Reported By :H.D.Savita
ಟೋಕಿಯೋ : ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಭರ್ಜರಿ ಭೇಟೆ ಮುಂದುವರೆದಿದೆ. ಸೋಮವಾರದ ಆರಂಭದಲ್ಲೇ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಗೆದ್ದು ಅವನಿ ಲೆಕೇರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ ನಂತರದಲ್ಲಿ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವಿಭಾಗದಲ್ಲಿ ಯೋಗೇಶ್ ಕಥುನಿಯಾ ಬೆಳ್ಳೆ ಪದಕಕ್ಕೆ ಮುತ್ತಿಕ್ಕಿದರು.
ಸದ್ಯ ಜಾವೆಲಿನ್ ಥ್ರೋ ಸ್ಫರ್ಧೆಯಲ್ಲಿ ದೇವೇಂದ್ರ ಜಜರಿಯಾ ಮತ್ತು ಸುಂದರ್ ಸಿಂಗ್ ಗುರ್ಜರ್ ಫೈನಲ್ನಲ್ಲಿ ಗೆದ್ದು ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಭಾರತದ ಪದಕಗಳ ಪಟ್ಟಿ
ಭವೀನಾ ಪಟೇಲ್ – ಟೇಬಲ್ ಟೆನ್ನಿಸ್ – ಬೆಳ್ಳಿ
ಅವನಿ ಲೆಕೇರಾ – ಶೂಟಿಂಗ್ – ಚಿನ್ನ
ನಿಶಾದ್ ಕುಮಾರ್ – ಹೈಜಂಪ್ – ಬೆಳ್ಳಿ
ವಿನೋದ್ ಕುಮಾರ್ – ಡಿಸ್ಕಸ್ ಥ್ರೋ- ಕಂಚು
ದೇವೇಂದ್ರ ಝರಿಯಾ -ಜಾವಲೀನ್ ಥ್ರೂ – ಬೆಳ್ಳಿ
ಸುಂದರ್ ಸಿಂಗ್ ಗುರ್ಜರ್ -ಜಾವಲೀನ್ ಥ್ರೋ – ಕಂಚು
ಯೋಗೀಶ್ ಕಥುನಿಯಾ-ಡಿಸ್ಕಸ್ ಥ್ರೋ- ಬೆಳ್ಳಿ