ನವದೆಹಲಿ,ಆ,೦೨: ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಸೆಮಿಫೈನಲ್ ಗೇರಿರುವ ಭಾರತದ ಸಾಧನೆಯನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ವಿತರಣೆಯಾಗುತ್ತಿದ್ದು, ಜುಲೈನಲ್ಲಿ ೧೩ ಕೋಟಿಗೂ ಹೆಚ್ಚು ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಈ ತಿಂಗಳು ಲಸಿಕೆ ಕಾರ್ಯಕ್ರಮವನ್ನು ಇನ್ನಷ್ಟು ವೇಗಗೊಳಿಸಲಾಗುವುದು ಸರ್ಕಾರದ ಆದ್ಯತೆಯಾಗಿದೆ. ಇದರ ಬೆನ್ನಲ್ಲೇ ಒಲಂಪಿಕ್ಸ್ ನಲ್ಲಿ ಪಿವಿ ಸಿಂಧು ಪದಕ ಗೆಲವು, ಭಾರತ ಮಹಿಳಾ ಹಾಕಿ ತಂಡದ ಐತಿಹಾಸಿಕ ಸಾಧನೆಗಳು ದೇಶದ ೧೩೦ ಕೋಟಿ ಭಾರತೀಯರಿಗೆ ಖುಷಿಯ ವಿಚಾರವಾಗಿದೆ. ಭಾರತೀಯರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಭಾರತ ತಂಡ ಸಾಗಿದೆ. ಇಂದು ದೇಶದ ಅಮೃತ ಮಹೋತ್ಸವದ ಆರಂಭ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
’೨೦೨೨ ರಲ್ಲಿ ಭಾರತಕ್ಕೆ ೭೫ ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸರ್ಕಾರವು ’ಅಮೃತ್ ಮಹೋತ್ಸವ’ವನ್ನು ಆರಂಭಿಸಿದೆ. ಭಾರತವು ಅಮೃತ ಮಹೋತ್ಸವದ ಆರಂಭವನ್ನು ಸೂಚಿಸುವ ಆಗಸ್ಟ್ ತಿಂಗಳಲ್ಲಿ, ನಾವು ಅನೇಕ ಭಾರತೀಯರನ್ನು ಸಂತೋಷಪಡಿಸುವ ಅನೇಕ ಘಟನೆಗಳನ್ನು ನೋಡಿದ್ದೇವೆ. ದಾಖಲೆಯ ವ್ಯಾಕ್ಸಿನೇಷನ್ ಮತ್ತು ಹೆಚ್ಚಿನ ಜಿಎಸ್ಟಿ ಸಂಖ್ಯೆಗಳು ದೃಢವಾದ ಆರ್ಥಿಕ ಚಟುವಟಿಕೆಯನ್ನು ಸೂಚಿಸುತ್ತಿವೆ. ಅಂತೆಯೇ ಒಲಂಪಿಕ್ಸ್ ನಲ್ಲಿ ಪಿವಿ ಸಿಂಧು ಅರ್ಹ ಪದಕವನ್ನು ಗೆದ್ದಿದ್ದು ಮಾತ್ರವಲ್ಲ, ಪುರುಷ ಮತ್ತು ಮಹಿಳೆಯರ ಹಾಕಿ ತಂಡಗಳ ಐತಿಹಾಸಿಕ ಪ್ರಯತ್ನಗಳನ್ನು ಒಲಿಂಪಿಕ್ಸ್ನಲ್ಲಿ ನೋಡಿದ್ದೇವೆ ಎಂದು ಹೇಳಿದ್ದಾರೆ.
ಇದು ೧೩೦ ಕೋಟಿ ಭಾರತೀಯರು ತಮ್ಮ ’ಅಮೃತ ಮಹೋತ್ಸವ’ವನ್ನು ಆಚರಿಸುವ ಹೊಸ್ತಿಲಲ್ಲಿದ್ದು, ಈ ಹೊತ್ತಿನಲ್ಲಿ ಭಾರತವು ಹೊಸ ಎತ್ತರವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿರುವ ಕುರಿತು ತಾನು ಆಶಾವಾದಿಯಾಗಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಒಲಂಪಿಕ್ಸ್ ಕ್ರೀಡೆಗಳ ಗೆಲುವಿಗೆ ಕೊಂಡಾಡಿದ ಮೋದಿ
Share