ಆಲಮಟ್ಟಿ: ಎಲ್ಲಾ ೨೬ ಗೇಟ್ ಗಳ ಮೂಲಕ ನೀರು ಹೊರಕ್ಕೆ

Share

ಆಲಮಟ್ಟಿ,ಸೆ,15:ಆಲಮಟ್ಟಿ ಜಲಾಶಯದ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮುಂಜಾಗ್ರತೆಯ ಕ್ರಮವಾಗಿ ಜಲಾಶಯದ ಎಲ್ಲಾ ೨೬ ಗೇಟ್ ಗಳ ಮೂಲಕ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ.
ಗೇಟ್ ಗಳ ಮೂಲಕ ೮೦,೦೦೦ ಕ್ಯುಸೆಕ್ ಹಾಗೂ ಕೆಪಿಸಿಎಲ್ ಮೂಲಕ ೪೦,೦೦೦ ಕ್ಯುಸೆಕ್ ಸೇರಿ ಒಟ್ಟಾರೇ ೧,೨೦,೦೦೦ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.
ಏಕಾಏಕಿ ಈ ಪ್ರವಾಹ ಉಂಟಾಗಿದ್ದು, ತಾತ್ಕಾಲಿಕವಾಗಿ ಒಂದೆರಡು ದಿನಗಳಲ್ಲಿ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿವೆ.
ಸದ್ಯ ಜಲಾಶಯದ ಒಳಹರಿವು ೮೯,೦೦೦ ಕ್ಯುಸೆಕ್ ಇದ್ದು, ಜಲಾಶಯದ ಮಟ್ಟ ೫೧೯.೫೦ ಮೀ. ಇದೆ.
ಬುಧವಾರ ಜಲಾಶಯದ ಒಳಹರಿವು ಇನ್ನಷ್ಟು ಹೆಚ್ಚಲಿದೆ .ಕೊಯ್ನಾದಲ್ಲಿ ೧೦.೭ ಸೆಂ.ಮೀ, ನವಜಾದಲ್ಲಿ ೧೩.೯ ಸೆಂ.ಮೀ, ಮಹಾಬಳೇಶ್ವರದಲ್ಲಿ ೧೨.೧ ಸೆಂ.ಮೀ, ರಾಧಾನಗರಿಯಲ್ಲಿ ೧೭.೭ ಸೆಂ.ಮೀ ಮಳೆಯಾಗಿದೆ.
ಬೆಳಿಗ್ಗೆ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು ೬೫,೭೫೦ ಕ್ಯುಸೆಕ್ ಇತ್ತು ಎಂದು ಮೂಲಗಳು ತಿಳಿಸಿವೆ.
ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕವೂ ಗರಿಷ್ಠ ಮಟ್ಟದ ವಿದ್ಯುತ್ ಉತ್ಪಾದಿಸುತ್ತಿದ್ದು, ನಿತ್ಯ ೨೯೦ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲ ದಿನಗಳ ಹಿಂದೆ ಅಬ್ಬರಿಸಿದ್ದ ಕೃಷ್ಣೆಯ ನೀರಿನ ಬಣ್ಣ ಕೆಂಪು ರ‍್ಣವಿತ್ತು. ಆದರೆ ಸದ್ಯ ನೀರಿನ ರ‍್ಣ ಹಾಲ್ನೊರೆ ಬಣ್ಣವಿದ್ದು, ಜಲಾಶಯದ ಎಲ್ಲಾ ೨೬ ಗೇಟ್ ಗಳ ಮೂಲಕ ನೀರು ಬೀಳುವ ದೃಶ್ಯ ರಮಣೀಯವಾಗಿದೆ.

Girl in a jacket
error: Content is protected !!