
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ರಾಮನಿರ್ದಂದು ರಾವಣನೊಬ್ಬನಿರ್ದನಲ!
ಶತ್ರು ಇಲ್ಲದವ ಅಜಾತಶತ್ರು. ಹಾಗೆನ್ನುವೆವು. ಭೂಮಂಡಲದಲ್ಲಿ ಶತ್ರು ಅನ್ಯಾಯ ದೌರ್ಜನ್ಯವಿರದ ಕಾಲವಿಲ್ಲ, ಶತ್ರು ಇಲ್ಲದವರಿಲ್ಲ! ಬಲಿಷ್ಠನಾಗಿದ್ದರೆ ಶತ್ರುವಿನ ಸದ್ದು ಕೇಳದು. ಶತ್ರು ಹುಟ್ಟಲು ಅನ್ಯಾಯವೆಸಗಬೇಕು, ದುರ್ಬಲರಾಗಿರಬೇಕು ಎಂದಿಲ್ಲ. ಅವರವರ ಆಶೆ ಆಕಾಂಕ್ಷೆಗಳನ್ನು ಈಡೇರಿಸದಿದ್ದರಾಯಿತು! ಶಿವನಿಗೆ ಭಸ್ಮಾಸುರ, ರಾಮನಿಗೆ ರಾವಣ, ಭೀಮನಿಗೆ ದುಶ್ಯಾಸನ ಶತ್ರು! ರಾಮ ರಾವಣನ ಸಂಬಂಧಿಯಲ್ಲ, ಆಸ್ತಿ ವಗೈರೆ ದೋಚಿದವನಲ್ಲ, ದ್ರೋಹ ಅನ್ಯಾಯ ಎಸಗಿದವನಲ್ಲ! ತನ್ನ ಪಾಡಿಗೆ ತಾನು ಸೀತೆ ಲಕ್ಮ್ಮಣರೊಂದಿಗೆ ಕಾಡಿನಲ್ಲಿದ್ದ! ತಂತಾನೇ ಅಲ್ಲಿಗೆ ಬಂದ ಶೂರ್ಪಣಖೆ, ಇವರೀರ್ವರ ಶತ್ರುತ್ವಕ್ಕೆ ನಾಂದಿ! ರಾಮ ಮರ್ಯಾದಾ ಪುರುಷೋತ್ತಮ. ಗರ್ಭಿಣಿ ಸೀತೆಯನ್ನು ಕಾಡಿಗೆ ಅಟ್ಟಿದ, ಶೂದ್ರ ಶಂಬೂಕನನ್ನು ಸಂಹರಿಸಿದ ಎಂಬ ಕಾರಣಕ್ಕೆ ರಾಮನ ಎಲ್ಲ ಆದರ್ಶಗಳನ್ನು ಕಡೆಗಣಿಸಲಾಗದು! ರಾವಣನೂ ಸಾಮಾನ್ಯನಲ್ಲ! ಮಹಾ ವಿದ್ವಾಂಸ, ಶ್ರೇಷ್ಠ ಶಿವಭಕ್ತ! ಆದರೇನು? ಸಾಂದರ್ಭಿಕ ನೈಸರ್ಗಿಕ ವ್ಯಾಮೋಹ ಅವಗುಣಗಳು ವ್ಯಕ್ತಿಯನ್ನು ಕೀಳಾಗಿಸುತ್ತವೆ! ಶತ್ರು ಎಲ್ಲಿಂದಲೋ ಬರಲಾರ, ಎಲ್ಲೋ ದೂರ ಇರಲಾರ! ಪರಿಚಿತನೇ ಶತ್ರುವಾಗುವನು. ಸದಾ ಪಕ್ಕದಲ್ಲಿರುವ!
ಧೈರ್ಯವ ತಾಳೋಣ! ಶತ್ರುಗಳೆದುರಿಸಿ ಸಾಗೋಣ!!