ಸೂಟಕೇಸ್ ತಗೊಂಡು ಕುಮಾರಸ್ವಾಮಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ ಜಮೀರ್ ಆರೋಪ

Share

ವಿಜಯಪುರ,ಅ,24: ಕುಮಾರಸ್ವಾಮಿ ಅವರು ಎರಡು ಕ್ಷೇತ್ರದ ಚುನಾವಣೆಯ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಂದ ಸೂಟ್ ಕೇಸ್ ಪಡೆದು ಟಿಕೆಟ್ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ಹೆಚ್.ಡಿ ಕುಮಾರಸ್ವಾಮಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಬಿಜೆಪಿಯಿಂದ ಸೂಟ್ ಕೇಸ್ ಪಡೆದು ಅಭ್ಯರ್ಥಿ ಹಾಕಿದ್ದಾರೆ. ಬಸವಕಲ್ಯಾಣದಲ್ಲಿ 10 ಕೋಟಿ ತೆಗೆದುಕೊಂಡು ಅಭ್ಯರ್ಥಿ ಹಾಕಿದ್ರು. ಸಿಂದಗಿಯಲ್ಲಿ ಬಿಜೆಪಿ ಗೆಲ್ಲಲು ಸಹಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಹೆಚ್.ಡಿ ಕುಮಾರಸ್ವಾಮಿ ಬೆಳೆಸಿದ್ಧು ನಾನು. ನನ್ನ ತಂಟೆಗೆ ಬಂದ್ರೆ ಹೆಚ್.ಡಿ ಕುಮಾರಸ್ವಾಮಿ ಅವರದ್ಧನ್ನು ಬಿಚ್ಚಿಡುತ್ತೇನೆ. ನಾನು ಶಾಸಕ ಆಗಿದ್ದು ಹೆಚ್.ಡಿ ಕುಮಾರಸ್ವಾಮಿಯಿಂದಲ್ಲ. ಹೆಚ್.ಡಿ ದೇವೇಗೌಡರಿಂದ ನಾನು ಶಾಸಕನಾಗಿದ್ದೆ. ಹೆಚ್ ಡಿ ದೇವೇಗೌಡರ ಋಣ ನನ್ನ ಮೇಲೆ ಇದೆ ಎಂದರು.

ಹಣಕ್ಕಾಗಿ ಹೆಚ್.ಡಿ ಕುಮಾರಸ್ವಾಮಿ ಅಲ್ಪ ಸಂಖ್ಯಾತರನ್ನ ಬಲಿ ಕೊಡ್ತಿದ್ದಾರೆ. ಬ್ರದರ್ ಬ್ರದರ್ ಎಂದು ಕತ್ತನ್ನೆ ಕೊಯ್ತಾನೆ. ಅಲ್ಪಸಂಖ್ಯಾತರನ್ನ ಮುಗಿಸಿದ್ದು ಹೆಚ್.ಡಿ ಕುಮಾರಸ್ವಾಮಿ ಎಂದು ಏಕವಚನದಲ್ಲಿಯೇ ಶಾಸಕ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.

Girl in a jacket
error: Content is protected !!