ಮಕ್ಕಳ ಸ್ಕೂಲ್‌ಮನೇಲಲ್ವೇ..
” ನೋಡ್ರಿ ನಮ್ಮ ಹುಡುಗ ಹೆಂಗ ಇಂಗ್ಲೀಷ್‌ಮಾತಾಡುತ್ತೇ..”
” ರೀ ನಮ್ಮ ಹುಡುಗಿ ಮೊಬೈಲ್‌ಹೆಂಗ ಆಪರೇಟ್‌ಮಾಡುತ್ತೆ ಗೊತ್ತಾ..”
” ರೀ ನಮ್ಮ ಹುಡುಗ ನಮ್ಮ ರಿಲೇಟಿವ್ಸ ನೊಳಗೇ ಪಸ್ಟ ಗೊತ್ತಾ..”
ಬನ್ನಿ ಬನ್ನಿ ಸಾರ್‌ಲೇ.. ಮಗನ್ನ ಕರಿಯೇ..! ಸರ್‌ನೋಡಿ ಇವನು ಎಲ್‌ಕೆ ಜಿ ಆಗಲೇ ಎಲ್ಲಾ ರೈಮ್ಸ ಹೇಳ್ತಾನೆ.ವರ್ಡ್ಸ ಎಲ್ಲಾ ಹೇಳ್ತಾನೆ.ನೋಡಿ ಟಾರ್ಟಾಯಿಸ್‌ಅಂದ್ರೇನೋ..? ಪಿಕಾಕ್‌ಅಂದ್ರೇನೋ..? ಫೆದರ್‌ಅಂದ್ರೇನೋ..?ಹೀಗೆ ಹೋದವರು ಬಂದವರ ನಡುವೆ ಮಗನನ್ನ ನಿಲ್ಲಿಸಿ ಪ್ರಶ್ನೆಗಳ ಸುರಿಮಳೆಗೈವವರಿಗೆ ಮಗುವಿಗಿಂತಲೂ ತಮ್ಮ ಪ್ರಿಸ್ಟೇಜ್‌ಹೆಚ್ಚಿದ ಖುಷಿ!
ಮನೆಯಲ್ಲಿ ಮೊಬೈಲ್‌ಹಿಡಿದರೆ ಸಾಕು ಅಮ್ಮ ಬಂದು ?ರೈಮ್ಸ ನೋಡು..ಸಮ್‌ನೋಡು..ವರ್ಡ್ಸ ಕೇಳು ಅಂತೆಲ್ಲಾ ತಾಕೀತು ಮಾಡುತ್ತಾಳೆ.ಹೌದು ನಗರಕ್ಕೆ ಮಗುವೆಂದರೆ ಪ್ರದರ್ಶನದ ವಸ್ತು.ರೋಬೋಟ್‌ಯಂತ್ರ.ಅಪ್ಪ ಅಮ್ಮಂದಿರ ಪಿಸ್ಟೇಜ್‌ಹೆಚ್ಚಿಸಲೆಂದೇ ಭೂಮಿಗೆ ಬಂದ ಭಗವಂತ! ಅಕ್ಕ ಪಕ್ಕದ ಕೂಸುಗಳನ್ನ ಮೀರಿಸಲೆಂದೇ ತೊಡೆ ತಟ್ಟಿ ನಿಲ್ಲುವ ಸ್ಟೂಡೆಂಟ್‌ನಂಬರ್‌ಒನ್.ವರ್ತಮಾನದ ಪ್ರಜ್ಞೆಯೇ ಇಲ್ಲದ ಪುಸ್ತಕದ ಹುಳು.ಅದು ಕಲಿತೂ ಕಲಿತೂ ಅತ್ಯಂತ ಮಿದು ಭಾಷಿಯಾಗಿದೆ.ಕನ್ನಡಕಧಾರಿಯಾಗಿದೆ.ಆಟ ಮನೋರಂಜನೆಗಳನ್ನ ಮರೆತು,ದೈಹಿಕ ಶ್ರಮದಿಂದ ದೂರವಾಗಿ ಸದಾ ಪುಸ್ತಕ ಹಿಡಿದೂ ಹಿಡಿದೂ ಕೋಣೆ ಬಿಟ್ಟು ಹೊರಬಾರದ ಅದು ಅಪ್ಪ ಅಮ್ಮ ಔಟ್‌ಗೆ ಹೋದಾಗ ಮಾತ್ರ ಅವರನ್ನ ಅನುಸರಿಸುತ್ತದೆ.ಅದಕ್ಕೆ ದೇಶೀ ಆಹಾರವೂ ತಿಳಿಯದು ಸದಾ ನಾರ್ತ ಇಂಡಿಯನ್ನ ಇಲ್ಲವೇ ಬೇಕರಿ ಪುಡ್!ಜಂಕ್‌ಪುಡ್‌ಗಳ ಪ್ರಿಯ!
ಮನೆಯಲ್ಲಿ ಈ ಮಗು ಬೆಳೆಯುವುದೇ ಬೇರೆಯವರ ಕೈಯಲ್ಲಿ.ಅಮ್ಮನದು ನೌಕರಿ! ಅಪ್ಪನದೂ ನೌಕರಿ.ಪೋನಿನೊಳಗೇ ಬಹುತೇಕ ಪ್ರೀತಿಯ ವರ್ಷಧಾರೆ.! ಐದನೇ ತರಗತಿಗೇ ತನ್ನ ಪೋನ್‌ಪೇ ಗೂಗಲ್‌ಪೇಗಳನ್ನ ನಿಯಂತ್ರಿಸಬಲ್ಲ ಈ ಮಗು ಕಲಿತದ್ದು ಆಪ್‌ಗಳ ಶಾಲೆಯಲ್ಲಿ,ಗೂಗಲ್‌ತೊಡೆಯಲ್ಲಿ ,ಯೂಟೂಬ್‌ತೊಟ್ಟಿಲಲ್ಲಿ.ಇದಕ್ಕೆ ಸದಾ ಅಮೇಜಾನ್,ಪ್ಲಿಫ್‌ಕಾರ್ಟ,ಗಳ ಅಂಗಡಿ ಕೈ ಅಳತೆಯಲ್ಲೇ.. ಸ್ವೀಗೀ..ಜ್ಯುಮೇಟೋ..ಎಂಬ ಅಡುಗೆ ಮನೆಯಲ್ಲೇ ಬೆಳೆವ ಕೋಕಾ.ಪೆಪ್ಸಿ ಕುಡಿದು ಡೇಗುವ ಈ ಮಗು ನಗಲೂ ಡಾಟಾ ಹುಡುಕುತ್ತದೆ.ಕನಸುಗಳನ್ನ ಮೊಬೈಲ್‌ಗಳಲ್ಲೇ ಸ್ಕ್ರಾಲ್‌ಮಾಡುತ್ತದೆ.ಪ್ರೈಮ್‌ಮತ್ತು ನೆಟ್‌ಪ್ಲಿಕ್ಸ ಗಳ ಮನೋರಂಜನೆಯಲ್ಲೇ ಬೇಸರ ನೂಕುತ್ತದೆ.
ಹೋಮ್‌ಥಿಯೇಟರ್!ವೈ..ಫೈ.. ತುಂಬಿಕೊಂಡ ಮನೆಯಲ್ಲಿ ಬೆಳಿಗ್ಗೆ ಅಡಿಗೆ ಮಾಡಿಟ್ಟು ಹೋಗುವ ಆಯಿ!,ಕ್ಯಾರಿಯರ್‌ಗೆ ತುಂಬಿಕೊಳ್ಳುತ್ತಲೇ..ಬಾಯ್‌ಹೇಳುವ ಮಮ್ಮಿ..ಡ್ಯಾಡಿ..! ಹೊತ್ತೆಲ್ಲಾ ಯಂತ್ರಗಳೊಂದಿಗೆ ಕಳೆಯ ಬೇಕಾದ ಮುದ್ದು ಕಂದಮ್ಮ ಒಮ್ಮೊಮ್ಮೆ ಗುಡ್‌ಮಾರ್ನಿಂಗ್‌ಗುಡ್‌ನೈಟ್‌ಗಳನ್ನೂ ವಾಟ್ಸಪ್‌ಮತ್ತು ಮೆಸೆಂಜರ್‌ಗಳಲ್ಲಿ ಹೇಳುತ್ತದೆ.ಅಮ್ಮ ಜಾಣೆ ಮಗನನ್ನ ವಿಡಿಯೋ ಕಾಲ್‌ಮೂಲಕವೇ ನಿಯಂತ್ರಿಸುತ್ತಾಳೆ. ನಗರಗಳೆಂಬ ಧರೆಗೆ ದೊಡ್ಡವರು ಹಿಂದೆ ವೃದ್ದಾಶ್ರಮಕ್ಕೆ ಭೇಟಿ ಕೊಟ್ಟಂತೆ ಈಗ ಮಕ್ಕಳ ಬಾಲಾಶ್ರಮಕ್ಕೆ ಅಪ್ಪ ಅಮ್ಮಂದಿರು ಭಾನುವಾರ ಭೇಟಿ ನೀಡುತ್ತಾರೆ!.
ನಿಜ ಈ ಮನೆ ದೊಡ್ಡದು ಡಿಜಲೀಕರಣವೇ ತುಂಬಿದ ಈ ಮನೆಯೊಳಗೆ ನೆಂಟರ ರಗಳೆಗಳಿಲ್ಲ.ಗೆಳೆಯರ, ನೆರೆಹೊರೆಯವರ ಸಂವಾದಗಳಿಲ್ಲ.ಅಜ್ಜ ಅಜ್ಜಿ,ಮಾಮಾ,ಚಿಕ್ಕಪ್ಪ ಎಲ್ಲರನ್ನ ಫೋಟೋಗಳಲ್ಲಿ,ವಿಶೇಷ ಸಂದರ್ಭಗಳಲ್ಲಿ ಜೀವಂತವಾಗಿ ನೋಡುವ ಮಗು ಬಾಯ್‌ಹೇಳುವುದನ್ನೇ ಕರಗತ ಮಾಡಿಕೊಂಡಿದೆ.ಪ್ರಕೃತಿಯನ್ನೂ ದೂಡಿ ನಿಂತ ಈ ಮನೆಯಲ್ಲಿ ಶೇರು ಮಾರುಕಟ್ಟೆ ಉರುಳಾಡುತ್ತಿದೆ.ರಿಮೋಟ್‌ಗಳೇ ದಾರಿ ದೀಪವಾಗಿ ಬೆಳಗುತ್ತವೆ.
ಮಗುವಿನ ಸ್ಕೂಲ್‌ಕೂಡಾ ಹೈ..ಫೈ..
ಕಾಂಪಿಟೀಟಿವ್‌ಕೇಂದ್ರ.!
ರನ್‌ಟು ಅಚೀವ್..ಮೋಟಿವೇಟ್‌ಟು ಅಚೀವ್..
ಬಿ..ಮಾಡ್ರನೈಜ್..ಸ್ಟಾಂಡ್‌ಗ್ಲೋಬಲೈಜ್.!
ವೈಜ್..ವೈಜ್..ವೈಜ್.ಅನ್ಟಿಲ್‌ಟು ರೀಚ್‌ದ ಗೋಲ್.!!!
ಅಲ್ಲಿಯೂ ಮಗು ಹಕ್ಕಿಯಂತೆ ಹಾರದು..ಮೀನಿನಂತೆ ಈಜದು..ಅಸಲಿಗೆ ಅದು ಪ್ರಕೃತಿದತ್ತವಾಗಿ ನಗದು.ಬೆಳೆಯದು.ಲಾಭದ ಬೆನ್ನು ಬಿದ್ದ ಕುಟುಂಬ ಸಂಬಂಧ ಕಳಚಿಕೊಂಡಿವೆ.ಪ್ರದರ್ಶನಕ್ಕೆ ಬಲಿಯಾದ ಪಾಲಕರು ಜೀವಗಳಿಂದಲೇ ಮಕ್ಕಳನ್ನ ನಿಯಂತ್ರಿಸುತ್ತಾರೆ.ಗೋಲ್‌ಎಂಬ ಹಸಿರು ಕಟ್ಟಿಕೊಂಡ ಕುದುರೆಯಂತೆ ಮುಟ್ಟಲು ಒಂದೇ ಸಮನೆ ಓಡಿಸುತ್ತಾರೆ.ತಲೆಗೆ ತಕ್ಕ ದೇಹಗಳಿಲ್ಲ,ದೇಹಕ್ಕೆ ತಕ್ಕ ತಲೆ ಇಲ್ಲ ಇದು ಆಧುನಿಕ ಮಕ್ಕಳ ರೂಪ.ಒಬೇಸಿಟಿ ಇಲ್ಲವೇ ಸ್ಕೇರ್‌ಸಿಟಿ. ಈಹೊತ್ತಿನ ಮಕ್ಕಳ ಕಂಪ್ಲೇಂಟ್!ಕಾರ್ನಾಡರ ಹಯವದನ ನಾಟಕದಂತೆ ಕಾಣುತ್ತದೆ.
ಈಗೀಗ ಶಿಕ್ಷಣವೂ ಅಮೇರಿಕಾಕಡೆಗೇ ಮುಖಮಾಡಿರುವುದರಿಂದ ಮಾನವೀಯತೆಯನ್ನ,ನೈತಿಕತೆಯನ್ನ ಸಾಹಿತ್ಯ ಸಂಸ್ಕೃತಿಗಳನ್ನ ಐಶ್ಚಿಕ ಪಿರೇಡ್‌ಗಳಾಗಿಸಿದೆ.ಗುರುಗಳಿಂದಲೇ ದೂರ ಮಾಡುತ್ತಿರುವ ಗೂಗಲ್‌ಗುರುಗಳ ಶಾಲೆಯಲ್ಲಿ ಸಹನೆ,ಸಚ್ಚಾರಿತ್ರ್ಯ,ಅಹಿಂಸೆ,ಸಹಕಾರ,ಸಹೋದರತ್ವ,ಎಂಬೆಲ್ಲಾ ಗುಣಗಳನ್ನ ಯಾಂತ್ರಿಕವಾಗಿಯೇ ಟಚ್‌ಮಾಡಬೇಕಿದೆ.” ಗಿಡವಾಗಿ ಕಾಣದ್ದು ಮರವಾಗಿ ಕಂಡೀತೆ” ಎಂಬಂತೆ ಸೈಬರ್‌ಕ್ರೈಮ್‌ಪ್ರಕರಣಗಳು ಮಕ್ಕಳನ್ನ ಆತ್ಮ ಹತ್ಯೆಯತ್ತ ನೂಕುವ ಗೇಮ್‌ಶೋಗಳು, ಮುಗ್ದತೆಯನ್ನೇ ಕೊಲ್ಲುವ ಟಿ.ವಿ.ಸಿನೇಮಾಗಳು ಮಕ್ಕಳನ್ನ ಹೇಗೆ ಬೆಳೆಸುತ್ತಿವೆ.ಪೇಪರ್‌ಮೂಲೆಗಳಲ್ಲಿ ದೊಡ್ಡ ಶಾಲೆಯ ಗಾಸಿಪ್ಗಳು,ಡ್ರಗ್‌ರಿಪೋರ್ಟಗಳು,ಕೊಲೆ ಸುದ್ದಿಗಳು, ಸದ್ದಿಲ್ಲದ ಸಾವುಗಳು ಆಕ್ರಮಿಸುತ್ತಲೇ ಇವೆ.
ಹಿಂದೆ ಶಾಲೆಗಳನ್ನ ಸಂತರ ಸ್ವಭಾವದವರು ತೆರೆಯುತಿದ್ದರು.ಮಾನವೀಯ ಕಾಳಜಿಯವರು ದೇಣಿಗೆ ನೀಡಿ ಶುರು ಮಾಡಿಸುತ್ತಿದ್ದರು. ಈಗ ಶಾಲೆಗಳು ಮಾರುಕಟ್ಟೆಯ ನಿಪುಣರಿಂದ ಸೃಷ್ಟಿಸಲ್ಪಡುತ್ತಿವೆ.ಅವು ವಿದ್ಯಾ ಕೇಂದ್ರಗಳಾಗುವ ಬದಲು ದುಡ್ಡು ಮಾಡುವ ಜಾಗಗಳಾಗಿವೆ.
ಹಿಂದೆ ಶಾಲೆಗಳು ಹಿಂದುಳಿದ ಮಕ್ಕಳಲ್ಲಿ ಬಡವರ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಿ ಅವರನ್ನ ಸಾಧಕರನ್ನಾಗಿ ಮಾಡುವುದು ಶಾಲಾ ಶಿಕ್ಷಕರ ಗುರಿಯಾಗಿತ್ತು.ಈಗ ದೊಡ್ಡ ಶಾಲೆಗಳು ಜಾಣ/ಜಾಣೆಯರಿಗೆ ಮಾತ್ರ ಜಾಗ ನೀಡುತ್ತಿವೆ.ದಡ್ಡರಿಗೆ ,ಬಡವರಿಗೆ,ಸೋತವರಿಗೆ ಅಲ್ಲಿ ಜಾಗವೇ ಇಲ್ಲ.ಅವರಿಗೆ ಸೃಷ್ಟಿಸುವ ಸಾಹಸ ಬೇಕಿಲ್ಲ.ಅವರಿಗೆ ಗಳಿಸುವ ವಾಮ ಮಾರ್ಗ ಬೇಕು.ಬೇಗ ಬೇಗ ತಮ್ಮ ಬ್ಯಾನರ್‌ಗಳ ರೆಕಾರ್ಡ ಮಾರ್ಪಡಿಸುವುದು ಬೇಕು.ಉದ್ದೇಶ ಬೇರೆಯೇ ಆಗಿರುವಾಗ ಗುರಿ ಬೇರೆಯಾಗುವುದೇ..?
ಗ್ಲೋಬಲ್‌ಮನಸಿನ ಅಂಗಳದಲ್ಲಿ ಮೌಲ್ಯಗಳು ಕರಗಿ ಪಠ್ಯಗಳಾಗಿವೆ.ಪರೇಡ್‌ಗೆ ಸೀಮಿತವಾಗಿವೆ.ಕಲಿಸುವವರು ಕಲಿಯುವವರೂ ಯಾಂತ್ರಿಕವಾಗಿಯೇ ಇದ್ದಾಗ ಓಂ ಅಮೇರಿಕಾಯ ನಮಃ ಎನ್ನದೇ ವಿಧಿ ಇಲ್ಲ.
ಸಂವಿಧಾನದ ಅಡಿಯಲ್ಲಿ ಆಯ್ಕೆಗೊಂಡ ನಾಯಕರು ಜಾತ್ಯಾತೀತವಾಗಿ ವರ್ತಿಸುವುದನ್ನ ಬಿಟ್ಟು ಜಾತಿ ಧರ್ಮಗಳನ್ನೇ ತಮ್ಮ ತಮ್ಮ ಓಟ್ಟ ಬ್ಯಾಂಕ್‌ಆಗಿಸಲು ಹೆಣಗುತ್ತಿದ್ದಾರೆ.” ಶಿಕ್ಷಣ ಗುಲಾಮಗಿರಿಯನ್ನ ತೊಡೆದು ಹಾಕುವ ಅಸ್ತ್ರ” ಎಂದು ಹೇಳಿದ ಅಂಬೇಡ್ಕರ್‌ಎದುರೇ ಶಿಕ್ಷಣವನ್ನ ಸಿರಿವಂತರ ಸ್ವತ್ತಾಗಿಸುವ ಕಾಲ ಇದಾಗಿದೆ.” ಉತ್ತಮ ನಡತೆಯ ಬೆಳವಣಿಗೆಯು ಶಿಕ್ಷಣದ ಗುರಿಯಾಗಬೇಕು, ಅಕ್ಷರ ಸಮಾಜ ಸುಧಾರಣೆಯ ಬೆಳಕಾಗಬೇಕು” ಎಂಬ ಅಂಬೇಡ್ಕರ್ ಮಾತುಗಳು ಆಧುನಿಕ ಶಿಕ್ಷಣದಲ್ಲಿ ಮಂಕಾಗುವಂತೆ ಕಾಣುತ್ತಿವೆ.
ಧರ್ಮ ದ್ವೇಷಗಳನ್ನ ವರ್ಗ ವೈಷಮ್ಯಗಳನ್ನ ಉಸಿರಾಡುವ ಜಗತ್ತು ಬಸವಣ್ಣನವರ ” ಇವನಾರವ ಇವನಾರವ ಎಂದೆಣಿಸದಿರಯ್ಯ” ಎಂಬ ಮಾತುಗಳನ್ನ ಕೇಳಬೇಕಿದೆ.
ಈಗೀಗ ಇಶಾಲಾ ಪ್ರೋಗ್ರಾಂ ಗಳು ಹೆಚ್ಚುತ್ತಲಿವೆ ಟ್ಯಾಬ್..ಕಂಪ್ಯೂಟರ್‌ಗಳು ವಿತರಣೆಗೊಳ್ಳುತ್ತಿವೆ.ಸರ್ಕಾರಿ ಶಾಲಾ ಕಾಲೇಜುಗಳಲ್ಲೂ ಇಂಟರ್‌ನೆಟ್‌ವೈಫೈ ಗಳು,ಸ್ಮಾರ್ಟ ಕ್ಲಾಸ್‌ಗಳೂ ಹೆಚ್ಚುತ್ತಿವೆ.ನಿಜ ಬುಡದಿಂದಲೂ ಬೆಳೆಯದ ಮಾನವೀಯತೆ ಇಲ್ಲಿ ಅರಳುತ್ತದೆಯೇ..?ಚಿಗುರದ ವ್ಯಕ್ತಿತ್ವ ಇಲ್ಲಿ ವಿಕಸಿಸುತ್ತದೆಯೇ..?ವ್ಯಕ್ತಿತ್ವ ಹುಟ್ಟುವುದಾದರೂ ಎಲ್ಲಿಂದ?
ಕುಟುಂಬಗಳಿಂದ,ನೆರೆಹೊರೆಯವರಿಂದ,ಬಂಧು ಬಾಂಧವರಿಂದ,ಅಸಲಿಗೆ ಊರೆಂಬ ಜೀವಂತ ನೆಲೆಗಳಿಂದ. ಈ ಚಿತ್ರವನ್ನೇ ಟಿ.ಪಿ.ಕೈಲಾಸಂ ಅವರು ?ಟೊಳ್ಳು ಗಟ್ಟಿ? ನಾಟಕದಲ್ಲಿ ತಂದಿರುವುದು.ಮಕ್ಕಳ ಸ್ಕೂಲ್‌ಮನೇಲಲ್ವೇ ಎಂಬ ಈ ನಾಟಕ ಈಗಲೂ ಪ್ರಸ್ತುತವೇ..ಆ ಕಾಲದ ಇಸ್ಕೂಲ್‌ಜಾಗವನ್ನ ಇ ಸ್ಕೂಲ್‌ಆಗಿದೆ.ಇ ಅಂಚೆ ಇ ಬ್ಯಾಂಕ್‌ನಂತೆಯೇ ಶಾಲೆಯೂ ಕೂಡಾ ವಸ್ತುನಿಯಂತ್ರಣದ ಗಣಕಯಂತ್ರಕ್ಕೆ ಬದಲಾಗಿದೆ.
ಅಜ್ಜ ಅಜ್ಜಿಯ ತೊಡೆಯಿಂದ ದೂರವಾದ ಮಗು,ಅಪ್ಪ ಅಮ್ಮನ ವಾತ್ಸಲ್ಯ ವಂಚಿತ ಮಗು,ಬಂಧು ಬಳಗವೇ ವಿರಳವಾಗಿಸಿಕೊಂಡ ಮಗು ನೆರೆಹೊರೆಯಿಂದ ದೂರವಾದ ಮಗು ಏನು ಕಲಿತೀತು?ಪ್ರಾಜೆಕ್ಟ ವರ್ಕ್‌ಅಸೈನ್‌ಮೆಂಟ್‌ಅಂತ ಮನೆಯೊಳಗೂ ಆಡಲು ಬಿಡದ ಶಾಲೆಗಳು ಮಕ್ಕಳನ್ನ ಸ್ವತಂತ್ರವಾಗಿ ಆಲೋಚಿಸಲೂ ಬಿಡುತ್ತಿಲ್ಲ.ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಕುರಿತು ಮಕ್ಕಳಿಗಿಂತಲೂ ಪೋಷಕರೇ ಹೆಚ್ಚು ಟೆನ್ಸ ಆಗುತಿದ್ದಾರೆ!.ಯಾಕೆಂದರೆ ಈಗ ಸೇರಿದವರೆಲ್ಲಾ ನಂಬರ್‌ಒನ್‌ಸಾಧಕರಾಗಬೇಕೆಂಬ ಹಂಬಲ ಎಲ್ಲರಿಗೂ.ನಂಬರ್‌ಒನ್‌ಮಾಡುತ್ತೇವೆ ಎಂಬ ಆಪ್‌ಗಳನ್ನ ನಂಬಿದ ಜನರು ಕಂಪ್ಯೂಟರ್‌ಮತ್ತು ಪವರ್‌ಪಾಯಿಂಟ್ಗಳನ್ನೇ ಜ್ಞಾನವೆಂದು ಭಾವಿಸುತ್ತಿದ್ದಾರೆ.ಇಂಗ್ಲೀಷ್‌ಒಂದು ಭಾಷೆ,ಕಂಪ್ಯೂಟರ್‌ಒಂದು ತಂತ್ರ ಜ್ಞಾನ ಎಂದರಿಯದ ಜನರು ಆಧುನಿಕತೆಯ ಹೆಸರಿನಲ್ಲಿ ಸಾವಿರಾರು ರೂಪಾಯಿಗಳನ್ನ ಹೇಗಾದರೂ ಹೊಂದಿಸಿ ಅದೇ ಶಾಲೆಗಳಲ್ಲೇ ಓದಿಸಬೇಕೆನ್ನುತ್ತಾರೆ.ಥೇಟ್‌ಕೈಲಾಸಂ ಟೊಳ್ಳು ಗಟ್ಟಿ ಶಿಕ್ಷಣದಂತಿರುವ ಆ ಶಾಲೆಗಳು ಬರೀ ಮಾದುಗಳನ್ನ ಬೆಳಸುತಿದ್ದಾರೆ.ಪೇಲಾಗಿಯೂ ಮಾನವೀಯತೆಯಲ್ಲಿ ಪಾಸಾಗುವ ಕಿಟ್ಟಿಯಂತವರನ್ನ ಸೃಷ್ಟಿಸುವರರಾರು?
ಮಕ್ಕಳ ದಿನಾಚರಣೆಯನ್ನ ಆಂಡ್ರಾಯ್ಡಗಳಲ್ಲಿ ಹಾಕಿ ಸಂಭ್ರಮಿಸುವ ನಾವು ಅಲೆಮಾರಿಗಳ,ಬುಡಕಟ್ಟು ಮಕ್ಕಳ ,ಕೊಳೆಗೇರಿ ನಿವಾಸಿ ಮಕ್ಕಳ,ಬಡ ಕೂಲಿ ಕಾರ್ಮಿಕರ ಮಕ್ಕಳ ಕುರಿತು ಯೋಚಿಸುವಂತಾಗಿದೆ.ಮಕ್ಕಾಳ ಭವಿಷ್ಯದಲ್ಲಿ ರಾಷ್ಟ್ರದ ಭವಿಷ್ಯವಿದೆ ಎಂಬುದನ್ನ ಆಡಳಿತವರ್ಗಗಳು ಮರೆಯಬಾರದು.ಪೋಷಕರು ಕೂಡ ಮಕ್ಕಳ ಲಾಲನೆ ಪಾಲನೆಯೂ ತಮ್ಮ ಜವಾಬ್ದಾರಿ ಅದರೊಳಗೆಂದೂ ಕೊರತೆ ಆಗಬಾರದು ಎಂದು ಯೋಚಿಸಲೇ ಬೇಕು.
ಮಕ್ಕಳು ರಾಷ್ಟ್ರ ಕಟ್ಟುವ ಇಟ್ಟಿಗೆಗಳು ಸುಂದರ ದೇಶ ನಿರ್ಮಾಣವಾಗಬೇಕಾದರೆ ಮಕ್ಕಳಿಗೂ ಸುಂದರ ಪರಿಸರ ಕಲ್ಪಿಸಲೇಬೇಕು.ಉಡುಗೊರೆ,ಹಣಕ್ಕಿಂತಲೂ ಮಿಗಿಲಾದುರು ವಾತ್ಸಲ್ಯ!ಎಂಬುದನ್ನ ಸೆಲೆಬ್ರೆಟಿಯೊಬ್ಬ ನಿರ್ವಹಿಸಿದರೆ ಅದರ ಪರಿಣಾಮ ಯಾವರೀತಿಯಾಗಿ ಬೆಳದಿಂಗಳಂತೆ ಹಿತವಾಗಬಲ್ಲದು ಎಂಬುದನ್ನ ನಟ ಪುನಿತ್‌ರಾಜ್‌ಕುಮಾರ್‌ಅವರ ನಿಲುವು ಕನ್ನಡ ನಾಡಿನಲ್ಲಿ ಸಾಬೀತು ಪಡಿಸಿದೆ.ಎಲ್ಲರೂ ಅಧಿಕಾರವಲಯವನ್ನೇ ಆಶ್ರಯಿಸಬೇಕಿಲ್ಲ ಒಬ್ಬರು ಒಂದು ಬದುಕನ್ನ ಕಟ್ಟಲು ಮನಸ್ಸು ಮಾಡಿದರೆ ಈ ನಾಡ ಬಡ ಮಕ್ಕಳ ಭವಿಷ್ಯ ಖಂಡಿತ ಬೆಳಕಾಗಬಲ್ಲದು.ನಮ್ಮ ಕುಟುಂಬಗಳೊಂದಿಗೆ ಇನ್ನೊಂದು ಜೀವವನ್ನು ನೋಡಿಕೊಳ್ಳುವ ಉದಾರತೆ ಜನರ ಹಂಬಲವಾಗಲಿ ಮಕ್ಕಳ ಮುಗ್ದತೆ ಮತ್ತು ಪರಿಶುದ್ಧತೆಗಳೇ ಈ ದೇಶದ ಭವಿಷ್ಯ.ಅದು ಕೇವಲ ಶುಭಾಶಯಕ್ಕೆ ಸೀಮಿತವಾಗದಿರಲಿ ಅಲ್ಲವೇ?