ಆಲಮಟ್ಟಿ,ಜು,31:ಅವಸರದ ಸುದ್ದಿಗೆ ಮಹತ್ವ ನೀಡಿ, ಘಟನೆಯ ವಿವರಾತ್ಮಕ ಬರಹಗಳತ್ತ ಪತ್ರಕರ್ತರು ಗಮನಹರಿಸುತ್ತಿಲ್ಲ ಹೀಗಾಗಿ ಸಂಶೋಧನಾತ್ಮಕ ಸುದ್ದಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಶಾಸಕ ಶಿವಾನಂದ ಪಾಟೀಲ ವಿಷಾದಿಸಿದರು.
ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಡಗುಂದಿ ತಾಲ್ಲೂಕು ಘಟಕ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಹಾಗೂ ಸಮಾಜದ ಏರು ಪೇರುಗಳನ್ನು ಪತ್ರಕರ್ತರು, ವ್ಯಂಗ್ಯ ಚಿತ್ರಕಾರರು, ಸಾಹಿತಿಗಳು ಸ್ಥಿರವಾಗಿ ನಿರೂಪಿಸುತ್ತಾ ಬಂದಿದ್ದಾರೆ, ಸಾಮಾಜಿಕ ಜಾಲ ತಾಣಗಳ ಮಧ್ಯೆಯೂ ಪತ್ರಿಕೆಗಳನ್ನು ಉಳಿಸಿ ಬೆಳೆಸಿ ಚಲನಶೀಲತೆಯ ಸಮಾಜ ನರ್ಮಾಣ ಕರ್ಯ ಆಗಬೇಕಿದೆ ಎಂದರು. ಕೆಲ ದೃಶ್ಯ ಮಾಧ್ಯಮಗಳಲ್ಲಿನ ನ್ಯೂನ್ಯತೆಯಿಂದಾಗಿ ಜನಪ್ರತಿನಿಧಿಗಳ ವೈಯಕ್ತಿಕ ಬದುಕೇ ಇಲ್ಲದಂದಾಗಿದೆ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಈ ಭಾಗದ ಬರಗಾಲ, ಮುಳುಗಡೆ ಸಂತ್ರಸ್ತರ ಬವಣೆ, ನೀರಾವರಿ, ತಾಲ್ಲೂಕು ಕೇಂದ್ರಗಳ ರಚನೆ ಸೇರಿದಂತೆ ನಾನಾ ಸಮಸ್ಯೆಗಳು, ಹೋರಾಟಗಳನ್ನು ರೂಪಿಸುವಲ್ಲಿ ನಿಡಗುಂದಿ, ಆಲಮಟ್ಟಿ ಭಾಗದ ಪತ್ರರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಾಹಿತಿ ಮುತ್ತುರಾಜ ಹೆಬ್ಬಾಳ ಉಪನ್ಯಾಸ ನೀಡಿ, ನಾಗರಿಕ ಪ್ರಪಂಚದಲ್ಲಿ ಪತ್ರಿಕೆಗಳಿಗೆ ವಿಶೇಷ ಸ್ಥಾನವಿದ್ದು, ಸಂಕಷ್ಟದ ಸಂರ್ಭದಲ್ಲಿ ಬದ್ಧತೆಯಿಂದ ಕರ್ಯನರ್ವಹಿಸುವ ಪತ್ರರ್ತರು ದೇಶದ ಅಭಿವೃದ್ಧಿಗೆ ಸಹಕಾರಿ, ಜನಸಾಮಾನ್ಯರ ಬದುಕಿನ ಅರಿವು, ಅನುಭವ ಇರುವ ಪತ್ರರ್ತರು ತಮ್ಮ ವಸ್ತುನಿಷ್ಠ ವರದಿಗಳಿಂದ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಬಲ್ಲರು ಎಂದರು.
ಹಿರಿಯ ಪತ್ರರ್ತ ಜಿ.ಸಿ. ಮುತ್ತಲದಿನ್ನಿ, ಜೆಡಿಎಸ್ ಹಿರಿಯ ಮುಖಂಡ ಅಪ್ಪುಗೌಡ ಪಾಟೀಲ (ಮನಗೂಳಿ), ಕಾನಿಪ ತಾಲ್ಲೂಕಾಧ್ಯಕ್ಷ ಎಸ್.ಎಂ ಜಲ್ಲಿ ಮಾತನಾಡಿದರು.
ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಸಚ್ಚೇಂದ್ರ ಲಂಬು, ಪ್ರಧಾನ ಕರ್ಯರ್ಶಿ ವಿನಾಯಕ ಸೊಂಡೂರ, ರಾಜ್ಯ ಕರ್ಯಕಾರಣಿ ಸದಸ್ಯ ದೇವೇಂದ್ರ ಹೆಳವರ, ಮುತ್ತುರಾಜ ಹೆಬ್ಬಾಳ, ಆರ್.ಎಫ್.ಓ. ಮಹೇಶ ಪಾಟೀಲ, ಎಸ್.ಬಿ. ದಳವಾಯಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ, ಮಹೇಶ ಗಾಳಪ್ಪಗೋಳ, ಡಿ.ಬಿ. ಕುಪ್ಪಸ್ತ, ಗಂಗಾಧರ ಹಿರೇಮಠ, ಮಹೇಶ ಅಡಾಳಿ ಇನ್ನೀತರರು ಇದ್ದರು.
ಇದಕ್ಕೂ ಮೊದಲು ಸಂಘದ ಕಚೇರಿಯನ್ನು ಶಾಸಕ ಪಾಟೀಲ ಉದ್ಘಾಟಿಸಿದರು.