ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಇಲ್ಲಂದ್ರಂತೆ

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

ಸಿದ್ಧಸೂಕ್ತಿ :
ಕದ್ದು ಹೋಳಿಗೆ ಕೊಟ್ಟರೆ, ಬೆಲ್ಲ ಇಲ್ಲಂದ್ರಂತೆ!

ಅತ್ತೆಗೆ ಹೆದರಿ ಸೊಸೆ ಗುಟ್ಟಲಿ ಹೋಳಿಗೆ ಮಾಡುತ್ತಿದ್ದಳು.ಬೆಲ್ಲದ ಕೊರತೆ! ಹೊರಗೆ ಮಕ್ಕಳಾಡುತ್ತಿದ್ದವು. ಬಾಯಾರಿ ಬಂದ ಮಗು ಹೋಳಿಗೆ ಕಂಡು ಬೇಡಿತು.ಯಾರಿಗೂ ಹೇಳಬೇಡವೆಂದು ಕೈಗಿತ್ತಳು!ತಿಂದು ಸುಮ್ಮನಿರಬೇಕಿತ್ತು. ಬೆಲ್ಲ ಹಾಕಿಲ್ಲವೆಂದು ಗುಟ್ಟಲಿ ಹೇಳಬಹುದಿತ್ತು.ತಿನ್ನುತ್ತ ಹೊರ ಓಡಿ ಹೋಳಿಗೆಗೆ ಬೆಲ್ಲ ಇಲ್ಲವೆಂದು ಕಿರುಚಿತು! ಗುಟ್ಟು ರಟ್ಟಾಯಿತು! ಗುಟ್ಟು ರಟ್ಟಾಗದೇ ಉಳಿಯುವುದು ಕಷ್ಟ.ಕೆಲವು ಗುಟ್ಟು ರಟ್ಟಾಗಬಾರದು. ಗುಟ್ಟು ತಿಳಿದವನು ಹೊಣೆಗೇಡಿಯಾಗಬಾರದು. ಕಂಡವರಿಗೆಲ್ಲ ಯಾರಿಗೂ ಹೇಳಬೇಡವೆನುತ ಗುಟ್ಟು ತಿಳಿಸಬಾರದು. ಖಾಸಗಿತನ ಸಾರ್ವಜನಿಕವಾಗಬಾರದು. ಗುಟ್ಟು ನಂಬಿಕೆಗಳು ಅನರ್ಹರ ಅಸ್ತ್ರ! ಇಂದಿನ ಮಿತ್ರ ನಾಳಿನ ಶತ್ರು. ಗುಟ್ಟಿನಲಿ ಸದಾ ಇರಲಿ ಎಚ್ಚರ! ಗೋಡೆಗೂ ಕಿವಿ ಕಣ್ಣು! ಕ್ಷಣಾರ್ಧದಲ್ಲಿ ಜಗಜ್ಜಾಹೀರ! ನೆನಪಿರಲಿ, ಭಯಾನಕ, ಸಮಾಜಕಂಟಕ, ಪ್ರಾಣಘಾತಕ ದ್ರೋಹದಂಥ ಗುಟ್ಟು ಗುಟ್ಟಾಗಿಡುವುದು ಹೇಯ ಅಪಾಯ ಅಪರಾಧ!
ಎಚ್ಚರವಹಿಸೋಣ, ಗುಟ್ಟನು ಅರಿತು ನಡೆಯೋಣ!!

Girl in a jacket
error: Content is protected !!