ಶತ್ರುಗಳ ಆಶೀರ್ವಾದ!

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

‌‌‌‌                         ಸಿದ್ಧಸೂಕ್ತಿ :
ಶತ್ರುಗಳ ಆಶೀರ್ವಾದ!
ವಾಹನದಲ್ಲಿ ಬರೆದಿತ್ತು:ಶತ್ರುಗಳ ಆಶೀರ್ವಾದ. ಆಶ್ಚರ್ಯ! ಗುರು- ಹಿರಿ-ಕಿರಿ – ಹಿತೈಷಿಗಳು ಆಶೀರ್ವದಿಸಬಲ್ಲರು. ಅದು ನೀಡುವುದು ಉತ್ತಮ ಫಲ ಅಭಿವೃದ್ಧಿ! ಯಡಿಯೂರಪ್ಪರ ಆಶೀರ್ವಾದ ಬೊಮ್ಮಾಯಿಯ ಮುಖ್ಯಮಂತ್ರಿಯಾಗಿಸಿದಂತೆ! ಆದರೆ ಶತ್ರುಗಳು ಶಪಿಸುವರು, ಆಶೀರ್ವದಿಸರು! ಶಾಪ ಕಂಟಕ, ವರವಲ್ಲ! ನಿಜ. ಆದರೂ ಶತ್ರುಗಳ ಶಾಪ ಕಾಟವೂ ವರವಾಗಬಲ್ಲುದು! ಶ್ರೀಗಂಧವನ್ನು ತೇಯ್ದಂತೆ ಹೆಚ್ಚು ಸುವಾಸನೆ ಬೀರುವಂತೆ, ಚಿನ್ನಕ್ಕೆ ಪುಟ ಕೊಟ್ಟಂತೆ ಅದು ಹೆಚ್ಚು ಕಾಂತಿಯಿಂದ ಹೊಳೆಯುವಂತೆ! ಶತ್ರುಗಳು ಶಪಿಸಿದಂತೆಲ್ಲ, ಅಡ್ಡಿಯಾದಂತೆಲ್ಲ ಸಾಧಕನು ಅದೆಲ್ಲವನ್ನು ಮೆಟ್ಟಿ, ನಿರೀಕ್ಷೆ ಮೀರಿ ಸಾಧಿಸುವನು. ಆತನ ಛಲ ಇಮ್ಮಡಿಸುವುದು. ಪ್ರಬಲ ಇಚ್ಛಾಶಕ್ತಿಯು ಅಸಾಧ್ಯವನ್ನು ಸಾಧ್ಯವಾಗಿಸುವುದು! ಅಂಥ ಸಾಧಕನಿಗೆ ಶತ್ರುಗಳ ಕಾಟ ಶಾಪ ವರವಾಗುವುದು! ಆತ ಶತ್ರುವಿಗೆ ಕೈ ಮುಗಿವನು! ಪ್ರಬಲ ವಿರೋಧ ಪಕ್ಷ ಆಡಳಿತ ಪಕ್ಷಕ್ಕೆ ವರ, ಶಾಪವಲ್ಲ! ವಿರೋಧಪಕ್ಷ ದುರ್ಬಲವಾದರೆ, ಆಡಳಿತ ಪಕ್ಷ ಮಲಗಿದರೂ ಸೈ!!

Girl in a jacket
error: Content is protected !!