ನವದೆಹಲಿ,ನ,22:AISECC(Non profit organization dealing with climate issues) ಯ ಸಲಹಾ ಸಮಿತಿಯ ಸದಸ್ಯೆ ಆರತಿ ಕೃಷ್ಣ ಅವರು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರೀಂಗ್ಲ ರವರನ್ನು ಭೇಟಿ ಮಾಡಿ ವಾಯು ಮಾಲಿನ್ಯ ಮತ್ತು ಹೆಚ್ಚಾಗುತ್ತಿರುವ ಹವಾಮಾನ ಸಮಸ್ಯೆಗಳಿಗೆ ಪರಿಹಾರವಾಗಿ ಸ್ಮಾರ್ಟ್ ವಿಲೇಜ್ ಎಂಬ ಪ್ರಸ್ತಾವನೆ ಚರ್ಚಿಸಿದರು.
ಭಾರತ-ಅಮೆರಿಕ ದ್ವಿಪಕ್ಷೀಯ ಒಪ್ಪಂದದ ಈ ಯೋಜನೆಯು ಇಂಗಾಲದ ತಟಸ್ಥ ಕೃಷಿ, ಜೈವಿಕ ಅನಿಲ ಉತ್ಪಾದನೆ, ವರ್ಮಿಕಲ್ಚರ್, ಶಾಖದ ಒತ್ತಡ ನಿರೋಧಕ ಬಿತ್ತನೆ, ನೀರಿನ ಸಂರಕ್ಷಣೆ ಮತ್ತು ಮುಂತಾದವುಗಳನ್ನು ಕಾರ್ಯಗತಗೊಳಿಸಲು ಪೂರಕವಾಗಿದೆ.
ಮಹಿಳಾ ಸಬಲೀಕರಣ, ಗ್ರಾಮೀಣ ಆರೋಗ್ಯ ಮತ್ತು ಶಿಕ್ಷಣವೂ AISECC ಯ ಮೂಲ ಉದ್ದೇಶಗಳಾಗಿವೆ.