ರಾಜ್‌ಕುಮಾರ್ ಅತ್ಯುದ್ಬುತ ಅಭಿನಯದ ಭಕ್ತಕನಕದಾಸ
ಶ್ಯಾಮಪ್ರಸಾದ್ ಮೂವೀಸ್ ಲಾಂಛನದಲ್ಲಿ ೧೯೬೦ರಲ್ಲಿ ತೆರೆ ಕಂಡ ಕಪ್ಪು-ಬಿಳುಪು ಭಕ್ತಿಪ್ರಧಾನ ಚಿತ್ರ ಭಕ್ತ ಕನಕದಾಸ ವೈ.ಆರ್.ಸ್ವಾಮಿ ನಿರ್ದೇಶಿಸಿದರು. ಬೆಂಗಳೂರಿನ ಅಬಕಾರಿ ಕಂಟ್ರಾಕ್ಟರ್ ಡಿ.ಆರ್.ನಾಯ್ಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.
ರಾಜಕುಮಾರ್ ಅತ್ಯುತ್ತಮ ಅಭಿನಯದ ಉತ್ಕೃಷ್ಟ ಚಿತ್ರವಾದ ಭಕ್ತ ಕನಕದಾಸ ಚಿತ್ರ ಕೇಂದ್ರ ಸರ್ಕಾರದ ಅರ್ಹತಾ ಪ್ರಶಸ್ತಿ ಪಡೆಯಿತು. ರಾಜಕುಮಾರ್ ಅವರೊಂದಿಗೆ ಉದಯಕುಮಾರ್, ಕೃಷ್ಣಕುಮಾರಿ, ಕೆ.ಎಸ್.ಅಶ್ವತ್ಥ್, ಹೆಚ್.ರಾಮಚಂದ್ರಶಾಸ್ತ್ರಿ, ಜಯಾ, ಸೋರಟ್ ಅಶ್ವತ್ಥ್, ಸಿ.ವಿ.ಶಿವಶಂಕರ್, ರತ್ನಾಕರ್, ವಾಸುದೇವ ಗಿರಿಮಾಜಿ, ಎಂ.ಎಸ್.ಸುಬ್ಬಣ್ಣ, ಜಯಶ್ರೀ, ಲಕ್ಷ್ಮೀದೇವಿ ಅಭಿನಯಿಸಿದರು. ಕಥೆ, ಚಿತ್ರ ಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಹುಣಸೂರು ಕೃಷ್ಣ್ಣಮೂರ್ತಿ ರಚಿಸಿದರು. ಎಂ.ವೆಂಕಟರಾಜು ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ೧೬ ಹಾಡುಗಳನ್ನು ಅಳವಡಿಸಲಾಗಿದ್ದು, ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಕೃಷ್ಣವೇಣಿ ಗೀತೆಗಳಿಗೆ ದನಿಯಾಗಿದ್ದರು. ಬದುಕಿದೆನು ಬದುಕಿದನು ಭವ ಎನಗೆ ಹಿಂಗಿತು…; ಕುಲ ಕುಲವೆಂದು ಹೊಡೆದಾಡದಿರಿ…’, ಈತನೀಗ ವಾಸುದೇವನೂ ಈ ಲೋಕದೊಡೆಯ…, ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ..’ ಮುಂತಾದ ಕನಕದಾಸರ ಕೃತಿಗಳನ್ನು ಚಿತ್ರದಲ್ಲಿ ಬಳಸಲಾಗಿದೆ. ವಿಶೇಷವೆಂದರೆ ಈ ಚಿತ್ರದ ಸಂಗೀತ ನಿರ್ದೇಶನದಲ್ಲಿ ಎಂ.ವೆಂಕಟರಾಜು ಅವರಿಗೆ ನೆರವಾಗುವ ಮೂಲಕ ಮುಂದೆ ಕನ್ನಡ ಚಿತ್ರ ಜಗತ್ತಿಗೆ ಮಧುರ ಸಂಗೀತ ಉಣಬಡಿಸಿದ ಎಂ.ರಂಗರಾವ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಿಸಿದರು.
ರಾಜಕುಮಾರ್ ಕನಕದಾಸರಾಗಿ ಅತ್ಯಾಮೋಘವಾಗಿ ನಟಿಸಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಕನಕದಾಸರು ಮುಪ್ಪಾಗುವವರೆಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರವ ಕಥೆಯನ್ನು ಚಿತ್ರದಲ್ಲಿ ಅಳವಡಿಸಿದ್ದು, ರಾಜಕುಮಾರ್ ವೃದ್ಧಾಪ್ಯದ ಪಾತ್ರವನ್ನು ಸಹಜವಾಗಿ ಅಭಿನಯಿಸಿದ್ದಾರೆ. ಪಿ.ಬಿ.ಶ್ರೀನಿವಾಸ್ ಹಾಡಿರುವ ಕನಕದಾಸರ ಕೃತಿಗಳು ಇಂದಿಗೂ ಕನ್ನಡ ಚಲನಚಿತ್ರ ಸಾಹಿತ್ಯಲೋಕದ ಮಧುರಗೀತೆಗಳಾಗಿ ಅಮರಗೊಂಡಿವೆ. ಆರ್.ಮಧು ಛಾಯಾಗ್ರಹಣ, ಸೈಯದ್ ಅಹಮದ್ ಕಲೆ, ವೆಂಪಟಿಸತ್ಯಂ ಹಾಗೂ ತಂಗಪ್ಪನ್ ನೃತ್ಯ ನಿರ್ದೇಶನ, ಬಿ.ಅಪ್ಪಾರಾವ್ ವಸ್ತ್ರಾಲಂಕಾರ, ಎಂ.ಎಸ್.ಸುಬ್ಬಣ್ಣ ಹಾಗೂ ಬಿ.ವೀರರಾಜು ಪ್ರಸಾಧನ ಚಿತ್ರಕ್ಕಿತ್ತು. ಮದರಾಸಿನ ಗೋಲ್ಡನ್ ಸ್ಟುಡಿಯೊದಲ್ಲಿ ಚಿತ್ತ ಚಿತ್ರೀಕರಣಗೊಂಡಿತು. ಉಡುಪಿ, ಕಾಗಿನೆಲೆ ಹಾಗೂ ಬ್ಯಾಡ ಮುಂತಾದ ಕನಕದಾಸರು ಇತಿಹಾಸ ಬಿಟ್ಟುಹೋಗಿರುವ ಸ್ಥಳಗಳಲ್ಲಿ ಹೋರಾಂಗಣ ಚಿತ್ರೀಕರಣ ಮಾಡಲಾಯಿತು.
ಪಾಳೇಗಾರ ವೀರನಾಯಕ ಹಾಗು ಹುಚ್ಚಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ತಿಮ್ಮಪ್ಪನಾಯಕ ಮಲ್ಲನಾಯಕನ ಪುತ್ರಿ ಲಚ್ಚಿಯನ್ನು ಪ್ರೀತಿಸುತ್ತಾನೆ. ಶ್ರೀನಿವಾಸ ಕನಸಿನಲ್ಲಿ ಕಾಣಿಸಿಕೊಂಡು ನೀಡಿದ ಅಪ್ಪಣೆಯಂತೆ ಭೂಮಿಯನ್ನು ಅಗೆದಾಗ ಶ್ರೀನಿವಾಸನ ವಿಗ್ರಹ ಹಾಗೂ ಹೇರಳ ಚಿನ್ನ ದೊರೆತು ಮುಂದೆ ಕನಕನಾಯಕನಾಗುತ್ತಾನೆ. ಲಚ್ಚಿಯ ವಿಷಯದಲ್ಲಿನಡೆದಹೊಡೆದಾಟದಿಂದಬೇಸತ್ತ ಕನಕನಾಯಕ ದೇಶಸಂಚಾರಹೋಗುತ್ತಾನೆ. ವ್ಯಾಸರಾಯರಿಂದ ಅನುಗ್ರಹಿತನಾಗಿ ವಿಷ್ಣುಭಕ್ತನಾಗಿ ಕನಕದಾಸನಾಗುತ್ತಾನೆ. ಉಡುಪಿ ದೇವಸ್ಥಾನಕ್ಕೆ ಕನಕನ ಪ್ರವೇಶ ನಿರಾಕರಿಸಿದಾಗ ಕೃಷ್ಣನೇ ಹಿಂದಕ್ಕೆ ತಿರುಗಿ ನಿಂತು ಕನಕದಾಸನಿಗೆ ದರ್ಶನ ನೀಡುತ್ತಾನೆ. ಅಪೂರ್ವ ಸಾಹಿತ್ಯ ಸೃಷ್ಟಿ ಕನಕದಾಸರಿಂದ ಆಗುತ್ತದೆ.
ಸಂಗೀತ ನಿರ್ದೇಶಕ ಎಂ ವೆಂಕಟರಾಜು
ಭಕ್ತ ಕನಕದಾಸ ಚಿತ್ರಕ್ಕೆ ಸುಶ್ರಾವ್ಯ ಸಂಗೀತ ನಿರ್ದೇಶನ ಮಾಡಿದ ಮಂಡಪತ್ತಿ ವೆಂಕಟರಾಜು ೧೯೧೬ರ ಮಾರ್ಚ್ ೩೧ರಂದು ಜನಿಸಿದರು. ವೆಂಕಟರಾಜು ಅವರು ಬಹಳ ಕಡಿಮೆ ಚಿತ್ರಗಳಿಗೆ ಸಂಗೀತ ನೀಡಿದರೂ, ಸಂಗೀತ ಪ್ರೇಮಿಗಳಲ್ಲಿ ಅಮರ ಮಾಧುರ್ಯ ಉಳಿಸಿದರು. ಚಿಕ್ಕವಯಸ್ಸಿನಲ್ಲೇ ಕಣ್ಮರೆಯಾದವೆಂಕಟರಾಜು ಅಲ್ಪ ಅವಧಿಯಲ್ಲೇನೀಡಿರುವ ಅತ್ಯುತ್ತಮ ರಾಗಗಳಹಾಡುಗಳನ್ನುಮರೆಯಲುಸಾಧ್ಯವಿಲ್ಲ. ಭಕ್ತ ಕನಕದಾಸ ಚಿತ್ರಕ್ಕೆ ಪಿ ಬಿ ಶ್ರೀನಿವಾಸ್ ಹಾಡಿದ ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ…ಗೀತೆಯ ಅಠಾಣ ರಾಗದ ಸ್ವರ ಕಲ್ಪನೆಯಾಗಲಿ, ಕುಲ ಕುಲ ಕುಲವೆಂದು…. ಗೀತೆಯ ಜಯಂತಶ್ರೀ ರಾಗವೇ ಇರಲಿ, ವೆಂಕಟರಾಜು ಅವರ ಕ್ಷಮತೆಗೊಂದು ಸಾಕ್ಷಿ. ಪಿಬಿ ಶ್ರೀನಿವಾಸ್ ಬದುಕಿರುವವರೆಗೂ ಬಹುವಾಗಿ ಇಷ್ಟ ಪಡುತ್ತಿದ್ದ ಇದೇ ಚಿತ್ರದಬದುಕಿದೆನುಬದುಕಿದೆನುಭವ ಎನಗೆಹಿಂಗಿತು ಗೀತೆವರಭೈರವಿ ರಾಗದಲ್ಲಿದ್ದು , ಈತನೀಗವಾಸುದೇವನು…. ಗೀತೆಗೆವೆಂಕಟರಾಜುವರಾಳಿ ರಾಗ ತುಂಬಿದ್ದರು. ಸ್ವರ್ಣಗೌರಿ ಚಿತ್ರದ ಅವರ ಕಾಮವರ್ಧಿನಿ ರಾಗಸಂಯೋಜಿತ ಅಮರಗೀತೆನಟವರ ಗಂಗಾಧರ ಗೌರೀವರ ಉಮಾಶಂಕರ…. ವೆಂಕಟರಾಜು ಅವರ ನೆನಪನ್ನು ಸದಾ ಹಸಿರಾಗಿಸುತ್ತದೆ. ವೆಂಕಟರಾಜು ೧೯೬೯ರಲ್ಲಿ ನಿಧನರಾದರು.