ತುರುವನೂರು ಮಂಜುನಾಥ
ಛಿದ್ರ ಕತಾಸಂಕಲನದ ನಾವೀನ್ಯತೆ ಯ ಸೊಬಗು
ಒಬ್ಬ ಕತೆಗಾರನ ಭಾವನೆಗಳು ನಿರಾಳವಾಗಿ ಬರವಣೆಗಿಳಿದರೆ ಆ ಭಾವಗಳು ಬದುಕಿನ ಅನುಭಾವದ ಸಂಕೇತ ,ಸೂಚ್ಯ ಬದುಕಿನ ಅನಾವರಣಗೊಳ್ಳುತ್ಯವೆ.ಹಾಗೆ ಬರಹಗಾರ ತನ್ನ ಭಾವನೆಗಳನ್ನು ವಿಶ್ಲೇಷಿಸುತ್ತಾ ಜೀವನದಲ್ಲಿ ನಡೆದ ಅನುಭವಿಸಿದ ಹಾಗೂ ನೋಡಿದ ಘಟನೆಗಳನ್ನು ಅನುಸಂಧಾನಗೊಳಿಸಿದಾಗ ಬಹುಶಃ ಅಂತ ಕತೆಗಳು ಯಶಸ್ಸಿನ ಶಿಖರವೇರುತ್ತೇವೆ.
ಹೌದು ಒಬ್ಬ ಬರಹಗಾರನಿಗೆ ಆ ಕಾಲಘಟ್ಟದ ಯುಗಧರ್ಮ ಪ್ರಾಮುಖ್ಯತೆ ಪಡೆದುಕೊಳ್ಳುತ್ತೆದೆಯಾದರೂ,ಕೆಲ ಬರಹಗಾರರು ಯುಗಧರ್ಮವನ್ನು ಮೀರಿ ತನ್ನದೇ ಆದ ಚಿಂತನೆ ಸೊಬಗನ್ನು ಹೊಸ ಲಯದಲ್ಲಿ ಲೀನವಾಗಿಸುತ್ತಾರೆ. ಅದೇ ಬರಹಗಾರನ ಚಾಣುಕ್ಯತನ.ಆಗ ಯಾವುದೇ ‘ ಇಸಂ’ ಗಳಿಗೆ ಒಳಗಾಗಿದೆ ತನ್ನ ಒಳಧರ್ಮದ ಬರಹಗಳಿಗೆ ನ್ಯಾಯ ಒದಗಿಸಬಲ್ಲನು ,ಅದು ಬರಹಗಾರ ನಾಗತಿಹಳ್ಳಿ ಚಂದ್ರಶೇಖರ್ ಅವರ ಎಲ್ಲಾ ಬರಹದಲ್ಲೂ ಕಾಣುವ ತಿರುಳು.ಹಾಗಾಗಿಯೇ ಎಲ್ಲಾ ವರ್ಗದ ಓದುಗರು ಅವರನ್ನು ಇಷ್ಟಪಡುತ್ತಾರೆ.
ಆಗಲೇ ಹೇಳಿದ ಹಾಗೆ ನಾಗತಿಹಳ್ಳಿ ಚಂದ್ರಶೇಖರ್ ಯಾವುದೇ ಯುಗಧರ್ಮಕ್ಕೆ ಕಟ್ಟು ಬೀಳದೆ ತನ್ನದೇ ಆದ ಶೈಲಿಯಲ್ಲಿ ಸಾಹಿತ್ಯವನ್ನು ತೊಡಗಿಸಿಕೊಂಡಿದ್ದಾರೆ.
ಆದುನಿಕ ಮನುಷ್ಯನ ಒಳಮನಸ್ಸನ್ನು ಅರಿತಿರುವ ಅವರು ನವ್ಯೋತ್ತರದ ಆಧುನೀಕತೆಯನ್ನು ತೊಡಗಿಸಿಕೊಂಡಿರುವ ನಾಗತಿಹಳ್ಳಿ ಮನುಷ್ಯನ ಒಳತಿರುಳುಗಳ ಆಂತರ್ಯದ ಲಯವನ್ನು ಗುರುತಿಸಿ ಆ ಮೂಲಕ ತಮ್ಮ ಬರಹವನ್ನು ತೊಡಗಿಸಿಕೊಂಡವರು.
ಹಾಗಾಗಿಯೇ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಎಲ್ಲಾ ಬರಹಗಳಲ್ಲಿ ಹೊಸತನದ ಆನಂದವನ್ನು ಚಿತ್ರಿಸುತ್ತಾರೆ.ಅವರ ಕತೆ,ಕಾದಂಬರಿ ಮತ್ತು ಕವನಗಳಲ್ಲಿ’ ನವೀನತೆ’ ಯೇ ಢಾಳವಾಗಿರುತ್ತದೆ ಹೊಸತನ ಮತ್ತು ನವೀನತೆ ಎಂದು ಹೇಳಿದ ಉದ್ದೇಶ ಆಧುನಿಕ ಖಾಸಗಿತನವನ್ನು ಗ್ರಾಮ್ಯ ಹಾಗೂ ನಗರ ಜೀವನವನ್ನು ಸಮೀಕರಿಸಿ ನೋಡುವುದಿದೆಯಲ್ಲ ಅದು ಬರಹಗಾರನ ಆಂತರ್ಯದ ಏಕತಾನತೆಯ ಸಂವೇದನೆಯಾಗುತ್ತದೆ. ಸಂಪ್ರದಾಯ ಶಿಸ್ತುಗಳನ್ನು ಮೀರಿ ನಿಂತು ನೋಡುವ ಬದುಕನ್ನು ಪಳಗಿಸಿದವರು ನಾಗತಿಹಳ್ಳಿ ಹಾಗಾಗಿಯೇ ನವ್ಯೋತ್ತರ ಬರಹಗಾರರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.
ನಾಗತಿಹಳ್ಳಿ ಅವರ ಕತಾ ಸಂಕಲನ ಛಿದ್ರ ಕೂಡ ಅಂತದ್ದೆ ಸಾಲಿನಲ್ಲಿ ನಿಲ್ಲುತ್ತದೆ.ಈ ಸಂಲನದಲ್ಲಿನ ಏಳು ಕತೆಗಳು ವಿಭಿನ್ನವಾಗಿವೆ.ಒನ್ನೊಂದು ಕತೆಯೂ ವಿಶಿಷ್ಟತೆಯನ್ನು ಪಡೆದುಕೊಳ್ಳುತ್ತವೆ. ಇನ್ನೊಂದು ವಿಶೇಷ ಎಂದರೆ ಭಾರತ ಮತ್ತು ವಿದೇಶಗಳ ನಡುವಿನ ಬದುಕಿನ ವಿಶ್ಲೇಷಣೆ ,ನೈಜತೆಯನ್ನು ಅದರ ಆಂತರ್ಯದ ನೋವುಗಳನ್ನು ಭಾರತಿಯತೆಯ ಪ್ರೀತಿಯನ್ನು ಅವರ ಪ್ರತಿ ಬರಹದಲ್ಲೂ ಕಾಣಬಹುದು.
ಬಹುಶಃ ಕನ್ನಡದ ಬರಹಗಾರರ ಪೈಕಿ ವಿದೇಶಿ ಹಾಗೂ ಭಾರತದ ನೆಲದ ತುಡಿತದ ಬಗ್ಗೆ ಬರೆದವರು ವಿರಳ,ಹಾಗಾಗಿಯೇ ನಾಗತಿಹಳ್ಳಿ ಅವರ ಪ್ರತಿ ಕತೆ,ಕಾದಂಬರಿಯಲ್ಲೂ ಈ ವಿದೇಶಿಗಳ ಸಾಮ್ಯತೆಗಳನ್ನು ಸಾಧ್ಯವಾಗುತ್ತದೆ ಆದ್ದರಿಂದಲೇ ಎಲ್ಲಾ ವರ್ಗದ ಓದುಗರಿಗೂ ಅವರು ಇಷ್ಟವಾಗುತ್ತಾರೆ.
ಹಾಗೆಯೇ ‘ ಪ್ರವಾಸ’ ಕೂಡ ಇವರ ಬರಹಗಳ ಮತ್ತೊಂದು ವಿಶೇಷ ಆ ಮೂಲಕವೇ ಕತೆಗಳ್ಲಿ ಹೇಳುತ್ತಾ ಹೋಗುತ್ತಾರೆ.
‘ ಛಿದ್ರ’ ಕತಾಸಂಕಲನದಲ್ಲಿ ಪ್ರಾರಂಭದ ಕತೆಯೇ ‘ ಯಾತ್ರೆ’ ಈ ಮೂಲಕವೇ ಕತೆ ಸಾಗುತ್ತದೆ ಯಾತ್ರೆಯಲ್ಲಿ ಹೆಣ್ಣಿನ ಒಳಮನಸ್ಸಿನ ತುಡಿತಗಳನ್ನು ತನ್ನ ಸ್ನೇಹಿತನಿಗೆ ತಿಳಿಸಲೆಂದೆ ತಾನಿರುವ ಜರ್ಮನಿ ದೇಶಕ್ಕೆ ಕರೆಸಿಕೊಂಡು ಮೈದುಲಾ ತನ್ನ ಆಧುನಿಕ ಬದುಕಿನ ತೀವ್ರತೆಗಳ ಗಡಿದಾಟಿದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಜರ್ಮನಿಯ ಯುವಕನನ್ನೆ ವಿವಾಹವಾಗಿ ಆತನ ಜೊತೆ ಜೀವಿಸಲಾಗದೆ ಒಂಟಿಯಾಗಿ ಅನುಭವಿಸುವ ಆಕೆ ಭಾರತಕ್ಕೂ ಬಾರದೆ ಅಲ್ಲಿಯೂ ಇರಲಾರದ ಜಿಜ್ಞಾಸೆ ಯಲ್ಲೆ ಕಾಲದೂಕುತ್ತಲೆ ಇರುತ್ತಾಳೆ.
ಇಂತಹ ಎಲ್ಲಾ ಸಮಸ್ಯೆಗಳನ್ನು ತನ್ನ ಸ್ನೇಹಿತನಲ್ಲಿ ಹೇಳಿಕೊಳ್ಳಲೆಂದೆ ಜರ್ಮನಿಗೆ ಕರೆಸಿಕೊಳ್ಳುತ್ತಾಳೆ.ಈ ಕತೆ ಹೊಸ ಜಿಜ್ಞಾಸೆ ಗೆ ಕರೆದೊಯ್ಯುತ್ತದೆ ಅಲ್ಲದೆ ಇದೊಂದು ಹೊಸ ಕಥಾವಸ್ತು ಎಂದು ಹೇಳಬಹುದು, ನಾಗತಿಹಳ್ಳಿ ಮಾಗಿದ ಬರಹಕ್ಕೆ ಈ ಕತೆ ಮೈಲಿಗಲ್ಲು ಎಂದು ಭಾವಿಸಬಹುದು.
ಹಾಗೆಯೇ ‘ ಪೂರ್ವಿ’ ಕತೆಯೂ ಕೂಡ ವಿದೇಶಿ ಕತೆಯೇ ಆಗಿದೆ. ಈ ಕತೆ ನಾಗತಿಹಳ್ಳಿ ಅವರ ಪ್ಯಾರಿಸ್ ಪ್ರಣಯ ಸಿನಿಮಾವನ್ನು ನೆನಪಿಸುತ್ತದೆ.
ಇನ್ನೂ ‘ಗಾಯ’ ‘ಛಿದ್ರ’ ಕತೆಗಳೂ ಕೂಡ ಸಂಕಲನದ ಅತ್ಯುತ್ತಮ ಕತೆಗಳು ಗಾಯ ಹಳ್ಳಿಯ ಬದುಕಿನಲ್ಲಿ ಏನೆಲ್ಲಾ ನಡೆಯುತ್ತವೆ ಅಲ್ಲಿ ಪೊಲೀಸರ ಪಾತ್ರ ಮತ್ತು ಅವರ ಪಾಡು ,ನಗರದಿಂದ ಹಳ್ಳಿಗೆ ತೆರಳುವ ಗ್ರಾಮಸ್ಥರ ಆತಂಕದ ಸ್ಥಿತಿ ನಿಜಕ್ಕೂ ಅತ್ಯಂತ ಹೃದಯಂಗಮಬಾಗಿ ಹೇಳಿದ್ದಾರೆ, ಹಾಗಯೇ ಹಳ್ಳಿಯ ಸ್ಥಿತಿ ಮತ್ತು ಜನರ ಮನಸ್ಥತಿಗಳ ಬಗ್ಗೆಯೇ ಅಷ್ಟೇ ಬಿಂಬಿತವಾಗಿಸಿದ್ದಾರೆ.
‘ಛಿದ್ರ’ ಕತೆಯೂ ಅಷ್ಟೆ ಮಾರ್ಮಿಕವಾಗಿದೆ ನಗರದಲ್ಲಿ ಬದುಕುವ ಮಧ್ಯಮ ವರ್ಗದ ಜನ ನಿವೇಶನ ಕೊಂಡು ಮನೆ ಕಟ್ಟುವ ಕನಸಿನ ಕನವರಿಕೆಗೆ ಉದ್ಯಮಿಗಳು ಮತ್ತು ಸರ್ಕಾರ ಏನೆಲ್ಲಾ ಅವಸ್ಥೆಗಳನ್ನು ಮಾಡುತ್ತವೆ ಎನ್ನೊದಕ್ಕೆ ಇದು ಸಾಕ್ಷಿ.ಭಟ್ಟರ ಪಾತ್ರ ಮತ್ತು ಅವರ ಕುಟುಂಬದ ಸುತ್ತಲಿನ ಆಂತರ್ಯದ ಅನಾವರಗಳು ಪ್ರಸ್ತುತ ನಗರ ಬದುಕಿನ ಜೀವಂತ ಸಾಕ್ಷಿಯಾಗಿವೆ.ಇನ್ನೂ ‘ ನಾಯಿಪಾಡು’ ‘ ನಾಟ್ಯರಾಣಿ ಶಾಂತಲೆ’ ಹಾಗೂ ಸನ್ಯಾಸ ಕೂಡ ಗಮನ ಸೆಳೆಯುತ್ತದೆ ಈ ಮೂರು ಕತೆಗಳು ವಿಭಿನ್ನವಾಗಿ ವೆ ಬದುಕಿನ ಬವಣೆಗಳ ಏಕತಾನತೆಗಳಿಗೆ ಮಾದರಿಯಾಗಿವೆ.
ನಾಗತಿಹಳ್ಳಿ ಅವರ ಈ ಕತಾಸಂಕಲನ ಸಮೃದ್ದ ಬದುಕಿನ ವಿವಿಧ ರೂಪಗಳಿಗೆ ಶಕ್ತಿ ತುಂಬಿದ್ದಾರೆ.
ಒಟ್ಟಾರೆ ಏಳು ಕತೆಗಳಲ್ಲಿಯೂ ಹೊಸತವೇ ಕೂಡಿದೆ,ಇಲ್ಲಿ ಪ್ರಯಾಣದ ಪ್ರಯಾಸ ಮತ್ತು ಪ್ರೀತಿ ವಿದೇಶಿ ,ಭಾರತದ ನಡುವಿನ ವಿಭಿನ್ನ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ತೋರಿಸಿದ್ದಾರೆ. ಹಾಗಾಗಿಯೇ ವಿದೇಶಿಗಳಿಗೆ ಹೋದವರು ಇಲ್ಲಿನ ಮಣ್ಣಿನ ವಾಸನೆ ಮರೆಯದ ಹಿಂದಿರುಗುವ ಆಸಕ್ತಿ ಹೊಂದುತ್ತಾರೆ.ಹುಂಬುತನ ಸಂಪ್ರದಾಯ ಮೀರಿ ಈ ನೆಲದಿಂದ ವಿದೇಶಗಳಿಗೆ ಹೋದವರ ಪಾಡಿನ ಪಡಿಪಾಟಲುಗಳನ್ನು ಎಳೆ ಎಲಕೆಯಾಗಿ ಕತೆಗಳಲ್ಲಿ ಚಿತ್ರಿಸಿದ್ದಾರೆ.ಹಾಗೆಯೇ ಮನಸ್ಸು ಮನಸ್ಸುಗಳ ಮಧ್ಯೆ ಉಂಟಾಗುವ ಘರ್ಷಣೆ, ಪ್ರೀತಿ ವಿಶ್ವಾಸಗಳನ್ನು ಕೂಡ ಅಷ್ಟೇ ಮಾರ್ಮಿಕವಾಗಿ ಬಿಂಬಿಸುತ್ತಾರೆ.ಹಾಗಾಗಿಯೇ ನಾಗತಿಹಳ್ಳಿ ಕತೆಗಳು ಎಲ್ಲಾ ವಕತೆಗಳಿಗಿಂತಲೂ ವಿಭನ್ನವಾಗುತ್ತವೆ