ಶೌಚಾಲಯ ಗೋಡೆ ಎತ್ತರಕ್ಕೆ ಕರವೇ ಮನವಿ

Share

ವರದಿಗಾರರು ಬೀರು ಬೆನ್ನೂರ ನಿಡಗುಂದಿ

ನಿಡಗುಂದಿ,ಫೆ02 : ಕರ್ನಾಟಕ ರಕ್ಷಣಾ ವೇದಿಕೆ ಅರಳದಿನ್ನಿ ಮತ್ತು ಆಲಮಟ್ಟಿ ಘಟಕದ ವತಿಯಿಂದ ಅರಳದಿನ್ನಿ ಗ್ರಾಮದಲ್ಲಿನ ಸಾರ್ವಜನಿಕ ಮಹಿಳಾ ಶೌಚಾಲಯದ ಗೋಡೆಯನ್ನು ಎತ್ತರ ಹೆಚ್ಚಿಸಲು ಆಲಮಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಂಜುನಾಥ್ ಹಿರೇಮಠ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಆಲಮಟ್ಟಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಅರಳದಿನ್ನಿ ಗ್ರಾಮದಲ್ಲಿ ಹೆಣ್ಣುಮಕ್ಕಳಿಗೋಸ್ಕರ ಒಂದು ಹೊಸ ಶೌಚಾಲಯ ನಿರ್ಮಾಣಕ್ಕಾಗಿ ನಮ್ಮ ಸಂಘಟನೆಯಿಂದ ಮತ್ತು ಊರಿನ ಗ್ರಾಮಸ್ಥರಿಂದ ಹಲವಾರು ಬಾರಿ ಮನವಿ ಸಲ್ಲಿಸಿದರು ಸ್ಥಳಾವಕಾಶ ಇಲ್ಲವೆಂದು ಕಾರಣ ಹೇಳಿ ವಿಷಯವನ್ನು ಮುಂದುಡುತ್ತ ಸಾಗುತ್ತಿರುವಿರಿ . ಗ್ರಾಮದಲ್ಲಿ ಈಗಾಗಲೇ ತಾವು ನಿರ್ಮಿಸಿದ ಹಳೆಯ ಸೌಚಾಲಯವು ರಸ್ತಗೆ ತುಂಬಾ ಹತ್ತಿರವಾಗಿದ್ದು ರಸ್ತೆಯ ನವೀಕರಣದಿಂದಾಗಿ ಶೌಚಾಲಯ ಮಟ್ಟಕ್ಕಿಂತ ರಸ್ತೆಯ ಎತ್ತರ ಹೆಚ್ಚಾಗಿದ್ದು ಶೌಚಾಲಯ ಬಳಸಲು ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಹೆಣ್ಣುಮಕ್ಕಳು ರಾತ್ರಿಯವರೆಗೆ ತಡೆದುಕೊಂಡು ಕತ್ತಲಲ್ಲಿ ಅಥವಾ ಬೆಳಕಾಗುವ ಮೊದಲೇ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಹೊಸ ಸೌಚಾಲಯ ನಿರ್ಮಿಸಲು ತಮ್ಮಿಂದ ಸಾಧ್ಯವಾಗುತ್ತಿಲ್ಲವಾದ್ದರಿಂದ ಇರುವ ಸೌಚಾಲಯದ ಗೋಡೆಯ ಎತ್ತರವನಾದರೂ ಎರಡರಿಂದ ಮೂರು ಅಡಿ ಹೆಚ್ಚಿಸಿದರೆ ಗ್ರಾಮದ ಒಂದಿಷ್ಟು ಹೆಣ್ಣುಮಕ್ಕಳಿಗೆ ಶೌಚಾಲಯ ಬಳಸಲು ಅನುಕೂಲ ಮಾಡಿದಂತಾಗುತ್ತದೆ ಅರಳದಿನ್ನಿಯ ಹೆಣ್ಣುಮಕ್ಕಳ ಮಾನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅರಳದಿನ್ನಿ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸಲು ಮನವಿ ಪತ್ರವನ್ನು ಸಲ್ಲಿಸಿದರು .

ಈ ಸಂದರ್ಭದಲ್ಲಿ. ಪತ್ತೆ ಸಾಬ್.ಬಿ. ಚಾಂದ್. ಅಧ್ಯಕ್ಷರು. ಚಂದ್ರಶೇಖರ್ ಯ ಹೆರಕಲ್ ಉಪಾಧ್ಯಕ್ಷರು. ಯಲ್ಗುರೇಶ್ ಮೇಟಿ ಯುವಘಟಕ ಅಧ್ಯಕ್ಷರು. ಮಹದ್ ಬಸಿರ ಪೀ ಮುಲ್ಲಾ ನಗರ ಘಟಕ ಅಧ್ಯಕ್ಷರು. ಶಿವಾನಂದ ಕೊಳ್ಳಾರ . ರಸೂಲ್ ಸಾಬ್ ಹುಸೇನ್ ಸಾಬ್ ಸಿಂದೆ. ಮೈಬೂಬ್ ಡೋಣುರ . ರಫೀಕ್ ಅಥಣಿ ಉಪಸ್ಥಿತರಿದ್ದರು

Girl in a jacket
error: Content is protected !!