ಮಹತ್ತ್ವ ಆಯುರ್ವೇದಿಕ್ ಹೆಲ್ತಿ ಮಿಕ್ಸ್ ಮಾರುಕಟ್ಟೆಗೆ

Share

ಮೈಸೂರು,ಆ,12:ಬೆಂಗಳೂರಿನ ಸೌಖ್ಯ ನ್ಯಾಚುರಲ್ಸ್ ಫುಡ್ ಆ್ಯಂಡ್ ಬೇವರೇಜಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಹತ್ತ್ವ ಆಯುರ್ವೇದಿಕ್ ಹೆಲ್ತಿ ಮಿಕ್ಸ್ ಅನ್ನು ಬುಧವಾರ ಮೈಸೂರಿನ ಸುತ್ತೂರು ಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು “ಸಾವಯವ ಸಿರಿಧಾನ್ಯ, ಮೊಳಕೆ ಕಟ್ಟಿದ ದ್ವಿದಳ ಧಾನ್ಯಗಳು, ಒಣ ಹಣ್ಣುಗಳು, ಖಾದ್ಯ ಬೀಜಗಳು ಹಾಗೂ ಆಯುರ್ವೇದಿಕ್ ಗಿಡಮೂಲಿಕೆಗಳಿಂದ ತಯಾರಿಸಿದ ಆರೋಗ್ಯ ಹಾಗೂ ಶಕ್ತಿವರ್ಧಕ ದ್ರಾವಣ ಇದಾಗಿದ್ದು ಯಾವುದೇ ರಾಸಾಯನಿಕ ಹಾಗೂ ಇತರೇ ಕರಬೆರಕೆ ರಹಿತವಾಗಿದೆ” ಎಂದರು. ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಮಾತನಾಡಿ ” ಇಂದು ಮಾನವನ ಮನಸ್ಸು, ಪ್ರಕೃತಿ, ಆಹಾರ ಎಲ್ಲವೂ ಮಲಿನಗೊಂಡಿವೆ. ಇದರ ಪರಿಣಾಮ ಆರೋಗ್ಯ ಹದಗೆಟ್ಟಿದೆ. ಈಗೀಗ ಆರೋಗ್ಯ ಪ್ರಜ್ಞೆ ಎಲ್ಲರಲ್ಲಿಯೂ ಜಾಗೃತಗೊಳ್ಳುತ್ತಿದೆ. ಇದೀಗ ಸೌಖ್ಯ ನ್ಯಾಚುರಲ್ಸ್ ನವರು ಮಹತ್ತ್ವ ಹೆಸರಿನಡಿಯಲ್ಲಿ ಸಾವಯವ ಕೃಷಿ ಆಧಾರಿತ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವುದು ಇಂದಿನ ಸಾಂದರ್ಭಿಕ ಅಗತ್ಯವಾಗಿದೆ.ಮಹತ್ತ್ವ ಆಯುರ್ವೇದಿಕ್ ಹೆಲ್ತಿ ಮಿಕ್ಸ್ ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಉತ್ತಮ ಶಕ್ತಿವರ್ಧಕವಾಗಿದೆ” ಎಂದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಜಗದೀಶ್, ಏರಿಯಾ ಸೇಲ್ಸ್ ಮ್ಯಾನೇಜರ್ ಜಗದೀಶ್ ಕಲ್ಯಾಣಿ, ವಿತರಕ ಮಂಜುನಾಥ್, ಆರ್ಕಿಟೆಕ್ಟ್ ಜಿ. ಎಲ್. ಸಂತೋಷ್, ಸಿ. ಎಚ್. ಕೃಷ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.

Girl in a jacket
error: Content is protected !!