ಹಾನಗಲ್,ಅ,21:ರಮೇಶ್ ಕುಮಾರ್ ನ ಜೈಲಿಗೆ ಕಳಿಸುವೆ ಎನ್ನುವ ಸುಧಾಕರ್ ಹೇಳಿಕೆ ಬಗ್ಗೆ ತೀವ್ರವಾಗಿ ತರಾಟಗೆ ತಗೆದುಕೊಂಡ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದುಡ್ಡಿನ ಅಧಿಕಾರದ ಮದ ಇಂಥಹ ದುರಹಂಕಾರದ ವ್ಯಕ್ತಿಗಳಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದರು.
ಉಪಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು,ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. ೨೦೨೩ ಕ್ಕೆ ಮನೆಗೆ ಹೋಗ್ತಾರೆ. ಆಗ ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ. ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದುಎಂದು ಕಿಡಿಕಾರಿದರು
ಯಾವಾಗ ಚರ್ಚಿಸಲು ವಿಷಯಗಳು ಇಲ್ಲವೋ ಆಗ ಅವಹೇಳನಕಾರಿ ಮಾತುಗಳು ಬರುತ್ತವೆ ನಳೀನ್ ಕುಮಾರ್ ಕಟೀಲ್ ಜೋಕರ್ ಮಟ್ಟದವರು. ಅವರಿಗೆ ತಲೆ ಕೆಟ್ಟಿದೆ ಎಂದು ಕಾಣುತ್ತದೆ. ಅವರು ಪ್ರಬುದ್ದ ರಾಜಕಾರಣಿ ಅಲ್ಲ. ಎಂದರು.
ಸಿಎಂ ಇಬ್ರಾಹಿಂ ಒಬ್ಬ ವಿಧಾನ ಪರಿಷತ್ ಸದಸ್ಯರು. ಅವರ ಬಗ್ಗೆ ಮಾತನಾಡೋದಿಲ್ಲ ಎಂದ ಅವರು,ಪಂಚಮಸಾಲಿ ಸಮುದಾಯದವರಿಗೆ ಮೀಸಲಾತಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ತಕ್ಷಣ ಮೀಸಲಾತಿ ಸೌಲಭ್ಯ ಒದಗಿಸುವುದಾಗಿ ನಾಯಕರು ಹೇಳಿದ್ದರು.
ವಾಲ್ಮೀಕಿ ಸಮುದಾಯಕ್ಕೂ ಬಿಜೆಪಿ ಆಶ್ವಾಸನೆ ಕೊಟ್ಟಿದೆ. ಅದೆಲ್ಲವನ್ನೂ ಈಗ ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ
ಪಂಚಮಸಾಲಿ ಸಮಯದಾಯ ಬಿಜೆಪಿಗೆ ಪಾಠ ಕಲಿಸಲಿ
ಯಾವುದೇ ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಆದರೆ ಜನರ ಆಕ್ರೋಶ ಏನು ಎನ್ನುವುದು ಗೊತ್ತಾಗತ್ತೆ..
ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. ೨೦೨೩ ಕ್ಕೆ ಮನೆಗೆ ಹೋಗ್ತಾರೆ. ಆಗ ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ. ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದು
ಆರ್ ಎಸ್ ಎಸ್ ನ್ನು ನಾನು ಟೀಕಿಸುವುದು ಅವರ ನಡವಳಿಕೆಗೆ. ಪೊಲೀಸರು ಹೋಗಿ ಕೇಸರಿ ಶಾಲು ಹಾಕಿಕೊಂಡರು. ಪೊಲೀಸರಿಗೆ ಸಮವಸ್ತ್ರ ಇರುವುದೇಕೆ?
ಪೊಲಿಸರು ಕೇಸರಿ ಶಾಲು ಹಾಕಿಕೊಂಡಿದ್ದು ಪೂರ್ವ ನಿಯೋಜಿತ. ಎಲ್ಲರೂ ಒಂದೇ ಅಂಗಡಿಯಲ್ಲಿ ಖರೀದಿ ಮಾಡಿದ್ದರೇ ? ಇವರು ಕೊಟ್ಟಿದ್ದಾರೆ, ಅವರು ಹಾಕಿಕೊಂಡಿದ್ದಾರೆ.
ಕರ್ನಾಟಕದ ಬಿಜೆಪಿಗೆ ಧಂ ಇಲ್ಲ. ಅನುದಾನವನ್ನು ನಾವು ದೆಹಲಿಗೆ ಹೋಗಿ ಭಿಕ್ಷುಕರ ತರಹ ಕೇಳಬೇಕಾ?
ಧಂ ಇದ್ದಿದ್ರೆ ಪ್ರಧಾನಿ ಕಚೇರಿ ಮುಂದೆ ೨೫ ಸಂಸದರು ಹೋಗಿ ನಿಂತು ಅನುದಾನ ವಸೂಲಿ ಮಾಡಬೇಕಿತ್ತು.
ಜನರು ಸರ್ಕಾರದ ವಿರುದ್ಧ ತಿರುಗಿ ಬೀಳದೇ ಹೋದರೆ ಹೀಗೆಯೇ ಆಗೋದು. ಬೆಲೆ ಏರಿಕೆಯನ್ನು ಜನ ಸಹಿಸಿಕೊಂಡಿದ್ದರೆ ಅವರು ಏನು ತಿಳಿದುಕೊಳ್ತಾರೆ? ಜನ ಇವತ್ತು ಬಹಳ ಕಷ್ಟದಲ್ಲಿ ಇದ್ದಾರೆ. ಬೆಲೆ ಏರಿಕೆ ಕೂಡ ಉಪ ಚುನಾವಣೆಯಲ್ಲಿ ಒಂದು ಅಂಶ ಎಂದರು
ಜನ ಸರ್ಕಾರದ ವಿರುದ್ಧ ತಿರುಗಿಬೀಳಬೇಕು. ಎಲ್ಲವನ್ನ ಸಹಿಸಿಕೊಂಡ್ರೆ ಹೇಗೆ. ಅದನ್ನ ಅವರು ಎನ್ ಕ್ಯಾಶ್ ಮಾಡಿಕೊಳ್ತಾರೆ. ಜನ ಇವತ್ತು ಕಷ್ಟದಲ್ಲಿದ್ದಾರೆ. ಹೀಗಾಗಿ ಜನರೇ ಇದರ ಬಗ್ಗೆ ಧ್ವನಿ ಎತ್ತಬೇಕು.
ಜೆಡಿಎಸ್ ಏನೇ ಮಾಡಿದರೂ ಕೂಡ ಕೊನೆಗೆ ಬಿಜೆಪಿ ಜೊತೆ ಸೇರಿಕೊಳ್ಳುತ್ತಾರೆ.ಜೆಡಿಎಸ್ ನವರಿಗೆ ಯಾವುದೇ ಸಿದ್ದಾಂತವಿಲ್ಲ. ಅಲ್ಪ ಸಂಖ್ಯಾತರು ಬುದ್ದಿವಂತರಿದ್ದಾರೆ ಈಗಲೂ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು
ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ಮಾಡಿದ ಮೇಲೂ ಸೆಕ್ಯುಲರ್ ಆಗ್ತಾರಾ ಜೆಡಿಎಸ್ ನವರು? ಅವರಿಗೆ ಅಲ್ಪ ಸಂಖ್ಯಾತರು ಏಕೆ ಮತ ನೀಡುತ್ತಾರೆ.
ಜೆಡಿಎಸ್ ಸೆಕ್ಯುಲರ್ ಪಾರ್ಟಿ ಅಲ್ಲ.ಇಷ್ಟು ಮಾತ್ರ ಹೇಳ್ತಿನಿ. ಪ್ರಾದೇಶಿಕ ಪಕ್ಷ ನಿಜ: ಆದ್ರೆ ಜಾತ್ಯಾತೀತ ಪಕ್ಷ ಅಲ್ಲ. ನಡವಳಿಕೆಯಲ್ಲಿ ಜಾತ್ಯಾತೀತ ಅಲ್ಲ, ಕೋಮುವಾದಿ. ಆಚಾರದಲ್ಲಿ ಜೆಡಿಎಸ್ ಕೋಮುವಾದಿ ಪಕ್ಷ.
ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಸುಲಭವಲ್ಲ. ಆದರೆ, ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ.
ಕೇಸರಿ ಕಂಡರೆ ಆರ್ ಎಸ್ ಎಸ್ ಕಂಡರೆ ನನಗೆ ಭಯ ಇಲ್ಲ. ಆದರೆ ಶಾಂತಿ ಕದಡಿ ಸಮಾಜ ಒಡೆಯುತ್ತಾರೆ ಎನ್ನುವ ಭಯ ನನಗೆ ಅಷ್ಟೇ. ಸಮಾಜದ ಬಗ್ಗೆ ಕಾಳಜಿ ಅಷ್ಟೇ ಎಂದರು
ಸಲೀಂ, ಉಗ್ರಪ್ಪ ಅವರ ಮಾತು ಬಿಡಿ. ಯತ್ನಾಳ್ ಸರ್ಕಾರದ ಬಗ್ಗೆಯೇ ಮಾತನಾಡಿದ್ರು. ಅವರ ಮಾತು ಸರ್ಕಾರದ ಮೇಲೆ, ಆಡಳಿತದ ಮೇಲೆ ಪರಿಣಾಮ ಬೀರಲ್ವಾ?. ಉಗ್ರಪ್ಪ ಮಾತನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ.
ಸಲೀಂ, ಉಗ್ರಪ್ಪ ಮಾತನ್ನು ನಾನು ಕೇಳಿಲ್ಲ. ಬಸವರಾಜ ಬೊಮ್ಮಾಯಿ ಅವರು ಮೊದಳು ಯತ್ನಾಳ್ ಹೇಳಿಕೆ ಬಗ್ಗೆ ಉತ್ತರ ಕೊಡಲಿ. ಹಿಂದೆ ಅನಂತ್ ಕುಮಾರ್, ಯಡಿಯೂರಪ್ಪ ಮಾತಾಡಿದ್ರಲ್ಲ ಅದಕ್ಕೆ ಉತ್ತರ ಕೊಡಲಿ.
ಬಿಜೆಪಿಯವರು ಹೇಡಿಗಳ ತರಹ ವರ್ತಿಸುತ್ತಾರೆ. ನನಗೆ ಗೊತ್ತಿರುವ ಮಟ್ಟಿಗೆ ಬಿಜೆಪಿಯವರು ಎರಡೂ ಕ್ಷೇತ್ರದಲ್ಲಿ ಹಣ ಹೊಳೆ ಹರಿಸ್ತಿದ್ದಾರೆ ಚುನಾವಣೆಯಲ್ಲಿ. ಒಂದು ಓಟಿಗೆ ೨೦೦೦ ಕೊಡ್ತಿದ್ದಾರೆ ಅಂತ ಸುದ್ದಿ ಇದೆ.
ಏನು ಕೆಲಸ ಮಾಡಿದಾರೆ ಅಂತ ಬಿಜೆಪಿಯವರು ಜನರ ಮುಂದೆ ನಿಂತು ಮತ ಕೇಳ್ತಾರೆ? ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಜನ ಯಾಕೆ ಓಟು ಹಾಕ್ತಾರೆ ಇವರಿಗೆ ಇದೆಯಾ ಎಂದು ಪ್ರಶ್ನಿಸಿದರು.