
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ:
ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ
ಯೋಗ್ಯತೆಯನ್ನಳೆಯುವಲ್ಲಿ ಬಟ್ಟೆಯ ಪಾತ್ರ ದೊಡ್ಡದು! ಬಟ್ಟೆಯಲ್ಲೇನು? ಎನ್ನುವಂತಿಲ್ಲ. ಪುಟಾಣಿ ಮುದುಕ ಕುಡುಕ ವಂಚಕ ಚಟಗಾರ ಮೋಸಗಾರ ಹುಚ್ಚ ಅಜ್ಞಾನಿ ಬಡವನಿರಲಿ, ವೇಷಭೂಷಣ ಜೋರಿದ್ದರೆ ಸಾಕು, ತಲೆ ಬಾಗಿ, ಕೈಮುಗಿದು, ಕದತೆರೆದು, ಕರೆದೊಯ್ದು ಕೂಡ್ರಿಸಿ, ಆದರದಿ ಆಗದ ಕೆಲಸವನೂ ಮಾಡುವರು! ಅರ್ಹತೆ ಇದ್ದರೂ ಕಳಪೆಯ ವೇಷದ ಜುಬ್ಬಾ ದೋತರ ಪಂಜೆಯ ವ್ಯಕ್ತಿಗೆ, ತರೆದ ಬಾಗಿಲು ಮುಚ್ಚುವುದು! ಕೈ ತಲೆ ಕಾಲ್ಗಳು ತಡೆಯುವವು! ಕಾಯಿ ಈಗಾಗ ಬಾ ಎಂಬ ಮಾತು! ದಿನ ಮಾಸ ಕಾಯ್ದು, ಚಪ್ಪಲಿ ಸವೆಸಿ, ಆಗುವ ಕೆಲಸವಾಗದೇ ಸತ್ತಿತು ಪ್ರಾಣ! ದರಿದ್ರನಂತಿದ್ದ ಶಿವನಿಗೆ ಸಮುದ್ರ ವಿಷನೀಡಿದರೆ, ಪೀತಾಂಬರಧಾರಿ ವಿಷ್ಣುವಿಗೆ ತನ್ನ ಮಗಳು ಲಕ್ಷೀಯನ್ನು ಕೊಟ್ಟನಂತೆ! ಸೊಗಸ ಬಟ್ಟೆಯ ಧರಿಸೋಣ, ಕೆಲಸ ಗಿಟ್ಟಿಸಿ ಗೆಲ್ಲೋಣ!!
*ಕಿಂ ವಾಸಸೇತ್ಯತ್ರ ವಿಚಾರಣೀಯಂ*
*ವಾಸಃ ಪ್ರಧಾನಂ ಖಲುಯೋಗ್ಯತಾಯಾಃ| ಚರ್ಮಾಂಬರಂ ವೀಕ್ಷ್ಯ ವಿಷಂ ಸಮುದ್ರಃ ಪಿತಾಂಬರಂ ವೀಕ್ಷ್ಯ ದದೌ ಸ್ವ ಕನ್ಯಾಂ ||*