
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ:
ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಂ
ವಿದ್ಯಾರ್ಥಿಯು ಸುಖವನ್ನು ತ್ಯಜಿಸಬೇಕು. ಆರೋಗ್ಯವನ್ನು ರಕ್ಷಿಸಿಕೊಂಡು ತಾಯಿ ತಂದೆ ಗುರುಹಿರಿಯರಿಗೆ ದೈವಪ್ರಕೃತಿಗಳಿಗೆ ವಿನಮ್ರವಾಗಿದ್ದು ಪಂಚೇಂದ್ರಿಯ ಸುಖಗಳಿಂದ ದೂರವಿರಬೇಕು.ಕಣ್ಣಿಗೆ ಚಿತ್ರೋದ್ಯಾನಮಾಲ್! ನಾಲಿಗೆಗೆ ಪಬ್ಬಾರ್ದರ್ಶಿನಿ ತಿಂಡಿ ತೀರ್ಥ! ಕಿವಿಗೆ ಮೊಬೈಲ್ ಕುಣಿಕೆ! ಮೂಗಿಗೆ ಅತ್ತರ್! ಚರ್ಮಕೆ ಸಂಗಾತಿ! ಎಂದರೆ ವಿದ್ಯೆ ಎಲ್ಲಿ? ಹರಟೆ ರುಚಿ ಅತಿನಿದ್ರಾಲಸ್ಯ ತೊರೆದು ತಪಸ್ವಿಯಂತೆ ಏಕಾಗ್ರತೆಯಿಂದ ಕಠಿಣ ಅಧ್ಯಯನ ಮಾಡಿದರೆ ಮಾತ್ರ ವಿದ್ಯೆ. ಸುಖಾರ್ಥಿಗೆ ವಿದ್ಯೆ ಇಲ್ಲ.ಸುಖವೇ ಬೇಕೆಂದರೆ ವಿದ್ಯೆಯನ್ನು ಕೈಬಿಡಬೇಕಷ್ಟೇ! ಸುಖವನ್ನು ಬದಿಗಿಟ್ಟು ವಿದ್ಯೆ ಗಳಿಸೋಣ!!
*ಸುಖಾರ್ಥೀ ಚೇತ್ ತ್ಯಜೇತ್ ವಿದ್ಯಾಂ*
*ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಂ|*
*ಸುಖಾರ್ಥಿನಃ ಕುತೋವಿದ್ಯಾ*
*ವಿದ್ಯಾರ್ಥಿನಃ ಕುತಃ ಸುಖಮ್||*