ಅಮವಾಸ್ಯೆ ಪ್ರಯುಕ್ತ ಕೃಷ್ಣಾತಟದಲ್ಲಿ ಜನವೋ ಜನ..

Share

ಆಲಮಟ್ಟಿ,ಆ,08: ನಾಗರ ಅಮವಾಸ್ಯೆ ಜೊತೆಗೆ ರವಿವಾರವೂ ಆಗಿರುವದರಿಂದ ಪಟ್ಟಣವೂ  ಸುತ್ತಮುತ್ತಲಿನ ಸುಕ್ಷೇತ್ರ ಹಾಗೂ ಕೃಷ್ಣೆಯ ತೀರದಲ್ಲಿ ಎಲ್ಲಿ ನೋಡಿದರೂ ಜನಸ್ತೋಮವೇ ಕಾಣುತ್ತಿತ್ತು.

ನಾಗರ ಅಮವಾಸ್ಯೆಯು ರವಿವಾರ ಆಗಿರುವದರಿಂದ ವಿಜಯಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆಯ ನಾಗರಿಕರು ರವಿವಾರ ನಸುಕಿನ ಜಾವದಿಂದ ಸಂಜೆಯವರೆಗೂ ಆಲಮಟ್ಟಿಯ ಕೃಷ್ಣಾಸೇತುವೆ, ಹಿನ್ನೀರು ಪ್ರದೇಶದಲ್ಲಿರುವ ಚಂದ್ರಮ್ಮಾದೇವಸ್ಥಾನದ ಬಳಿ, ಪಾರ್ವತಿಕಟ್ಟೆ ಹಾಗೂ ಯಲಗೂರ ಬಳಿಯಕೃಷ್ಣಾ ನದಿಯ ದಡದಲ್ಲಿ ಭಕ್ತರ ದಂಡು ಪುಣ್ಯಸ್ನಾನ ಮಾಡಿದರು.
ಪಟ್ಟಣಕ್ಕೆ ಆಗಮಿಸಿದ್ದ ಪ್ರವಾಸಿಗರು ತುಂಬಿ ನಿಂತಿರುವ ಕೃಷ್ಣೆಯ ಜಲನಿಧಿ, ರಾಕ್ ಉದ್ಯಾನ, ಮೊಘಲ್ ಉದ್ಯಾನ, ವಿಜ್ಞಾನ ಪಾರ್ಕ, ರೋಜ್ ಗಾರ್ಡನ, ಇಟಾಲಿಯನ್ ಉದ್ಯಾನ, ಫ್ರೆಂಚ್ ಗಾರ್ಡನ್, ಗೋಪಾಲಕೃಷ್ಣ ಉದ್ಯಾನ, ಲವಕುಶ ಉದ್ಯಾನಗಳನ್ನು ವೀಕ್ಷಿಸಲು ಭಕ್ತರು ಹಾಗೂ ಪ್ರವಾಸಿಗರು ಪ್ರತಿ ಅಮವಾಸ್ಯೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇರಿದ್ದರು.
ಮೂಕಪ್ರೇಕ್ಷಕರಾದ ಪೊಲೀಸರು: ಶಾಸ್ತ್ರೀ ವೃತ್ತ ಹಾಗೂ ರಾಕ್ ಉದ್ಯಾನದ ಪ್ರವೇಶ ದ್ವಾರದ ಮಧ್ಯ ಭಾಗದಲ್ಲಿ ವಾಹನದಟ್ಟಣೆಯ ಪರಿಣಾಮದಿಂದ ಪಾದಚಾರಿಗಳ ಹಾಗೂ ಕಾರು ಚಾಲಕನ ಮಧ್ಯ ವಾದವಿವಾದಗಳಿಂದ ಜಗಳವಾಗುತ್ತಿತ್ತು. ಸಮೀಪದಲ್ಲಿಯೇ ಇದ್ದ ರಾಜ್ಯ ಕೈಗಾರಿಕಾ ಭದ್ರತಾಪಡೆಯ ಪೊಲೀಸರು ಮಾತ್ರ ತಮಗೇನೂ ಸಂಬಂಧವಿಲ್ಲದಂತೆ  ಮೂಕ ಪ್ರೇಕ್ಷಕರಾಗಿ ತಮ್ಮ ಚೆಕ್ ಪೋಸ್ಟಿನಲ್ಲಿ ನಿಂತು ನೋಡುತ್ತಿದ್ದರು. ನಂತರ ಉದ್ಯಾನದ ಸಿಬ್ಬಂದಿಗಳು ಮತ್ತು ಸ್ಥಳೀಯರು ಪಾದಚಾರಿಗಳನ್ನು ಹಾಗೂ ಕಾರು ಚಾಲಕನನ್ನು ಸಂತೈಸಿದರು.


ಉದ್ಯಾನಗಳನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯಿದ್ದರೂ ಕೂಡ ಪ್ರವಾಸಿಗರ ವಾಹನಗಳು ಶಾಸ್ತ್ರೀ ವೃತ್ತದಿಂದ ಜಲಾಶಯದ ಕಟ್ಟಡದ ಬಳಿ ಕೆಬಿಜೆನ್ನೆಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಹೋಗುವ ರಸ್ತೆಯವರೆಗೂ ಎರಡೂ ಬದಿಯಲ್ಲಿ ವಾಹನಗಳು ನಿಲುಗಡೆಯಾಗಿದ್ದವು. ರವಿವಾರದ ಅಮವಾಸ್ಯೆಯಾದ್ದರಿಂದ ದೂರದ ಗ್ರಾಮ ಮತ್ತು ಪಟ್ಟಣಗಳಿಂದ ಆಗಮಿಸಿದ್ದ ಭಕ್ತರು ತಾವು ತಂದಿದ್ದ ಬುತ್ತಿಯನ್ನು ಗಿಡಮರಗಳ ನೆರಳಿನಲ್ಲಿ ಕುಳಿತು ಊಟಮಾಡುತ್ತಿದ್ದರು. ಇದರಿಂದ ಪಾದಚಾರಿಗಳು ರಸ್ತೆಯ ಮೇಲೆ ಸಂಚರಿಸುತ್ತಿದ್ದರು.
ಜಲಾಶಯ ಭದ್ರತೆಗಾಗಿ ನಿಯೋಜನೆಗೊಂಡಿರುವ ಪೊಲೀಸರ ಕಾರ್ಯದ ಬಗ್ಗೆ ನಾಗರಿಕರಲ್ಲಿ ಸಂಶಯಕ್ಕೆಡೆ ಮಾಡಿದೆ. ಇತ್ತೀಚೆಗಷ್ಟೇ ಉದ್ಯಾನಗಳಲ್ಲಿ ಕಳ್ಳರು ಶ್ರೀಗಂಧದ ಮರಗಳನ್ನು ಕಡಿದುಕೊಂಡು ಹೋಗಿದ್ದರೂ ಕೂಡ ಇನ್ನೂವರೆಗೆ ಕಳ್ಳರನ್ನು ಪತ್ತೆ ಹಚ್ಚಲಾಗಿಲ್ಲ. ತಮ್ಮ ಮುಂದೆಯೇ ಬಕ್ರೀದ ಹಬ್ಬದ ಮರುದಿನದಂದು ಉದ್ಯಾನ ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರ ಮಧ್ಯ ದೊಡ್ಡ ಪ್ರಮಾಣದಲ್ಲಿ ರಸ್ತೆಯಲ್ಲಿ ಹೊಡೆದಾಟವಾದರೂ ಬಗೆಹರಿಸಲಿಲ್ಲ. ಹೀಗೆ ಅವರುಗಳ ಮುಂದೆಯೇ ಘಟನೆಗಳು ಸಂಭವಿಸಿದರೂ ಕೂಡ ನೋಡದಿರುವದು. ಸ್ಥಳೀಯವಾಗಿಯೇ ಪೊಲೀಸ ಠಾಣೆಯಿದ್ದರೂ ಸಿಬ್ಬಂದಿ ಹಾಗೂ ಅಧಿಕಾರಿಗಳೂ ಕೂಡ ಏನು ಮಾಡುತ್ತಿದ್ದಾರೆ ಎಂದು ನಾಗರಿಕರ ಆಕ್ರೋಶಕ್ಕೆ ವ್ಯಕ್ತಪಡಿಸಿದರು.

Girl in a jacket
error: Content is protected !!