ಇಂದು ಪುನೀತ್ ನುಡಿನಮನ ಕಾರ್ಯಕ್ರಮ

Share

ಬೆಂಗಳೂರು,ನ,೧೬: ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ನಮನ ಸಲ್ಲಿಸಲಿದೆ
ಇಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಜ್ಜಾಗಿದ್ದು ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಆರು ಗಂಟೆಯವರೆಗೂ ನಡೆಯಲಿದೆ
ಪುನೀತ್ ನಮನ ಕಾರ್ಯಕ್ರಮದ ರೂಪು-ರೇಷೆಗಳು ಈಗಾಗಲೇ ಫೈನಲ್ ಆಗಿದೆ. ಡಾ. ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ ಗುರುಕಿರಣ್ ರಾಗ ಸಂಯೋಜಿಸಿದ್ದಾರೆ. ಈ ಗೀತೆಯ ಮೂಲಕವೇ ಪುನೀತ್ ನಮನ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಯಾಂಡಲ್‌ವುಡ್ ಗಾಯಕರಾದ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ತಂಡ ಅಪ್ಪು ಹೆಜ್ಜೆ ಗುರುತನ್ನು ನೆನಪಿಸುವ ಗೀತೆಯನ್ನು ಹಾಡನ್ನು ಗಣ್ಯರ ಮುಂದೆ ಹಾಡಲಿದೆ. ಅಣ್ಣಾವ್ರ ಇಡೀ ಕುಟುಂಬ ಹಾಗೂ ಸ್ಯಾಂಡಲ್‌ವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.
ಅಣ್ಣಾವ್ರ ಹಿರಿ ಮಗ ಶಿವರಾಜ್‌ಕುಮಾರ್, ಎರಡನೇ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಕುಟುಂಬಕ್ಕೆ ಆಹ್ವಾನ ನೀಡಿಲಾಗಿದೆ. ಅಲ್ಲದೆ ಅಣ್ಣಾವ್ರ ಹೆಣ್ಣು ಮಕ್ಕಳು, ಅಳಿಯಂದಿರು, ಮಕ್ಕಳು, ಮರಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗೇ ಇಡೀ ಸ್ಯಾಂಡಲ್‌ವುಡ್‌ಗೂ ಆಹ್ವಾನ ನೀಡಲಾಗಿದ್ದು, ಸ್ಯಾಂಡಲ್‌ವುಡ್‌ನ ಗಣ್ಯರು ಉಪಸ್ಥಿತಿ ಇರಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ಯಶ್, ಕಿಚ್ಚ ಸುದೀಪ್, ಗಣೇಶ್, ರಮೇಶ್ ಅರವಿಂದ್, ಧ್ರುವ ಸರ್ಜಾ, ರಕ್ಷಿತ್ , ರಿಷಬ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಿರಿಯ ನಟರಿಗೆ ತಂತ್ರಜ್ಞರಿಗೆ, ಕಲಾವಿದರಿಗೆ ಆಹ್ವಾನ ನೀಡಲಾಗಿದೆ.
ಜಕೀಯ ಮುಖಂಡರಿಗೆ ಚೇಂಬರ್ ಕಡೆಯಿಂದ ಆಹ್ವಾನ
ಅಪ್ಪು ಅಗಲಿಕೆ ನೋವಿನಲ್ಲಿ ಆಯೋಜಿಸಿರುವ ’ಪುನೀತ್ ನಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಇವರೊಂದಿಗೆ ರಾಜ್ಯದ ಸಚಿವರು ಹಾಗೂ ಶಾಸಕರ ಉಪಸ್ಥಿತಿಯೂ ಇರಲಿದೆ. ಕಾರ್ಯಕ್ರಮದ ಮತ್ತೊಬ್ಬ ಅತಿಥಿಯಾಗಿ ಮೈಸೂರಿನ ಮಹಾರಾಜ ಯದುವೀರ್ ಒಡೆಯರ್ ಕೂಡ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ರಜನಿ, ಚಿರಂಜೀವಿ, ಮೋಹನ್ ಲಾಲ್‌ಗೆ ಆಹ್ವಾನ
ಪುನೀತ್ ರಾಜ್‌ಕುಮಾರ್ ಅಂದ್ರೆ, ಪರಭಾಷೆಯ ನಟರಿಗೂ ಪ್ರೀತಿ. ಹೀಗಾಗಿ ’ಪುನೀತ್ ನಮನ’ ಕಾರ್ಯಕ್ರಮದಲ್ಲಿ ಪರಭಾಷೆಯ ಸ್ಟಾರ್‌ಗಳಿಗೂ ಫಿಲ್ಮ್ ಚೇಂಬರ್ ಆಹ್ವಾನ ನೀಡಿದೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ. ಬಿಗ್ ಬಿ ಅಮಿತಾಬ್ ಬಚ್ಚನ್, ಸೂಪರ್‌ಸ್ಟಾರ್ ರಜನಿಕಾಂತ್, ವಿಶಾಲ್, ವಿಜಯ್ ಸೇತುಪತಿ ಆಗಮಿಸುವ ನಿರೀಕ್ಷೆಯಿದೆ. ಹಾಗೇ ಮೆಗಾಸ್ಟಾರ್ ಚಿರಂಜೀವಿ, ಜ್ಯೂ. ಎನ್ ಟಿ ಆರ್, ಅಲ್ಲು ಅರ್ಜುನ್, ರಾಮ್ ಚರಣ್ ಜೊತೆಗೆ ಮಲಯಾಳಂ ಚಿತ್ರರಂಗದಿಂದ ಮೋಹನ್ ಲಾಲ್ ಮಮ್ಮುಟ್ಟಿಗೆ ಆಹ್ವಾನ ನೀಡಿದೆ.
ಪುನೀತ್ ನಮನ ಕಾರ್ಯಕ್ರಮಕ್ಕೆ ಪುನೀತ್ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಹ್ವಾನವಿಲ್ಲ. ಕೇವಲ ೧೫೦೦ ಪಾಸ್‌ಗಳನ್ನು ವಿವರಿಸಲಾಗಿದೆ. ಎರಡು ಸಾವಿರ ಮಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಒಳಬಿಡುವಂತೆ ಕಟ್ಟು ನಿಟ್ಟಿನ ಸೂಚನೆಯನ್ನು ಫಿಲ್ಮ್ ಚೇಂಬರ್ ನೀಡಿದೆ.

Girl in a jacket
error: Content is protected !!