ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

ಸಿದ್ಧಸೂಕ್ತಿ :
ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ.

ಬಂಧ ಸಂಬಂಧ. ಬಂಧ ಉಳ್ಳವನು/ಳು ಬಂಧು. ತಾಯಿಯಂಥ ಸಂಬಂಧಿ ಯಾರೂ ಇಲ್ಲ. ಅವಳು ಉಪ್ಪಿನಂತೆ. ಉಪ್ಪು ಎಲ್ಲಕ್ಕೂ ಸೈ. ಸೌತೆ, ಕಲ್ಲಂಗಡಿ ಉಪ್ಪು ಬೆರೆಸಿ ತಿಂದು ನೋಡಿ. ಸಿಹಿ ಅಡಿಗೆಗೂ ಒಂದಿಷ್ಟು ಉಪ್ಪು ಬೇಕು! ಉಪ್ಪಿಲ್ಲದ ಅಡಿಗೆ ಉಂಡು ನೋಡಿ! ತಿಳಿಯುವುದು ಉಪ್ಪಿನ ಮಹಿಮೆ! ಸಿಹಿ ಕಹಿ ಖಾರ ಹುಳಿ ವಗರು ರುಚಿಗಿಂತ ಉಪ್ಪೇ ಹಿರಿ ರುಚಿ! ಅಣ್ಣ ಅತ್ತಿಗೆ ಅಳಿಯ ಅತ್ತೆ ಮಾವಾದಿಗರು ಇರಬಹುದು ನೂರಾರು ಜನ ಸಂಬಂಧಿಕರು. ಅವರಾರೂ ತಾಯಿಯ ಸಮಗಟ್ಟಲಾರರು!ಹೊತ್ತು ಹೆತ್ತು ಪೋಷಿಸುವಳು ತಾಯಿ. ತಂದೆ ತೊರೆದರೂ ತಾಯಿ ತೊರೆಯಳು. ತೊರೆದರೆ ಅಪವಾದ! ಹಸು ತನ್ನ ನವಜಾತ ಕರುವ ನೆಕ್ಕುವ ಪರಿಯ ಕಾಣಿ! ಮೂತ್ರ ಶಗಣಿಯ ನೆಕ್ಕಿ ಕುಡಿದು ತಿನ್ನುವುದ ಕಂಡೆ! ಕರುವನು ಪರರಾರೂ ಮುಟ್ಟಲೂ ತಾ ಬಿಡದು! ಭದ್ರಕೋಟೆಯ ತೆರದಿ ರಕ್ಷಣೆಯ ಮಾಡುವುದು. ತಂದೆ ಯಾರೋ ಎಲ್ಲಿಹನೋ ಕರು ತಿಳಿಯದು! ಹಾಲುಣಿಸಿ ಮಲ ಮೂತ್ರ ಸಹಿಸಿದ ಮಾತೆಯನು ವರ್ಣಿಸುವುದೆಂತು? ಮನ ಮಾತು ಮೌನ, ಕಣ್ಣಲ್ಲಿ ನೀರು! ಅಮ್ಮಾ ಎಂಬ ಪ್ರೀತಿಯ ಕೂಗಿಗೆ ಮರೆಯುವಳು ತಾಯಿ ಸಾವಿರದ ನೋವ!
ತಾಯಿಯ ನೆನೆಯೋಣ, ಸೇವೆ ಮಾಡುತ ನಮಿಸೋಣ!!

Girl in a jacket
error: Content is protected !!