ಪೈನಲ್ ಹಂತಕ್ಕೆ ತಲುಪಿದ ಸಚಿವ ಸಂಪುಟ ವಿಸ್ತರಣೆ

Share

ನವದೆಹಲಿ,ಆ,೦೩: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಇಡೀ ದಿನದ ಚರ್ಚೆ ಬಳಿಕ ತಡ ರಾತ್ರಿ ಒಂದು ಹಂತಕ್ಕೆ ಬಂದು ನಿಂತಿದ್ದು ಬಹುತೇಕ ಸಚಿವರ ಪಟ್ಟಿ ಫೈನಲ್ ಆಗಿದೆ.
ಇಂದೂ ಕೂಡ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ ಬಳಿಕ ಸಂಜೆ ಹೊತ್ತಿಗೆ ಸಚಿವರ ಹೆಸರುಗಳನ್ನು ಅಂತಿಮಗೊಳಿಸಿ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ.
ಸೋಮವಾರ ಬೆಳಿಗ್ಗೆಯಿಂದ ಕೆಲವು ಮುಖಂಡರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ ಬಳಿಕ ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಇಂದು ಸಂಜೆಯೊಳಗೆ ವರಿಷ್ಠರಿಂದ ಹಸಿರು ನಿಶಾನೆ ದೊರೆಯುವ ಸಾಧ್ಯತೆ ಇದ್ದು, ನಾಳೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ
ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಕೆಲವು ಹಿರಿಯರನ್ನು ಕೈಬಿಟ್ಟು ಯುವಕರಿಗೆ ಅವಕಾಶ ನೀಡುವುದು ವರಿಷ್ಠರು ಸಿದ್ಧಪಡಿಸಿರುವ ಪ್ರಮುಖ ಅಂಶವಾಗಿರಲಿದೆ.ಸಂಪುಟದಿಂದ ಹೊರಗುಳಿಯಲಿರುವ ಹಿರಿಯರು ಹಾಗೂ ಅವಕಾಶ ದೊರೆಯದ ಕೆಲವು ಆಕಾಂಕ್ಷಿಗಳಲ್ಲಿ ಉಂಟಾಗಬಹುದಾದ ‘ಸಂಭವನೀಯ’ ಅಸಮಾಧಾನ ತಣಿಸುವುದಕ್ಕೆಂದೇ ೮ರಿಂದ ೧೦ ಸ್ಥಾನಗಳನ್ನು ಖಾಲಿ ಇರಿಸಿ, ಮೊದಲ ಹಂತದ ವಿಸ್ತರಣೆಯಲ್ಲಿ ೨೧ರಿಂದ ೨೪ ಸ್ಥಾನಗಳನ್ನು ಭರ್ತಿ ಮಾಡುವುದೂ ಮತ್ತೊಂದು ಅಂಶ.ಯಡಿಯೂರಪ್ಪ ಸಂಪುಟದಲ್ಲಿದ್ದ ಕೆಲವು ಪ್ರಮುಖರನ್ನು ಬೊಮ್ಮಾಯಿ ಅವರ ಸಂಪುಟದಲ್ಲಿ ಮುಂದುವರಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿಯೂ ಚರ್ಚೆ ನಡೆಸಲಾಗಿದೆ.ಇದರೊಂದಿಗೆ ಪ್ರಾದೇಶಿಕತೆ, ಜಾತಿ, ಮತ್ತು ಪಕ್ಷ ನಿಷ್ಠೆಯನ್ನು ಹೊಂದಿರುವ ಯುವ ಪಡೆಗೆ ಒತ್ತು ನೀಡುವುದೂ ವರಿಷ್ಠರು ಸಿದ್ಧಪಡಿಸಿರುವ ಮತ್ತೊಂದು ಪ್ರಮುಖವಾದ ಅಂಶವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಲಸಿಗರಿಗೆ ಅವಕಾಶ: ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿ, ಯಡಿಯೂರಪ್ಪ ಸಂಪುಟ ಸೇರಿದ್ದ ಎಲ್ಲ ವಲಸಿಗರಿಗೂ ಹೊಸ ಸಂಪುಟದಲ್ಲಿ ಅವಕಾಶ ನೀಡಲು ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ.ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಹಾಗೂ ಸಿ.ಡಿ. ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ ಜಾರಕಿಹೊಳಿ ಅವರ ಬದಲಿಗೆ, ಅವರ ಸೋದರ ಬಾಲಚಂದ್ರ ಅವರಿಗೆ ಅವಕಾಶ ನೀಡುವ ಕುರಿತೂ ಚರ್ಚೆ ನಡೆಸಲಾಗಿದೆ.ಮಹೇಶ ಕುಮಠಳ್ಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಜಾರಕಿಹೊಳಿ ಸೋದದರಿಂದ ತೀವ್ರ ಒತ್ತಡ ಬಂದಿದೆ ಎನ್ನಲಾಗಿದ್ದು, ವರಿಷ್ಠರ ತೀರ್ಮಾನ ಅಂತಿಮ ಎನ್ನಲಾಗಿದೆ.ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿ, ಅವರ ಸ್ಥಾನಕ್ಕ ಸುರೇಶಕುಮಾರ್ ಅವರ ಹೆಸರನ್ನೂ ಪ್ರಸ್ತಾಪಿಸಲಾಗಿದೆ.
ಸುದೀರ್ಘ ಸಮಾಲೋಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಲ್ಹಾದ ಜೋಶಿ, ಧರ್ಮೇಂದ್ರ ಪ್ರಧಾನ್, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.ಸಂಭವನೀಯ ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ವರಿಷ್ಠರ ಸೂಚನೆಯ ಮೇರೆಗೆ ಪ್ರಲ್ಹಾದ ಜೋಶಿ ಅವರೊಂದಿಗೆ ಸೋಮವಾರವೂ ಮೂರು ಗಂಟೆ ಕಾಲ ಚರ್ಚಿಸಿದ ಬೊಮ್ಮಾಯಿ, ರಾತ್ರಿ ೮.೩೦ರ ನಂತರ ನಡ್ಡಾ ಪಟ್ಟಿಯೊಂದಿಗೆ ಅವರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು.

ಇವರನ್ನು ಮುಂದುವರೆಸಲಿದ್ದಾರೆ
ಗೋವಿಂದ ಕಾರಜೋಳ,
ಬಿ. ಶ್ರೀರಾಮುಲು, ಸಿ.ಎನ್. ಅಶ್ವತ್ಥನಾರಾಯಣ, ಆರ್.ಅಶೋಕ,
ಜೆ.ಸಿ.ಮಾಧುಸ್ವಾಮಿ, ಉಮೇಶ ಕತ್ತಿ
ಸಂಪುಟಕ್ಕೆ ಯಾರ‍್ಯಾರು ಸೇರ್ಪಡೆಗೊಳ್ಳಬಹುದು
ಎಸ್.ಎ. ರಾಮದಾಸ್, ಅಭಯ ಪಾಟೀಲ್, ಸುನಿಲ್‌ಕುಮಾರ್,ಪೂರ್ಣಿಮಾ ಶ್ರೀನಿವಾಸ್,ದತ್ತಾತ್ರೇಯ ಪಾಟೀಲ ರೇವೂರ,ರಾಜುಗೌಡ,ಹಾಲಪ್ಪ ಆಚಾರ್,ನೆಹರೂ ಓಲೇಕಾರ್‌ಅಥವಾ ಬಿ.ಹರ್ಷವರ್ಧನ್, ಮುನಿರತ್ನಅಥವಾ ಮಹೇಶ ಕುಮಠಳ್ಳಿ, ಅರವಿಂದ ಬೆಲ್ಲದಅಥವಾ ಬಸನಗೌಡ ಪಾಟೀಲ ಯತ್ನಾಳ, ಶಂಕರ ಪಾಟೀಲ ಮುನೇನಕೊಪ್ಪ,ಕಳಕಪ್ಪ ಬಂಡಿ, ಸತೀಶ್ ರೆಡ್ಡಿ,ಎನ್.ರವಿಕುಮಾರ್, ಎಸ್.ರುದ್ರೇಗೌಡ
ಯಾರನ್ನು ಕೈ ಬಿಡಲಾಗುವುದು
ಜಗದೀಶ ಶೆಟ್ಟರ್, ವಿ.ಸೋಮಣ್ಣಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ,ಕೋಟ ಶ್ರೀನಿವಾಸ ಪೂಜಾರಿ,ಪ್ರಭು ಚೌಹಾಣ

Girl in a jacket
error: Content is protected !!