ತೀರ್ಥದ ಪ್ರಯೋಜನ

Share

                ಶ್ರೀ ಆರೂಢ ಭಾರತೀ ಸ್ವಾಮೀಜಿ

‌‌‌                   ಸಿದ್ಧಸೂಕ್ತಿ :
                       ತೀರ್ಥದ ಪ್ರಯೋಜನ

ತೀರ್ಥ =ಪವಿತ್ರ, ಪುಣ್ಯಕ್ಷೇತ್ರ, ನದೀ ಕೆರೆ ಕಲ್ಯಾಣಿ, ದೇವರ ತೀರ್ಥ, ಪಾದೋದಕ ಇತ್ಯಾದಿ.ತಾಪ ದುಃಖ ಕಷ್ಟಗಳನ್ನು ದಾಟಿಸುವುದು ತೀರ್ಥ. ಸಂಸಾರ ಸಾಗರ ಮುಳುಗಿಸುವುದು. ಪುಣ್ಯ ಕ್ಷೇತ್ರಗಳ ಕೆರೆ ಕಲ್ಯಾಣಿಗಳ ಸ್ನಾನ ದೇಹ ಕೊಳೆ ತೊಳೆಯುವುದು, ಮನ ಮಾಲಿನ್ಯ ತೆಗೆದು ಭಾವ ಶುದ್ಧಗೊಳಿಪುವುದು. ಕಷ್ಟ ದಾಟಿಸುವುದು. ದೇವರ ತೀರ್ಥ ನಮ್ಮ ಕೊಳೆ ತೊಳೆಯುವ ಸಾಧನ. ಭಗವಂತನ ಕರುಣಾತೀರ್ಥ! ಅಲ್ಲಿ ಆಯುರ್ವೇದಿಕ ಸುಗಂಧ ಪರಿಮಳ ಪಚ್ಚೆ ಕರ್ಪೂರ ತುಳಸಿದಳಗಳ ಪವಿತ್ರ ಮಿಶ್ರಣವಿದೆ. ಅದರಿಂದ ಆರೋಗ್ಯ ವೃದ್ಧಿ! ಭಾವ ಶುದ್ಧಿ! ಸದ್ಗುರುಗಳ ಪಾದ ತೊಳೆದ ನೀರು ಪಾದೋದಕ ತೀರ್ಥ. ಅದನ್ನು ಭಕ್ತಿಪೂರ್ವಕ ಸೇವಿಸುವುದು ಸತ್ಸಂಪ್ರದಾಯ! ಆದರಿದು ವೈಜ್ಞಾನಿಕಕ್ಕೆ ಧಕ್ಕೆ ಬರದಿರಲಿ, ಸಾಂಕೇತಿಕವಾಗಿರಲಿ, ಪಾದ ಮೊದಲೇ ಶುದ್ಧವಾಗಿರಲಿ! ಅದು ಜಾತಿರಹಿತ ಆಚಾರಶುದ್ಧ ತತ್ತ್ವಜ್ಞಾನಿಯದ್ದಾಗಿರಲಿ! ತೀರ್ಥ ಸೇವನೆ ಗುರು ದೇವರಲ್ಲಿನ ಶ್ರದ್ಧೆ ಭಯ ಭಕ್ತಿಗಳ ಪ್ರತೀಕ. ಅಹಂಕಾರ ದಮನಗೊಳಿಸಿ ವಿನೀತರಾಗಿಸುವ ಉಪಾಯ. ಕುಹಕಿಗಳಿಗಿದು ಗೊಡ್ಡು ಅಂಧಶ್ರದ್ಧೆ ಮೂಢಭಕ್ತಿ! ಈ ತೀರ್ಥದಲ್ಲೇನಿಹುದು? ಎನ್ನುವ ವಿಚಾರ ಶೂನ್ಯರು ಸಾರಾಯಿ ತೀರ್ಥವೆಂದು ಕಂಠದವರೆಗೆ ಕುಡಿದು ಉರುಳುವರು! ಹಣ ಆರೋಗ್ಯ ನಷ್ಟ! ಮಾನ ಸಂಸಾರ ಭಂಗ! ತೀರ್ಥ ಪಾದೋದಕ ತೆಗಳುವ ಆಧುನಿಕ ಶಿಕ್ಷಿತ ವಿಕೃತ ರಸಿಕರು ಬಾಯಿ ಮತ್ತೊಂದರ ಜೊಲ್ಲು ಹೊಲಸನ್ನು ನಾಲಿಗೆ ಉದ್ದುದ್ದ ಚಾಚಿ ಲಜ್ಜೆಗೆಟ್ಟು ನೆಕ್ಕುವರು!!

Girl in a jacket
error: Content is protected !!