ಬೆಂಗಳೂರು,ನ,08: ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದ್ದು, ಕನಿಷ್ಠ ದರ 25 ರೂಪಾಯಿಂದ 30 ರೂ.ಗೆ ಏರಿಕೆಯಾಗಿದೆ. ನಂತರ ಪ್ರತಿ ಕಿಲೋಮೀಟರ್ಗೆ 15 ರೂ.ಗೆ ಹೆಚ್ಚಳವಾಗಿದೆ.
ಈ ಮೊದಲು ಪ್ರತಿ ಕಿಲೋಮೀಟರ್ಗೆ 13 ರುಪಾಯಿ ಇತ್ತು.
ಇದನ್ನು 15 ರುಪಾಯಿಗೆ ಏರಿಕೆ ಮಾಡಲಾಗಿದೆ. ಡಿಸೆಂಬರ್ 1 ರಿಂದಲೇ ಹೊಸ ದರ ಅನ್ವಯವಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿದೆ. 20 ಕೆಜಿ ಮೇಲ್ಪಟ್ಟ ಲಗೇಜ್ಗೆ 5 ರೂಪಾಯಿ ಬಾಡಿಗೆ ಹಣ ನಿಗದಿಪಡಿಸಲಾಗಿದೆ.
20 ಕೆಜಿ ಮೇಲ್ಪಟ್ಟ ಲಗೇಜ್ಗೆ 5 ರೂಪಾಯಿ ಬಾಡಿಗೆ ಹಣ ನಿಗದಿಪಡಿಸಲಾಗಿದ್ದು, 50 ಕೆಜಿವರೆಗೆ ಮಾತ್ರ ಆಟೋದಲ್ಲಿ ಲಗೇಜ್ ಸಾಗಿಸಲು ಅವಕಾಶವಿರುತ್ತದೆ. ಪರಿಷ್ಕೃತ ದರ ಹೆಚ್ಚಳದ ಕುರಿತು ಮೀಟರ್ನಲ್ಲಿ ಪ್ರದರ್ಶಿಸಬೇಕು. ಆಟೋ ಮೀಟರ್ಗಳನ್ನ ದರಪರಿಷ್ಕರಣೆಗೆ 90 ದಿನ ಅವಕಾಶ ಇರುತ್ತದೆ. ಅಷ್ಟರೊಳಗೆ ಮೀಟರ್ ಬದಲಾವಣೆ ಮಾಡಬೇಕು ಅಂತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.
ರಾತ್ರಿ ವೇಳೆ ಸಾಮಾನ್ಯ ದರದ ಜೊತೆಗೆ ಅದರ ಅರ್ಧ ಪಟ್ಟು ದರ ಹೆಚ್ಚಳವಾಗಿದೆ. ಈ ದರ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆವರೆಗೆ ಅನ್ವಯವಾಗುತ್ತದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಿಳಿಸಿರುವ ನಿಗದಿತ ದರದ ಪಟ್ಟಿಯನ್ನು ಎಲ್ಲಾ ಆಟೋ ಚಾಲಕರು ಆಟೋದ ಪ್ರಮುಖ ಸ್ಥಳದಲ್ಲಿ ಅಂಟಿಸಬೇಕು ಎಂದು ತಿಳಿಸಿದೆ