ಯುಎಸ್ ಒಪನ್ : ದಾಖಲೆ ಬರೆದ ಜೊಕೊವಿಕ್ ಫೈನಲ್ ಗೆ

Share

Reported By : H.D.Savita

ವಾಷಿಂಗ್ಟನ್‌: ಯುಎಸ್ ಓಪನ್ ಟೆನ್ನಿಸ್ ಟೂರ್ನಮೆಂಟ್ ನ ಸೆಮಿಫೈನಲ್ ನಲ್ಲಿ ಗೆಲುವು ಸಾಧಿಸಿದ ವಿಶ್ವದ ನಂಬರ್ 1 ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಫೈನಲ್ ತಲುಪಿದರು. ಸೆಮಿ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಅವರು ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಸೋಲಿಸಿದರು.

ಈ ಗೆಲುವಿನೊಂದಿಗೆ ನೊವಾಕ್ ಜೊಕೊವಿಕ್ ಅವರು ರೋಜರ್ ಫೆಡರರ್ ಅವರ ಅತೀ ಹೆಚ್ಚು ಬಾರಿ ಗ್ರಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ದಾಖಲೆಯನ್ನು ಸರಿಗಟ್ಟಿದ್ರು. ಫೆಡರರ್ ಅವರು 31 ಬಾರಿ ಗ್ರಾಂಡ್ ಸ್ಲ್ಯಾಮ್ ಫೈನಲ್ ತಲುಪಿದ್ದರೆ, ನೊವಾಕ್ ಜೊಕೊವಿಕ್ ಅವರಿಗಿದು 31 ನೇ ಫೈನಲ್.

ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ಜೊಕೊವಿಕ್ 4-6, 6-2, 6-4, 4-6, 6-2 ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಜೊಕೊವಿಕ್ ಒಂಬತ್ತನೇ ಬಾರಿ ಯುಎಸ್ ಓಪನ್ ಫೈನಲ್ ತಲುಪಿದರು.

ಭಾನುವಾರ ಫೈನಲ್ ಪಂದ್ಯ ನಡೆಯಲಿದ್ದು, ರಷ್ಯಾದ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಜೊತೆ ಜೊಕೊವಿಕ್‌ ಸೆಣಸಾಡಲಿದ್ದಾರೆ.

Girl in a jacket
error: Content is protected !!