ಥ್ರಿಲ್ಲರ್ ಸಸ್ಪೆನ್ಸ್ ಚಿತ್ರ ಟಿಟಿ#೫೦

Share

ಎಲ್. ಕೃಷ್ಣ ಚೊಚ್ಚಲ ನಿರ್ದೇಶನದ ಟಿಟಿ#೫೦ ಕನ್ನಡ ಸಿನಿಮಾವನ್ನು ಆಗಸ್ಟ್ ೧೩ ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಹೊಸ ಪ್ರತಿಭಾನ್ವಿತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾವಾಗಿದ್ದು ದಂಪತಿಗಳ ಸುತ್ತ ಕಥೆ ಹೆಣೆಯಲಾಗಿದೆ. ಐಷಾರಾಮಿ ಜೀವನಕ್ಕಾಗಿ ಮಾಡುವ ಪ್ರಯತ್ನಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಕೃಷ್ಣ ಕಥೆ ಬರೆದಿದ್ದು ಎಸ್ ಅಂಡ್ ಎಸ್ ಹೋಮ್ ಬ್ಯಾನರ್ ಎಸ್ ಅಂಡ್ ಎಸ್ ಪ್ರೊಡಕ್ಷನ್ ನಲ್ಲಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಧಾರಾವಾಹಿ ನಟ ಕರ್ಣ ಎಸ್ ರಾಮಚಂದ್ರ ಮೊಟ್ಟ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುತ್ತಿದ್ದು, ತುಳು ನಟಿ ಐಶ್ವರ್ಯ ಸೇರಿ ೧೦ ಮಂದಿ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಹೇಮಂತ್, ಸೂರಿ ಭದ್ರಾವತಿ, ಕಿಸನ್ ಕುಮಾರ್ ಮಲ್ಲಿಕ್, ದಾನಂ ಶಿವಮೊಗ್ಗ, ಮಮತಾ, ಸ್ವಾತಿ, ಪ್ರಿಯಾ, ಕುಮಾರ್ ಭದ್ರಾವತಿ, ಮುರಳಿ, ರವಿ ಮಂಡ್ಯ, ಮತ್ತು ಪ್ರೀತಿ ಗೌಡ ಕೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಟಿಟಿ # ೫೦ ಸಿನಿಮಾಗೆ ಸಂಗೀತ ಎಬಿ ಮುರಳೀಧರನ್ ಸಂಯೋಜನೆ ಮಾಡಿದ್ದಾರೆ ಮತ್ತು ವಿವೇಕ್ ವಿಜಯನ್ ಅವರ ಛಾಯಾಗ್ರಹಣ ನೀಡಿದ್ದಾರೆ.

Girl in a jacket
error: Content is protected !!