meet
ಬೆಂಗಳೂರು,ಆ,30:ಸಂಕಷ್ಟದಲ್ಲಿರುವ ಕಿವಿ ಕಣ್ಣು ಕಾಲು ಇಲ್ಲದ ವಿಕಲಾಂಗರಿಗೆ ಶ್ರವಣ ಸಾಧನ, ವ್ಹೀಲ್ ಚೇರ್ ಮೊದಲಾದವುಗಳನ್ನು ಉಚಿತವಾಗಿ ವಿತರಿಸುವ ವಿಕಲಾಂಗ ಭಾಗ್ಯ ಯೋಜನೆಯನ್ನು ಸರ್ಕಾರವು ಜಾರಿಗೆ ತರಬೇಕೆಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಆಗ್ರಹಿಸಿದರು.
ಅವರು ಭಾನುವಾರ ಕೆಂಗೇರಿಯಲ್ಲಿ, ವಂಡರಿಂಗ್ ಟು ದಿ ಲೈಟ್ ಫೌಂಡೇಶನ್ ನೀಡಿದ ಶ್ರವಣ ಸಾಧನಗಳನ್ನು ವಿಕಲಾಂಗ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.” ಪಂಚ ಜ್ಞಾನೇಂದ್ರಿಯಗಳಲ್ಲಿ ಕಿವಿಯು ಒಂದಾಗಿದ್ದು, ಅದು ಕೇಳದಿದ್ದಲ್ಲಿ ಬಾಳು ಶೂನ್ಯ ಎನಿಸುತ್ತದೆ. ಶ್ರವಣ ಸಾಧನಗಳನ್ನು ಅಳವಡಿಸಿಕೊಂಡು ಕೇಳಬಹುದಾಗಿದ್ದರೂ ಆರ್ಥಿಕ ಸಂಕಷ್ಟದಲ್ಲಿರುವ ಅನೇಕರಿಗೆ ಇದು ಸಾಧ್ಯವಾಗುವುದಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸದರೀ ಸಂಸ್ಥೆಯು ಹೆಜ್ಜೆ ಇರಿಸಿರುವುದು ಶ್ಲಾಘನೀಯ ” ಎಂದರು. ಶ್ರವಣ ಸಾಧನ ಅಳವಡಿಸಿಕೊಂಡು ಮಾತು ಆಲಿಸಿದ ವಿದ್ಯಾರ್ಥಿಗಳಲ್ಲಿ ಮಂದಹಾಸ ಸೂಸುತ್ತಿದ್ದರೆ, ನೆರವು ನೀಡಿದವರ ಹೃದಯ ಧನ್ಯತೆಯ ಭಾವದಲ್ಲಿ ಮುಳುಗಿತ್ತು! ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಇಂಥ 200 ವಿಕಲಾಂಗ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು 40 ವಿದ್ಯಾರ್ಥಿಗಳಿಗೆ ಶ್ರವಣ ಸಾಧನ, ವ್ಹೀಲ್ ಚೇರ್ ಮೊದಲಾದ ಉಪಕರಣಗಳನ್ನು ದಾನಿಗಳ ನೆರವಿನಿಂದ ವಿತರಿಸಲು ಸಂಸ್ಥೆಯು ಮುಂದಾಗಿದೆ ಎಂದು ಸಂಸ್ಥೆಯ ಮುಂದಾಳು ಪ್ರಶಾಂತ ತರಫ್ದಾರ್ ಹೇಳಿದರು. ಕೆಂಗೇರಿಯ ಪ್ರಾವಿಡಂಟ್ ಸನ್ ವರ್ತ್ ಅಪಾರ್ಟ್ಮೆಂಟ್ ನ ನಿವಾಸಿಗಳು, ವಿದ್ಯಾರ್ಥಿಗಳು ಪೋಷಕರು ಹಾಗೂ ಸಂಸ್ಥೆಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.