ಎಸ್.ಪಿ.ಬಾಲಸುಬ್ರಹ್ಮಣ್ಯಂಕನ್ನಡಕ್ಕಾಗಿ ಮೊದಲು ಹಾಡಿದ ನಕ್ಕರೆಅದೇ ಸ್ವರ್ಗ

Share

ಎಸ್.ಪಿ.ಬಾಲಸುಬ್ರಹ್ಮಣ್ಯಂಕನ್ನಡಕ್ಕಾಗಿ ಮೊದಲು ಹಾಡಿದ ನಕ್ಕರೆಅದೇ ಸ್ವರ್ಗ

ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಕಾಂತ್ ನಹತಾ ಮತ್ತು ಶ್ರೀಕಾಂತ್ ಪಟೇಲ್ ನಿರ್ಮಾಣ ಮಾಡಿದ ನಕ್ಕರೆಅದೇ ಸ್ವರ್ಗ ಕಪ್ಪುಬಿಳುಪು ಸಾಮಾಜಿಕಕಥಾಹಂದರದಚಿತ್ರ ೧೯೬೭ರಲ್ಲಿ ಬಿಡುಗಡೆಗೊಂಡಿತು. ಎಂ.ಆರ್.ವಿಠಲ್ ನಿರ್ದೇಶನದ ಈ ಚಿತ್ರದಲ್ಲಿ ನರಸಿಂಹರಾಜು, ಅರುಣ್‌ಕುಮಾರ್, ಆರ್.ನಾಗೇಂದ್ರರಾವ್, ಶೈಲಶ್ರೀ, ಢಿಕ್ಕಿಮಾಧವರಾವ್, ರಂಗ, ಸಂಪತ್, ಜಯಂತಿ, ಜೂ.ರೇವತಿ ಅಭಿನಯಿಸಿದರು.

 


ಎಸ್.ಪಿ.ಬಾಲಸುಬ್ರಹ್ಮಣ್ಯಂಅವರು ಮೊದಲ ಬಾರಿಗೆಕನ್ನಡಚಿತ್ರಕ್ಕಾಗಿ ಹಾಡಿದರು.ಅರುಣ್‌ಕುಮಾರ್‌ಅವರಿಗಾಗಿಎಸ್.ಪಿ.ಬಾಲಸುಬ್ರಹ್ಮಣ್ಯಂಅವರು ಕನಸಿದೋ ನನಸಿದೋ..’ಗೀತೆಯನ್ನು ಹಾಡಿದರು.ಎಂ.ರಂಗಾರಾವ್ ಸಂಗೀತ ನಿರ್ದೇಶನದ ಮೊದಲ ಚಿತ್ರ.ನರಸಿಂಹರಾಜು ಅವರು ನಾಯಕನಟರಾಗಿ ಅಭಿನಯಿಸಿದ ಚಿತ್ರ.ವೂ ಹೌದು.ನರಸಿಂಹರಾಜು ಅಭಿನಯದ ೧೦೦ನೆ ಚಿತ್ರಇದಾಗಿತ್ತು.ರಾಜ್ಯ ಸರ್ಕಾರ ಚಲನಚಿತ್ರಗಳಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದ ನಂತರ ಪ್ರಥಮವಾಗಿ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲಾರಂಭಿಸಿದ ವ? (೧೯೬೬-೬೭)ವಾಗಿದ್ದು, ಈ ಚಿತ್ರ ದ್ವಿತೀಯಅತ್ಯುತ್ತಮಚಿತ್ರ ಪ್ರಶಸ್ತಿಗೆ ಪಾತ್ರವಾಯಿತು. ಆ ವ? ಪ್ರಥಮ ಪ್ರಶಸ್ತಿ ಯಾವಚಿತ್ರಕ್ಕೂ ಲಭಿಸಲಿಲ್ಲ. ಇದು ಕೇವಲ ೧೯ ದಿನಗಳಲ್ಲಿ ಚಿತ್ರೀಕರಣ ಮುಗಿಸಿದ ಚಿತ್ರ.ವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.


ಎಂ.ಆರ್.ವಿಠಲ್‌ಕಥೆ ಹಾಗೂ ಚಿತ್ರಕಥೆ ರಚಿಸಿದ್ದು ಆರ್.ಎನ್.ಜಯಗೋಪಾಲ್ ಸಂಭಾಷಣೆ ಬರೆದರು. ಆರ್.ಎನ್.ಜಯಗೋಪಾಲ್ ಹಾಗೂ ವಿಜಯನಾರಸಿಂಹ ಗೀತೆಗಳನ್ನು ರಚಿಸಿದ್ದು, ಪಿ.ಸುಶೀಲ, ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಗೀತೆಗಳಿಗೆ ದನಿಯಾದರು. ಎಸ್.ಪಿ.ಎನ್.ಕೃ? ಸಂಕಲನ, ಎಸ್.ವಿ.ಶ್ರೀಕಾಂತ್ ಹಾಗೂ ಡಿ.ವಿ.ರಾಜಾರಾಂಛಾಯಾಗ್ರಹಣಚಿತ್ರಕ್ಕಿತ್ತು.ಎಂ.ಆರ್.ವಿಠಲ್‌ಅವರ ಪತ್ನಿರಾಜಮ್ಮ ಪ್ರಸಾಧನಕಾರ್ಯ ನೆರವೇರಿಸಿದರು. ಕನಸಿದೋ ನನಸಿದೋ ಮುಗುದ ಮನಸ ಬಯಕೆಯೋ….’, ಬಾಳೊಂದು ಭಾವಗೀತೆಆನಂದತುಂಬಿದಕವಿತೆ….’, ನಗಬೇಕು ನಗಿಸಬೇಕು ಇದೇ ನನ್ನಧರ್ಮ…’, ಮುಂತಾದ ಗೀತೆಗಳನ್ನು ಅಳವಡಿಸಲಾಗಿತ್ತು.
ಶ್ರೀಮಂತ ತಂದೆಯ ಶ್ರೀಮಂತಿಕೆಯ ವ್ಯಾಮೋಹ ಹಾಗು ಮಗನ ನಡುವಿನ ದ್ವಂದ್ವವೇ ಈ ಚಿತ್ರದ ವಸ್ತು.ಪ್ರೀತಿಸಿ ಬಡವನನ್ನು ಮದುವೆಯಾದ ಮಗಳು ಕರುಣಾ ನೆಮ್ಮದಿಯಿಂದ ಬದುಕಿದರೆರಾಯರು ಶ್ರೀಮಂತ ಹೆಣ್ಣನ್ನು ಸೊಸೆಯಾಗಿತಂದುಕೊಂಡು ಮಗನ ಬಾಳು ನರಕ ಮಾಡುತ್ತಾರೆ.ಪತ್ರಕರ್ತನಾಗಿ ಹೊಸ ಬದುಕು ಆರಂಭಿಸಿದ ರಾಜಾ ಕೊನೆಗೆ ಬಡ ಹುಡುಗಿಯನ್ನು ವಿವಾಹವಾಗುತ್ತಾನೆ.

ವೀಣಾ ವಿದ್ವಾನ್ ಸಂಗೀತ ನಿರ್ದೇಶಕಎಂ.ರಂಗರಾವ್

ಎಂ.ರಂಗರಾವ್‌ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರು.೧೯೩೨ರ ಏಪ್ರಿಲ್ ೨೬ರಂದು ಆಂದ್ರಪ್ರದೇಶದ ಹಳ್ಳಿಯೊಂದರಲ್ಲಿ ಜನಿಸಿದರು.ಮಾತೃಭಾಷೆತೆಲುಗು.ಮೆಕ್ಯಾನಿಕಲ್‌ಎಂಜಿನಿಯರಿಂಗ್‌ಡಿಪ್ಲಮೋ ಪದವೀಧರರು.ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ.ತಾಯಿರಂಗಮ್ಮನವರಿಂದಲೇ ಸಂಗೀತ ಶಿಕ್ಷಣ, ವೀಣಾವಾದನವನ್ನುತಾಯಿಯಿಂದಲೇಅಭ್ಯಾಸ ಮಾಡಿದರು.ಅಭಿನಯದಲ್ಲೂ ಆಸಕ್ತಿ.ನಟರಾಗಿತೆಲುಗುಚಿತ್ರರಂಗ ಪ್ರವೇಶ.ತ್ಯಾಗಯ್ಯ, ಸ್ವರ್ಗಸೀಮಾ, ಯೋಗಿವೇಮನ ಚಿತ್ರಗಳಲ್ಲಿ ಅಭಿನಯಸಿದ ನಂತರ ಸಂಗೀತ ನಿರ್ದೇಶನದತ್ತ ಬಂದರು. ‘ನಕ್ಕರೇಅದೇ ಸ್ವರ್ಗ (೧೯೬೭) ಚಿತ್ರಕ್ಕೆ ಸಂಗೀತ ನಿರ್ದೇಶಿಸುವ ಮೂಲಕ ಎಂ.ರಂಗರಾವ್‌ಕನ್ನಡಚಿತ್ರರಂಗ ಪ್ರವೇಶಿಸಿದರು.ರಾಜಕುಮಾರ್‌ಅಭಿನಯದ ಮನಸ್ಸಿದ್ದರೆ ಮಾರ್ಗ (೧೯೬೭), ರಂಗರಾವ ಸಂಗೀತ ನೀಡಿದಎರಡನೆಯಚಿತ್ರ. ೧೨೦ ಚಿತ್ರಗಳಿಗೆ ರಂಗರಾವ್ ಸಂಗೀತ ಸಂಯೋಜಿಸಿದ್ದಾರೆ.‘ಹೊಸಬೆಳಕು‘, ‘ಬಂಧನ‘, ‘ಒಲವಿನ ಉಡುಗೊರೆ‘ ಮುಂತಾದ ಚಿತ್ರಗಳಿಗೆ ಮಧುರ ಸಂಗೀತ ನೀಡಿಖ್ಯಾತರಾಗಿದ್ದಾರೆ.ಇವರ ಸಂಗೀತ ನಿರ್ದೇಶನದ ಚಲನಚಿತ್ರಗಳಲ್ಲಿನ ಬಹಳಷ್ಟು ಗೀತೆಗಳು ಅತ್ಯಂತಜನಪ್ರಿಯಗೊಂಡಿವೆ.

‘ಹೂವು ಚೆಲುವೆಲ್ಲಾ ನಂದೆಂದಿತು‘ ಸುಂದರಗೀತೆಯನ್ನು ಒಳಗೊಂಡ ‘ಹಣ್ಣೆಲೆಚಿಗುರಿದಾಗ‘ ಚಿತ್ರದ ಸಂಗೀತ ಸಂಯೋಜನೆಗೆರಾಜ್ಯ ಸರ್ಕಾರದಿಂದಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದೊರೆತಿದೆ.೧೯೮೧-೮೨ರಲ್ಲಿ ಹೊಸಬೆಳಕು, ೧೯೮೪-೮೫ರಲ್ಲಿ ‘ಬಂಧನ‘ ಚಿತ್ರಗಳಿಗೆ ರಾಜ್ಯ ಸರ್ಕಾರದಿಂದಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡರು.ಕನ್ನಡ ಚಲನಚಿತ್ರ ಸಂಘ, ಮದರಾಸುಚಿತ್ರ ರಸಿಕರ ಸಂಘ, ನಟನಾ ಕಲಾ ಸಂಘ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.ರಂಗರಾವ್ ‘ಲಾವಣ್ಯ‘ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಬಹುಮುಖ ಪ್ರತಿಭೆಯ ಈ ಸಂಗೀತ ನಿರ್ದೇಶಕ ೧೯೯೧ರಲ್ಲಿ ನಿಧನರಾದರು.

Girl in a jacket
error: Content is protected !!