ನವದೆಹಲಿ,ಆ,೧೯: ಅಫ್ಗಾನಿಸ್ತಾನದಲ್ಲಿ ಸಂಘರ್ಷಭರಿತ ಪರಿಸ್ಥಿತಿಯು ಮುಂದುವರಿದಿದೆ. ಅದರ ನಡುವೆಯೇ ಭಾರತದ ರಾಯಭಾರಿ ಮತ್ತು ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಮಂಗಳವಾರ ತೆರವು ಮಾಡಲಾಗಿದೆ. ದೇಶವು ತಾಲಿಬಾನ್ ಸಂಘಟನೆಯ ವಶವಾದ ಬಳಿಕ ಅಫ್ಗಾನಿಸ್ತಾನ ರಾಜಧಾನಿಯಲ್ಲಿ ಭೀತಿ ಮತ್ತು ಅನಿಶ್ಚಿತ ಸ್ಥಿತಿ ಇದೆ. ಅದರ ನಡುವೆಯೇ ಕಾರ್ಯಾಚರಣೆ ನಡೆಸಲಾಗಿದೆ
ಭಾರತೀಯ ವಾಯುಪಡೆಯ ಗ್ಲೋಬ್ಮಾಸ್ಟರ್ ಸಿ-೧೭ ವಿಮಾನವು ಸುಮಾರು ೧೫೦ ಜನರೊಂದಿಗೆ ಗುಜರಾತ್ನ ಜಾಮ್ನಗರಕ್ಕೆ ಮಂಗಳವಾರ ಬೆಳಿಗ್ಗೆ ಬಂದಿಳಿಯಿತು. ಇಂಧನ ಮರಪೂರಣದ ಬಳಿಕ, ಸಂಜೆ ಐದು ಗಂಟೆ ಸುಮಾರಿಗೆ ವಿಮಾನವು ದೆಹಲಿ ಸಮೀಪದ ಹಿಂಡನ್ ವಾಯುನೆಲೆಗೆ ತಲುಪಿತು.ಕಾಬೂಲ್ನಲ್ಲಿ ಪರಿಸ್ಥಿತಿ ಸಂಕೀರ್ಣವಾಗಿದ್ದು, ನಾಗರಿಕ ವಿಮಾನ ಸೇವೆಗಳು ಪುನರಾರಂಭವಾದಾಗ ಅಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರಲಾಗುವುದು ಎಂದು ಅಫ್ಗಾನಿಸ್ತಾನದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಅವರು ಜಾಮ್ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.ಸುರಕ್ಷಿತವಾಗಿ ಮನೆಗೆ ಮರಳಿದ್ದರಿಂದ ಸಂತೋಷವಾಗಿದೆ. ೧೯೨ ಸಿಬ್ಬಂದಿಯನ್ನು ಕರೆತರುವ ಬೃಹತ್ ಕಾರ್ಯಾಚರಣೆ ಇದಾಗಿತ್ತು. ಅಫ್ಗಾನಿಸ್ತಾನದಿಂದ ಕೇವಲ ಮೂರು ದಿನಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದರು.ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಗನ್ ಭಾರತೀಯ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಟಂಡನ್, ಕಾಬೂಲ್ನಲ್ಲಿ ಕ್ಷಿಪ್ರವಾಗಿದ ಬದಲಾದ ಪರಿಸ್ಥಿತಿಯನ್ನು ಗಮನಿಸಿ ತೊಂದರೆಗೀಡಾದ ಅನೇಕ ಭಾರತೀಯರಿಗೆ ರಾಯಭಾರ ಕಚೇರಿ ನೆರವು ಮತ್ತು ಆಶ್ರಯ ನೀಡಿದೆ ಎಂದರು.ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಗನ್ ಭಾರತೀಯ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಟಂಡನ್, ಕಾಬೂಲ್ನಲ್ಲಿ ಕ್ಷಿಪ್ರವಾಗಿ ಬದಲಾದ ಪರಿಸ್ಥಿತಿಯನ್ನು ಗಮನಿಸಿ ತೊಂದರೆಗೀಡಾದ ಅನೇಕ ಭಾರತೀಯರಿಗೆ ರಾಯಭಾರ ಕಚೇರಿ ನೆರವು ಮತ್ತು ಆಶ್ರಯ ನೀಡಿದೆ ಎಂದರು.ನಾವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಏಕೆಂದರೆ ಇನ್ನೂ ಕೆಲವು ಭಾರತೀಯ ನಾಗರಿಕರು ಇದ್ದಾರೆ. ಅದಕ್ಕಾಗಿಯೇ ಏರ್ ಇಂಡಿಯಾ ತನ್ನ ನಾಗರಿಕ ವಿಮಾನ ಯಾನ ಸೇವೆಗಳನ್ನು ಕಾಬೂಲ್ಗೆ ಮುಂದುವರಿಸಲಿದೆ ಎಂದು ಹೇಳಿದರು.
ಅಫ್ಗನ್ನಿಂದ ಭಾರತಕ್ಕೆ ಬಂದಿಳಿದ ೧೫೦ ಮಂದಿ
Share