ರುದ್ರಾಕ್ಷಿ

Share

ಶ್ರೀ ಆರೂಢ ಭಾರತೀ ಸ್ವಾಮೀಜಿ

                          ಸಿದ್ಧಸೂಕ್ತಿ :
                             ರುದ್ರಾಕ್ಷಿ
ರುದ್ರ=ಶಿವ. ರುದ್ರಾಕ್ಷಿ ಶಿವನ ಕಣ್ಣು. ರುದ್ರಾಕ್ಷಿ ಗಿಡದ ಬೀಜ. ಬಹುಕಾಲ ಕೆಡದ ಬಾಳಿಕೆಯ ಪವಿತ್ರ ಮಂಗಳಕರ ಸಾಧನ.ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಶಿವನ ಕಣ್ಣೀರು ಭೂಮಿಗೆ ಬಿದ್ದು ವೃಕ್ಷ – ಬೀಜವಾಯಿತೆಂಬ ನಂಬಿಕೆ. ಸಂತ ಸಾಧಕ ಯೋಗಿ ಭಕ್ತ ಸ್ತ್ರೀ ಪುರುಷ ವಯೋಭೇದವಿಲ್ಲದೇ ಕೈ ಕೊರಳು ತಲೆ ಭಾಗಗಳಲ್ಲಿ ಧರಿಸುವ ಮಣಿ. ಶಿವಪಂಚಾಕ್ಷರಿ, ಮೃತ್ಯುಂಜಯ ಇತ್ಯಾದಿ ಮಂತ್ರ ಜಪಿಸಲು ಬಳಸುವ ನೂರೆಂಟು ರುದ್ರಾಕ್ಷಿಗಳ ವರ ಮಾಲೆ! ಪ್ರತಿ ಮಂತ್ರದ ಬಳಿಕ ರುದ್ರಾಕ್ಷಿಯ ಸರಿಸುವುದರಿಂದ ಕೈ ಬೆರಳುಗಳಿಗೆ ಉತ್ತಮ ವ್ಯಾಯಾಮ! ನರ ನಾಡಿಗಳಿಗೆ ಸುಗಮ ರಕ್ತ ಸಂಚಾರ! ನರದೌರ್ಬಲ್ಯ – ಪಾರ್ಶ್ವವಾಯು ಪೀಡಿತರಿಗೆ ರುದ್ರಾಕ್ಷಿ ಜಪ ರಾಮಬಾಣ! ಮನಶ್ಶಾಂತಿ – ಶಕ್ತಿ ವರ್ಧಕ ಜ್ವಾಲಾಮುಖಿ! ರುದ್ರಾಕ್ಷಿ ಧಾರಣೆ ಘನತೆ ಗಾಂಭೀರ್ಯ ಗೌರವ ಪಾವಿತ್ರ್ಯಗಳ ಪ್ರತೀಕ! ಪಾಪಾಪರಾಧದಿಂದ ದೂರಿಟ್ಟು ಪಾವಿತ್ರ್ಯ ರಕ್ಷಿಸಿ ವೃದ್ಧಿಸುವ ರುದ್ರಾಕ್ಷಿ ಭದ್ರ ರಕ್ಷಾಕವಚ! ಮಂತ್ರ ಜಪ ನಾಮ ಸ್ಮರಣೆಯಲಿ ಮುಳುಗಿಸಿ ಪಾಪ ಕೊಳೆ ತೊಳೆವ ಶಿವನ ಪನ್ನೀರು! ಕಂದು ಕಪ್ಪು ಬಿಳುಪಿನ, ಏಕಮುಖ ದ್ವಿಮುಖ ಹದಿನಾಲ್ಕು ಮುಖ ಅನೇಕ ವಿಧ. ಪಂಚಮುಖ ಸಾಮಾನ್ಯ. ಏಕಮುಖಾದಿ ವಿರಳ, ಲಕ್ಷ ಲಕ್ಷದ ಮೌಲ್ಯ! ದಪ್ಪ ಮಧ್ಯಮ ಸಣ್ಣ ಅತಿಸಣ್ಣ ಗಾತ್ರ ಅನೇಕ! ಹಿಮಾಲಯ ಹಿಮಾಚಲ ನೇಪಾಳ ಭೂಮಿಯಲಿ ಸಮೃದ್ಧ!!

Girl in a jacket
error: Content is protected !!