ಶಿವಾಜಿ ಆದರ್ಶಗಳನ್ನು ಮೂಗೂಡಿಸಿಕೊಳ್ಳಲು ಯುವಕರಿಗೆ ಕರೆ

Share

 

ಚೆಳ್ಳಕೆರೆ,ಫೆ,19:ಶಿವಾಜಿ ಮಹಾರಾಜರು ಹಿಂದೂ ರಾಷ್ಟ್ರದ ಅಸ್ಮಿತೆಯನ್ನು ಕಾಪಾಡಿ ದಂತ ದಿಟ್ಟ ಹಾಗೂ ದೇಶಪ್ರೇಮಿ ರಾಜ ಇವರಿಗೆ ಹಿಂದೂ ರಾಷ್ಟ್ರದ ಕನಸು ಸ್ವರಾಜ್ಯ ಮತ್ತು ಸ್ವಧರ್ಮದ ಭಾವನೆಯನ್ನು ಮೈಗೂಡಿಸಿಕೊಂಡಿದ್ದ ಧೀಮಂತ ನಾಯಕ ಎಂದು ತಹಸೀಲ್ದಾರ್ ರಘು ಮೂರ್ತಿ ಹೇಳಿದರು .

ತಾಲೂಕು ಕಚೇರಿಯಲ್ಲಿ ಛತ್ರಪತಿ ಶಿವಾಜಿಯವರ ಜಯಂತೋತ್ಸವ ವನ್ನು ಉದ್ಘಾಟಿಸಿ ಮಾತನಾಡಿ ಇವರು ಪರಕೀಯರ ವಿರುದ್ಧ ಹೋರಾಡುವ ಛ ಲವನ್ನು ಹೊಂದಿದ್ದರು ದೇಶದಲ್ಲಿನ ಭದ್ರತೆಗೆ ಕಂಟಕಪ್ರಾಯರಾಗಿ ದ್ದ ಔರಂಗಜೇಬ್ ಅಲ್ಲಾವುದ್ದೀನ್ ಖಿಲ್ಜಿ ಮಲ್ಲಿಕಾ ಕಾಫ್ ಮುಂತಾದವರನ್ನು ಹುಟ್ಟಡಗಿಸಿದ ಅಂತ ಧೈರ್ಯಶಾಲಿ ಯಾಗಿದ್ದರು ನಿರಂತರವಾಗಿ ಅರವತ್ತು ಕೋಟೆಗಳನ್ನು ಹಾಗೂ ಈ ಸಾಮ್ರಾಜ್ಯಗಳನ್ನು ಗೆದ್ದಂತಹ ಕೀರ್ತಿ ಶಿವಾಜಿ ಮಹಾರಾಜರ ಗಿದೆ ಈ ಶಿವಾಜಿ ಮಹಾರಾಜರ ಆದರ್ಶಗಳನ್ನು ಧೈರ್ಯವನ್ನು ಇಂದಿನ ಸಮಾಜದ ಯುವಕರು ಮೈಗೂಡಿಸಿಕೊಳ್ಳುವ ಅವಶ್ಯಕತೆಯಿದೆಯೆಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ ಕನ್ನಡದ ನೆಲವನ್ನು ಬಂಧನದಿಂದ ಉಳಿಸಬೇಕೆಂಬುದು ಶಿವಾಜಿ ಮಹಾರಾಜರ ಆಶಯವಾಗಿತ್ತು ದೇಶ ರಕ್ಷಣೆಗಿಂತ ಮಿಗಿಲಾಗಿದ್ದು ಬೇರೆ ಯಾವುದೂ ಇಲ್ಲವೆಂದು ಅವರು ಭಾವಿಸಿದ್ದರು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ನಾರಾಯಣ ಮಾಹಿತಿ ನಾಗರಾಜ್ ಆದ್ಯ ಭಾಸ್ಕರ್ ಗಾಯಕವಾಡ ಅಬ್ರೋ ಪವರ್ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು

Girl in a jacket
error: Content is protected !!