ಸಿನಿಮಾ ರಂಗದಲ್ಲಿ ಕಾಸ್ಟ್ ಕೌಚಿಂಗ್ ತಲೆಹಿಡುಕರ ಹಾವಳಿ!!

Share

 

Writing- ಪರಶಿವ ಧನಗೂರು

ಈಗ ಸದ್ಯಕ್ಕೆ ಭಾರತೀಯ ಸಿನಿಮಾ ರಂಗದಲ್ಲಿ ನಟಿ ಶಿಲ್ಪಾ ಶೆಟ್ಟಿಯ ಗಂಡ ರಾಜ್ ಕುಂದ್ರಾನ ನೀಲಿಚಿತ್ರಗಳರ್ಯಾಕೆಟ್ ನಿಂದ ಕಲಾ ಮಾಧ್ಯಮಕ್ಕೆ ಕಳಂಕ ಮೆತ್ತುಕೊಂಡು ಭಾರತೀಯ ಚಿತ್ರರಂಗವೇ ಜಗತ್ತಿನೆದುರು ತಲೆತಗ್ಗಿಸುವಂತಾಗಿದೆ.
“ಯಂತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ..!” ಎಲ್ಲಿ ಮಹಿಳೆಯರನ್ನು ಗೌರವಾದರಗಳಿಂದ ಕಾಣಲಾಗುತ್ತದೋ ಅಲ್ಲಿ ದೇವಾನೂ ದೇವತೆಗಳಿರುತ್ತಾರೆ. ಎಂದು ಶತಮಾನಗಳಿಂದಲೂ ಪಠಿಸುತ್ತಲೇ ಬರುತ್ತಿರುವ, ದೇಶದ ಉದ್ದಗಲಕ್ಕೂ ಸಾವಿರಾರು ಹೆಣ್ಣು ದೇವತೆಗಳ ದೇವಾಲಯಗಳನ್ನು ಕಟ್ಟಿಸಿ, ದಿನನಿತ್ಯ ಪೂಜೇ ಪುರಸ್ಕಾರ ಗಳಲ್ಲಿ ತೊಡಗಿರುವ, ಭಾರತೀಯರಾದ ನಮ್ಮ ನೆಲದಲ್ಲೆ ನಿಜವಾಗಿಯೂ ಹೆಣ್ಣಿಗೆ ಸಿಗಬೇಕಾದ ಗೌರವ ಸ್ಥಾನಮಾನ ಸಿಗುತ್ತಿಲ್ಲ.

 

ಹಾಡು ಹಗಲೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ. ಕೊಲೆಗಳಾಗುತ್ತಿವೆ. ಜಗತ್ತು ಎಷ್ಟೇ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮುಂದುವರಿಯುತ್ತಿದ್ದರೂ ಮಹಿಳೆಯನ್ನು ಕೇವಲ ಭೋಗದ ವಸ್ತುವನ್ನಾಗಿ ನೋಡುವ ಕಾಮುಕರು ಮನಸ್ಥಿತಿ ಬದಲಾಗುತ್ತಿಲ್ಲ. ಮಹಿಳೆಯರ ಮೇಲೆ ಎಲ್ಲಾ ರಂಗಗಳಲ್ಲೂ ನಡೆಯುತ್ತಿರುವ ಎಲ್ಲಾ ರೀತಿಯ ಶೋಷಣೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಇದಕ್ಕೆ ಸಿನಿಮಾ ರಂಗವೂ ಹೊರತಲ್ಲ. ಕಲೆಯನ್ನು ದೇವರಿಗೆ ಓಲಿಸಿಕೊಂಡು ಕಲಾಸೇವೆಯ ಹೆಸರಲ್ಲಿ ಸಿನಿಮಾ ರಂಗಬೆಳೆದು ನಿಂತಿದೆ. ಆದರೆ ಕಲೆಯೆಂಬ ಪರಿಶುದ್ದ ಪವಿತ್ರ ಕರ್ಮಭೂಮಿಯಲ್ಲಿ ಕೊಳಕು ಮನಸ್ಥಿತಿಯ ಜನರು ಬಂದು ಸೇರಿಕೊಂಡು ಇಡೀ ಸಿನಿಮಾ ಇಂಡಸ್ಟ್ರಿಗೆ ಇತ್ತೀಚೆಗೆ ಕಾಸ್ಟ್ ಕೌಚಿಂಗ್ ಎಂಬ ಕಳಂಕ ಮೆತ್ತಿ ಕೊಂಡು ಅಸಹ್ಯ ಹುಟ್ಟಿಸುತ್ತಿದೆ. ಈಗ ಮುಂಬೈನಲ್ಲಿ ಬಂಧನವಾಗಿರುವ ಒಬ್ಬ ವ್ಯಕ್ತಿ ರಾಜ್ ಕುಂದ್ರಾ ಮಾತ್ರ ಸಿಕ್ಕಿಬಿದ್ದು ಕಣ್ಣಿಗೆ ಕಾಣುತ್ತಿದ್ದಾನೆ. ಬಾಲಿವುಡ್ ನ ಪೋರ್ನೋಗ್ರಫಿಯ ಕಿಂಗ್ ಪಿನ್ ನಂತೆ ಕಾಣುತ್ತಿರುವ ಶಿಲ್ಪಾ ಶೆಟ್ಟಿಯ ಗಂಡ ಕುಂದ್ರಾನಂತವರು ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ಕಡೆಯೂ ಇದ್ದಾರೆ. ಕಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್, ಮಲೆಯಾಳಂ ಸಿನಿ ಇಂಡಸ್ಟ್ರಿ ಪ್ರತಿ ಯಾವೊಂದು ಭಾಷೆಯ ಚಿತ್ರರಂಗದಲ್ಲೂ ಈ ಕಮರ್ಷಿಯಲ್ ಸೆಕ್ಸ್ ಬಿಸಿನೆಸ್ ಈಗ ಚಾಲ್ತಿಯಲ್ಲಿದೆ! ಇದಕ್ಕೆ ನಾನಾತರ ಲೇಬಲ್ಸ್ ಮುಖವಾಡ ಟೈಟಲ್ಸ್, ಟ್ಯಾಗ್ ಲೈನ್ ಇರುತ್ತವೆ ಅಷ್ಟೇ! ರಾಜ್ ಕುಂದ್ರಾನ ಪೋರ್ನೋಗ್ರಫಿ ದಂಧೆಯ ದಿನದ ಆದಾಯ ಹತ್ತು ಲಕ್ಷ ! ಈನ್ನೂ ಹೆಚ್ಚೂ ಇರಬಹುದು. ಆದರೆ ಆತನ ಆದಾಯದ ಮೂಲ ಮಹಿಳೆಯ

ಮೈಮಾಟವೆಂಬುದಂತು ಕಠೋರ ಕಟುಸತ್ಯ!! ಕಲೆಯನ್ನು ಅರಸಿ ಸಿನಿಮಾ ರಂಗದಲ್ಲಿ ತಮ್ಮ ಅದ್ರಷ್ಟ ಪರಿಕ್ಷೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬರುವ ಅಮಾಯಕ ಮುಗ್ಧ ಹುಡುಗಿಯರನ್ನು ಇದೇ ರಾಜ್ ಕುಂದ್ರಾ ನಂತವರು ಆಡಿಷನ್ ಹೆಸರಿನಲ್ಲಿ ಉತ್ತಮ ಪಾತ್ರ ಕೊಡಿಸುವ ಆಸೆ ಹುಟ್ಟಿಸಿ ಬುಟ್ಟಿಗೆ ಹಾಕಿಕೊಂಡು ನೇಕೆಡ್ ಚಿತ್ರಗಳು, ವೀಡಿಯೋ ಗಳನ್ನ ಸೆರೆಹಿಡಿದು ವ್ಯಾಪಾರಕ್ಕಿಟ್ಟು ಹಣಮಾಡಿಕೊಂಡು ಹೆಣ್ಣು ಮಕ್ಕಳ ಬದುಕನ್ನು ಬರ್ಬಾದ್ ಮಾಡುತ್ತಿರುವುದು ಅಕ್ಷಮ್ಯ ಅಪರಾಧ.
ಬಾಲಿವುಡ್ ನಟಿಯೊಬ್ಬಳ ಗಂಡನೆಂಬ ಟ್ಯಾಗ್ ಲೈನ್ ನೊಂದಿಗೆ ಸಮಾಜದಲ್ಲಿ ಸೆಲೆಬ್ರಿಟಿಯಂತೆ ಗುರುತಿಸಿಕೊಂಡು ಒಳಗೇ ಹೊಲಸು ಬಿಸಿನೆಸ್ ಮಾಡಿ ಅನ್ನ ತಿನ್ನುತ್ತಿದ್ದರೂ ಹೊರಗೆ ಉದ್ಯಮಿ, ಬಿಸಿನೆಸ್ ಮ್ಯಾನ್ ಎಂಬ ಹಣೆಪಟ್ಟಿ ಕಟ್ಟಿಕೊಂಡು ಚಾಲ್ತಿಯಲ್ಲಿರುವ ಈ ರಾಜ್ ಕುಂದ್ರಾನೆಂಬ ಹೆಣ್ಣುಬಾಕ ಹಣಗಳಿಸಲು ಮನಸ್ಸಾಕ್ಷಿಯನ್ನೇ ಮಾರಿಕೊಂಡು ಯಾವ ಅಡ್ಡ ದಾರಿಯನ್ನಾದರೂ ಇಡಿಯಬಲ್ಲನೆಂಬುದು ಆತನ ಐ.ಪಿ.ಎಲ್.ಕ್ರಿಕೆಟ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿಯೇ ಸಾಬೀತಾಗುತ್ತು. ಆತನಿಗೆ ದುಡ್ಡು ದುಡಿಯಬೇಕಷ್ಟೇ. ದಾರಿ ಯಾವುದಾದರೇನೂ? ಒಳ್ಳೆಯದು, ಕೆಟ್ಟದ್ದೂ ನೀತಿ ನಿಯಮ, ಮನಸ್ಸಾಕ್ಷಿ ಯಾವುದೂ ಲೆಕ್ಕಕ್ಕಿಲ್ಲ. ಆತ ಒಬ್ಬ ಸೋ ಕಾಲ್ಡ್ ಪಕ್ಕಾ ಬಂಡವಾಳ ಶಾಹಿ ಬಿಸಿನೆಸ್ ಮ್ಯಾನ್. ಅದಕ್ಕಾಗಿಯೇ ಆತ ಒಂದು ಹಾಟ್ ಶಾಟ್ ಆಫ್ ನೀಶೇದಿಷಲ್ಪಟ್ಟರೇ ಮತ್ತೊಂದು ಹೊಸ ನಗ್ನ ವೀಡಿಯೋ ಗಳು ಪೋರ್ನ್ ಆಫ್ ಬೀಡಲು ಸಜ್ಜಾಗುತ್ತಾನೆ! ಮಾಡೆಲಿಂಗ್ ಕ್ಷೇತ್ರದಲ್ಲಿ, ಈತನ ಸಿನಿಮಾಗಳಲ್ಲಿ ಕೆಲಸಕೇಳಿಕೊಂಡು ಬಂದ ಹೆಣ್ಮಕ್ಕಳ ಬಟ್ಟೆ ಬಿಚ್ಚಿಸಿ ಬೆತ್ತಲೆಮಾಡುವುದು ಈತನ ವ್ಯಾಪಾರ ವಹಿವಾಟಿನ ಒಂದು ಭಾಗ ಅಷ್ಟೇ!! ಇದೂ ಒಂದು ವ್ಯಾಪಾರ..!ಇವನದೂ ಒಂದು ಜನ್ಮ!! ಇಂತಹ ವ್ಯಾಪಾರದ ದುಡ್ಡಲ್ಲಿ ಹೆಂಡತಿ ಮಕ್ಕಳೊಂದಿಗೆ ಐಷಾರಾಮಿ ಜೀವನ ನಡೆಸುವುದು ಸೆಲೆಬ್ರಿಟಿ ಗಳ ದೊಡ್ಡಸ್ತಿಕೆ! ನಾಚಿಕೆ ಯಾಗಬೇಕು ಇಂತಹ ಬದುಕಿಗೇ. ಜೀವನ ಮಾಡಲು ಕನಸು ಕಟ್ಟಿಕೊಂಡು ಕೆಲಸ ಕೇಳಿಬರುವ ಕಂಡೋರ ಹೆಣ್ಮಕ್ಕಳ ಕತ್ತಲ ಕಣ್ಣೀರಿನ ಶಾಪದ ಹಣ ರಾಜ್ ಕುಂದ್ರಾ ನಂತಹ ಸಿನಿಮಾ ನಿರ್ಮಾಪಕರಿಗೆ ದಿನದ ತುತ್ತಿನ ಬುತ್ತಿ!

 

ಈ ಬಾಂಬೆಯ ಬೆತ್ತಲೆ ಆಡಿಷನ್ ಸರದಾರನ ಪೋರ್ನೋಗ್ರಫಿಯ ಒಂದೊಂದೇ ಕರಾಳ ಕತೆಗಳು ಹನ್ನೊಂದು ಜನರ ಬಂಧನದ ನಂತರ ಈಗ ಹೊರಬರುತ್ತಿವೆ. ನಟಿ ಶಿಲ್ಪಾ ಶೆಟ್ಟಿ ತನ್ನ ಗಂಡನ ಪರವಾಗಿ ವಕಾಲತ್ತು ವಹಿಸುತ್ತಾ .. ನನ್ನ ಗಂಡನ ಕಂಪನಿಯಲ್ಲಿ ನೀಲಿ ಚಿತ್ರ ಶೂಟಿಂಗ್ ನಡೆಯುತ್ತಿರಲಿಲ್ಲ! ಬರೀ ಶ್ರಂಗಾರ ಸಂಬಂಧಿ ಕಾಮೋತ್ತೇಜಕ(?) ಹಾಟ್ ಚಿತ್ರಗಳನ್ನಷ್ಟೆ ಚಿತ್ರೀಕರಿಸಲಾಗುತ್ತಿತ್ತು ಅಂತ ಪೇಚಾಡುತ್ತಿದ್ದಾಳೇ! ಆಕೆಯ ಮಾತಿನ ಪ್ರಕಾರ ಇವರ ಗಂಡನ ಕಂಪನಿಗೇ ಪಾತ್ರ ಕೇಳಿ ಬರುವ ಅಮಾಯಕ ಮುಗ್ಧ ಹುಡುಗಿಯರನ್ನು ಪುಸಲಾಯಿಸಿ ರಾಜ್ ಕುಂದ್ರಾ ನಾ ಟೀಂ ನ್ಯೂಡ್ ಫೋಟೋ ಶೂಟ್ ಮಾಡಿಸಿ ಅದನ್ನು ಆಪ್ ನಲ್ಲಿ ಅಪ್ಲೋಡ್ ಮಾಡಿ ಹಣಕ್ಕೆ ಮಾರುವುದು ಅಪರಾಧ ಅಲ್ಲವಂತೇ!! ಬ್ರಿಟನ್ನಿನಲ್ಲಿ ಕುಳಿತಿರುವ ರಾಜ್ ಕುಂದ್ರಾ ನ ಸಂಬಂಧಿ ಪ್ರದೀಪ್ ಭಕ್ಷಿಯ ಕೆನ್ರಿನ್ ಕಂಪನಿಯಲ್ಲಿ ನೀಲಿಚಿತ್ರ ತಯಾರಿಕೆಗಾಗಿ ಶಿಲ್ಪಾ ಶೆಟ್ಟಯ ಗಂಡ ಕುಂದ್ರಾ ಬರೋಬ್ಬರಿ ಹತ್ತುಕೋಟಿ ಹಣ ಹೂಡಿಕೆ ಮಾಡಿರುವುದು, ವಿದೇಶದ ವಿವಿಧ ಐಪಿ ನಂಬರ್ ಗಳಿಂದ ಬಾಂಬೆಯಲ್ಲಿ ಶೂಟ್ ಮಾಡಿದ ನ್ಯೂಡ್ ಫೋಟೋ ಗಳನ್ನು ಕುಂದ್ರಾ ನಾ ‘ಹಾಟ್ ಶಾಟ್’ ಆಫ್ಗೆ ಡೌನ್ ಲೋಡ್ ಮಾಡುವುದು. ಉಮೇಶ್ ಕಾಮತ್ ಎಂಬ ಇವರ ಮ್ಯಾನೇಜರ್ ಮೂಲಕ ‘ಹಾಟ್ ಶಾಟ್ ಎಂಬ ಆಫ್ ಮೂಲಕ ವಿಶ್ವದಾದ್ಯಂತ ಅಶ್ಲೀಲ ಚಿತ್ರಗಳನ್ನು ಪ್ರಸರಣ ಮಾಡಿ ಹಣ ಮಾಡುತ್ತಿರುವುದು.

ಇವೆಲ್ಲವೂ ನಟಿ ಶಿಲ್ಪಾ ಶೆಟ್ಟಿಗೆ ಗೊತ್ತಿರಲಿಲ್ಲವೇ?

 

ಕುಂದ್ರಾನ ಪೋರ್ನೋಗ್ರಫಿ ಕಂಟೆಂಟ್ ಇರುವ ನ್ಯೂಡ್ ಫೋಟೋ ಗ್ಯಾಲರಿಯ ಹಾಟ್ ಶಾಟ್ ಎಂಬ ಓಟಿಟಿ ಪ್ಲಾಟ್ ಫಾರಂ ಕೆಟಗರಿಯ ಆಪ್ಗೆ ಈಗಾಗಲೇ ವಿಶ್ವದಾದ್ಯಂತ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದರೆಂದರೇ ದಿನದ ಆದಾಯ ಎಷ್ಟಿರಬಹುದು ನೀವೇ ಊಹಿಸಿ. ಈತನ ಕಾಸ್ಟಿಂಗ್ ಕೌಚ್ ಶೋಷಣೆ ನೊಂದು ಬೇಸತ್ತು ಅವಮಾನಿತಳಾಗಿ
ಸಾಗರಿಕ ಎನ್ನುವ ನಟಿ ದೈರ್ಯವಾಗಿ ಮುಂಬೈ ಕ್ರೈಂ ಬ್ರಾಂಚ್ ಗೆ ದೂರುನೀಡಿದ್ದ ಪರಿಣಾಮ ಕುಂದ್ರಾನ ಮತ್ತೊಂದು ಕರಾಳ ಮುಖ ಅನಾವರಣವಾಗಿದೆ.ಕೇವಲ ಇದೊಂದು ನ್ಯೂಡ್ ಫೋಟೋ ಶೂಟ್ ಪ್ರಕರಣ ಮಾತ್ರವಾಗಿರದೇ ಭಾರತೀಯ ಸಿನಿಮಾ ರಂಗದಲ್ಲಿ ಅಸ್ತಿತ್ವ ದಲ್ಲಿರುವ ಕಾಸ್ಟ್ ಕೌಚಿಂಗ್ ಎಂಬ ಕರಾಳ ದಂಧೆಯ ಮತ್ತೊಂದು ಮುಖವಾಡ ಇದಾಗಿದೆ. ಕುಂದ್ರಾನಿಂದ ಶೋಷಣೆ ಒಳಗಾಗಿ ಮನೆಯಲ್ಲಿ ಬಿಚ್ಚಿಟ್ಟುಕೊಂಡಿದ್ದವರೂ ಕೂಡ ಈಗ ಹೊರ ಬಂದು ತಮಗೂ ಆಗಿದ್ದ ಇದೇ ಬೆತ್ತಲೆ ಆಡಿಷನ್ ಅನುಭವವನ್ನು ಬಿಚ್ಚಿಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಈ ಕಾಸ್ಟಿಂಗ್ ಕೌಚ್ ಎಂಬ ಅಸಹ್ಯಕರ ಪ್ರವ್ರತ್ತಿಗೆ ಅಂತಿಮ ಇತಿಶ್ರಿ ಹಾಡಲು ಇದೇ ಸಿನಿಮಾ ರಂಗದ ಒಳ್ಳೆಯ ವ್ಯಕ್ತಿಗಳು ಗಣ್ಯರು ಮಾಧ್ಯಮಗಳು, ಸರ್ಕಾರ ಪೊಲೀಸ್ ಕೈಜೋಡಿಸಬೇಕಿದೆ. ಇಲ್ಲದಿದ್ದರೇ ಎಷ್ಟೋ ಹೆಣ್ಣು ಮಕ್ಕಳು ಸಿನಿಮಾ ರಂಗದಲ್ಲಿ ಈ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ಯಿಂದ ನೊಂದು ಜರ್ಜರಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವೇ ನೋಡಬೇಕಾಗುತ್ತದೆ.

ವೇಶ್ಯಾವಾಟಿಕೆ ಸಿನಿಮಾ ರಂಗದ ಒಂದು ಭಾಗವೇನೋ ಎನ್ನುವಷ್ಟರ ಮಟ್ಟಿಗೆ ಕೆಲವರು ತಪ್ಪಾಗಿ ಮಾತನಾಡಿಕೊಳ್ಳುತ್ತಿದ್ದಾರೆ! ಕಮರ್ಷಿಯಲ್ ಸೆಕ್ಸ್ ಬಿಸಿನೆಸ್ ಗೂ ಸಿನಿಮಾ ರಂಗದ ಕಾಸ್ಟಿಂಗ್ ಕೌಚ್ ಗೂ ನೇರ ಸಂಪರ್ಕ ಕಲ್ಪಿಸುವ ತಪ್ಪು ಗಳಾಗುತ್ತಿದೆ. 2018ರಲ್ಲೇ ಅಮೆರಿಕದ ಪೊಲೀಸರು ಶಾನ್ ಮೂದುಗುಮುಡಿ ಮತ್ತು ಆತನ ಹೆಂಡತಿ ಚಂದ್ರ ಇಬ್ಬರನ್ನೂ ಸೆಕ್ಸ್ ರ್ಯಾಕೆಟ್ ನಡೆಸುತ್ತಿರೆಂದು ಬಂಧಿಸಿದ್ದರು. ಆಗ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಕೆಲವು ಸಹನಟಿಯರನ್ನು ಕಿರುತೆರೆ ಕಲಾವಿದರನ್ನು ಹಾದಿ ತಪ್ಪಿಸಿ ಈ ಸೆಕ್ಸ್ ಬಿಸಿನೆಸ್ ಗೆ ಬಳಸಿಕೊಂಡಿದ್ದು ಬೆಳಕಿಗೆ ಬಂದಿತ್ತು! ಕನ್ನಡದ ಮತ್ತು ತೆಲುಗು ಸಿನೆಮಾದ ನಟ ನಟಿಯರನ್ನು ಈವೆಂಟ್, ಸ್ಟಾರ್ ನೈಟ್ ಕಾರ್ಯಕ್ರಮಗಳ ಹೆಸರಲ್ಲಿ ತಾವೇ ವೀಸಾ ಅರೆಂಜ್ ಮಾಡಿ ಅಮೆರಿಕಾಗೆ ಕರೆಸಿಕೊಳ್ಳುತ್ತಿದ್ದ ಈ ದಂಪತಿಗಳು ತಲೆಗೆ ಸಾವಿರ ಡಾಲರ್ ನಿಂದ ಹತ್ತು ಸಾವಿರ ಡಾಲರ್ ವರೆಗೂ ಚಾರ್ಜ್ ಮಾಡೀ ವೇಶ್ಯಾವಾಟಿಕೆಗೆ ಸಹಕರಿಸುತ್ತಿದ್ದರೆಂಬುದು ತಿಳಿದು ಬಂದಿತ್ತು! ಆಗ ನಮ್ಮ ಸಿನಿಮಾ ಇಂಡಸ್ಟ್ರಿಗೂ ಕಳಂಕ ಬಂದಿತ್ತು. ಹಾಗೆಯೇ 2020ರಲ್ಲಿ ಬಾಂಬೆಯ ಜುಹೂ ಠಾಣೆವ್ಯಾಪ್ತಿಯಲ್ಲಿ ಬೀಚ್ ಪಕ್ಕದ ಹೋಟೆಲ್ ಗಳಲ್ಲಿ ನಡೆಯುತ್ತಿದ್ದ ಸಿನಿಮಾ ನಟಿಯರ ಸೆಕ್ಸ್ ರ್ಯಾಕೆಟ್ ಬೇಧಿಸಿ ಬಾಂಬೆ ಪೊಲೀಸರು ಎಂಟು ಜನ ನಟಿಯರನ್ನು ಬಂದಿಸಿ ಜೈಲಿಗಟ್ಟಿದ್ದರು! ಗಂಟೆಗೆ ನಲವತ್ತು ಸಾವಿರ ರೂಪಾಯಿ ಲೆಕ್ಕದಲ್ಲಿ ಸಿನಿಮಾ ನಟಿಯರನ್ನು ಅಲ್ಲಿ ಬಾಡಿಗೆಗೆ ಕೂಡಲಾಗುತ್ತಿತ್ತು! ಹಾಗೆಯೇ ಅಂಧೇರಿಯ ತ್ರೀ ಸ್ಟಾರ್ ಹೋಟೆಲ್ ನಡೆಯುತ್ತಿದ್ದ ಹೈಪ್ರೊಪೈಲ್ ಗ್ಲಾಮರಸ್ ಸೆಕ್ಸ್ ರ್ಯಾಕೆಟ್ ಬೇಧಿಸಿದ ಬಾಂಬೆ ಪೊಲೀಸರಿಗೇ ಡಜನ್ ಗಟ್ಟಲೆ ಟೆಲಿವಿಷನ್ ಸೀರಿಯಲ್ ನಟಿಯರು ಸಿಕ್ಕು ಬಿದ್ದಿದ್ರೂ! ಸಿನಿಮಾ ಮಂದಿಯ ಕಮರ್ಷಿಯಲ್ ಸೆಕ್ಸ್ ಬಿಸಿನೆಸ್ ಒಂದು ಕಡೆಯಾದರೇ ಆನ್ಲೈನ್ ಹೈಪ್ರೊಪೈಲ್ ವೇಶ್ಯಾವಾಟಿಕೆ ಗಳೆಂಬ ಫೀಮೇಲ್ ಎಸ್ಕಾರ್ಟ್ಸ್ ಸರ್ವೀಸ್ ಸೆಂಟರ್ ಗಳೂ ಸಹ ಸಿನಿಮಾ ಸಹ ನಟಿಯರನ್ನಿಟ್ಟುಕೊಂಡು ವಾಟ್ಸಾಪ್ ಮೆಸೇಂಜರ್ ತ್ರೋ ಮಲ್ಟೀ ಸ್ಟೇಟ್ ವೇಶ್ಯಾವಾಟಿಕೆ ನಡೀತಿದೆ! ಸಿನಿಮಾ ನಟಿಯರಾಗಲು ಮನೆ ತೊರೆದು ಬಂದ ಹೆಣ್ಮಕ್ಕಳನ್ನು ಈ ರೀತಿ ಕಾಸ್ಟ್ ಕೌಚಿಂಗ್ , ದಂಧೆಗೆ ಸೆಳೆದು ಕಾಂಪ್ರಮೈಸಿಂಗ್, ಕಮಿಟಿಂಗ್ ಪದಬಳಸಿ ಹಣದಾಸೆ-ಪಾತ್ರದಾಸೆ ತೋರಿಸಿ ಕೊನೆಗೆ ಬಳಸಿಕೊಂಡು ವೇಶ್ಯಾವಾಟಿಕೆಗೆ ನೂಕುತ್ತಿರುವವರು ಯಾರು? ಅತ್ತ ಸಿನಿಮಾ ರಂಗದಲ್ಲಿ ಪಾತ್ರಗಳೂ ಸಿಗದೇ ಹೊಟ್ಟೆ ತುಂಬಿಸಿಕೊಳ್ಳಲು ಅಡ್ಡದಾರಿ ಹಿಡಿಯುವಂತೆ ಆಸೆ ಹುಟ್ಟಿಸಿ ಪ್ರೇರೇಪಿಸುತ್ತಿರುವವರು ಯಾರು? ಈ ಈಗ ಈ ಕಾಸ್ಟಿಂಗ್ ಕೌಚ್ ಎಂಬುದು ಡಾರ್ಕ್ ಸೀಕ್ರೆಟ್ ಆಫ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿ ಎಂಬಂತಾಗಿಹೋಗಿದೆ! ಅದಕ್ಕೆ ಪೂರಕವೆಂಬಂತೆ ಅಲ್ಲಲ್ಲಿ ಕೆಲವು ನಟ-ನಟಿಯರೂ ಬಹಿರಂಗವಾಗಿ ಈ ಕಾಸ್ಟ್ ಕೌಚಿಂಗ್ ಮನಸ್ಥಿತಿಯ ವಿರುದ್ಧ ಬಂಡೆದ್ದು ಮಾತನಿಡಿದ್ದಾರೆ. ಬಾಲಿವುಡ್ ನ ಸ್ವರ ಭಾಸ್ಕರ್, ಶೆರ್ಲಿನ್ ಚೋಪ್ರಾ, ಮಮತಾ ಕುಲಕರ್ಣಿ, ಪ್ರಾಚೀನ ದೇಶಾಯಿ, ಅಂಕಿತಾ ಲಕಂಢೇ, ಟಿಸ್ಕಾ ಚೋಪ್ರಾ, ಕಲ್ಕಿ ಕೊಚಿಲಿನ್, ಸುಚಿತ್ರಾ ಕ್ರಿಷ್ಣ ಮೂರ್ತಿ, ಪಾಯಲ್ ರತಗಿ, ಸಮೀರಾ ರೆಡ್ಡಿ, ಸಂಭಾವನಾ ಸೇತ್, ಚಿತಾಂಗದಾ ಸಿಂಗ್, ಸುರ್ ವೀನಾ , ಕಿಶ್ವೆರ್ ಮರ್ಚೆಂಟ್, ಪಿಯೀಸು ಚಟರ್ಜಿ, ಕಂಗನಾ ರನಾವತ್ ಮುಂತಾದ ನಟಿಯರು ಈ ಕಾಸ್ಟ್ ಕೌಚಿಂಗ್ ಎಂಬ ಸೆಕ್ಸೂವಲ್ ಹೆರಾಸ್ಮೆಂಟ್ ಬಗ್ಗೆ ಮಾಧ್ಯಮಗಳಲ್ಲಿ ಬಾಯಿತೆರೆದು ಧ್ವನಿ ಎತ್ತಿದ್ದಾರೆ. ಬಾಲಿವುಡ್ ಹೀರೋಗಳಾದ ಆಯುಷ್ಮಾನ್ ಖುರಾನಾ, ರಣವೀರ್ ಸಿಂಗ್ ಗೂ ಕೂಡ ಕಾಸ್ಟಿಂಗ್ ಕೌಚ್ ಕಾಡಿದೆಯೆಂದರೆ ಇದರ ಕರಾಳತೆಯ ಬಗ್ಗೆ ಏನೆನ್ನಬೇಕು ಹೇಳಿ. ಸೀನ್ ಡಿಸ್ಕಸ್ ಮಾಡುವ ನೆಪದಲ್ಲಿ ರೂಮಿಗೆ ಕರೆಯಿಸಿಕೊಂಡು ಲೈಂಗಿಕ ಶೋಷಣೆಗೆ ಗುರಿಪಡಿಸುವ, ಹಾಸಿಗೆ ಹಂಚಿಕೊಂಡರೇ ಒಳ್ಳೆಯ ಪಾತ್ರ ಕೊಡುವುದಾಗಿ ಬಿಗ್ ಆಪರ್ ಆಸೆ ಹುಟ್ಟಿಸಿ ಓಲೈಸುವ ಪ್ರಯತ್ನಗಳ ಬಗ್ಗೆ ನಟಿ ಶ್ರೀರೆಡ್ಡಿ ಅಂತವರಿಂದ ಬೆತ್ತಲೆ ಪ್ರತಿಭಟನೆ ಗಳಾಗುತ್ತಿದ್ದರೂ, ಕಾಸ್ಟ್ ಕೌಚಿಂಗ್ ಒಪ್ಪಿಕೊಂಡೇ ಕೆಲವು ನಟಿಮಣಿಯರು ಸಕ್ಸಸ್ ನ ಶಿಖರವೇರುತ್ತಿದ್ದಾರೆಂಬ ವಾದವೂ ಇದೆ! ಕೆಲವು ಹೀರೋಗಳು ತಮ್ಮ ಮುಂದಿನ ಸಿನಿಮಾಗಳಿಗೂ ತಮಗೆ ಪ್ರಿಯವಾದ ಹೀರೋ ಹೀರೋಯಿನ್ ಅನ್ನೇ ಹಾಕಿಕೊಂಡರೆ ಮಾತ್ರ ಡೇಟ್ ಕೊಡುತ್ತೇನೆನ್ನುವ ಕಂಡೀಷನ್ ಹಾಕುತ್ತಾರಂತೆ! ಅಂಡರ್ ಸ್ಟುಡ್ ..! ಒಳ್ಳೆಯ ಪಾತ್ರಗಳು ಸಿಗಬೇಕಾದರೆ ಕಾಂಪ್ರಮೈಸ್ ಆಗಲೇಬೇಕಂತೇ! ಈ ಕಮಿಟೆಡ್ ಕಾಸ್ಟ್ ಕೌಚಿಂಗ್ ಎಂಬ ಡಾರ್ಕ್ ಟ್ರೂತ್ ಅನ್ನು ಅರಗಿಸಿಕೊಂಡು ಮುಂದೆ ಸಾಗಿದರೆ ಮಾತ್ರ ಸಿನಿಮಾದ ಅದ್ರಷ್ಟ ಪರೀಕ್ಷೆಯ ಆಟದಲ್ಲಿ ಗೆಲ್ಲಬಹುದು ಎನ್ನುವಂತಾಗಿದೆ!

ಎಲ್ಲಿಗೆ ಬಂತು ನೋಡಿ ನಮ್ಮ ಕಲಾ ಸಂಸ್ಕ್ರತಿ.

 


ಸಿನಿಮಾಗಳಲ್ಲಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಕಿರುತೆರೆಯಲ್ಲಿ ಎಲ್ಲಾ ಕಡೆಯೂ ನಟಿಸುವ ಅವಕಾಶ ಕೋರಿ ಹೋಗುವ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವ ಮಾನಸಿಕ ಕಾಯಿಲೆ ಹಾಲಿವುಡ್ ಅನ್ನು ಸೇರಿ ಎಲ್ಲಾ ಚಿತ್ರರಂಗದಲ್ಲೂ ಬೇರೂರಿದೆ. ನಟಿಸಿ ಮಹಾನ್ ಕಲಾವಿದೆ ಆಗಬೇಕು ಹೊಟ್ಟೆ ಬಟ್ಟೆಗೆ ದುಡಿದು ಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು ಬಣ್ಣದ ಲೋಕವನ್ನು ಬಯಸಿ ಬಂದವರು ಈ ಕಾಸ್ಟ್ ಕೌಚಿಂಗ್ ಎಂಬ ಅಸಹ್ಯ ಧಂದೆಯಿಂದ ನೊಂದು ಚಿತ್ರರಂಗದ ಸಹವಾಸವೇ ಬೇಡವೆಂದು ಬೇಸತ್ತು ಮನೆಸೇರಿದವರೆಷ್ಟೋ.

 

ಈ ಕರಾಳ ಕಾಸ್ಟ್ ಕೌಚಿಂಗ್ ಎಂಬ ಕಾಂಪ್ರಮೈಸಿಂಗ್ ಕಾಸ್ಟ್ ಕಾಲಿಂಗ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಎಷ್ಟೋ ನಟಿಯರು ನಾಪತ್ತೆಯಾಗಿದ್ದಾರಂತೆ! ಬಹಳಷ್ಟು ಸಹಕಲಾವಿದೆಯರೂ ಬೆದರಿ ಬಾಯ್ ಮುಚ್ಚಿ ಕೊಂಡಿದ್ದಾರೆ. ಮತ್ತೆ ಕೆಲವರು ದಾರಿ ಕಾಣದೆ ಕಮಿಟ್ ಆಗಿ ಕತ್ತಲ ಪರದೆಯೊಳಗೆ ಒಂದಾಗಿದ್ದಾರೆ.ಇದು ಈವತ್ತಿನ ಸಿನಿ ದುನಿಯಾ. ಬಾಲಿವುಡ್ ಮತ್ತು ಎಲ್ಲಾ ಭಾಷೆಗಳಲ್ಲೂ ನಟಿಸುತ್ತಿರುವ ದೊಡ್ಡ ದೊಡ್ಡ ಪ್ರಸಿದ್ಧ ನಟಿಯರೆನಿಸಿಕೊಂಡವರೇ ಈ ಕಾಸ್ಟಿಂಗ್ ಕೌಚ್ ಬಗ್ಗೆ ಬೆದರಿ ಬಾಯ್ ಬಿಟ್ಟಿದ್ದಾರೆ. ಸಿನಿಮಾ ಗಳ ಆಡಿಷನ್ ಗೆ ಮೊದಲೇ ಅಥವಾ ಆಡಿಷನ್ ಮುಗಿದ ನಂತರ ಚಾನ್ಸ್ ನೀಡುವ ಆಸೆ ತೋರಿಸಿ ಸಾಂದರ್ಭಿಕವಾಗಿ ಕೆಲವೊಮ್ಮೆ ನಿರ್ಮಾಪಕ ಒಮ್ಮೊಮ್ಮೆ ನಿರ್ದೇಶಕ ನಟಿಸಲು ಬಂದ ಹುಡಿಗಿಯನ್ನು ಹಾಸಿಗೆಗೆ ಕರೆದ ಅನುಭವವನ್ನು ಹೇಳಿಕೊಂಡು ಅಳುವ ಹೆಣ್ಮಕ್ಕಳಿದ್ದಾರೆ. ಇಂತಹ ಮಾನಸಿಕ ಹಿಂಸೆಯನ್ನೂ ಯಾವುದೋ ಕಾರಣಕ್ಕೆ ಕೆಲವು ನಟಿಯರು ಕಣ್ಣುಮುಚ್ಚಿ ಅವುಡುಗಚ್ಚಿ ಸಹಿಸಿಕೊಂಡು ಬರುತ್ತಿದ್ದಾರೆ. ಆರಂಭದಲ್ಲಿ ಮಲೆಯಾಳಂ ಚಿತ್ರರಂಗದಲ್ಲಿ ಯತೇಚ್ಛವಾಗಿದ್ದ ಈ ಪ್ರವ್ರತ್ತಿ ನಂತರ ತಮಿಳು ಸಿನಿಮಾದಿಂದ ತೆಲುಗು ನಂತರ ಕನ್ನಡಕ್ಕೆ ದಾಟಿ ಬಂದು ಎಲ್ಲಾ ಭಾಷೆಗಳಲ್ಲೂ ವ್ಯಾಪಿಸಿದೆ. ಬಾಲಿವುಡ್ ನಲ್ಲಂತೂ ಬಗೆದಷ್ಟೂ ಬೆಚ್ಚಿಬೀಳಿಸುವ ಸತ್ಯಗಳು ಈ ಕಾಸ್ಟ್ ಕೌಚಿಂಗ್ ಪ್ರಕರಣದ ಬಗ್ಗೆ ದಂತಕತೆಗಳಿವೆ. ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ಹೆಣ್ಣು ಮಕ್ಕಳನ್ನು ದೈಹಿಕವಾಗಿ ಬಳಸಿಕೊಂಡು ತಮ್ಮ ವಾಂಛೆ ತೀರಿಸಿಕೊಳ್ಳಲೆಂದೇ ಸಿನಿಮಾ ರಂಗಕ್ಕೆ ಬಂದಿರುವ ಉದಾಹರಣೆ ಸಾವಿರಾರಿವೆ. ತಮ್ಮ ಮಾನ ಮರ್ಯಾದೆಗಂಜಿ ಶೋಷಣೆಗೊಳಗಾದ ನಟಿಯರು ಸುಮ್ಮನಿದ್ದಾರೆಸ್ಟೇ

ಸಿನಿಮಾ ಫೀಲ್ಡಿನಲ್ಲಿ ಆರ್ಟಿಸ್ಟ್ ಸಪ್ಲೈಯರ್ ಬ್ರೋಕರ್, ಏಜೆಂಟರೆಂಬ ವಿವಿಧ ಕೆಟಗರಿಯ ಜನ ಕೆಲಸಮಾಡುತ್ತಾರೆ. ಗಾಂಧಿನಗರದ ಭಾವೆಯಲ್ಲಿ ನಿರ್ಮಾಪಕ ರಿಗೆ ನಿರ್ಧೆಶಕರಿಗ, ಕಾಮುಕರಿಗೆ ಹೆಣ್ಣು ಹುಡಿಗೆಯಪ್ನು ಒದಗಿಸಿಕೊದೋರಿಗೆ ”ಮಾಮಾ ಕೆಲಸ ಮಾಡೋನು’ ಎಂಬ ಟ್ಯಾಗ್ ಲೈನ್ ಪಿಂಪ್ ಎಂಬ ಬಿರುದು ಬಾವಲಿಗಳಿವೆ. ನೇರವಾಗಿ ಖಾರವಾಗಿ ಕೆಲವರು ಇವರನ್ನು ‘ತಲೆಹಿಡುಕರು’, ಅಂತ ಮುಖಕ್ಕೆ ರಾಚುವಂತೆ ಉಗಿದರೂ ಈ ಸಂತತಿ ಮಾತ್ರ ಸಿನಿಮಾ ರಂಗದಲ್ಲಿ ಕಡಿಮೆಯಾಗಿಲ್ಲ. ಈಗ ಈ ತಲೆಹಿಡುಕರ ಹಾವಳಿ ಹಿರಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯೆಂಬ ರಿಯಾಲಿಟಿ ಶೋ ಮಾಡೆಲಿಂಗ್, ಕ್ಷೇತ್ರದಲ್ಲೂ ಹಬ್ಬಿ ಗಬ್ಬುನಾಥದಂತೆ ರಾವಡಿ ಎಬ್ಬಿಸಿ ಹೆಣ್ಣುಮಕ್ಕಳ ಕಣ್ಣೀರ ಕೋಡಿಗೆ ಕಾರಣವಾಗಿದೆ. ಮಹಿಳೆಯರ ಮಾನ ಮರ್ಯಾದೆ ರಕ್ಷಣೆಯ ವಿಷಯದಲ್ಲಿ ಅಂತಾರಾಷ್ಟ್ರೀಯ ಕಾನೂನು ಗಳೆ ಹೆಣ್ಮಕ್ಕಳ ಪರವಾಗಿ ತಲೆಬಾಗಿ ನಿಂತಿರುವಾಗ, ಹೆಣ್ಣು ನಮ್ಮದೇ ಮನೆಯ ಅಕ್ಕ-ತಂಗಿ ಅಮ್ಮ ಅಜ್ಜಿ, ಮಗಳು, ಗೆಳತಿ, ಎಲ್ಲಾ ಆಗಿರುವಾಗ ಸಿನಿಮಾ ರಂಗದಲ್ಲಿ ಹೆಣ್ಣುಮಕ್ಕಳ ಮೇಲಾಗುತ್ತಿರುವ ಈ ಕಾಸ್ಟ್ ಕೌಚಿಂಗ್ ಶೋಷಣೆಗೆ ಮುಕ್ತಿ ಕಾಣಿಸಲು ನಾವೆಲ್ಲರೂ ಟೊಂಕಕಟ್ಟಿ ನಿಲ್ಲಬೇಕಿದೆ.

 

Girl in a jacket
error: Content is protected !!