ವಿವಿಧ ಲೇಖಕರ ಕೃತಿಗಳಿಗೆ ಸಾಹಿತ್ಯಪರಿಷತ್ ದತ್ತಿ ಪ್ರಶಸ್ತಿ ಪ್ರಕಟ

Share

ಬೆಂಗಳೂರು, ಜು,31: ಕನ್ನಡ ಸಾಹಿತ್ಯ ಪರಿಷತ್ತು 2020 ನೇ ಸಾಲಿಗೆ ವಿವಿಧ ಲೇಖಕರ ಒಟ್ಟು 48 ಕೃತಿಗಳಿಗೆ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಿದೆ.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ.
‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ’ಗೆ ಎಸ್.ಪಿ. ಯೋಗಣ್ಣ ಅವರ ‘ಆರೋಗ್ಯ ಎಂದರೇನು?’ ಕೃತಿ ಆಯ್ಕೆಯಾಗಿದೆ. ‘ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ವಾಸುದೇವ ಬಡಿಗೇರ ಅವರ ‘ದೇವರ ದಾಸಿಮಯ್ಯ-ಮರುಚಿಂತನೆ’ ಕೃತಿ, ‘ಭಾರತಿ ಮೋಹನ ಕೋಟಿ ದತ್ತಿ ಅನುವಾಧ ಸಾಹಿತ್ಯ ಪ್ರಶಸ್ತಿ’ಗೆ ಓ.ಎಲ್. ನಾಗಭೂಷಣಸ್ವಾಮಿ ಅವರ ‘ಕೆಂಪು ಮುಡಿಯ ಹೆಣ್ಣು’ ಕೃತಿ ಆಯ್ಕೆಯಾಗಿದೆ. ಈ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿವೆ.

‘ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇರಿ ಜೈನ ದತ್ತಿ ಪ್ರಶಸ್ತಿ’ಗೆ ಎಸ್.ಬಿ. ಮುನ್ನೊಳ್ಳಿ ಅವರ ‘ದಶರತ್ನಗಳು’ ಕೃತಿ ಭಾಜನವಾಗಿದ್ದು, ಈ ಪ್ರಶಸ್ತಿಯು ₹7,500 ನಗದು ಒಳಗೊಂಡಿದೆ. ‘ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ’ಗೆ ಪ್ರೊ. ಜೀವಂಧರಕುಮಾರ್ ಅವರ ‘ವಿದೇಶಗಳಲ್ಲಿ ಜೈನ ಧರ್ಮ’ ಕೃತಿ (₹6 ಸಾವಿರ ನಗದು) ಆಯ್ಕೆಯಾಗಿದೆ.

‘ವಸುದೇವ ಭೂಪಾಲಂ ದತ್ತಿ‘ಗೆ ಅಮರೇಶ ನುಗಡೋಣಿ ಅವರ ‘ದಂದುಗ’ ಕಾದಂಬರಿ (₹5 ಸಾವಿರ ನಗದು), ಶರತ್ ಕಲ್ಕೋಡ್ ಅವರ ‘ಶಿಸ್ತು ಮತ್ತು ಇತರ ಕಥೆಗಳು’ ಕೃತಿ (₹3 ಸಾವಿರ ನಗದು), ಮಕ್ಕಳ ಸಾಹಿತ್ಯ ವಿಭಾಗದಲ್ಲಿ ಜೀನಹಲ್ಲಿ ಸಿದ್ಧಲಿಂಗಪ್ಪ ಅವರ ‘ಅಮ್ಮ ಮತ್ತು ಮೇಡಂ’ ಕೃತಿ (₹2 ಸಾವಿರ ನಗದು) ಮತ್ತು ವೈಚಾರಿಕಾ ವಿಭಾಗದಲ್ಲಿ ಅಶೋಕ ನರೋಡೆ ಅವರ ‘ಬಂಡಾಯ ಸಾಹಿತ್ಯದ ವಿಭಿನ್ನ ನೆಲೆಗಳು’ ಕೃತಿ (₹2 ಸಾವಿರ ನಗದು) ಭಾಜನವಾಗಿದೆ.

ವಿಶಾಲ ಆರಾಧ್ಯ ಅವರ ಗೊಂಬೆಗೊಂದು ಚೀಲ ಕೃತಿಗೂ ದತ್ತಿ ಪ್ರಶಸ್ತಿ ಬಂದಿದ್ದು ಇದಕ್ಕೆ2000 ರೂ ಬಹುಮಾನ ಘೋಷಿಸಿದೆ

‘ಡಿ. ಮಾಣಿಕರಾವ್‌ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ’ ಪ್ರಶಸ್ತಿಗೆ ಎನ್. ರಾಮನಾಥ್ ಅವರ ‘ನಿದ್ರಾಂಗನೆಯ ಸೆಳೆವಿನಲ್ಲಿ’ ಕೃತಿ, ‘ದಿವಂಗತ ಡಾ.ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ ಪ್ರಶಸ್ತಿ‘ಗೆ ಎಚ್.ಎಸ್. ಅನುಪಮಾ ಅವರ ‘ಮುಟ್ಟ’ ಕೃತಿ, ‘ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ’ಗೆ ಜಿ.ಎಸ್. ಭಟ್ಟ ಅವರ ‘ಮಂಜೀ ಮಹೇವನ ಗಂಜೀ ಪುರಾಣ’ ಕೃತಿ, ‘ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ’ಗೆ ಶಾಂತಿ ಕೆ. ಅಪ್ಪಣ್ಣ ಅವರ ‘ಮನಸು ಅಭಿಸಾರಿಕೆ’ ಕೃತಿ ಆಯ್ಕೆಯಾಗಿದೆ.

‘ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ’ಗೆ ಬೆಂಗಳೂರಿನ ಮೈತ್ರಿ ಪ್ರಕಾಶನ ಪ್ರಕಟಿಸಿದ ‘ಕೂರ್ಗ್ ರೆಜಿಮೆಂಟ್’ ಕೃತಿ, ‘ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ’ಗೆ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರ ‘ಸಂಕ್ಷಿಪ್ತಪಾಲಿ-ಕನ್ನಡ ನಿಂಘಟು’ ಕೃತಿ, ‘ಅಮೃತ ಮಹೋತ್ಸವ ಸಾ.ಸಮ್ಮೇಳನದ ಸವಿ ನೆನಪಿನ ದತ್ತಿ ಪ್ರಶಸ್ತಿ’ಗೆ ಪ್ರಭುಲಿಂಗ ನೀಲೂರೆ ಅವರ ‘ಸುಬೇದಾರ್ ರಾಮಜಿ ಸಕ್ಪಾಲ್’ ಕೃತಿ, ‘ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ’ಗೆ ಬಿ. ಜನಾರ್ದನ ಭಟ್ಟ ಅವರ ‘ಬೂಬರಾಜ ಸಾಮ್ರಾಜ್ಯ’ ಕೃತಿ ಭಾಜನವಾಗಿದೆ.

‘ಗಂಗಮ್ಮ ಶ್ರೀ ಬಿ. ಶಿವಣ್ಣ ದತ್ತಿ ಪ್ರಶಸ್ತಿಗೆ’ ಎಚ್.ಎಸ್. ಸತ್ಯನಾರಾಯಣ ಅವರ ‘ಕುವೆಂಪು ಅಲಕ್ಷಿತರೆದೆಯ ದೀಪ’ ಭಾಜನವಾಗಿದೆ. ಈ ಪ್ರಶಸ್ತಿಗಳು ತಲಾ ₹5 ಸಾವಿರ ನಗದು ಒಳಗೊಂಡಿವೆ.

Girl in a jacket
error: Content is protected !!