ನವದೆಹಲಿ, ಆ.02: ಕಳೆದ ಎರಡು ತಿಂಗಳಿಂದ ನಿಧಾನವಾಗಿ ಇಳಿಕೆಯಾಗುತ್ತಿದ್ದ ಕೊರೊನಾ ಸೋಂಕು ಈಗ ಮತ್ತೇ ಏರಿಕೆ ಕಾಣುತ್ತಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಆನ್ ಲಾಕ್ ನಂತರ ಯಥಾಸ್ಥಿತಿ ಜನ ಎಲ್ಲಡೆ ಗುಂಪು ಗುಂಪಾಗಿ ಸೇರುತ್ತಿರುವುದರಿಂದ ಮತ್ತೆ ಸೋಂಕು ಹೆಚ್ಚಾಗುತ್ತಿದೆ.
ಮೂರನೇ ಅಲೆ ಆರಂಭದ ಈ ಸಮಯದಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನು ಈ ಕೋವಿಡ್ ಪ್ರಕರಣಗಳ ಏರಿಕೆಯು ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮತ್ತೊಂದು ಅಲೆಯ ಆರಂಭಿಕ ಚಿಹ್ನೆಯಾಗಿರಬಹುದು ಎಂದು ಹೇಳಲಾಗಿದೆ. ಆದರೆ ಈ ಕೋವಿಡ್ ಪ್ರಕರಣಗಳು ಮುಖ್ಯವಾಗಿ ಕೇರಳಕ್ಕೆ ಹೆಚ್ಚು ಸೀಮಿತವಾಗಿದೆ. ಹಾಗೆಯೇ ಇತ್ತೀಚೆಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ.
ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಭಾನುವಾರ ಕೊನೆಗೊಂಡ ಪ್ರಸಕ್ತ ವಾರದಲ್ಲಿ (ಜುಲೈ 26-ಆಗಸ್ಟ್ 1) ಭಾರತವು 2.86 ಲಕ್ಷ ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ವಾರದ 2.66 ಲಕ್ಷಕ್ಕಿಂತ 7.5% ಏರಿಕೆಯಾಗಿದೆ. ಮೇ 3-9ರ ನಂತರ ಎರಡನೇ ಅಲೆಯ ಉತ್ತುಂಗಕ್ಕೇರಿದ ನಂತರ ದೇಶದಲ್ಲಿ ಕೋವಿಡ್ ಪ್ರಕರಣಗಳ ವಾರದ ಲೆಕ್ಕಾಚಾರದಲ್ಲಿ ಮೊದಲ ಬಾರಿಗೆ ಏರಿಕೆ ಕಂಡು ಬಂದಿದೆ. ಕೋವಿಡ್ ಪ್ರಕರಣಗಳ ಕುಸಿತವು ಶೇ.1.4% ಕ್ಕೆ ಇಳಿದಿದ್ದರೂ, ಕಳೆದ ವಾರದವರೆಗೂ ಮುಂದುವರೆಯಿತು.
ಕೇರಳದಲ್ಲಿ ತೀವ್ರ ಹೆಚ್ಚಳ
ಕೇರಳದಲ್ಲಿ ಕೋವಿಡ್ ಆಘಾತ
ಭಾರತದಲ್ಲಿ ಪ್ರಸ್ತುತ ಸಾಂಕ್ರಾಮಿಕದ ಕೇಂದ್ರಬಿಂದುವಾಗಿರುವ ಕೇರಳ, ಪ್ರಸ್ತುತ ವಾರದಲ್ಲಿ 1.4 ಲಕ್ಷ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ವಾರದ 1.1 ಲಕ್ಷಕ್ಕಿಂತ 26.5% ಹೆಚ್ಚಳವಾಗಿದೆ. ಕಳೆದ ಏಳು ದಿನಗಳಲ್ಲಿ ದೇಶದ ಎಲ್ಲಾ ಹೊಸ ಕೋವಿಡ್ ಪ್ರಕರಣಗಳಲ್ಲಿ ಕೇರಳ ರಾಜ್ಯವು ಅರ್ಧದಷ್ಟು (49%), ದೈನಂದಿನ ಸರಾಸರಿ 20,000 ಹೊಸ ಪ್ರಕರಣಗಳನ್ನು ಹೊಂದಿದೆ. ಕೇರಳದಲ್ಲಿ ಭಾನುವಾರ 20,728 ಪ್ರಕರಣಗಳು ದಾಖಲಾಗಿದೆ. ಇದು ಆರನೇ ದಿನವಾಗಿದ್ದು, ದೈನಂದಿನ ಎಣಿಕೆ 20,000 ಕ್ಕಿಂತ ಹೆಚ್ಚಾಗಿದೆ.
ಆತಂಕದ ಸಂಗತಿಯೆಂದರೆ, ಕೇರಳದ ಕೋವಿಡ್ ಉಲ್ಬಣವು ಅದರ ನೆರೆಯ ರಾಜ್ಯಗಳಿಗೆ ಪರಿಣಾಮ ಬೀರುವ ಲಕ್ಷಣಗಳು ಈಗಾಗಲೇ ಕಂಡು ಬಂದಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕರ್ನಾಟಕವು ಹೊಸ ಪ್ರಕರಣಗಳಲ್ಲಿ 17.3% ಹೆಚ್ಚಳವನ್ನು ದಾಖಲಿಸಿದೆ. ಕರ್ನಾಟಕವು ಪ್ರಸಕ್ತ ವಾರದಲ್ಲಿ 12,442 ಪ್ರಕರಣಗಳನ್ನು ವರದಿ ಮಾಡಿದ್ದು, ಹಿಂದಿನ ಏಳು ದಿನಗಳಲ್ಲಿ 10,610 ಪ್ರಕರಣಗಳನ್ನು ದಾಖಲಿಸಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವುದನ್ನು ನಿರ್ಬಂಧಿಸಿದೆ. ಕೋವಿಡ್ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ.