
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ:
*ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ*
ಮಲಗಿರುವ ಸಿಂಹದ ಬಾಯಿಗೆ ಪ್ರಾಣಿ ಬಂದು ಆಹಾರವಾಗುವುದಿಲ್ಲ. ಸಿಂಹ ಹುಲಿ ಆನೆ ಕರಡಿ ಚಿರತೆಯೇ ಆಗಿರಲಿ ಬೇಟೆಯಾಡಿದರೆ ಮಾತ್ರ ಆಹಾರ! ಶ್ರೀಮಂತನೆಂದು ನಿದ್ರಿಸಿದರೆ ? ನಾ ಬಡವ, ನನ್ನ ಹಣೆಬರಹವೇ ಇಷ್ಟೆಂದು ಕುಳಿತರೆ ? ಶ್ರೀಮಂತ ದರಿದ್ರನಾಗುವನು! ಶ್ರೀಮಂತಿಕೆಯ ಮೂಲವನ್ನು ಹುಡುಕಿರಿ! ಅದೇ ಧೈರ್ಯ ಪರಿಶ್ರಮ! ಬಡತನದ ಇತಿಹಾಸವನ್ನು ಕೆಣಕಿರಿ! ಅದೇ ಅಧೈರ್ಯ ಅಜ್ಞಾನ ದಾಸ್ಯ ನಿರ್ಲಕ್ಷ್ಯ ಸೋಮಾರಿತನ! ಮೈ ಕೊಡವಿ ಪುಟಿದೇಳಿ! ಕೀಳರಿಮೆ ತೊರೆಯಿರಿ! ಪ್ರತಿ ಜೀವಿ ಮಾನವನಿಗೂ ತನ್ನದೇ ಸಾಮರ್ಥ್ಯವಿದೆ. ಅದು ಪ್ರಕೃತಿ ಭಗವಂತನ ಕೊಡುಗೆ! ಪುರುಷ ಪ್ರಯತ್ನದಿಂದ ಕಾರ್ಯಸಿದ್ಧಿ! ಮಲಗಿ ಕನಸು ಕಾಣುವುದರಿಂದಲ್ಲ! ನಮ್ಮೊಳಗಿನ ಸಾಮರ್ಥ್ಯವರಿಯೋಣ! ಬಳಸುತ ಪ್ರಗತಿಯ ಹೊಂದೋಣ!!
*ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|*
*ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ||*