ಹಾನಗಲ್,ಅ,23:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾನಗಲ್ ಗೆ ಏನ್ ಮಾಡಿದ್ದಾರೆ ಎಂದು ನೀಡಿದ್ದ ಹೇಳಿಕೆಗೆ ಬೊಮ್ಮಾಯಿ ಅನುದಾನದ ರಿಪೋರ್ಟ್ ಕಾರ್ಡ್ ಪ್ಲೇ ಬಿಡುಗಡೆಮಾಡಿದರು.
ಹಾನಗಲ್ ತಾಲೂಕಿನ ೩೮೪೩೩ ರೈತರಿಗೆ ತಲಾ ರೂ.೧೦೦೦೦ ನೀಡಲಾಗಿದೆ.
ಕೋವಿಡ್ ಸಂದರ್ಭದಲ್ಲಿ ೧೨೦೦೦ ಕಾರ್ಮಿಕರಿಗೆ ಕಿಟ್ ನೀಡಲಾಗಿದೆ.
ಪ್ರಧಾನಮಂತ್ರಿ ಕಲ್ಯಾಣ ಯೋಜನೆಯಲ್ಲಿ ೬೬,೦೦೦ ಉಚಿತವಾಗಿ ಪಡಿತರ ನೀಡಲಾಗಿದೆ.
ಕಟ್ಟಡ ಕಾರ್ಮಿಕರಿಗೆ ರೂ.೪೨ ಕೋಟಿ ನೀಡಲಾಗಿದೆ
ಹೂವು ಮಾರುವ ೬೪೬೨ ಜನರಿಗೆ ತಾಲಾ ರೂ.೧೦,೦೦೦ ನೀಡಲಾಗಿದೆ,
ಹಣ್ಣು ಮಾರುವ ೧೯೮೦ ಜನರಿಗೆ ತಲಾ ರೂ. ೧೦,೦೦೦ ನೀಡಲಾಗಿದೆ.
ಒಟ್ಟು ರೂ.೧೭.೬೦ ಕೋಟಿ ಹಾನಗಲ್ ತಾಲೂಕಿನ ಜನರಿಗೆ ನೀಡಲಾಗಿದೆ.,
ಮೆಕ್ಕೆಜೋಳ ಬೆಳೆಗಾರರಿಗೆ ರೂ.೧೭.೬೩ ಕೋಟಿ ಅನುದಾನ ನೀಡಲಾಗಿದೆ.
ಎಸ್.ಸಿ ಎಸ್.ಟಿ ಸಮುದಾಯಕ್ಕೆ ರೂ.೨೦ ಕೋಟಿ ಅನುದಾನ ನೀಡಲಾಗಿದೆ.
ಗ್ರಾಮೀಣ ಮತ್ತು ಲೋಕೋಪಯೋಗಿ ಸೇರಿ ಒಟ್ಟು ರೂ.೮೦ ಕೋಟಿ ಈ ವರ್ಷ ಮಂಜೂರು ಮಾಡಲಾಗಿದೆ
ಅಕ್ಕಿ ಆಲೂರು ಮತ್ತು ಹಾನಗಲ್ ಎರಡೂ ಐಟಿಐ ಉನ್ನತೀಕರಣಕ್ಕೆ ರೂ.೬೦ ಕೋಟಿ ನೀಡಲಾಗಿದೆ.
ಗ್ರಾಮೀಣ ಕುಡಿಯುವ ನೀಡಿಗೆ ರೂ.೬೪ ಕೋಟಿ ಮಂಜೂರಾಗಿದೆ ಅದರಲ್ಲಿ ರೂ.೨೬ ಕೋಟಿ ಅನುದಾನ ಬಳಕೆ ಆಗಿದೆ.
ಹಾನಗಲ್ ಕ್ಷೇತ್ರದಲ್ಲಿ ರೂ.೨೦ ಕೋಟಿ ಅನುದಾನವನ್ನು ಶಿವಕುಮಾರ ಉದಾಸಿ ಅವರು ಮಂಜೂರು ಮಾಡಿಸಿದ್ದಾರೆ
ಕಾಯಕದಲ್ಲಿ ನಂಬಿಕೆ
ಭಾರತೀಯ ಜನತಾ ಪಕ್ಷ ಕಾಯಕದಲ್ಲಿ ನಂಬಿಕೆ ಇಟ್ಟಿದೆ. ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ ಅಭಿವೃದ್ಧಿಯಾಗುವುದಿಲ್ಲ. ರಾಜಕಾರಣ ಅಂದರೆ ಜನರನ್ನು ಮರುಳು ಮಾಡುವುದಲ್ಲ. ಕೆಳಮಟ್ಟದಲ್ಲಿ ಭಾಷೆ ಬಳಸಿದರೆ ದೊಡ್ಡವರಾಗುವುದಿಲ್ಲ. ಅಭಿವೃದ್ಧಿ ಒಂದೇ ನಮ್ಮ ಪಕ್ಷದ ಅಜೆಂಡಾ ಎಂದು ಅವರು ಹೇಳಿದರು. ನಮ್ಮ ಜನಕೃತಜ್ಞರು ಕಷ್ಟಕಾಲದಲ್ಲಿ ಕೈಹಿಡಿದ ಸರ್ಕಾರವನ್ನು ಹಾನಗಲ್ ತಾಲೂಕಿನ ಜನ ಕೈ ಬಿಡುವುದಿಲ್ಲ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ಅವರು ಈ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಾನಗಲ್ ಕ್ಷೇತ್ರದ ಜನ ಕೆರೆ ತುಂಬಿಸುವ ಯೋಜನೆಯ ಬೇಡಿಕೆ ಇಟ್ಟಿದ್ದರು. ಈ ಕ್ಷೇತ್ರದ ಅಭಿವೃದ್ಧಿಗಾಗಿ ಒಂದೇ ದಿನದಲ್ಲಿ 625 ಕೋಟಿ ಅನುದಾನವನ್ನು ಬಿಎಸ್ ಯಡಿಯೂರಪ್ಪ ಅವರು ಮಂಜೂರು ಮಾಡಿದರು. ಇದುನ ಭಾರತೀಯ ಜನತಾ ಪಕ್ಷ ಅಭಿವೃದ್ಧಿಗೆ ನೀಡುವ ಮಹತ್ವ ಎಂದು ಬೊಮ್ಮಾಯಿ ಹೇಳಿದರು.