ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ: ಭವಿನಾಗೆ ‘ಬೆಳ್ಳಿ’ಹಾರ

Share

Reported By : H.D.Savita

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತಕ್ಕೆ ಚೊಚ್ಚಲ ಪದಕ ದೊರೆತಿದೆ. ಭಾರತದ ಪ್ಯಾರಾ ಟೇಬಲ್‌ ಟೆನಿಸ್‌ ಆಟಗಾರ್ತಿ ಭಾವಿನಾ ಪಟೇಲ್‌ ಅವರು ಬೆಳ್ಳೆ ಪದಕಕ್ಕೆ ಕೊರಳೊಡ್ಡಿದ್ದಾರೆ.

ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 4-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಚಿನ್ನ ಗೆಲ್ಲುವಲ್ಲಿ ಎಡವಿದರು. ಆದರೆ, ಪ್ಯಾರಾಲಿಂಪಿಕ್ಸ್​ನ ಟೇಬಲ್ ಟೆನಿಸ್​ನಲ್ಲಿ ಭಾರತ ಈವರೆಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಫೈನಲ್​ಗೆ ತಲುಪಿ ಪದಕ ಗೆದ್ದಿರುವುದು ಐತಿಹಾಸಿಕ ಸಾಧನೆಯಾಗಿದೆ.

ಇದಕ್ಕೂ ಮುನ್ನ ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾವಿನಾ ಅವರು 2016ರ ರಿಯೋ ಒಲಿಂಪಿಕ್ ಪದಕ ವಿಜೇತೆ ಚೀನಾದ ಮಿಯಾ ಝಂಗ್ ಅವರನ್ನು3-2 ಅಂಕಗಳ ಅಂತರದಿಂದ ಸೋಲಿಸಿ ಫೈನಲ್​ಗೆ ಪ್ರವೇಶಿಸಿದ್ದರು.

Girl in a jacket
error: Content is protected !!