ಆಲಮಟ್ಟಿ,ಜು,31:ಆಲಮಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಡಕಲಗುಂಡಪ್ಪ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶನಿವಾರ ಜಿಲ್ಲಾ ಪಂಚಾಯ್ತಿ ಸಿಇಓ ಗೋವಿಂದ ರೆಡ್ಡಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಆಲಮಟ್ಟಿ ಗ್ರಾಮ ಪಂಚಾಯ್ತಿಯಿಂದ ಇಲ್ಲಿಯವರೆಗೆ ನರೇಗಾ ಯೋಜನೆಯಡಿ ಕೂಲಿಕರ್ಮಿಕರಿಗೆ ಕೆಲಸವೇ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಪ್ರಯತ್ನದ ಫಲವಾಗಿ ಮೊದಲ ಹಂತದಲ್ಲಿ ೧೫೦ ಮಹಿಳೆಯರಿಗೆ ಜಾಬ್ ಕರ್ಡ್ ಮಾಡಿಸಿ ಕೂಲಿ ಕೆಲಸ ನೀಡಲಾಗಿದೆ.
ಸಿಇಓ ಗೋವಿಂದರೆಡ್ಡಿ ಮಾತನಾಡಿ, “ಎಷ್ಟು ಬೇಕಾದರೂ ಜನ ಕೆಲಸಕ್ಕ ಬನ್ನಿ, ಎಲ್ಲರಿಗೂ ಕೆಲಸ ಕೊಡುತ್ತೇವೆ, ಈಗ ಆಲಮಟ್ಟಿಯಲ್ಲಿ ಕೇವಲ ೧೫೦ ಜನ ಬಂದಿದ್ದಾರೆ, ಇನ್ನೂ ಹೆಚ್ಚು ಜನ ಕೆಲಸಕ್ಕೆ ಬನ್ನಿ, ಕೆರೆ ಹೂಳೆತ್ತುವ, ಬದು ನರ್ಮಿಸುವ ಸೇರಿದಂತೆ ನಾನಾ ಕೆಲಸ ನೀಡುತ್ತೇವೆ, ಪ್ರತಿಯೊಬ್ಬರಿಗೆ ೨೯೯ ರೂ ಕೂಲಿ ಹಣ ನೀಡುತ್ತೇವೆ ಎಂದರು. ಇದರ ಸದುಪಯೋಗ ಪ್ರತಿಯೊಬ್ಬರು ಪಡೆಯಬೇಕು, ಆಧಾರ ಕರ್ಡ್, ಫೋಟೋ ನೀಡಿ ಜಾಬ್ ಕರ್ಡ್ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು, ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯ್ತಿ ಇಓ ವಿ.ಎಸ್. ಹಿರೇಮಠ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಹಿರೇಮಠ, ಪಿಡಿಓ ಜಿ.ಬಿ. ಕಲ್ಯಾಣಿ, ಐಇಸಿ ದಸ್ತಗೀರ್ ಸಾಬ್ ಗೂಡಿಹಾಳ, ತಾಂತ್ರಿಕ ಎಂಜಿನಿಯರ್ ದಿಗಂಬರೇಶ ಪಾಟೀಲ, ರಾಮಸ್ವಾಮಿ ಗಾಯಕವಾಡ ಸೇರಿ ಇತರರು ಇದ್ದರು.
ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಓ ಭೇಟಿ
Share