ಬೆಂಗಳೂರು ,08: ದಿನಕಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗ್ಯಾಸ್ ಸಿಲಿಂಡರ್ ದರಗಳು ಏರಿಕೆ ಬೆನ್ನಲ್ಲೆ ಇಂದಿನಿಂದ ನಗರದಲ್ಲಿ ಹೋಟೆಲ್‌ಗಳಲ್ಲಿ ಕಾಫಿ, ತಿಂಡಿ, ಊಟಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್ ಅಸೋಸಿಯೇಷನ್ ಮುಂದಾಗಿದೆ. ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಕನಿಷ್ಠ 10% ಹೆಚ್ಚಳ ಮಾಡುವ ಬಗ್ಗೆ ಅಸೋಸಿಯೇಷನ್ ನಿರ್ಧರಿಸಿದೆ. ಈ ಸಂಬಂದ ಕೆಲ ದಿನಗಳಿಂದ ಚಿಂದನೆ ನಡೆಯುತ್ತಿದೆ. ಮಹೋಲೆಟಲ್ ಮಾಲೀಕರ ಸಂಗದ ಜೊತೆ ಸಹಲವಾರು ಸುತ್ತಿನ ಸಬೆಗಳು ನಡೆದಿವೆ. ಇಂದಿನಿಂದ ಹೋಟೆಲ್ಗಳಲ್ಲಿ ಹಂತ ಹಂತವಾಗಿ ದರ ಏರಿಕೆ ಮಾಡಲು ಹೋಟೆಲ್ ಅಸಸೋಸಿಯೇಷನ್ ನಿರ್ಧರಿಸಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಅಬಕಾರಿ ತೆರಿಗೆ ಕಡಿತಗೊಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.35 ರಿಂದ ಶೇ29ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ24 ರಿಂದ 14.ಕ್ಕೆ ಇಳಿಸಿದೆ, ಆದರೆ ಗ್ಯಾಸ್ ದರ ಮತ್ತು ಅಡುಗೆ ಎಣ್ಣೆ ದರಗಳನ್ನು ಕಡಿಮೆ ಮಾಡದ ಹಿನ್ನೆಲೆಯಲ್ಲಿ ಹೋಟೆಲ್ ಗಳು ಗ್ರಾಹಕರಿಗೆ ದೊಡ್ಡ ಹೊಡೆತ ನೀಡಲು ನಿರ್ಧರಿಸಿವೆ. ಹೀಗಾಗಿ ಆಹಾರ ದರವನ್ನು ಹೆಚ್ಚಿಸಿವೆ.