ!!

ಸಹ ಸ್ಪರ್ಧಿಯೊಬ್ಬನನ್ನು ದೆಹಲಿಯ ಚತ್ರಸಾಲ್ ಸ್ಟೇಡಿಯಂನಲ್ಲಿ ಹೊಡೆದು ಕೊಂದು ಜೈಲುಪಾಲಾಗಿದ್ದ, ಕ್ರೀಡಾ ಜಗತ್ತಿಗೆ ಕಳಂಕ ಮೆತ್ತಿದ ಮಾಜಿ ಒಲಿಂಪಿಕ್ಸ್ ಕುಸ್ತಿ ಪಟು ಸುಶೀಲ್ ಕುಮಾರ್ ನಿಂದಾಗಿ ಈಗ ಉತ್ತರ ಭಾರತದ ದೆಹಲಿ, ಹರಿಯಾಣ, ಉತ್ತರಪ್ರದೇಶ, ಜಾರ್ಖಂಡ್, ಪಂಜಾಬ್ ರಾಜ್ಯಗಳ ಕ್ರೀಡಾ ಜಗತ್ತು ಅಂತಾರಾಷ್ಟ್ರೀಯ ಅಂಡರ್ ವರ್ಲ್ಡ್ ನೊಂದಿಗೆ ನಂಟುಬೆಳೆಸಿ ಸರ್ವನಾಶದ ಹಾದಿ ಹಿಡಿದಿದೆ. ಸೆಲೆಬ್ರಿಟಿ ಕ್ರೀಡಾಪಟುಗಳಲ್ಲಿರುವ ದುಡ್ಡು ಅಂಡರ್ ವರ್ಲ್ಡ್ ಡಾನ್ ಗಳ ಕಣ್ಣು ಕುಕ್ಕುತ್ತಿದೆ! ಭೂಗತ ಜಗತ್ತೆಂಬುದು ಮರಾಮೋಸದ ಕತ್ತಲ ಜಗತ್ತೆಂದು ತಿಳಿದಿದ್ದರೂ ಆರಂಭದಿಂದಲೂ ದೆಹಲಿಯ ರೌಡಿಗಳ ಗ್ಯಾಂಗ್ ಸ್ಟರ್ ಗಳೊಂದಿಗೆ ಗಳಸ್ಯ ಕಂಟಸ್ಯ ನಿಕಟ ಸಂಪರ್ಕದಲ್ಲಿದ್ದ, ಅಂತಾರಾಷ್ಟ್ರೀಯ ಪೈಲ್ವಾನ್ ಸುಶೀಲ್ ಕುಮಾರ್ ತಾನು ನೂರಾರು ಕೋಟಿ ಭಾರತೀಯರ ಆಸ್ತಿ, ಪದ್ಮಶ್ರೀ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ ಗೌರವ ಮುಡಿಗೇರಿಸಿಕೊಂಡಿರುವ ಭಾರತದ ಹೆಮ್ಮೆಯ ಕ್ರೀಡಾಪಟು ಎಂಬುದನ್ನು ಮರೆತು ರೌಡಿಗಳ ಎಣ್ಣೆಪಾರ್ಟಿಗಳಲ್ಲಿ ಭಾಗವಹಿಸಿ ಕುಡಿದು ತೂರಾಡುತ್ತಾ ಶೋಕಿ ಮಾಡುತ್ತಾ ಈ ದೇಶದ ಮಾನ ಹರಾಜು ಹಾಕುತ್ತಿದ್ದ!

 

 

ತನ್ನ ಶಿಷ್ಯಂದಿರಾದ ಕ್ರೀಡಾಳು ಪೈಲ್ವಾನ್ ಹುಡುಗರನ್ನು ರೌಡಿಗಳ ಬಾಡೀ ಗಾರ್ಡ್ ಆಗಿ, ಬೌನ್ಸರ್ ಗಳಾಗಿ ಕಳುಹಿಸಿ, ದೆಹಲಿಯ ಚಿಕ್ಕ ಪುಟ್ಟ ರಿಯಲ್ ಎಸ್ಟೇಟ್ ಮಾಫಿಯಾ ಗಲಾಟೆ, ಸೆಟ್ಲ್ ಮೆಂಟ್ ಗಳ ಬೆನ್ನ ಹಿಂದೆ ಇರುತ್ತಿದ್ದ! ಕುಸ್ತಿ ಅಖಾಡಗಳನ್ನು ಕ್ರೀಡಾಂಗಣಗಳನ್ನು, ರೌಡಿಗಳ ಅಡ್ಡೆಗಳನ್ನಾಗಿ ಪರಿವರ್ತಿಸಿದ ಕುಖ್ಯಾತಿ ಕುಸ್ತಿ ಪಟು ಸುಶೀಲ್ ಕುಮಾರ್ ಬೆನ್ನಿಗೆ ಅಂಟಿದೆ. ದೇಶದ ಪ್ರತಿಷ್ಠಿತ ಕುಸ್ತಿಪಟುಗಳನ್ನು ತಯಾರು ಮಾಡುವ ಖ್ಯಾತಿ ಪಡೆದಿದ್ದ ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಸುಶೀಲ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದ್ದ ಸರಿರಾತ್ರಿಯ ಶಾರ್ಪ್ ಶೂಟರ್ ಗಳ, ಪೊಲೀಸ್ ವಾಂಟೆಡ್ ಕ್ರಿಮಿನಲ್ ಗಳ ಎಣ್ಣೆ ಪಾರ್ಟಿಗಳು, ಅಕ್ರಮ ಕ್ರಿಮಿನಲ್ ಚಟುವಟಿಕೆಯ ಜಗಳಗಳಿಗೆ ಹೆದರಿ ಕುಸ್ತಿ ಪ್ರಾಕ್ಟೀಸ್ ಮಾಡುತ್ತಿದ್ದ ಪೈಲ್ವಾನರು, ಕೋಚ್ ಗಳು ಪರಾರಿಯಾಗಿದ್ದರು! ಗ್ಯಾಂಗ್ ಸ್ಟರ್ ಗಳಾದ ಲಾರೆನ್ಸ್ ಬಿಸ್ನೋಯ್ ಮತ್ತು ಕಾಲಾ ಜತೇಡಿಯಾನ ಹುಡುಗ ಪೈಲ್ವಾನ್ ಸಾಗರ್ ಧನ್ಕರ್ ನನ್ನು ಛತ್ರಸಾಲ್ ಸ್ಟೇಡಿಯಂನಲ್ಲೇ ಹೊಡೆದು ಕೊಂದು ಭಾರತೀಯ ಕ್ರೀಡಾ ಸಂಸ್ಕೃತಿಗೆ ಕಳಂಕ ಮೆತ್ತಿದ ಸುಶೀಲ್ ಕುಮಾರ್ ತಾನೊಬ್ಬನೇ ರಾಷ್ಟ್ರೀಯ ಕುಸ್ತಿ ಕ್ರೀಡಾಕೂಟಗಳ ಮೇಲೆ ಹಿಡಿತ ಹೊಂದಿರಬೇಕು, ತಾನೊಬ್ಬನೇ ಅಂತಾರಾಷ್ಟ್ರೀಯ ಕುಸ್ತಿ ಪಟು ವಾಗಿ ಮೆರೆಯಬೇಕು ಎಂಬ ದುರಾಸೆಯಿಂದ ದೆಹಲಿಯ ಅಂಡರ್ ವರ್ಲ್ಡ್ ಡಾನ್ ಗಳನ್ನು ಕ್ರೀಡಾ ಜಗತ್ತಿಗೆ ಪರಿಚಯಿಸಿದ!

 

ಅಸಹಜವಾದ ಅಪರಾಧಿ ಮನೋಭಾವ, ಹಣದಾಹ ಬೆಳೆಸಿಕೊಂಡು ತನ್ನ ವಿರುದ್ಧ ಕುಸ್ತಿಯಲ್ಲಿ ಅಖಾಡಕ್ಕಿಳಿಯುವವರಿಗೆ ಪುಡಿರೌಡಿಗಳಿಂದ ಕೊಲೆ ಬೆದರಿಕೆ ಹಾಕಿಸಿ ಥಳಿಸುವಷ್ಟರ ಮಟ್ಟಿನ ಕೀಳು ಮಟ್ಟಕ್ಕೆಲ್ಲಾ ಹೋಗಿದ್ದ! ಕ್ರೀಡಾ ಸ್ಫೂರ್ತಿ, ಕ್ರೀಡಾ ಮನೋಭಾವ ಮರೆತು 2018ರ ಕಾಮನ್ ವೆಲ್ತ್ ಗೇಮ್ಸ್ ಟ್ರಯಲ್ ರೌಂಡಿನಲ್ಲಿ ಈತನೆದುರು ಸ್ಪರ್ಧಿಸಿದ್ದ ಪ್ರವೀಣ್ ರಾಣಾ ಎಂಬ ಕುಸ್ತಿ ಪಟುವಿಗೆ ತನ್ನ ಕಡೆಯ ರೌಡಿಗಳಿಂದ ಥಳಿಸಿ ಸ್ಪರ್ಧಿಸದಂತೆ ಹೆದರಿಸಿ ಸಣ್ಣತನ ಕ್ಕಿಳಿದಿದ್ದ! 2016 ರಲ್ಲಿ ರಿಯೋ ಒಲಿಂಪಿಕ್ಸ್ ಗೆ ಆಯ್ಕೆ ಯಾಗಿದ್ದ ನರಸಿಂಹ ಯಾದವ್ ಎಂಬ ಕುಸ್ತಿ ಪಟುವಿನ ವಿರುದ್ಧ ಆಯ್ಕೆ ಪ್ರಶ್ನಿಸಿ ಕೋರ್ಟ್ ಗೆ ಹೋಗಿ ಚೀಮಾರಿಹಾಕಿಸಿಕೊಂಡಿದ್ದ! ನಂತರ ಇದೇ ನರಸಿಂಹ ಯಾದವ್ ಒಲಿಂಪಿಕ್ಸ್ ನಲ್ಲಿ ಭಾರತದ ಪರವಾಗಿ ಆಡದಂತೆ ತಡೆಯಲು ನರಸಿಂಹ ಯಾದವ್ ಊಟದಲ್ಲಿ ಮಾದಕವಸ್ತು ಬೆರೆಸಿ ಆತನ ಭವಿಷ್ಯ ಹಾಳು ಮಾಡಿದ್ದ! ತನ್ನ ಹೆಸರಿನಲ್ಲಿರುವ ಒಲಿಂಪಿಕ್ಸ್ ಪದಕ ಪಡೆದ ರೆಕಾರ್ಡ್ ಗಳು ಹಾಗೆಯೆ ಇರಲೀ ಮತ್ತೊಬ್ಬರಿಗೆ ದಕ್ಕಬಾರದೆನ್ನುವ, ಜನಮಾನಸದಲ್ಲಿ ತಾನೇ ಕುಸ್ತಿ ಲೋಕದ ಶೂರ-ಒಲಿಂಪಿಕ್ಸ್ ಸರದಾರ ಎನ್ನುವುದು ಬೇಗನೆ ಅಳಿಸಿಹೋಗಬಾರದೆನ್ನುವ ದುರಾಸೆಯಿಂದ ಹೀಗೆ ಮತ್ತೊಬ್ಬ ಕುಸ್ತಿ ಪಟು ವಿನ ಆಹಾರದಲಿ ಮಾಧಕಡ್ರಗ್ಸ್ ಕಲೆಸಿ ಭವಿಷ್ಯ ಹಾಳುಮಾಡುವುದೆಷ್ಟು ಸೇರಿ? ಇದರಿಂದ ಭಾರತದ ಕ್ರೀಡಾ ಜಗತ್ತಿಗೆ ತಾನೆ ನಷ್ಟ? ನಮ್ಮ ದೇಶದಲ್ಲಿ ಸುಶೀಲ್ ಕುಮಾರ್ ಗಿಂತಲೂ ಉತ್ತಮವಾಗಿ ಕುಸ್ತಿ ಆಡುವ ಪ್ರತಿಭೆಗಳು ಇದ್ದರೂ ಇಂತಹ ತುಳಿಯುವ ವ್ಯಕ್ತಿಗಳಿಂದಲೇ ತಾನೇ ಮತ್ತಷ್ಟು ಒಲಿಂಪಿಕ್ಸ್ , ಕಾಮನ್ ವೆಲ್ತ್ ಗೇಮ್ಸ್ ಪದಕಗಳು ನಮ್ಮ ದೇಶಕ್ಕೆ ಕೈತಪ್ಪಿ ಹೋಗುತ್ತಿರುವುದು. ಇಷ್ಟು ಹೀನ ಕೊಳಕು ಮನಸ್ಥಿತಿಯ ಕ್ರಿಮಿನಲ್ ಮೈಂಡೆಡ್ ಕುಸ್ತಿ ಪಟು ಸುಶೀಲ್ ಕುಮಾರ್ 2019ರಲ್ಲಿ ವಿಶ್ವಚಾಂಪಿಯನ್ ಶಿಪ್ ಕುಸ್ತಿ ಪಂದ್ಯಾಟದಲ್ಲೇ ಜಿತೇಂದ್ರ ಎಂಬ ಪೈಲ್ವಾನ್ ನ ಕೈಬೆರಳುಮುರಿದು ಎಡಗಣ್ಣಿಗೆ ವಿನಾಕಾರಣ ಹೊಡೆದು ಗುದ್ದಿ ಅಸಹ್ಯವಾಗಿ ವರ್ತಿಸಿ ಕ್ರೀಡಾ ನಿಯಮಗಳನ್ನೇ ನುಂಗಿ ನೀರು ಕುಡಿದಿದ್ದ. ವಿಶ್ವ ವಿಖ್ಯಾತ ದಂಗಲ್ ಪಟು ಸುಶೀಲ್ ಕುಮಾರನ ರೌಡಿ ಸಹಚರರ ಹಾವಳಿಯಿಂದ ಬೇಸತ್ತ ದೇಶಿಯ ಹಲವಾರು ಕುಸ್ತಿ ಪಟುಗಳಾದ ಪ್ರವೀಣ್, ಜಿತೇಂದ್ರ ಕುಮಾರ್, ವೀಶ್ವಕುಸ್ತಿ ಚಾಂಪಿಯನ್ ಶಿಪ್ ಪದಕ ಗೆದ್ದಿದ್ದ ಬಜರಂಗ್ ಪೂನಿಯಾ, ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಕುಸ್ತಿ ಪಟು ಯೋಗೇಶ್ವರ್ ದತ್ ಮತ್ತೊಬ್ಬ ಕೋಚ್ ರಾಂಪಾಲ್ ಮುಂತಾದವರು ದೆಹಲಿಯ ಪ್ರತಿಷ್ಠಿತ ಕುಸ್ತಿ ಆಖಾಡವಾದ ಛತ್ರಸಾಲ್ ಸ್ಟೇಡಿಯಂಗೆ ಬರುವುದನ್ನೇ ಬಂದ್ ಮಾಡಿದ್ದರಂತೇ!

ಇದರಿಂದ ನಮ್ಮ ದೇಶಿ ಕ್ರೀಡೆ ಕುಸ್ತಿಗೆ ಆದ ನಷ್ಟಕ್ಕೆ ಯಾರು ಹೊಣೆ? ನೋಡನೋಡುತ್ತಿದ್ದಂತೆ ಡ್ರೈವರ್ ಒಬ್ಬನ ಮಗ ಸುಶೀಲ್ ಕುಮಾರ್ ನ ಆದಾಯ ಗಗನಕ್ಕೇರಿದ್ದು, ಯಾವ ಅಂಡರ್ ವರ್ಲ್ಡ್ ಡೀಲಿಂಗ್ ದಂಧೆಯಲ್ಲೆಂಬುದು ಮಾತ್ರ ನಿಗೂಢ! ಕ್ರೀಡಾ ಪಟುಗಳ ಜಾಹಿರಾತು ಆದಾಯ, ಟ್ರೈನಿಂಗ್ ಸೆಂಟರ್ ಗಳ ಲಕ್ಷಾಂತರ ರೂಪಾಯಿ ಕಮಾಯಿ, ಈಗ ಅಂಡರ್ ವರ್ಲ್ಡ್ ಅನ್ನು ಸೆಳೆಯುತ್ತಿದೆ! ಹರಿಯಾಣ ಮೂಲದ ದೆಹಲಿಯ ಗ್ಯಾಂಗ್ ಸ್ಟರ್ ಕಾಲಾ ಜತೇಡಿ, ಪಂಜಾಬ್ ಮೂಲದ ದೆಹಲಿ ಡಾನ್ ಲಾರೆನ್ಸ್ ಬಿಸ್ನೋಯ್ ಸಹವಾಸಕ್ಕೆ ಬಿದ್ದು ಕೊಲೆಗಾರನಾಗಿ, ಕ್ರೀಡಾ ಜಗತ್ತಿಗೆ ಕಳಂಕ ಮೆತ್ತಿ ಜೈಲು ಪಾಲಾಗಿ, ಈಗ ಮತ್ತೊಬ್ಬ ದೆಹಲಿಯ ಕುಖ್ಯಾತ ಗ್ಯಾಂಗ್ ಸ್ಟರ್ ನೀರಜ್ ಭವಾನನ ಸ್ನೆಹದಲ್ಲಿರುವ ಸುಶೀಲ್ ಕುಮಾರ್ ನಂತವರಿಂದಾಗಿ ಇಂದು ಭಾರತೀಯ ಕ್ರೀಡೆ ಅಪಾಯದಲ್ಲಿದೆ!

ಕಾಸಿಗಾಗಿ ಸುಫಾರಿ ಕಿಲ್ಲಿಂಗ್!
ಸಾಮ್ರಾಜ್ಯ ವಿಸ್ತರಣೆಗೆ ರಿವೇಂಜ್ ಕಿಲ್ಲಿಂಗ್!

ಕೇವಲ ಸುಫಾರಿ ಕೊಲೆಗಳನ್ನು ಮಾಡಿಯೇ ಹಣ ಮಾಡುತ್ತಿರುವ ದೆಹಲಿಯ ಡೇಂಜರಸ್ ಗ್ಯಾಂಗ್ ಸ್ಟರ್ ಗಳ ಕಣ್ಣು ಈಗ ಕ್ರೀಡಾ ಜಗತ್ತಿನ ಮೇಲೆ ಬಿದ್ದಿರುವಂತಿದೆ. ರಿಯಲ್ ಎಸ್ಟೇಟ್ ಮಾಫಿಯಾ ಬಿಲ್ಡರ್ ಗಳಿಗೆ ಧಮ್ಕಿ ಹಾಕಿ ಚೆನ್ನಾಗಿ ದುಡ್ಡು ಮಾಡುತಿದ್ದವರು ಈಗ ಹಣಕ್ಕಾಗಿ ಹೆಣಬೀಳಿಸಲು ಮನುಷ್ಯತ್ವ ವನ್ನೇ ಮರೆಯುತ್ತಿದ್ದಾರೆ. ಡಾನ್ ಕಾಲಾ ಜತೇಡಿ ಹುಡುಗ ಪೈಲ್ವಾನ್ ಸಾಗರ್ ಧನ್ಕರ್ ಕೊಲೆಗೆ ರಿವೇಂಜ್ ಆಗಿ ಕುಸ್ತಿ ಸುಶೀಲ್ ಕುಮಾರ್ ಗೆ ಫೈರ್ ಮಾಡಿ ಮುಗಿಸುತ್ತೇವೆಂದು ಕಾಲಾನ ಬಾಮೈದ ಶೂಟರ್ ಸೋನು ಮಹಲ್ ಧಮ್ಕಿ ಕೊಟ್ಟಿದ್ದ! ಸ್ಟಾರ್ ರೆಸ್ಲರ್ ಸುಶೀಲ್ ಕುಮಾರ ಅಂಡರ್ ವರ್ಲ್ಡ್ ಶಾರ್ಪ್ ಶೂಟರ್ ಗಳ ಬುಲೆಟ್ಟುಗಳನ್ನು ನೆನೆಸಿಕೊಂಡು ದೆಹಲಿಯ ತಿಹಾರ್ ಜೈಲಿನಲ್ಲಿ ಬೆವೆತು ಹೋಗಿದ್ದ! ರಾಜಸ್ಥಾನ ಹರಿಯಾಣ, ಉತ್ತರಾಖಾಂಡ ಜಾರ್ಖಂಡ್, ಪಂಜಾಬ್,ಯುಪಿ, ದೆಹಲಿಯಲ್ಲಿ ಕೋಲೆ ಸುಲಿಗೆ, ಬೆದರಿಕೆ, ಕಿಡ್ನಾಪ್,ದೋ ನಂಬರ್ ದಂಧೆ, ಭೂಕಬಳಿಕೆ ಸುಫಾರಿ ಕಿಲ್ಲಿಂಗ್ ಗೆ ಕುಖ್ಯಾತಿ ಪಡೆದಿರುವ ಲಾರೆನ್ಸ್ ಬಿಸ್ನೋಯ್ ಸಿಂಡಿಕೇಟಿನ ದೆಹಲಿಯ ಗ್ಯಾಂಗ್ ಸ್ಟರ್ ಕಾಲಾ ಜತೇಡಿ ವಿರೋಧಿ ಗ್ಯಾಂಗ್ ಸ್ಟರ್ ಗಳಾದ ದೆಹಲಿಯ ನೀರಜ್ ಭವಾನ, ನವೀನ್ ಬಾಲಿ ಗ್ರೂಪ್ ಸೇರಿಕೊಂಡು ಸಧ್ಯಕ್ಕೆ ಬಚಾವಾಗಿದ್ದಾನೆ! ದೇಶದ ಕುಖ್ಯಾತ ತಿಹಾರ್ ಜೈಲಿನಲ್ಲಿ ಕುಳಿತು ಉತ್ತರ ಭಾರತದ ಹಲವು ರಾಜ್ಯಗಳ ಗ್ಯಾಂಗ್ ಸ್ಟರ್ ಗಳು ಜಂಗಲ್ ರಾಜ್ ನಡೆಸುತ್ತಾ ಸುಫಾರಿ ಹಣಕ್ಕಾಗಿ ಸೆಲೆಬ್ರಿಟಿ ಹಾಡುಗಾರರನ್ನು, ಕ್ರೀಡಾ ಪಟುಗಳನ್ನು ಗುಂಡಿಕ್ಕಿ ಸಾಯಿಸುತ್ತಿದ್ದಾರೆ.

 

ರಾಜಧಾನಿ ದೆಹಲಿಯ ಗುಡ್ ಗಾಂ, ಸೋನಿಫತ್, ವೆಸ್ಟರ್ನ್ ದೆಹಲಿ, ನಾರ್ತ್ ದೆಹಲಿ ಮುಂತಾದೆಡೆ ಗ್ಯಾಂಗ್ ವಾರ್, ರಿವೇಂಜ್ ಕಿಲ್ಲಿಂಗ್ ನಡೆಸಿ ಹಾವಳಿ ಇಡುತ್ತಿದ್ದ ರೌಡಿ ಪಡೆಗಳು ಇತ್ತೀಚೆಗೆ ಜೈಲಿನೊಳಗೂ ಗ್ಯಾಂಗ್ ವಾರ್, ರಿವೇಂಜ್ ಅಟ್ಯಾಕ್ ಮಾಡಿ ತಮ್ಮ ರಕ್ತದ ಹಸಿವನ್ನು ಪ್ರದರ್ಶನಕ್ಕಿಟ್ಟಿದ್ದಾರೆ! ದೇಶದ ಇತಿಹಾಸದಲ್ಲೇ ಮೊದಲೆಂಬಂತೆ ದೆಹಲಿಯಲ್ಲಿ ಕಳೆದ ವರ್ಷ ನ್ಯಾಯಾಧೀಶರೆದುರೇ ರೌಡಿಯೊಬ್ಬನನ್ನು ವಿಚಾರಣೆ ನಡೆಸುವಾಗ ಗುಂಡಿಟ್ಟು ಕೊಲ್ಲಲಾಯಿತು! ಗೂಗಿ ಅಲಿಯಾಸ್ ಜಿತೇಂದರ್ ಎಂಬ ಹರಿಯಾಣ ಮೂಲದ ಕುಖ್ಯಾತ ದೆಹಲಿ ಗ್ಯಾಂಗ್ ಸ್ಟರ್ ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಮಾಡುವಾಗ ಮಾಹಿತಿ ತಿಳಿದು ಸ್ಕೆಚ್ ಹಾಕಿ ಫೈರ್ ಮಾಡಿ ಕೊಲ್ಲಲಾಯಿತು. ದೆಹಲಿಯ ಬೀದಿಗಳಲ್ಲಿ ನರಮನುಷ್ಯರ ರಕ್ತದ ಕಾಲುವೆ ನಿರ್ಮಾಣ ಮಾಡಲು ಹೊರಟಿರುವ ದೆಹಲಿಯ ಗ್ಯಾಂಗ್ ಸ್ಟರ್ ಗಳು ದೇಶದ ಕಾನೂನು ವ್ಯವಸ್ಥೆಗೆ ಸವಾಲು ಹಾಕುತ್ತಾ ನ್ಯಾಯಾಲಯದ ರಕ್ಷಣಾ ವ್ಯವಸ್ಥೆಗೆ ಕಳಂಕ ಮೆತ್ತಿದ್ದಾರೆ. ರೌಡಿಗಳು, ಅಪರಾಧಿಗಳು ನ್ಯಾಯಾಲಯದ ಬಾಗಿಲಿನಿಂದಲೇ ಬಾಂಬು ಗನ್ನುಗಳನ್ನಿಟ್ಟುಕೊಂಡು ವಕೀಲರ ವೇಶದಾರಿಗಳಾಗಿ ಪ್ರವೇಶಿಸಿ ದುಷ್ಕೃತ್ಯ ನಡೆಸುತ್ತಿರುವುದು ಕಣ್ ಮುಂದೆಯೇ ಇದೆ. ಏಷ್ಯಾದ ಅತಿದೊಡ್ಡ ಹೈಟೆಕ್ ಜೈಲಾದ ತಿಹಾರ್ ಜೈಲಿನಲ್ಲಿ ಕುಳಿತಿರುವ ಮಾಫಿಯಾ ಡಾನ್ ಗಳು ಜೈಲನ್ನೇ ಅಂಡರ್ ವರ್ಲ್ಡ್ ಆಪರೇಟಿಂಗ್ ಹೌಸನ್ನಾಗಿ ಮಾಡಿಕೊಂಡು ನಾಲ್ಕು ಗೋಡೆಗಳ ಮಧ್ಯೆಯೂ ನಶೆಯ ನೆಟ್ವರ್ಕ್, ಮದ್ಯಪಾನದ ಪಾರ್ಟಿಗಳು, ಲ್ಯಾಪ್ ಟಾಪ್, ಹೈಪ್ಯಾಡುಗಳ ಐಷಾರಾಮಿ ಜೀವನ ಶೈಲಿ ಸೋಶಿಯಲ್ ಮೀಡಿಯಾ ಸಹವಾಸದಿಂದ ಹೊರಜಗತ್ತಿಗೆ ಪರಿಚಯವಾಗುತ್ತಿದೆ! ಸರಳುಗಳ ಸಂದಿಯಲ್ಲೇ ಶತ್ರುಗಳ ಸಾವಿನ ಸ್ಕೆಚ್ಚು ಬರೆಯುತ್ತಾ, ಬಿಸಿನೆಸ್ ಮ್ಯಾನ್ ಗಳನ್ನು ಹೆದರಿಸಿ ಕೋಟ್ಯಂತರ ರೂಪಾಯಿ ದುಡ್ಡು ತರಿಸಿಕೊಂಡು, ನೂರಾರು ಮಂದಿ ಶಾರ್ಪ್ ಶೂಟರ್ ಗಳಿಂದ ಮಾಫಿಯಾ ಜಾಲವನ್ನು ವಿಸ್ತರಣೆ ಮಾಡಿಕೊಂಡು ಮೆರೆಯುತ್ತಿರುವ ರೌಡಿಗಳ ಗ್ಯಾಂಗ್ ಲೀಡರ್ ಗಳನ್ನು ಸರಿದಾರಿಗೆ ತರದಿದ್ದರೇ ಮುಂದು ಮತ್ತಷ್ಟು ಗಂಡಾಂತರ ಈ ಸಮಾಜಕ್ಕೆ ಎದುರಾಗಲಿದೆ.

ಜೈಲಿನೊಳಗಿನಿಂದಲೇ ನಡೆಯುತ್ತಿದೆ ಎಲ್ಲಾ ಆಟ!!

ರಾಜಧಾನಿ ದೆಹಲಿಯಲ್ಲಿ ಪ್ರತಿ ಕೊಲೆಯಾದಾಗಲೂ ಪೊಲೀಸರಿಂದ ರೌಡಿಗಳ ಎನ್ ಕೌಂಟರ್ ನಡೆಯುತ್ತಿದೆ! ಆದರೂ ಹೆದರದೆ ತಮ್ಮ ಚಾಳಿ ಮುಂದುವರಿಸಿರುವ ಈ ದೆಹಲಿಯ ಗ್ಯಾಂಗ್ ಸ್ಟರ್ ಗಳು ಎರಡು ಪ್ರಬಲ ಕ್ರೈಂ ಸಿಂಡಿಕೇಟ್ ಗಳಾಗಿ ಇಬ್ಭಾಗ ವಾಗಿವೆ! ಪರಸ್ಪರ ಕೊಲೆಗೆ ಪ್ರತೀಕಾರದ ಹೆಸರಲ್ಲಿ ದೆಹಲಿ ನಗರವನ್ನು ರಕ್ತಮಯ ಮಾಡಲು ಹೊಂಚಿಕುಳಿತಿದ್ದಾರೆ! ಹತ್ತಕ್ಕೂ ಹೆಚ್ಚಿನ ರೌಡಿ ಗುಂಪುಗಳಿಂದ ಕೂಡಿದ್ದ ಉತ್ತರ ಭಾರತದ ಭೂಗತ ಜಗತ್ತು ದೆಹಲಿಯನ್ನು ಕೇಂದ್ರೀಕರಿಸಿ ಕೊಂಡು ಮಾಫಿಯಾ ನಡೆಸುತ್ತಿತ್ತು. ದೇಶದ ರಾಜಧಾನಿ ದೆಹಲಿಯಲ್ಲಿ ಯಾರು ಮೋಸ್ಟ್ ನಟೋರಿಯಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುತ್ತಾರೋ ಅವರೇ ಉತ್ತರ ಭಾರತದ ಐದಾರು ರಾಜ್ಯದಲ್ಲಿ ಸಕ್ರಿಯವಾಗಿ ತಮ್ಮ ಅಂಡರ್ ವರ್ಲ್ಡ್ ಜಾಲವನ್ನು ಕಟ್ಟಲು ಸಮರ್ಥರಾಗಿರುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಈಗ ಎಲ್ಲಾ ಸಣ್ಣ ಪುಟ್ಟ ರೌಡಿಗಳ ಗ್ಯಾಂಗ್ ಲೀಡರ್ ಗಳು ಒಗ್ಗಟ್ಟಿನಿಂದ ಸಿಂಡಿಕೇಟ್ ರೌಡಿಸಂ ಸುರುಮಾಡಿದ್ದಾರೆ! ಈಗ ಸದ್ಯಕ್ಕೆ ದೆಹಲಿಯ ಬಾಫ್! ಹರಿಯಾಣದ ಬಾಪ್! ಎಂದು ಕರೆದುಕೊಳ್ಳುತ್ತಿದ್ದ ಗ್ಯಾಂಗ್ ಸ್ಟರ್ ಗೂಗಿಯ ಹತ್ಯೆ ಯೊಂದಿಗೆ ಮತ್ತೊಬ್ಬ ಗ್ಯಾಂಗ್ ಸ್ಟರ್ ಕಾಲಾ ಜತೇಡಿ ಅಲಿಯಾಸ್ ಸೋನು ಅಲಿಯಾಸ್ ಸಂದೀಪ್ ಎಂಬ ನಟೋರಿಯಸ್ ರೌಡಿಯ ನೇತೃತ್ವದಲ್ಲಿ ಒಂದು ಕ್ರೈಂ ಸಿಂಡಿಕೇಟ್ ನಿಂತಿದೆ! ಇವರ ಗ್ಯಾಂಗಿನಲ್ಲಿ ದೆಹಲಿಯ ಲಾರೆನ್ಸ್ ವಿಷ್ನೋಯಿ , ಸಂಪತ್ ನೆಹ್ರಾ, ಅಶೋಕ್ ಪ್ರಧಾನ್, ಹಸೀಂ ಬಾಬಾ ಗ್ಯಾಂಗ್ ಗಳು ಸಾತ್ ನೀಡುತ್ತಿವೆ! ಐದಾರು ರಾಜ್ಯದಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ಕಾಲಾ ಜತೇರಿ ಮತ್ತು ಪಂಜಾಬ್ ಮೂಲದ ವಿಷ್ನೋಯಿ ಜೊತೆಯಲ್ಲಿ 600ಕ್ಕೂ ಅಧಿಕ ಶಾರ್ಪ್ ಶೂಟರ್ ಗಳು ಕೆಲಸ ಮಾಡುತ್ತಾರೆ ಎಂಬ ವದಂತಿಗಳಿವೆ! ಮತ್ತೊಂದೆಡೆ ದೆಹಲಿಯ ನ್ಯಾಯಾಲಯದೊಳಗೆ ಗ್ಯಾಂಗ್ ಸ್ಟರ್ ಜಿತೇಂದರ್ ಗೂಗೀ ಮಾನ ನನ್ನು ಶೂಟ್ ಮಾಡಿಸಿದ ಟಿಲ್ಲು ತಾಜ್ ಪೋರಿಯಾ ಎಂಬ ಮತ್ತೊಬ್ಬ ಗ್ಯಾಂಗ್ ಸ್ಟರ್ ಹಿಂದೆ ದೆಹಲಿಯ ದಾವೂದ್ ಎಂದು ಕರೆಸಿಕೊಳ್ಳುವ ನಟೋರಿಯಸ್ ಗ್ಯಾಂಗ್ ಸ್ಟರ್ ನೀರಜ್ ಭವಾನಾ ಎಂಬ ಕುಖ್ಯಾತ ಪಾತಕಿ ಇದ್ದಾನೆ! ಆತನ ಕ್ರೈಂ ಸಿಂಡಿಕೇಟ್ ನಲ್ಲಿ ನವೀನ್ ಬಾಲೀ ಗ್ಯಾಂಗ್, ಸುನಿಲ್ ರಾಟೀ ಗ್ಯಾಂಗ್, ನಾಸಿರ್ ಗ್ಯಾಂಗ್, ದೇವಿಂಧರ್ ಬಂಬಿಯಾ ಗ್ಯಾಂಗ್ ಗಳು ನಿಂತಿವೆ! ಒಟ್ಟಾರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ಯಾಂಗ್ ಸ್ಟರ್ ಗೂಗಿ ಕೊಲೆಯ ನಂತರ ಜೈಲಿನೊಳಗಿಂದಲೇ ಸಿಂಡಿಕೇಟ್ ವಾರ್ ಸುರುಮಾಡಿರುವ ಎರಡು ಕ್ರೈಂ ಸಿಂಡಿಕೇಟ್ ಗ್ಯಾಂಗ್ ಗಳು ದೆಹಲಿಯಲ್ಲಿ ಜೈಲಿನ ಒಳಗೇ ಅಥವಾ ಹೊರಗೆ ದೆಹಲಿ ಬೀದಿಗಳಲ್ಲಿ ರಕ್ತದ ಹೊಳೆ ಹರಿಸಲು ಹೊಂಚುಹಾಕಿ ಹವಣಿಸುತ್ತಿರುವ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಸ್ಟೇಟಸ್ ವಾರ್ ರೀತಿ ಬಿತ್ತರವಾಗುತ್ತಿರುತ್ತವೆ! ಇಂಟರ್ ನೆಟ್ ದುನಿಯಾದಲ್ಲಿ ಸೈಲೆಂಟ್ ವಾರ್ ಘೋಷಿಸಿಕೊಂಡು ಗ್ಯಾಂಗ್ ಸ್ಟರ್ ಗಳು ತಮ್ಮ ತಮ್ಮ ಗ್ಯಾಂಗಿನ ಬಗ್ಗೆ, ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಫೇಸ್ಬುಕ್ ಇನ್ಸ್ಟಾಗ್ರಾಂಗಳಲ್ಲಿ ಪರಸ್ಪರ ಧಮ್ಕಿ ನೀಡುತ್ತಾ ನಕಲೀ ಅಕೌಂಟ್ ಓಪನ್ ಮಾಡೀ ಆವಾಜ್ ಬಿಡುತ್ತಾ ಘರ್ಜಿಸುವ ಚಾಳೀ ಸುರುಹಚ್ಚಿಕೊಂಡಿದ್ದಾರೆ! ‘ನಾವು ಸುಮ್ಮನೆ ಕುಳಿತಿದ್ದೇವೆಂದರೇ..ಸತ್ತಿದ್ದೇವೆ ಅಂತ ಅರ್ಥಅಲ್ಲ ..! ಶೀಘ್ರದಲ್ಲೇ ಆರಂಭಗೊಳ್ಳಲಿದೆ ಹೊಸ ಕಾಳಗ..!’ ಎಂದು ಒಂದು ಗ್ಯಾಂಗ್ ಅಪ್ಡೇಟ್ ಸ್ಟೇಟಸ್ ಹಾಕುತಿದ್ದರೇ ಅದಕ್ಕೆ ಪ್ರತಿಯಾಗಿ ವಿರೋಧಿ ಬಣದ ಇನ್ನೊಂದು ಗ್ಯಾಂಗಿನವರು ‘ವೀ ಆರ್ ವೇಟಿಂಗ್ ಫರ್ ಹಂಟಿಂಗ್..!’ ಎಂದು ಟಕ್ಕರ್ ಕೊಡುತ್ತಾ ಗ್ಯಾಂಗ್ ವಾರ್ ಗೆ ಆಹ್ವಾನ ನೀಡುತ್ತಿರುತ್ತಾರೆ! ದಿಲ್ಲಿ ಈ ಎರಡು ರೌಡಿ ಕ್ರೈಂ ಸಿಂಡಿಕೇಟ್ ಗಳ ಹಾವಳಿಯಿಂದ ರಣರಂಗವಾಗುವಂತಿದೆ.ದೆಹಲಿಯ ಮಂಡೋಲಿ ಜೈಲು, ತಿಹಾರ್ ಜೈಲು, ರೋಹಿಣಿ ಜೈಲುಗಳಲ್ಲಿ ತಣ್ಣಗೆ ಕುಳಿತು ಇಂಟರ್ ನೆಟ್ ಕಾಲಿಂಗ್ ಮೂಲಕವೇ ಕಿಲ್ಲಿಂಗ್ ನಡೆಸುತ್ತಿರುವ ಗ್ಯಾಂಗ್ ಸ್ಟರ್ ಗಳು ಸಿಸಿಟಿವಿಯ ನೆರಳಲ್ಲೇ ಸಾವಿನ ಸ್ಕ್ರಿಪ್ಟ್ ಬರೆಯುತ್ತಾ, ಕಿಡ್ನಾಪ್, ಧಮ್ಕಿ, ಹಫ್ತಾ ವಸೂಲಿ ಮಾಡುತ್ತಾ ಹಾರ್ಡ್ ಕೋರ್ ಕ್ರಿಮಿನಲ್ ಗಳಾಗಿ ಪರಿವರ್ತಿತ ರಾಗಿದ್ದಾರೆ! ಪ್ರತೀ ಗ್ಯಾಂಗಿನಲ್ಲೂ ಶಾರ್ಪ್ ಶೂಟರ್ ಗಳು ಇರುವುದರಿಂದ, ದೆಹಲಿಯ ಗ್ಯಾಂಗ್ ಸ್ಟರ್ ಗಳಿಗೆ ಗನ್ನುಗಳು ಆಟದ ಸಾಮಾನುಗಳ ರೀತಿ ಸಿಗುತ್ತಿರುವುದರಿಂದ ದೆಹಲಿಯಲ್ಲಿ ರೌಡಿಗಳ ಕಧನ ಕುತೂಹಲ ಕೆರಳಿಸಿ ಸಾಮಾನ್ಯ ಜನರನ್ನು ಕಂಗೆಡಿಸಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ಯು.ಪಿ(ಉತ್ತರ ಪ್ರದೇಶ) ಗ್ಯಾಂಗ್ ಸ್ಟರ್ ಗಳು ದಿಲ್ಲಿಯ ಮಾಫಿಯಾ ಡಾನ್ ಗಳ ಜೊತೆ ಸೇರಿಕೊಂಡು ಲೂಟಿ, ಹಣಕೊಡದವರ ಹತ್ಯೆ, ಕಿಡ್ನಾಪ್ ಮಾಡಿಸಿಕೊಂಡು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಈ ದೇಶದ ಕಾನೂನು ಸುವ್ಯವಸ್ಥೆ-ಪೊಲೀಸ್ ಬಲವನ್ನು ಅಣಕಿಸುತಿದ್ದಾರೆ!

 

ಕೊಲೆ ಮಾಡಿದ ನಂತರ ರೌಡಿಗಳು ಫೇಸ್ಬುಕ್ ಲೈವ್ ಕೊಡುತ್ತಾ ಪೊಲೀಸರಿಗೆ ಸೆರೆಂಡರ್ ಆಗುತ್ತಿರುವುದೂ, ದೆಹಲಿಯಲ್ಲಿ ಫಿಲ್ಮಿ ಸ್ಟೈಲ್ ನಲ್ಲಿ ಪೊಲೀಸರಿಗೆ ಹೊಡೆದು ಪರಾರಿಯಾಗುವುದೂ, ಜೈಲಿನಲ್ಲಿ ಸೇಫಾಗಿ ಕುಳಿತು ತಮ್ಮ ಫೇಸ್ಬುಕ್, ಯೂಟ್ಯೂಬ್ ಗಳಿಗೆ ವೀಡಿಯೋ ಅಪ್ಲೋಡ್ ಮಾಡಿ ಲೈಕ್ಸ್ ಶೇರ್ ಮಾಡಿಸುತ್ತಾ ಸಮಾಜದೆದುರು ಹೀರೋಗಳ ರೀತಿ ಬಿಂಬಿತವಾಗುತ್ತಿರುವುದು
ನಾಚಿಕೆಗೇಡಿನ ಸಂಗತಿಯಾಗಿದೆ. ದೆಹಲಿಯ
ಪೊಲೀಸರಿಗೆ ಫೈರ್ ಮಾಡೀ ಪರಾರಿಯಾಗಿರುವ ಗ್ಯಾಂಗ್ ಸ್ಟರ್ ಗಳ ತಲೆಗೆ ಲಕ್ಷಾಂತರ ರೂಪಾಯಿ ಇನಾಮು ಘೋಷಿಸಿ ಸುಮ್ಮನಿರುವ ಪೊಲೀಸರು ರೌಡಿಗಳು ಸಿಕ್ಕಿದಾಗ ಸುಮ್ಮನೆ ಹಿಡಿದು ತಂದು ತಿಹಾರ್ ಜೈಲಿನಲ್ಲಿಟ್ಟು ಐಷಾರಾಮಿ ಸೌಲಭ್ಯ ಕೊಟ್ಟು ಸೇಫಾಗಿ ಸಾಕುತ್ತಿದ್ದಾರೆ! ದೆಹಲಿಯ ನ್ಯಾಯಾಲಯ ದೊಳಗೇ ಕೊಲೆಯಾದ ಗ್ಯಾಂಗ್ ಸ್ಟರ್ ಗೂಗಿ ಮೂರು ಬಾರಿ ಪೊಲೀಸರಿಗೆ ಹೊಡೆದು ಕಸ್ಟಡಿಯಿಂದ ಪರಾರಿಯಾಗಿದ್ದ! ಈಗ ದೆಹಲಿಯ ದಾವೂದ್ ಎಂದು ಕರೆಸಿಕೊಳ್ಳುವ ಡಾನ್ ನೀರಜ್ ಭವಾನಾ ಕೋರ್ಟಿಗೆ ಬಂದಾಗ ಪೊಲೀಸರಿಗೇ ಫೈರಿಂಗ್ ಮಾಡೀ ಆವರ ಬಳಿಯಿದ್ದ ಏಕೆ47 ಬಂದೂಕು ಎತ್ತಿಕೊಂಡು ಪರಾರಿಯಾಗಿದ್ದ!! ಗ್ಯಾಂಗ್ ಸ್ಟರ್ ಕಾಲಾ ಜತೇಡಿ ಕೂಡ ಪೊಲೀಸರು ಕರೆದೊಯ್ಯುವಾಗ ತನ್ನ ಗ್ಯಾಂಗ್ ಕರೆಸಿ ಪೊಲೀಸರಿಗೆ ಹೊಡೆಸಿ ಎಸ್ಕೇಪ್ ಆಗಿ ದುಬೈ ಸೇರಿದ್ದ! ಗ್ಯಾಂಗ್ ಸ್ಟರ್ ಲಾರೆನ್ಸ್ ವಿಷ್ನೋಹಿ ಜೈಲಲ್ಲಿ ಕುಳಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆಗೆ ಸ್ಕೆಚ್ ಹಾಕಿ ಫೈರ್ ಮಾಡಲು ಸುಫಾರಿ ಕಿಲ್ಲರ್ ಗಳನ್ನ ಕಳಿಸಿದ್ದ! ಈ ಮಟ್ಟಿನ ಧಿಮಾಕು, ದುರಹಾಂಕಾರ ಕಾನೂನಿನ ಮೇಲೆ ಅಗೌರವ ಇರುವುದರಿಂದಲೋ ಏನೋ ದೆಹಲಿಯ ಗ್ಯಾಂಗ್ ಸ್ಟರ್ ಗಳಿಗೆ ಸೋಷಿಯಲ್ ಮೀಡಿಯಾ ಪೇಜ್ ಗಳಿವೆ! ಕೆಲವರಿಗೆ ಸಾವಿರಾರು, ಡಾನ್ಗಳಿಗೆ ಲಕ್ಷಾಂತರ ಜನ ಫಾಲೋವರ್ಸ್ ಗಳಿದ್ದಾರೆ! ಯೂಟ್ಯೂಬ್ ನಲ್ಲಿ ದೆಹಲಿಯ ರೌಡಿಗಳನ್ನು ಸ್ತುತಿಸಿ ಹಾಡಿ ಹೊಗಳುವ, ಜಿಂದಾಬಾದ್ ಕೂಗುವ, ರ್ಯಾಫ್ ಸಾಂಗ್ಸ್, ಮ್ಯೂಸಿಕಲ್ ಹಾಡುಗಳನ್ನು ವೀಡಿಯೋ-ಫೋಟೋ ಗಳೊಂದಿಗೆ ಜೋಡಿಸಿ ಹರಿಯಬಿಡಲಾಗಿದೆ! ಜೈಲಿನಲ್ಲಿ ಕುಳಿತೇ ರೌಡಿಗಳು ಟಿಕ್ ಟಾಕ್ ರೀತಿಯ ವೀಡಿಯೋ ಚಿತ್ರೀಕರಿಸಿ ತಮ್ಮ ಸೋಷಿಯಲ್ ಮೀಡಿಯಾ ನೆಟ್ವರ್ಕ್ ಗಳ ಜೊತೆಗೆ ಹಂಚಿಕೊಂಡು ಛೇಲಾಗಳನ್ನು ಹುಟ್ಟುಹಾಕುತ್ತಿದ್ದಾರೆ! ಈಗ ಇವರೆಲ್ಲಾ ಹೈ ಸೆಕ್ಯೂರಿಟಿ ಜೈಲಾದ ತಿಹಾರ್ ಜೈಲಿನಿಂದ ಬಿಲ್ಡರ್ ಗಳಿಗೆ, ಬಿಸಿನೆಸ್ ಮ್ಯಾನ್ ಗಳಿಗೆ ಐಪಿ ಅಡ್ರೆಸ್ ಮರೆಮಾಚಿ ಇಂಟರ್ ನೆಟ್ ಕಾಲಿಂಗ್ ಮಾಡಿ ಕೋಟಿಗಟ್ಟಲೆ ಹಣ ಸುಲಿಗೆ ಮಾಡ್ತಾರೆ, ಹಣ ಕೊಡದಿದ್ದರೇ ಕೊಲ್ಲಿಸ್ತಾರೇ!!ದೇಶಕ್ಕೆ ಮಾದರಿ ಯಾಗಬೇಕಿದ್ದ ಭಾರತದ ರಾಜಧಾನಿ ದೆಹಲಿಯೇ ಹೀಗೇ ಭೂಗತ ಜಗತ್ತಿನ ಮಾಫಿಯಾ ಡಾನ್ ಗಳ, ಗ್ಯಾಂಗ್ ಸ್ಟರ್ ಗಳ ಕೊಂಪೆಯಂತಾಗಿದೆ! ಸಾಮಾನ್ಯ ಜನರು ರೌಡಿಗಳ ಅಕ್ರಮ ಪಿಸ್ತೂಲುಗಳ ಸದ್ಧಿಗೆ ಬೆದರಿ ಮನೆಸೇರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ! ಇದು ಇವತ್ತಿನ ಇಂಡಿಯಾದ ಸ್ಥಿತಿ!!

ಕಬಡ್ಡಿಯನ್ನು ಕೊಂದವರಾರು?

ಈಗ ಈ ಗ್ಯಾಂಗ್ ಸ್ಟರ್ ಗಳ ಹಣದಾಹಕ್ಕೆ ಬಲಿಯಾಗಿರುವ ಸಂದೀಪ್ ನಂಗಲ್ ನಮ್ಮ ಭಾರತದ ಅತ್ಯುತ್ತಮ ಕಬಡ್ಡಿ ಪಟು ಅನ್ನೋದರಲ್ಲಿ ಎರಡು ಮಾತಿಲ್ಲ. ಆತನ ಆಟವನ್ನು ಜಗತ್ತಿನ ಕಬಡ್ಡಿ ಪ್ರೇಮಿಗಳು ಮರೆಯಲಾರರು. ಈ ಘಟನೆಗೆ ದೇಶದ ಕಬಡ್ಡಿ ಪಟುಗಳು, ಭಾರತದ ಕಬಡ್ಡಿ ಫೆಡರೇಶನ್ ಆಘಾತ ವ್ಯಕ್ತಪಡಿಸಿದೆ.
ಸಂದೀಪ್ ನಂಗಲ್ ಮೇಲೆ ಶಾರ್ಪ್ ಶೂಟರ್ ಗಳು ಗುಂಡಿನ ದಾಳಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರು ಹೆಚ್ಚಿನ ತನಿಖೆಗಾಗಿ ತಂಡಗಳನ್ನು ರಚಿಸಿದ್ದಾರಂತೇ!
ಕಬಡ್ಡಿ ಕ್ಲಬ್, ಫೆಡರೇಶನ್ ನಡುವಿನ ಕೆಲ ಮನಸ್ತಾಪಗಳು ದಾಳಿಗೆ ಕಾರಣವಾಗಿರುವ ಸಾಧ್ಯತೆಗಳೂ ಇದೆ ಎಂದು ಹೇಳಲಾಗುತ್ತಿದೆ. ಯಾರು ಯಾವ ಕಾರಣಕ್ಕೆ, ಯಾವ ಗ್ಯಾಂಗ್ ಸ್ಟರ್ ಗಳಿಗೇ ಸುಫಾರಿ ನೀಡಿದ್ದಾರೋ ಗೊತ್ತಿಲ್ಲ. ಅಥವಾ ಕಬಡ್ಡಿ ಪಟು ಸಂದೀಪ್ ಯಾವುದಾದರೂ ಅಂಡರ್ ವರ್ಲ್ಡ್ ಮಾಫಿಯಾ ಜೊತೆಗೆ ಗುರುತಿಸಿಕೊಂಡಿದ್ದ ಕಾರಣಕ್ಕೆ, ವೃತ್ತಿ ವೈಷಮ್ಯಕ್ಕೆ, ಕೊಲೆಯಾಗಿರುವ ಸಾಧ್ಯತೆಯೂ ಇದೆ! ಸಧ್ಯಕ್ಕೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಸ್ನೋಯ್, ಜಗ್ಗು ಭಗವಾನ್ ಪುರಿಯಾ ಗ್ರೂಪುಗಳಮೇಲೂ ಅನುಮಾನ ವ್ಯಕ್ತವಾಗಿವೆ. ಡ್ರಗ್ಸ್ ಮಾಫಿಯಾ, ಆಯಿಲ್ ದಂಧೆ,ಹವಾಲಾ ದಂಧೆ ಟ್ರಾವೆಲ್ಸ್ ಮಾಫಿಯಾ, ಅಂಡರ್ ವರ್ಲ್ಡ್ ಮೂಲಕವೇ ಕಂಟ್ರೋಲ್ ಮಾಡಲಾಗುತ್ತಿದೆ ಎಂದು ಈಗಲು ನಂಬಲಾಗಿದೆ. ಹಫ್ತಾ ವಸೂಲಿಗಾಗಿ ಈ ಹಿಂದೆ ದುಬೈನಲ್ಲಿ ಕುಳಿತಿದ್ದ ಮಾಫಿಯಾ ಡಾನ್ ಗಳು ಸಿನಿಮಾ ರಂಗದವರಿಗೆ ಬೆದರಿಕೆ ಕರೆ ಹಾಕುತಿದ್ದರು. ಬಿಲ್ಡರ್ ಗಳಿಗೂ ಹೆದರಿಸುತ್ತಿದ್ದರು. ನಂತರ ಕುದುರೇ ರೇಸ್ ಕೋರ್ಸ್ ನಲ್ಲಿಯೂ ಡಾನ್ ಗಳ ಆಟ ನಡೆಯುತ್ತಿತ್ತೆಂದು ನಂಬುವವರಿದ್ದಾರೆ.

ಪ್ಲೇಯರ್ ಗಳನ್ನಿಟ್ಟುಕೊಂಡು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಂಡರ್ ವರ್ಲ್ಡ್ ಮಾಫಿಯಾ ಡಾನ್ ಗಳು ಇದ್ದರು. ಈಗಲೂ ಇರಬಹುದು. ಎಲ್ಲೆಲ್ಲಿ ಹೆಚ್ಚು ಹಣ ಸೇರುತ್ತಿರುತ್ತದೋ ಅದರ ಹಿಂದೆ ಅಂಡರ್ ವರ್ಲ್ಡ್ ಮಾಫಿಯಾ ಬಂದು ನಿಂತು ಕೊಳ್ಳುತ್ತದೆ! ಈಗ ದೇಶದ ಕಬಡ್ಡಿಯ ಕೆಲವು ಪ್ಲೇಯರ್ ಗಳು ಯಾವ್ಯಾವ ಗ್ಯಾಂಗ್ ಸ್ಟರ್ ಗಳ ಇಶಾರೆ ಮೇರೆಗೆ ಆಟ ಆಡುತ್ತಾರೆಂಬುದು ಓಪನ್ ಸೀಕ್ರೆಟ್! ಹಲವಾರು ಕ್ರೀಡೆಗಳು ಅಂಡರ್ ವರ್ಲ್ಡ್ ಮಾಫಿಯಾದ ಭಾಗವಾಗಿ ಹೋಗಿವೆ! ಎಲ್ಲಾ ಫಿಕ್ಸಿಂಗ್-ಬೆಟ್ಟಿಂಗ್! ಈಗ ಪಂಜಾಬ್ ನಲ್ಲಿ ಆಗುತ್ತಿರುವುದು ಆಗಿರುವುದು ಅದೇ ಆಗಿದೆ. ವರ್ಡ್ ಲೀಗ್ ಕಬಡ್ಡಿ ಟೂರ್ನಿಮೆಂಟ್ ಪಂದ್ಯಾವಳಿಯ ಕೋಟ್ಯಂತರ ರೂಪಾಯಿ ವಹಿವಾಟಿನ ಸುತ್ತ ಈ ಕೊಲೆಯ ಬಲೆ ಹೆಣೆದಿದೆಯಂತೇ! ದುಬೈನಲ್ಲೋ, ಥಾಯ್ ಲ್ಯಾಂಡ್ ನಲ್ಲೋ ಕುಳಿತ ಗ್ಯಾಂಗ್ ಸ್ಟರ್ ಗಳ ಇಶಾರೆಯ ಮೇರೆಗೆ ಈ ಸಂದೀಪ್ ನಂಗಲ್ ಹತ್ಯೆ ನಡೆದುಹೋಗಿದೆಂತೆ! ರೌಡಿ ಗ್ಯಾಂಗ್ ಸ್ಟರ್ ಗಳ ಡಾಲರ್ ಗಳ ಆಸೆಗೆ ಅಂತಾರಾಷ್ಟ್ರೀಯ ಕಬಡ್ಡಿ ಪಟು ಸಂದೀಪ್ ನಂಗಲ್ ಹೆಣವಾಗಿದ್ದಾನೆ ಎನ್ನಲಾಗುತ್ತಿದೆ. ಉಸ್ತಾದ್ ಜಗ್ಗು ಭಗವಾನ್ ಪುರಿಯಾ ಎಂಬ ಪಂಜಾಬಿನ ಮಾಜಿ ಕಬಡ್ಡಿ ಪಟು ತನ್ನ ಮಾತು ಕೇಳದ ತಾನು ಹೇಳಿದಂತೆ ಕಬಡ್ಡಿ ಆಡದವರನ್ನು ಈ ಹಿಂದಿನಿಂದಲೂ ಗನ್ ತೋರಿಸಿ ಹೆದರಿಸಿ ಕೊಂಡು ಬರುತ್ತಿರುವುದು ಹೊಸ ವಿಚಾರವೇನಲ್ಲ. ಈ ಹಿಂದೆಯೂ 2018 ರಲ್ಲಿ ಡುಲ್ಲೆ ಎಂಬ ಕಬಡ್ಡಿ ಪ್ಲೇಯರ್ ಮೇಲು ಫೈರಿಂಗ್ ಆಗಿತ್ತು. ಹಲವಾರು ಕಬಡ್ಡಿ ಪಟು ಗಳಮೇಲಾಗಿರುವ ಅಟ್ಯಾಕ್ ಫೈರಿಂಗ್ ಗಳ ಹಿಂದೆ ಲಾರೆನ್ಸ್ ಬಿಸ್ನೋಯ್ ಸಿಂಡಿಕೇಟ್ ನ ರೌಡಿ ಜಗ್ಗು ಭಗವಾನ್ ಪುರಿಯಾ ಇದ್ದಾನೆನ್ನವುದು ಎಲ್ಲರಿಗಿಂತಲೂ ಪಂಜಾಬ್ ಪೊಲೀಸರಿಗೇ ಗೊತ್ತಿದೆ! ಆದರೆ ಜಗ್ಗು ಭಗವಾನ್ ಪುರಿಯಾ ಹೆಸರಿನ ಫೇಸ್ಬುಕ್ ಅಕೌಂಟ್ ನಲ್ಲಿ ಪೋಸ್ಟ್ ಒಂದನ್ನು ಹಾಕಲಾಗಿದ್ದು, ಸಂದೀಪ್ ನಂಗಲ್ ಕೊಂದವರು ನಾವಲ್ಲ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆಯಲಾಗಿದೆ! ಅದು ಯಾರ ನಕಲಿ ಮುಖ ಪುಸ್ತಕವೋ? ಅದು ನಿಜವೇ ಆಗಿದ್ದರೆ ಮತ್ತಿನ್ಯಾವ ಗ್ಯಾಂಗ್ ಸ್ಟರ್ ಈ ಕೊಲೆಯ ಹಿಂದೆ ಇದ್ದಾರೆಂಬುದು ಕೂಡ ಪೊಲೀಸರ ಕೂಲಂಕುಷ ತನಿಖೆಯಿಂದಷ್ಟೇ ಸಾಧ್ಯ.ಈ ಗ್ಯಾಂಗ್ ಸ್ಟರ್ ಗಳ ಹಾವಳಿಯಿಂದ ಭಾರತದ ಹಲವು ಕ್ರೀಡೆಗಳು ಗ್ಯಾಂಬ್ಲಿಂಗ್ ನಂತಾಗಿ ಹೋಗುತ್ತಿವೆ! ನಾನಾ ಕಾರಣಗಳಿಂದಾಗಿ ರೌಡಿ ಸಿಂಡಿಕೇಟ್ ಗಳ ಪಾಲಾಗಿ ಹೋಗಿರುವ ಕಬಡ್ಡಿ ಪ್ಲೇಯರ್ ಗಳು ಈಗ ಬೀದಿ ಹೆಣವಾಗುತಿದ್ದಾರೆ. ಈ ಹಿಂದೆ ಹಲವಾರು ಬಾರಿ ಗ್ಯಾಂಗ್ ಸ್ಟರ್ ಗಳಿಂದ ಸಂದೀಪ್ ನಂಗಲ್ ಗೆ ಹೇಳಿದಂತೆ ಆಡಬೇಕೆನ್ನುವ ಬೆದರಿಕೆ ಕರೆಗಳು ಬಂದಿದ್ದವೆನ್ನಲಾಗಿದೆ. ಆಸ್ಟ್ರೇಲಿಯಾ,ಕೆನಡಾ, ಅಮೆರಿಕಾ, ಇಂಗ್ಲೇಂಡ್, ಮುಂತಾದ ಶ್ರೀಮಂತ ದೇಶಗಳಲ್ಲಿ ವಿಶ್ವ ಕಬಡ್ಡಿ ಲೀಗ್ ಪಂದ್ಯಗಳನ್ನು ನಡೆಸಿ, ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ರೂಪಾಯಿ ದುಡ್ಡು ಬಾಚುವ ದಂಧೆಯಲ್ಲಿ ತೊಡಗಿರುವ, ದೆಹಲಿಯ ತಿಹಾರ್ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಗಳೇ ಈ ಫೈರಿಂಗ್ ಹಿಂದೆ ಇದ್ದಾರಂತೆ. ಲಕ್ಷಾಂತರ ರೂಪಾಯಿ ಕೊಟ್ಟು, ಶಾರ್ಪ್ ಶೂಟರ್ ಗಳನ್ನು ಸ್ಲೀಪರ್ ಸೆಲ್ ಗಳಾಗಿಟ್ಟು, ಸಂದೀಪ್ ನಂಗಲ್ ನನ್ನು ಫಾಲೋ ಮಾಡಿ ಬೇಟೆಯಾಡಲಾಗಿದೆ. ಇದೊಂದು ಅಂತಾರಾಷ್ಟ್ರೀಯ ಕಾಂಟ್ರಾಕ್ಟ್ ಕಿಲ್ಲಿಂಗ್! ನಾಲ್ಕು ಜನರ ಪ್ರೊಫೇಷನಲ್ ಶಾರ್ಪ್ ಶೂಟರ್ ಗಳ ತಂಡ ಕಾರಿನಲ್ಲಿ ಬಂದು ಶೂಟ್ ಮಾಡಿ ಪರಾರಿಯಾಗಿದೆ! ಇನ್ನೂ ಈ ಫೈರಿಂಗ್ ಹಿಂದೆ ಯಾರ್ಯಾರು ಇದ್ದಾರೆ ಎಂಬುದು ಪೊಲೀಸರ ಪ್ರಾಮಾಣಿಕ ತನಿಖೆಯಿಂದಷ್ಟೇ ಸತ್ಯ ಸಂಗತಿ ಹೊರ ಬರಬೇಕಿದೆ. ಆದರೆ ಅಂತಾರಾಷ್ಟ್ರೀಯ ಕಬಡ್ಡಿ ಪಟು ಕಬಡ್ಡಿ ಅಂಗಣದಲ್ಲೇ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿರುವುದು ನಿಜಕ್ಕೂ ದುರಂತವೇ ಸರಿ.ಇದು ಹೀಗೆಯೇ ಮುಂದುವರೆದರೆ ದೇಶದಲ್ಲಿ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ನಾಟಕ, ಸಿನಿಮಾ, ಎಲ್ಲವೂ ಯಾರದೋ ಕೈಗೆ ಸಿಕ್ಕಿಕೊಂಡ ಕೀಲು ಗೊಂಬೆಗಳಂತಾಗಿ, ನಿರ್ಜೀವವಾಗಿ, ಸಮಾಜವೇ ಸ್ವಯಂ ಆತ್ಮಹತ್ಯೆ ಮನಸ್ಥಿತಿಗೆ ಜಾರಿದರೂ ಜಾರಬಹುದು. ಮನುಷ್ಯನ ಅಂತರದ ಜೀವ ದ್ರವ್ಯಗಳಾದ ಕಲೆ, ಸಂಗೀತ, ಸಾಹಿತ್ಯ, ನಾಟಕ, ಕ್ರೀಡೆಗಳು ಎಂದೆಂದಿಗೂ ಬತ್ತದಂತೆ ಕಲುಷಿತವಾಗದಂತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.ಆದಷ್ಟು ಬೇಗ ಕಬಡ್ಡಿಗೆ ಹಿಡಿದಿರುವ ಗ್ಯಾಂಗ್ ಸ್ಟರ್ ಗಳ ಗ್ರಹಣ ಬಿಟ್ಟು ಕಬಡ್ಡಿ ಕ್ರೀಡೆ ಸಹಜ ಕ್ರೀಡೆಯಾಗಿ ಎಲ್ಲರ ಮನ ರಂಜ

Girl in a jacket
error: Content is protected !!