ಗಡಿಭಾಗಗಳಲ್ಲಿ ಡ್ರಗ್ಸ್ ಮಾಫಿಯಾ ಟೆರರಿಸಂ!!?

Share

 

 

 

ಗಡಿಭಾಗಗಳಲ್ಲಿ ಡ್ರಗ್ಸ್ ಮಾಫಿಯಾ ಟೆರರಿಸಂ!!?

Writing; ಪರಶಿವ ಧನಗೂರು

ಹೌದು ಭಾರತದ ಮೇಲೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಭಯೋತ್ಪಾದಕರು ಸೇರಿಕೊಂಡು ಡ್ರಗ್ಸ್ ಮಾಫಿಯಾ ಜಾಲ ವಿಸ್ತರಿಸುವ ಮೂಲಕ ‘ಡ್ರಗ್ಸ್ ಟೆರರಿಸಂ!’ ನಡೆಸುತ್ತಿರುವ ಅನುಮಾನ ಮೂಡುತ್ತಿದೆ. ಏಕೆಂದರೆ ಈಗ ಮತ್ತೆ ಗುಜರಾತಿನ ಕರಾವಳಿ ಸಮುದ್ರದ ಗಡಿಯಲ್ಲಿ ಪಾಕಿಸ್ತಾನದ ಕರಾಚಿಯಿಂದ ಬಂದಿಳಿಯಲಿದ್ದ 400ಕೋಟಿ ಮೌಲ್ಯದ ಡ್ರಗ್ಸ್ ಮೂಟೆಗಳನ್ನು ನಮ್ಮ ಕರಾವಳಿ ಕಾವಲು ಪಡೆ ಮತ್ತು ಭಯೋತ್ಪಾದನೆ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸಿ ದಾಳಿಮಾಡಿ ವಶಪಡಿಸಿಕೊಂಡು ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನೂ ಬಂಧಿಸಿದ್ದಾರೆ! ಗುಜರಾತಿನ ಕರಾವಳಿ ಪ್ರದೇಶಕ್ಕೆ ಪಾಕಿಸ್ತಾನದಿಂದ, ಆಫ್ಘಾನಿಸ್ತಾನದಿಂದ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಮಾದಕವಸ್ತು ಕಳ್ಳಸಾಗಾಣಿಕೆ ಮೂಲಕ ಬಂದು ಇಳಿಯುವುದು, ನಾಪತ್ತೆಯಾಗುವುದು! ನಂತರ ನಮ್ಮ ಕರಾವಳಿ ರಕ್ಷಣಾ ದಳ, ಭಯೋತ್ಪಾದಕ ನಿಗ್ರಹ ದಳಗಳು ಕೆಲವು ಬಾರಿ ಮಾದಕವಸ್ತು ದಂಧೆಯ ಕಳ್ಳರನ್ನು ಹೆಡೆಮುರಿ ಕಟ್ಟಿ ಬಂಧಿಸಿ ಜೈಲಿಗಟ್ಟುವುದು ನಿರಂತರವಾಗಿ ನಡೆಯುತ್ತಲೇಯಿದೆ. ಇದೇನೂ ಹೊಸದಲ್ಲ! ಆದರೆ ಇದು ನಿರ್ಲಕ್ಷಿಸಬಹುದಾದ ವಿಚಾರವಂತೂ ಅಲ್ಲವೇ ಅಲ್ಲ. ಏಕೆಂದರೆ ಹೊಸ ವರ್ಷಕ್ಕೆ ಕ್ಷಣ ಗಣನೆ ಆರಂಭವಾಗಿರುವ ಬೆನ್ನಲ್ಲೇ ದೇಶಾದ್ಯಂತ ಇತ್ತೀಚಿಗೆ ಡ್ರಗ್ಸ್ ದಂಧೆ ಚುರುಕು ಗೊಂಡಿದೆ! ಪೊಲೀಸರು ದಿನನಿತ್ಯ ಹಲವಾರು ಪೆಡ್ಲರ್ ಗಳನ್ನು, ವಿದೇಶಿ ಡ್ರಗ್ಸ್ ದಂಧೆ ಕೋರರನ್ನು ಹಿಡಿದು ಜೈಲಿಗಟ್ಟುತ್ತಿದ್ದರೂ ಕೂಡ ಮಾದಕ ವಸ್ತುಗಳ ಮಾರಾಟ ಜಾಲ ತನ್ನ ಬಾಲ ಮತ್ತಷ್ಟು ಬಿಚ್ಚುತ್ತಿದೆ!

ಕಾಲೇಜು ಕ್ಯಾಂಪಸ್ಸು, ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಹೈಡ್ರೋ ಗಾಂಜಾ, ಎಂಡಿಎಂಎ ಮಾತ್ರೆ, ಹಸಿಸ್ಸು,ಚರಸ್ಸು, ಹೆರಾಯಿನ್ ಸಪ್ಲೈ ಮಾಡುತ್ತಿದ್ದಾರೆ! ಭಾರತಕ್ಕಂತೂ ತಾಲಿಬಾನ್ ಆಡಳಿತದ ಆಫ್ಘಾನ್ ನೆಲದಿಂದ, ಪಾಕಿಸ್ತಾನದ ಕರಾಚಿಯಿಂದ ನಿರಂತರವಾಗಿ ಡ್ರಗ್ಸ್ ಸರಬರಾಜು ನಡೆಯುತ್ತಲೇ ಇದೆ! ಒಟ್ಟಾರೆಯಾಗಿ ಆ ಭಯೋತ್ಪಾದಕ ರಾಷ್ಟ್ರಗಳಿಗೆ ಭಾರತದ ಯುವಕರ ಬದುಕು-ಭವಿಷ್ಯ ಹಾಳಾಗಬೇಕು. ಇಂಡಿಯಾದ ಇಡೀ ಆರ್ಥಿಕತೆ ಕುಸಿದುಬಿದ್ದು ದೇಶ ದಿವಾಳಿಯಂಚಿಗೆ ತಲುಪಬೇಕೆಂಬ ದುರಾಲೋಚನೆ-ದುರಾಸೆ. ಅದಕ್ಕಾಗಿಯೇ ಗಡಿಯಲ್ಲಿ ನಾನಾ ಕ್ಯಾತೆ-ಜಗಳ-ಕಧನ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಭಯೋತ್ಪಾದಕ ಶಿಬಿರಗಳನ್ನಿಟ್ಟು, ಬಾಂಬ್ ಬ್ಲಾಸ್ಟ್ ದಾಳಿ ನಡೆಸಿ ನಮ್ಮ ಭಾರತೀಯ ಸೈನಿಕರಿಗೆ ಕಿರುಕುಳ ನೀಡುತ್ತಾ, ಡ್ರೋನ್ ದಾಳಿ ನಡೆಸಿ, ತೊಂದರೆ ಕೊಡುತ್ತಾ ಭಯೋತ್ಪಾದಕ ಚಟುವಟಿಕೆ ನಡೆಸುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಈಗ ತನ್ನ ತಂತ್ರದಲ್ಲಿ ಮತ್ತೊಂದು ಕುತಂತ್ರ ರೂಪಿಸುತ್ತಿದೆ ಎಂಬುದು ಈಗ ಅದು ನಮ್ಮ ದೇಶದಲ್ಲಿ ನಡೆಸುತ್ತಿರುವ ಡ್ರಗ್ಸ್ ಟೆರರಿಸಂ ನಿಂದ ಸಾಬೀತಾಗುತ್ತಿದೆ. ಭಾರತದೊಳಕ್ಕೆ ನುಸುಳಲು ಸಾವಿರಾರು ಕೋಟಿಗಳ ಮೌಲ್ಯದ ಡ್ರಗ್ಸ್ ಗಳು ಸಜ್ಜಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ದೇಶದ ನಾನಾ ಗಡಿಗಳಲ್ಲಿ ಭಾರತದ ಮಿಲಿಟರಿ ಇಂಟಿಲಿಜನ್ಸ್ ಪಡೆಗಳು, ಮತ್ತು ಸ್ಥಳೀಯ ಪೊಲೀಸರು ಕಟ್ಟೆಚ್ಚರ ವಹಿಸಿ, ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರೂ, ಕೆಲವು ಕಡೆ ರಾತ್ರೋರಾತ್ರಿ ಡ್ರೋನ್ ಗಳ ಮೂಲಕ ಭಯೋತ್ಪಾದಕರು ಡ್ರಗ್ಸ್ ಇಳಿಸುತ್ತಿದ್ದಾರೆ.

ಮತ್ತೊಂದೆಡೆ ಸಮುದ್ರ ಮಾರ್ಗವಾಗಿ ಪಾಕಿಸ್ತಾನದ ಡ್ರಗ್ಸ್ ಮಾಫಿಯಾ ಕಳ್ಳರು ಗುಜರಾತು, ಮುಂಬೈ, ಮಂಗಳೂರು, ಕೇರಳ, ಪೋರಬಂದರಿನ ಕರಾವಳಿ ಕಡಲ ತೀರಗಳಿಗೆ ಮೂಟೆಗಟ್ಟಲೇ ಮಾದಕವಸ್ತು ಗಳನ್ನು ಅಕ್ರಮವಾಗಿ ತಂದಿಳಿಸಿ ಲಕ್ಷಾಂತರ ಕೋಟಿ ರೂಪಾಯಿಗಳ ಭರ್ಜರಿ ವ್ಯಾಪಾರ ಮಾಡಿಕೊಳ್ಳಲು ಹವಣಿಸಿ ಕಾದುಕುಳಿತಿದ್ದಾರೆ! ಈಗ ಭಾರತದಲ್ಲಿ ಕೊರೋನಾ ಮೂರನೆ ಅಲೆಯು ಕೊಂಚ ಇಳಿಕೆ ಕಂಡರೇ, ಈ ವರ್ಷದ ಹೊಸ ವರ್ಷದ ಸಂಭ್ರಮಾಚರಣೆಯನ್ನು ಸಡಗರ ಸಂತೋಷದಿಂದ ಆಚರಿಸಲು ಸಿದ್ಧತೆ ನಡೆಸುತ್ತಿರುವವರಿಗೆ ಡ್ರಗ್ಸ್ ಸಪ್ಲೈ ಮಾಡುವ ಉದ್ದೇಶದಿಂದ ವ್ಯಾಪಾರ ವಹಿವಾಟು ಸುರು ಮಾಡಿದ್ದಾರೆ. ಈ ವರ್ಷದ ಹೊಸ ವರ್ಷದ ಸಂಭ್ರಮದ ಪಾರ್ಟಿಗಳು ರಂಗೇರುವ ಸಾಧ್ಯತೆಗಳು ದಟ್ಟವಾಗಿವೆ. ಸಮುದ್ರ ತೀರದ ಬೀಚ್ ಗಳಲ್ಲಿ, ಮಾದಕನಶೆಯ ಮತ್ತಲ್ಲಿ ತೇಲಾಡಲು ಈಗಾಗಲೇ ಕೆಲವರು

ತಯಾರಾಗುತ್ತಿರುವಾಗಲೇ, ದೇಶದ ಕೆಲವು ರಾಜ್ಯ ಸರ್ಕಾರಗಳು ಒಮಿಕ್ರೋನ್ ರೂಪಾಂತರಿ ಕೊರೋನಾ ವೈರಸ್ ಹಾವಳಿ ತಡೆಯಲು ಹೊಸ ವರ್ಷಾಚರಣೆ ದಿನವೇ ಲಾಕ್ ಡೌನ್ ಮಾಡುವ ಆಲೋಚನೆಯಲ್ಲೂ ಇವೆ. ಹೊಸವರ್ಷದ ಮಜಾ ಪಾರ್ಟಿ ಗಳಲ್ಲಿ ಮಾದಕವಸ್ತು ಮಾರಾಟ ತಡೆಯಲು ಪೊಲೀಸರು ವಿಶೇಷ ತಿಂಡಿಗಳನ್ನೂ ರಚಿಸಿ ನಿಗಾವಹಿಸಲು ಸಜ್ಜಾಗಿದ್ದಾರೆ. ಆದರೆ ಇದೆಲ್ಲಾ ಲೆಕ್ಕಾಚಾರ ಗಳನ್ನೂ ಮೀರಿ ಅರಬ್ಬಿ ಸಮುದ್ರದಲ್ಲಿ ಡ್ರಗ್ಸ್ ಮಾಫಿಯಾ ಜಾಲ ತನ್ನ ಕೈಚಳಕ ತೋರಿ ಭಾರತದೊಳಗೆ ತನ್ನ ಮಾದಕವಸ್ತುಗಳನ್ನು ನುಗ್ಗಿಸಿ ಕೈತುಂಬಾ ಕಾಸು ಮಾಡಿಕೊಳ್ಳಲು ಸಂಚು ರೂಪಿಸುತ್ತಲೇ ಇದೆ. ಭಯೋತ್ಪಾದಕರ ಬೇಕು ಬೇಡಗಳಿಗೆ ಇದೇ ಡ್ರಗ್ಸ್ ದಂಧೆಯ ದುಡ್ಡು ಬಳಕೆಯಾಗುತ್ತದೆ. ಅದಕ್ಕಾಗಿಯೇ ಪದೇ ಪದೇ ಭಾರತದ ಕಡಲಸೀಮೆಯ ಗಡಿ ಗುಜರಾತಿನ ಅಂಗಳಕ್ಕೆ ನೂರಾರು ಕೋಟಿ ರೂಪಾಯಿಗಳ ಡ್ರಗ್ಸ್ ಬಂದು ಬೀಳುತ್ತಲೇ ಇರುತ್ತದೆ. ಈಗ 77ಕೆ.ಜಿ ತೂಕದ 400ಕೋಟಿ ಬೆಲೆಬಾಳುವ ಹೆರಾಯಿನ್ ಎಂಬ ಕಾಸ್ಟ್ಲೀ ಡ್ರಗ್ಸ್ ಅನ್ನು ಪಾಕಿಸ್ತಾನದ ಹಾಜಿ ಹಸನ್ ಮತ್ತು ಹಾಜಿ ಹಸಮ್ ಎಂಬುವರು ಮೀನುಗಾರಿಕೆ ಬೋಟ್ ನಿಂದ ಜಪ್ತಿ ಮಾಡಲಾಗಿದೆ. ಈ ಹಿಂದೆ ಇದೇ ಜಾಗದಲ್ಲಿ ಸುವರ್ಣ ಹೆಸರಿನ ನಮ್ಮ ನೌಕಾ ಸೈನಿಕರ ಕಾವಲು ಹಡಗು ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕಳೆದ 2021ರ ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದಿಂದ ತರಲಾಗುತಿದ್ದ ಸುಮಾರು 300ಕೋಟಿ ಮೌಲ್ಯದ ಹೆರಾಯಿನ್ ಅನ್ನು ಕರಾವಳಿ ರಕ್ಷಣಾ ಪಡೆ ವಶಪಡಿಸಿಕೊಂಡಿತ್ತು. ಮತ್ತೊಂದು ಬಾರಿ ಕಛ್ ಜಿಲ್ಲೆಯ ಜಖ್ ಸಾಗರ ಪ್ರದೇಶದಲ್ಲಿ ಮಧ್ಯರಾತ್ರಿ ದೇಶದ ಜಲಗಡಿ ದಾಟಿ ಒಳನುಗ್ಗುತ್ತಿದ್ದ ‘ಅಲ್ ಹುಸೈನಿ’ ಎಂಬ ಹೆಸರಿನ ಬೋಟ್ ನಲ್ಲಿ ಕಂಡುಬಂದ 400ಕೋಟಿಯ ಹೆರಾಯಿನ್ ಅನ್ನು ನಮ್ಮ ಕರಾವಳಿ ರಕ್ಷಣಾ ದಳ ಹಿಡಿದಿತ್ತು. ಗುಜರಾತಿನ ಕರಾವಳಿಯಾಚೆ ಕರಾವಳಿ ಭದ್ರತಾ ಪಡೆ ಮತ್ತು ಉಗ್ರ ನಿಗ್ರಹ ದಳಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ 30ಕೆ.ಜಿ.

ಹೆರಾಯಿನ್ ಕಳ್ಳಸಾಗಾಣಿಕೆ ಮಾಡುತ್ತಿದ್ದ ಮೀನುಗಾರಿಕೆ ದೋಣಿ ವಶಪಡಿಸಿಕೊಂಡು ಪಾಕಿಸ್ತಾನದ 8ಜನ ಪ್ರಜೆಗಳನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ನವೆಂಬರ್ ತಿಂಗಳಲ್ಲಿ ಪಾಕಿಸ್ತಾನದಿಂದ ತಂದಿದ್ದ 120ಕೆ.ಜಿ.ಯ 600ಕೋಟಿ ಹೆರಾಯಿನ್ ಅನ್ನು ಗುಜರಾತಿನ ಮೋಬಿಜಿಲ್ಲೆಯಲ್ಲಿ ಹಳ್ಳಿಯೊಂದರ ಮನೆಯೊಳಗಿಂದ ಜಪ್ತಿ ಮಾಡಲಾಗಿತ್ತು! ಹಾಗೆಯೇ ಗುಜರಾತಿನ ದೇವಭೂಮಿ ದ್ವಾರಕಾ ಖಂಬಾಲಿಯಾ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಾರಿನಿಂದ 350ಕೋಟಿ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಅರಬ್ಬೀ ಸಮುದ್ರ ಈಗ ಮಾದಕವಸ್ತುಗಳಿಗೆ ‘ಮಾರ್ಜಾಲ ಮಾರ್ಗ’ ವಾಗಿ ಪರಿಣಮಿಸಿದೆ! ಪ್ರತಿ ದಿನ ಪ್ರತಿ ಕ್ಷಣ ಕೂಡ ನಮ್ಮ ಕರಾವಳಿ ರಕ್ಷಣಾ ದಳ ಕಾವಲು ಕಾಯುತ್ತಿದ್ದರೂ ಅಲ್ಲಿ ಈ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೀತಿದೆ. ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಬೋಟುಗಳ ಅಡಿಯಲ್ಲಿ ತೇಲುತ್ತಾ ಮಾದಕವಸ್ತುಗಳು ಕಳ್ಳಸಾಗಣೆ ಮೂಲಕ ಗುಜರಾತ್ ಮುಂತಾದ ಅನೇಕ ಭಾರತದ ಕರಾವಳಿ ಭಾಗಗಳಲ್ಲಿ ಲ್ಯಾಂಡ್ ಆಗುತ್ತಿವೆ! 2.1ಮಿಲಿಯನ್ ಚದರ ಕಿಲೋಮೀಟರ್ ಗಿಂತ ಹೆಚ್ಚಿನ ಕರಾವಳಿ ಪ್ರದೇಶದಲ್ಲಿ ಕಣ್ಗಾವಲು ಇಡಲು 40ರಿಂದ 44 ಹಡಗುಗಳು, 10ರಿಂದ 12ವಿಮಾನಗಳನ್ನು ಈಗ ಬಳಸಿಕೊಳ್ಳಲಾಗುತ್ತಿದೆ. ಪಾಕಿಸ್ತಾನದ ಮಕ್ರಾನ್ ಕರಾವಳಿಯಿಂದ ಭಾರತದ ಗುಜರಾತ್, ಪೋರ್ ಬಂದರ್ , ಮಂಗಳೂರು, ಮುಂಬೈ, ಲಕ್ಷದ್ವೀಪದ ಕರಾವಳಿಗೆ ತಲುಪಲು ಹವಣಿಸುತ್ತಿರುವ ಡ್ರಗ್ಸ್ ಕಳ್ಳಸಾಗಾಣಿಕೆ ಬೋಟ್ ಗಳನ್ನು ಹಿಡಿದು ಇದುವರೆಗೂ ಸಾವಿರಾರು ಕೋಟಿ ಮೌಲ್ಯದ ನೂರಾರು ಕೆ.ಜಿ. ಡ್ರಗ್ಸ್ ವಶಪಡಿಸಿಕೊಂಡು, ನೂರಾರು ಕಳ್ಳರನ್ನು ಬಂಧಿಸಿ ಜೈಲಿಗಟ್ಟಲಾಗಿದ್ದರೂ ಕೂಡ ಈ ಡ್ರಗ್ಸ್ ದಂಧೆ ನಿಲ್ಲುತ್ತೇನೆ ಇಲ್ಲ! ನಮ್ಮ ಕರಾವಳಿ ರಕ್ಷಣಾ ದಳ ಮತ್ತು ಭಯೋತ್ಪಾದನೆ ನಿಗ್ರಹ ದಳಗಳು, ಎಷ್ಟೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲು ರಾತ್ರಿಯೆನ್ನದೇ, ಅರಬ್ಬಿ ಸಮುದ್ರದಲ್ಲಿ ಕಾವಲು ಕಾಯುತ್ತಿದ್ದರೂ, ಸಾವಿರಾರು ಕಿಲೋಮೀಟರ್ ವ್ಯಾಪ್ತಿಯ ಕರಾವಳಿ ತೀರದಲ್ಲಿ ಎಲ್ಲೋ ಒಂದು ಕಡೆ ನಮ್ಮ ಪೊಲೀಸರ ಕಣ್ ತಪ್ಪಿಸಿ ಭಾರತದ ನೆಲಕ್ಕೆ ಡ್ರಗ್ಸ್ ಬಂದಿಳಿಯುತ್ತದೆ! ಅದರರ್ಥ ಈ ಡ್ರಗ್ಸ್ ದಂಧೆಯ ಹಿಂದೆ ಸ್ಥಳೀಯರ ಸಹಕಾರವೂ ಇದ್ದೇ ಇದೆ! ಭಾರತ-ಪಾಕ್ ಸಮುದ್ರ ಗಡಿಯ ಕಛ್ ಕರಾವಳಿಯಲ್ಲೇ ಹಲವಾರು ಬಾರಿ ಈ ಡ್ರಗ್ಸ್ ದಂಧೆ ಕೋರರು ಸೆರೆಸಿಕ್ಕಿದ್ದಾರೆ. ಈ ಜಲಸೀಮೆಯು ಭಯೋತ್ಪಾದಕರಿಗೂ ಕಳ್ಳ ದಾರಿಯಾಗಿದ್ದೂ, ಇಲ್ಲಿಂದಲೇ ಮದ್ದುಗುಂಡು, ಮಾನವ ಕಳ್ಳಸಾಗಾಣಿಕೆಯನ್ನೂ ಪಾಕಿಸ್ತಾನ ನಡೆಸುತ್ತಿರಬಹುದೆಂಬ ಗುಮಾನಿ ಇದೆ.

ಡ್ರಗ್ಸ್ ಮಾಫಿಯಾ ಹಿಂದೆ ದಾವೂದ್ ಇಬ್ರಾಹಿಂ ನೆರಳು!

ಭಾರತಕ್ಕೆ ಹೀಗೆ ಅರಬ್ಬಿ ಸಮುದ್ರದಿಂದ ರಾತ್ರೋರಾತ್ರಿ ಕಳ್ಳದಾರಿಯಲ್ಲಿ ಸಾಗಿಸಲಾಗುತ್ತಿರುವ ಅಕ್ರಮ ಡ್ರಗ್ಸ್ ದಂಧೆ ಯಲ್ಲಿ ದೇಶದ್ರೋಹಿ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ನೆರಳಿರುವ ಬಗ್ಗೆ ಚರ್ಚೆಗಳಾಗುತ್ತಿವೆ! ಭಾರತದಲ್ಲಿ 1993ರಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ನಡೆಸಿ ಶತ್ರುದೇಶ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂ ಡ್ರಗ್ಸ್ ಮಾಫಿಯಾ ಜಗತ್ತಿನಲ್ಲಿ ಕೇವಲ ಭಾರತವನ್ನಷ್ಟೆ ಟಾರ್ಗೆಟ್ ಮಾಡಿಕೊಂಡಿಲ್ಲ. ಅಮೆರಿಕಾ, ಆಫ್ರಿಕಾ, ಬ್ರಿಟನ್ ಮುಂತಾದ ಯುರೋಪ್ ಖಂಡದ ಹಲವು ಬಡ ದೇಶಗಳಲ್ಲಿಯೂ ತನ್ನ ಕರಾಳ ಡ್ರಗ್ಸ್ ದಂಧೆಯ ಜಾಲವನ್ನು ವಿಸ್ತರಣೆ ಮಾಡಿಕೊಂಡು ಬರುತ್ತಿದ್ದಾನೆ. ತನ್ನ ಭಂಟ ಪ್ರಮುಖ ಹಣಕಾಸು ವ್ಯವಸ್ಥಾಪಕ ಜಬೀರ್ ಮೋತಿವಾಲಾ ನನ್ನಿಟ್ಟುಕೊಂಡು ಹಲವಾರು ದೇಶಗಳಲ್ಲಿ ಡ್ರಗ್ಸ್ ಪೆಡ್ಲಿಂಗ್ ದಂಧೆ ಮಾಡಿಸುತ್ತಾನೆ. ಹೀಗೆ ಡ್ರಗ್ಸ್ ಕಳ್ಳಸಾಗಾಣಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದಾಗ ಬ್ರಿಟನ್ ನಲ್ಲಿ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದು ಕಳೆದ ವರ್ಷ ಜೈಲು ಸೇರಿದ್ದ ದಾವೂದ್ ಇಬ್ರಾಹಿಂ ಭಂಟ ಜಬೀರ್ ಮೋತಿವಾಲಾನನ್ನು ಆ ದೇಶದಿಂದ ಅಮೆರಿಕಾಕ್ಕೆ ಗಡಿಪಾರು ಮಾಡಲು ಅಲ್ಲಿನ ಕೋರ್ಟ್ ಆದೇಶಮಾಡಿತ್ತು!

ಏಕೆಂದರೆ ಡ್ರಗ್ಸ್ ಕಳ್ಳ ಸಾಗಾಣಿಕೆ ಕೇಸಿನಲ್ಲಿ ಅಮೆರಿಕದ ಯುವಜನತೆ ಮತ್ತು ಆರ್ಥಿಕತೆಯನ್ನು ಹಾಳುಮಾಡಿದ್ದಕ್ಕೆ ದಾವೂದ್ ಇಬ್ರಾಹಿಂ ಭಂಟನನ್ನು ವಶಕ್ಕೆ ಪಡೆಯಲು ಅಮೆರಿಕಾ ಬ್ರಿಟನ್ ಸಹಕಾರ ಕೋರಿತ್ತು! ಇದನ್ನರಿತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಭಂಟ ಜಬೀರ್ ಮೋತೀವಾಲಾ ಅಮೆರಿಕದ ಪೊಲೀಸರ ಕೈವಶವಾದರೇ ಎಲ್ಲಿ ತನ್ನ ಬುಡಕ್ಕೆ ಸುತ್ತಿಕೊಳ್ಳತ್ತದೆಂದು, ಹೆದರಿ ಕಂಗಾಲಾಗಿ ಪಾಕಿಸ್ತಾನದ ಸರ್ಕಾರದ ಮೂಲಕ ಬ್ರಿಟನ್ ಗೌವರ್ನಮೆಂಟ್, ಕೋರ್ಟಿಗೆ ಹೇಳಿಸಿ, ಭಂಟ ಜಬೀರ್ ನನ್ನು ಅಮೆರಿಕಾದ ವಶಕ್ಕೆ ಕೊಡದಂತೆ ದಾವೂದ್ ಒತ್ತಡ ಹಾಕಿಸಿದ್ದ! ಹೇಗಿದೆ ನೋಡಿ ದೇಶದ್ರೋಹಿ ದಾವೂದ್ ಮತ್ತು ಪಾಕಿಸ್ತಾನದ ಪವಿತ್ರ ಸಂಬಂಧ! ಸ್ನೇಹ! ಭಾರತದ ಆರ್ಥಿಕತೆಯನ್ನು ಹಾಳುಮಾಡಲು, ಭಾರತದ ವಿದ್ಯಾರ್ಥಿ ಯುವಜನತೆಯನ್ನು ಮಾದಕವಸ್ತುಗಳ ದಾಸರನ್ನಾಗಿಸಲು, ಅಪಾರ ಹಣ ಮಾಡಲು, ಇದೇ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಕುಳಿತು, ಅರಬ್ಬಿ ಸಮುದ್ರದ ಮೂಲಕ ಭಾರತದೊಳಕ್ಕೆ ನಿತ್ಯ ಹಗಲು ರಾತ್ರಿ ಎನ್ನದೆ ನಮ್ಮ ಸೈನಿಕರ ಕಣ್ ತಪ್ಪಿಸಿ, ಕಳ್ಳ ಬೋಟ್ ಗಳ ಮೂಲಕ ಮದ್ದುಗುಂಡು, ಬಾಂಬು ಮಾದಕವಸ್ತು ಗಳನ್ನು ಸಾಗಿಸುತ್ತಿರುವ ಮಾಹಿತಿಗಳಿವೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಬೇರು ಬಿಟ್ಟಿರುವ ಭಯೋತ್ಪಾದಕರಿಗೆ, ಹಣಕಾಸಿನ ಸಹಾಯಮಾಡಲು , ಶಸ್ತ್ರಾಸ್ತ್ರಗಳನ್ನು ಒದಗಿಸಲು ಇದೇ ಡ್ರಗ್ಸ್ ದಂಧೆಯ ಮಾರಾಟದ ಹಣವನ್ನು ನೀಡುತ್ತಿರುವ ಪಾಕಿಸ್ತಾನ ಮತ್ತು ದಾವೂದ್ ಇಬ್ರಾಹಿಂ ಬಳಗ ಭಾರತವನ್ನು ಆಂತರಿಕವಾಗಿ ಕುಗ್ಗಿಸಲು ನಾನಾರೀತಿಯ ತಂತ್ರ- ಕುತಂತ್ರಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ ಬೀಡುಬಿಟ್ಟಿರುವ, ಜೆಹಾದಿ ಇಸ್ಲಾಂ ಮೂಲಭೂತವಾದಿ ಭಯೋತ್ಪಾದಕರ ಸ್ಲೀಪರ್ ಶೆಲ್ ಗಳಿಗೇ, ಹಣಕಾಸಿನ ನೆರವನ್ನು ಹವಾಲಾ ಮೂಲಕ, ಡ್ರಗ್ಸ್ ದಂಧೆ ಮೂಲಕ ಭಾರತಕ್ಕೆ ಕಳುಹಿಸುತ್ತಿರುವ ಪಾಕಿಸ್ತಾನಿ ಏಜೆಂಟ್ ದಾವೂದ್ ಇಬ್ರಾಹಿಂನ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಇದ್ದೇ ಇರುತ್ತದೆ. ದಕ್ಷಿಣ ಏಷ್ಯಾದ ಕ್ರೈಂ ಸಿಂಡಿಕೇಟಿನ ದೈತ್ಯ ದಾವೂದ್ ಪಾಕ್ ಸರ್ಕಾರದ ಆಯ್ಕೆಯಲ್ಲಿ ಎರಡುವರೆ ದಶಕದಿಂದಲೂ ತನ್ನದೇ ಆಟ ಆಡಿಕೊಂಡು ಬರುತ್ತಿದ್ದಾನೆ. ದಾವುದ್ ಇಬ್ರಾಹಿಂ ಭಾರತದ ಆರ್ಥಿಕತೆಯನ್ನು ಹಾಳುಮಾಡಲು, ಪಾಕಿಸ್ತಾನದ ಕರಾಚಿಯಿಂದ 154 ಕಿಲೋ ಮೀಟರ್ ದೂರದಲ್ಲಿರುವ ಸಿಂದ್ ಪ್ರಾಂತ್ಯದ ಕೋಟ್ಲೀ ಇಂಡಸ್ಟ್ರಿ ಸ್ ಏರಿಯಾದಲ್ಲಿ, ಮೆಹ್ರಾನ್ ಪೇಪರ್ ಮಿಲ್
ಹೆಸರಿನ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದನಂತೆ. ಅಲ್ಲಿ ಭಾರತದ ಕರೆನ್ಸಿಯ ನಕಲಿ ನೋಟುಗಳನ್ನು ಮುದ್ರಿಸಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮೂಲಕ ಭಾರತಕ್ಕೆ ಖೋಟಾನೋಟು ರವಾನಿಸುತಿದ್ದನಂತೆ! ಇತ್ತೀಚೆಗೆ ಈ ಪ್ರೆಸ್ ಮುಚ್ಚುವಂತೆ ದೊಡ್ಡಣ್ಣ ಅಮೆರಿಕಾ ಪಾಕಿಸ್ತಾನದ ಮೇಲೆ ಒತ್ತಡ ಹೇರಿ ಎಚ್ಚರಿಸಿತ್ತಂತೇ! ವಿಶ್ವದ ಹಲವಾರು ದೇಶಗಳಿಗೆ ಡ್ರಗ್ಸ್ ದಂಧೆಯಿಂದ ಕಂಟಕಪ್ರಾಯವಾಗಿರುವ ದಾವುದ್ ಇಬ್ರಾಹಿಂ ಮೇಲೆ ಅಂತಾರಾಷ್ಟ್ರೀಯ ಸಮುದಾಯದ ಎಷ್ಟೇ ಒತ್ತಡ ವಿದ್ದರೂ ತನ್ನ ‘ಡಿ-ಕಂಪನಿ’ ಯನ್ನು ಕತಾರ್ ನಲ್ಲಿ ಪ್ರತಿಷ್ಠಾಪಿಸಿ, ಕಾನೂನು ಬದ್ದಗೊಳಿಸಿ ತನ್ನ ತಮ್ಮಂದಿರಾದ ಮುಸ್ತಾಕೇಮ್ ಆಲೀ ಕಸ್ಕರ್, ಅನೀಸ್ ಇಬ್ರಾಹಿಂ, ಚೋಟಾ ಶಕೀಲ್ ಮೂಲಕ ಇಲ್ಲೀಗಲ್ ನೆಟ್ವರ್ಕ್ ನಿರ್ಮಿಸಿಕೊಂಡು ‘ದೋ-ನಂಬರ್ ದಂಧೆ’ ಹವಾಲಾ-ಡ್ರಗ್ಸ್ ಜಾಲಾ, ನಡೆಸಿ ಸಾವಿರಾರು ಕೋಟಿಯ ಒಡೆಯನಾಗಿದ್ದಾನೆ!


ಡ್ರಗ್ಸ್ ಹಬ್ ಆಗುತ್ತಿದೆಯೇ ಗುಜರಾತ್ ?

ಹೌದು ಪ್ರತಿ ಬಾರಿಯೂ ಪಾಕಿಸ್ತಾನದಿಂದ 400ಕೋಟಿಗಳ 300ಕೋಟಿಗಳ, ಸಾವಿರಾರು ಕೋಟಿ ರೂಪಾಯಿಗಳ ಮಾದಕವಸ್ತುಗಳ ಮೂಟೆಗಳು ಗುಜರಾತಿಗೇ ಬಂದಿಳಿಯಲು ತವಕಿಸುತ್ತಿರುವುದೇಕೇ? ಇದೇ ವರ್ಷದಲ್ಲಿ 20ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ಮಾದಕವಸ್ತುಗಳನ್ನು ತುಂಬಿದ್ದ ಹಡಗೊಂದು ದೇಶದ ಪ್ರಮುಖ ಉದ್ಯಮಿಯೊಬ್ಬರ ಗುಜರಾತಿನ ಬಂದರಿಗೆ ಬಂದಿಳಿದು ಸಂಚಲನ-ಆತಂಕ ಸ್ರಷ್ಠಿಯಾಗಿತ್ತು. ದೇಶದಲ್ಲಿ ಮಾದಕವಸ್ತು ಕಳ್ಳಸಾಗಾಣಿಕೆ, ಮಾರಾಟದ ವಿರುದ್ಧ ಅಷ್ಟು ದೊಡ್ಡ ಕಾನೂನುಗಳಿದ್ದರೂ, ಯಾವ ಶಿಕ್ಷೆಯ ಭಯವಿಲ್ಲದೇ, ಅಪರಾಧಿ ಪ್ರಜ್ಞೆ ಇಲ್ಲದೇ, ಯಾರ ಒಪ್ಪಿಗೆಯ-ಅಪ್ಪಣೆಯ ಮೇರೆಗೆ 20.000 ಕೋಟಿಯ ಮಾದಕವಸ್ತು ಗುಜರಾತಿನ ಬಂದರಿಗೆ ಬಂದಿಳಿಯುತ್ತದೇ ನೀವೇ ಊಹಿಸಿಕೊಳ್ಳಿ? ದೇಶದ ಅತಿದೊಡ್ಡ ಸರಕು ಸಾಗಣೆ ಕೇಂದ್ರ ಅದಾನಿಯ ಮಂದ್ರಾ ಬಂದರಿನಲ್ಲಿ 3000ಕೆ.ಜಿ. ಡ್ರಗ್ಸ್ ಸಿಕ್ಕಿದ್ದರೂ ಪದೇ ಪದೇ ಇದೇ ಅದಾನಿ ಮಂದ್ರಾ ಬಂದರಿನಲ್ಲೇ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಮಾದಕವಸ್ತು ಪತ್ತೆಯಾಗುತ್ತಿದ್ದರೂ, ದೇಶದ ಭದ್ರತೆಗೆ-ಆರ್ಥಿಕತೆಗೆ ದಕ್ಕೆಯಾಗುತ್ತಿದ್ದರೂ, ಕೇಂದ್ರ ಸರ್ಕಾರ ಮಾತ್ರ ಮೌನ ವಹಿಸುತ್ತಿದೆ! ಸೆಪ್ಟೆಂಬರ್ ತಿಂಗಳಲ್ಲಿ 3000ಕೆ.ಜಿ. ಅಂದರೆ 21ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿತ್ತು. ಕಳೆದ ಜೂನ್ ತಿಂಗಳಲ್ಲಿ 25000ಕೆ.ಜಿಯ 1ಕೋಟಿ75ಲಕ್ಷ ಮೌಲ್ಯದ ಹೆರಾಯಿನ್ ಇದೇ ಬಂದರಿಗೆ ಬಂದಿಳಿದಿತ್ತು! ಅದರ ನಾಪತ್ತೆಯ ಬಗ್ಗೆ ಸರಿಯಾದ ತನಿಖೆಯೇ ನಡೆದಿಲ್ಲ! ಅದು ಈಗಾಗಲೇ ಮಾರುಕಟ್ಟೆಯಲ್ಲಿ-ಜನರ ಹೊಟ್ಟೆಯಲ್ಲಿ ಕರಗಿ ಹೋಗಿದೆ! 1 ಕೆ.ಜಿ ಹೆರಾಯಿನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 7ಕೋಟಿ ರೂಪಾಯಿ ಮೌಲ್ಯ ಹೊಂದಿದೆಯಂತೆ. ಇದನ್ನು ಸೆಮಿ ಕಟ್ ಟಾಲ್ಕಮ್ ಪೌಡರ್ ಎಂದು ಹೆಸರಿಸಿ ಎರಡು ದೊಡ್ಡ ಕ್ಯಾಂಟರ್ ಗಳ ಒಳಗೇ ಬಿಚ್ಚಿಟ್ಟಕೊಂಡು ಸರಕು ಸಾಗಣೆ ಹಡಗಿನಲ್ಲಿ ಗುಜರಾತಿನ ಅದಾನಿಯ ಮಂದ್ರಾ ಬಂದರಿಗೆ ತಂದು ಇಳಿಸಲಾಗಿತ್ತು. ತಾಲಿಬಾನ್ ಟೆರರಿಸ್ಟ್ ಗಳ ಹಿಡಿತದಲ್ಲಿರುವ ಅಫ್ಘಾನಿಸ್ತಾನದ ಆಶಿ ಟ್ರೆಂಡಿಂಗ್ ಕಂಪನಿ ಇದನ್ನು ಆಮದು ಮಾಡಿಕೊಂಡಿತ್ತು. ಈ ಪ್ರಕರಣದಲ್ಲಿ ಕೇವಲ ಕಂಪನಿಯವರನ್ನಷ್ಟೇ ಬಂಧಿಸಿ ಕೇಸನ್ನು ದಾರಿತಪ್ಪಿಸಲಾಯಿತು! ದೇಶಪ್ರೇಮಿಗಳಿಗೇ ಮಾತೇ ಹೊರಡಲಿಲ್ಲ! ದೇಶದ ಲಕ್ಷಾಂತರ ಯುವಕರು ಮಾದಕ ವ್ಯಸನಿಗಳಾಗಿ, ದೇಶದ ಭವಿಷ್ಯ ಹಾಳಾಗುತಿದ್ದರೂ, ಈ ದಂಧೆಯ ಹಿಂದಿರುವ ನೂರಾರು? ಈ ಡ್ರಗ್ಸ್ ಜಾಲಕ್ಕೂ ಟೆರರಿಸಂಗೂ ಏನಾದರೂ ಲಿಂಕ್ ಇದೆಯಾ? ಪ್ರಮುಖ ಕಿಂಗ್ ಪಿನ್ ಯಾರು? ಎಂಬುದರ ತನಿಖೆ ನಡೆಸಲೇ ಇಲ್ಲ,! ಕೇವಲ 10ಗ್ರಾಂ.100ಗ್ರಾಂ ಡ್ರಗ್ಸ್ ಸಿಕ್ಕವರ ಮನೆಯ ಅಂಡರ್ ಗ್ರೌಂಡು-ಅಟ್ಟವನ್ನೆಲ್ಲಾ ಜಾಲಾಡುವ ನಮ್ಮ ಪೊಲೀಸರು, ಮಾಧ್ಯಮಗಳು ದೆಶದ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಗುಜರಾತಿನ ಶ್ರೀಮಂತರ ಬಂದರಿನಲ್ಲಿ ಏಕೆ ಪತ್ತೆಯಾಯಿತೂ? ಇದರಲ್ಲಿ ಅವರ ಲಾಭದ ಪಾಲೆಷ್ಟು ಎಂದು ಚರ್ಚಿಸುವ ಚಕಾರವೆತ್ತಲಾರರು! ಮಾದಕ ಹೆರಾಯಿನ್ನಿನ ರಾಜಧಾನಿ ಯಾಗುತ್ತಿರುವ ಗುಜರಾತಿನಲ್ಲಿ ಈ ಮುಂದ್ರಾ ಬಂದರು ದೇಶದ ದೊಡ್ಡ ಡ್ರಗ್ಸ್ ರಹದಾರಿಯಾಗಿ,ಸೇಫೆಸ್ಟ್ ಗೋಡನ್ ಆಗೀ ಕಣ್ಣಿಗೆ ಗೋಚರಿಸುತ್ತಿದೆ! ತಾಲಿಬಾನ್ ಟೆರರಿಸ್ಟ್ ಗಳ ನಿಯಂತ್ರಣ ದಲ್ಲಿರುವ ಆಫ್ಘಾನಿಸ್ತಾನದಿಂದ ಇಷ್ಟು ಬ್ರಹತ್ ಪ್ರಮಾಣದ ಡ್ರಗ್ಸ್ ಇಷ್ಟು ಸುಲಭವಾಗಿ, ತುಂಬಾ ಗೌಪ್ಯವಾಗಿ, ಸೇಫಾಗಿ ಭಾರತದ ಬಂದರಿಗೆ ಬಂದಿಳಿಯಬಹುದೆಂದರೇ, ದೇಶದ ಭದ್ರತೆಯ ಕತೆ ಏನೂ?! ಭಾರತದ ಮಾದಕ ನಿಯಂತ್ರಣ ಮಂಡಳಿ, ಸಿಬಿಐ.ಇಡಿ. ಮತ್ತು ಡಿ.ಆರ್.ಐ ಸಂಸ್ಥೆಗಳು ದೇಶ ಉಳಿಸಲು ಸ್ವಯಂ ತನಿಖೆಗೆ ಮುಂದಾಗದೇ ರಾಜಕೀಯ ಪಕ್ಷಗಳು ನಾಟಕದಲ್ಲಿ ನಿದ್ರೆಗೆ ಜಾರುತ್ತಿರುವುದೇಕೇ?

 

Girl in a jacket
error: Content is protected !!