ಸಿಬಿಐ ತನಿಖಾ ಸಂಸ್ಥೆ ಹುಟ್ಟಿಗೆ ಕಾರಣರಾದ ಲಾಲ್ ಬಹಾದ್ದೂರು ಶಾಸ್ತ್ರಿ

Share

 

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು  ದೇಶದ ಶಾಂತಿ ಸುವ್ಯವಸ್ಥೆ ಹಾಗೂ ಶಕ್ತಿ ಶಾಲಿ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಅವರು ತಗೆದು ಕೊಂಡ ಹಲವಾರು ಯೋಜನೆಗಳ ಕುರಿತು ಸಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಸಿಬಿಐ ಸಂಸ್ಥೆ ಹುಟ್ಟಿಗೆ ಕಾರಣರಾದ ಲಾಲ್ ಬಹಾದ್ದೂರ್ ಶಾಸ್ತ್ರಿ

ಬರಹ; ದಿನೇಶ್ ಕಲ್ಲಳ್ಳಿ

ಬಡತನದಲ್ಲಿಯೇ ಹುಟ್ಟಿ ಬಡತನದಲ್ಲಿಯೇ ಬೆಳೆದು ಬಡತನದಲ್ಲಿಯೇ ಮರಣ ಹೊಂದಿದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ .. ಪ್ರಧಾನಿಯಾಗಿ ಶಾಸ್ತ್ರೀಜಿ ಇಟ್ಟ ದಿಟ್ಟ ಹೆಜ್ಜೆಗಳು -ದೇಶದಲ್ಲಿ ಭ್ರಷ್ಟಾಚಾರದ ನಿರ್ಮೂಲನೆಗಾಗಿ ಮೊಟ್ಟಮೊದಲ ಬಾರಿಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿ.ಬಿ.ಐ) ಪ್ರಾರಂಭಿಸಿದ ಕೀರ್ತಿ ಶಾಸ್ತ್ರೀಜಿಯವರಿಗೆ ಸಲ್ಲಬೇಕು.ಆ ಕಾಲದಲ್ಲಿ ಗೃಹ ಖಾತೆಯ ಅಧೀನದಲ್ಲಿದ್ದ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಸರಕಾರಿ ನೌಕರರ ಮೇಲಿನ ದೂರುಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಿತ್ತು. ಶಾಸ್ತ್ರೀಜಿ ಅದರ ವ್ಯಾಪ್ತಿಯನ್ನು ವಿಸ್ತರಿಸಿ ಕೇಂದ್ರ ಸರಕಾರದ ಹಗರಣಗಳನ್ನು ಬಯಲಿಗೆಳೆಯಬಲ್ಲ ಶಕ್ತಿಶಾಲಿ ಸಂಸ್ಥೆಯಾಗಿ ಸಿಬಿಐ ಅನ್ನು ಹುಟ್ಟುಹಾಕಿದರು.

ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದರು. ದೇಶದ ರೈತರ ನೆರವಿಗೆ ನಿಂತು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಮಾಡಿದರು. ಲೋಕಸೇವಾ ಆಯೋಗದ ಹುದ್ದೆಗಳಿಗೆ ರಾಜ್ಯವಾರು ಖೋಟಾ ನಿಗದಿ ಮಾಡಿದರು. ಭಾರತ ಅಣು ಶಕ್ತಿ ಹೊಂದಿದ ರಾಷ್ಟ್ರವಾದರೆ ಯಾರು ನಮ್ಮ ತಂಟೆಗೆ ಬರೋದಿಲ್ಲ ಎಂದು ಭಾರತೀಯ ವಿಜ್ಞಾನಿಗಳಿಗೆ ಶಾಸ್ತ್ರೀಜಿ ಪರಮಾಣು ಸ್ಫೋಟ ಗಳನ್ನು ನಡೆಸುವುದಕ್ಕೆ ಅನುಮತಿ ನೀಡಿದರು. ಕೂಡಲೇ ಡಾ. ಹೋಮಿ ಜಹಂಗೀರ್ ಭಾಬಾರವರ ನೇತೃತ್ವದಲ್ಲಿ ಪರಮಾಣು ವಿಜ್ಞಾನಿಗಳ ಒಂದು ತಂಡ ಶಾಂತಿಯುತ ಉದ್ದೇಶಕ್ಕಾಗಿ ಪರಮಾಣು ಸ್ಫೋಟ ಗಳ ಅಧ್ಯಯನಕ್ಕೆ ಮುಂದಾಯಿತು. ಅನಂತರದ ವರ್ಷಗಳಲ್ಲಿ ಭಾರತ ಪರಮಾಣು ಶಕ್ತಿ ಹೊಂದಿದ ರಾಷ್ಟ್ರವಾಗಲು ಇದು ಸಹಕಾರಿಯಾಯಿತು..ಜಮ್ಮು ಕಾಶ್ಮೀರಕ್ಕೆ ನೀಡಿರುವಿಶೇಷ ಸ್ಥಾನಮಾನ ದಿಂದ ಭಾರತಕ್ಕೆ ಮುಂದೊಂದು ದಿನ ಬಹುದೊಡ್ಡ ಅಪಾಯ ತಂದೊಡ್ಡಲಿದೆ ಎನ್ನುವುದು ಶಾಸ್ತ್ರೀಜಿಯವರಿಗ ಚೆನ್ನಾಗಿ ಮನವರಿಕೆಯಾಗಿತ್ತು ಆದ್ದರಿಂದಲೇ ಸದರ್-ಎ- ರಿಯಾಸತ್ ಮತ್ತು ವಜೀರ್ ಹುದ್ದೆಗಳನ್ನು ತೆಗೆದು ಅದೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಹುದ್ದೆ ಗಳನ್ನು ಸೃಷ್ಟಿಸಿದರು .. ಇತ್ತೀಚೆಗೆ ಮೋದಿ ಸರಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ವನ್ನು ರದ್ದುಗೊಳಿಸಿತ್ತು..

ಶಾಸ್ತ್ರೀಜಿಯವರು ಕಾಂಗ್ರೆಸ್ ನ ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಕೇಂದ್ರ ರೈಲ್ವೆ ಮಂತ್ರಿಯಾಗಿ, ಉತ್ತರ ಪ್ರದೇಶದ ಸಾರಿಗೆ ಮಂತ್ರಿಯಾಗಿ, ಕೇಂದ್ರದ ಗೃಹ ಮಂತ್ರಿಯಾಗಿ ನಂತರ ಭಾರತದ ಪ್ರಧಾನ ಮಂತ್ರಿಗಳಾಗಿ ಹುದ್ದೆಗಳನ್ನು ಅಲಂಕರಿಸಿದರು. ಕೇಂದ್ರದ ಗೃಹ ಮಂತ್ರಿಗಳಾಗಿದ್ದಾಗ ಅವರಿಗೆ ಸ್ವಂತ ಮನೆಯೂ ಇರಲಿಲ್ಲ ಅದಕ್ಕಾಗಿಯೇ ಎಲ್ಲರೂ ಅವರನ್ನು ಹೋಮ್ ಲೆಸ್ ಹೋಮ್ ಮಿನಿಸ್ಟರ್ ಎಂದೇ ಕರೆಯುತ್ತಿದ್ದರು.

.ಶಾಸ್ತ್ರೀಜಿಯವರು ನೆಹರೂ ಮಂತ್ರಿಮಂಡಲದಲ್ಲಿ ರೈಲ್ವೆ ಸಚಿವರಾಗಿದ್ದ ಸಮಯ ಅದು. ಮದರಾಸಿನಲ್ಲಿ ಭಾರಿ ರೈಲು ದುರಂತವೊಂದು ಸಂಭವಿಸಿತು. 140 ಮಂದಿ ಪ್ರಾಣ ಕಳೆದುಕೊಂಡರು ಸುದ್ದಿ ತಿಳಿದ ತಕ್ಷಣ ಶಾಸ್ತ್ರೀಜಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು ಸತ್ತವರಿಗೆ ಪರಿಹಾರ ನೊಂದವರಿಗೆ ನೆರವನ್ನು ನೀಡಿದರು ಬಳಿಕ ನೇರವಾಗಿ ಸರ್ಕಾರಿ ಕಾರಿನಲ್ಲಿ ತೆರಳಿ ನೆಹರೂರವರನ್ನು ಭೇಟಿ ಮಾಡಿ ಮಂತ್ರಿ ಪದವಿಗೆ ರಾಜಿನಾಮೆ ನೀಡಿದರು.

ಅನಂತರ ಸಾಮಾನ್ಯ ಸಾರಿಗೆ ಬಸ್ ನಲ್ಲಿ ಮನೆ ಸೇರಿದರು ಅದೇ ದಿನ ತಮ್ಮ ಅಧಿಕೃತ ನಿವಾಸವನ್ನು ತೆರವುಗೊಳಿಸಿ ಬಾಡಿಗೆ ಮನೆ ಹಿಡಿದು ಇಡೀ ಸಂಸಾರವನ್ನು ಅಲ್ಲಿಗೆ ಸ್ಥಳಾಂತರಿಸಿದರು ಮಂತ್ರಿ ಹುದ್ದೆಯಲ್ಲಿ ಇದ್ದಾಗ ತಮಗೆ ಬರುತ್ತಿದ್ದ ಸಂಬಳವನ್ನು ಆ ಕ್ಷಣದಿಂದಲೇ ಕಡಿತಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಿದರು “ಲಾಲ್ ಬಹದ್ದೂರ್ ಶಾಸ್ತ್ರಿ” ವ್ಯಕ್ತಿತ್ವಕ್ಕೆ ಕಳಶ ಪ್ರಾಯದಂತಿವೆ.

Girl in a jacket
error: Content is protected !!