ಟೋಕಿಯೋ ಒಲಂಪಿಕ್ಸ್ : ಭಾರತದ ಯುವ ಬಾಕ್ಸರ್ ಗೆ ಕಂಚಿನ ಹಾರ

Share
Reported By: H.D. Savita

ಟೋಕಿಯೋ: ಟೊಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕವಾಗಿದೆ.
ಮಹಿಳಾ ಬಾಕ್ಸಿಂಗ್‌ನ 69 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಲವ್ಲಿನಾ, ಎದುರಾಳಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 0-5ರಿಂದ ಸೋಲು ಅನುಭವಿಸಿದರು. ಆಗಲೇ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿರುವ ಲವ್ಲಿನಾ, ಚಿನ್ನದ ಪದಕ ಗುರಿಯನ್ನಿರಿಸಿದ್ದರು. ಆದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಎಡವಿದ್ದರು.
ಹಾಗಿದ್ದರೂ ಮಾಜಿ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ಎಂ.ಸಿ.ಮೇರಿ ಕೋಮ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಮೇರಿ ಕೋಮ್ ನಂತರ ಒಲಿಂಪಿಕ್ ಪದಕ ಗಳಿಸಿದ ಎರಡನೇ ಭಾರತೀಯ ಮಹಿಳೆ ಲವ್ಲಿನಾ ಎನಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಏಕೈಕ ಬಾಕ್ಸರ್ ಅವರೆನಿಸಿದ್ದಾರೆ. ಈ ಮೂಲಕ ಭಾರತದ ಪದಕದ ಸಂಖ್ಯೆ ಮೂರಕ್ಕೇರಿದೆ.

Girl in a jacket
error: Content is protected !!