ಹಲವು ಯಶಸ್ವಿ ಚಿತ್ರ ನೀಡಿರುವ ನಿರ್ದೇಶಕ ಮಾದೇಶ್,ಇದೇ ಮೊದಲ ಬಾರಿಗೆ ನಟ ಉಪೇಂದ್ರ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಅಂದ ಹಾಗೆ ‘ಲಗಾಮ್ ಎನ್ನುವ ಸಾಮಾಜಿಕ ಕಳಕಳಿಯ ಕಥಾ ಹಂದರವಿರುವ ಈ ಚಿತ್ರ . ಚಿತ್ರದಲ್ಲಿ ನಾಯಕ ಯಾರಿಗೆ,ಯಾವ ಕಾರಣಕ್ಕೆ ಲಗಾಮ್ ಹಾಕುತ್ತಾನೆ ಎನ್ನುವುದು ಒಂದು ಎಳೆಯ ಕಥಾಹಂದರವಿದೆ. ಚಿತ್ರದಲ್ಲಿ ಉಪೇಂದ್ರ ಅವರ ಜೋಡಿಯಾಗಿ ನಟಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಬ್ಬರ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಕುತೂಹಲ ಹೆಚ್ಚುವಂತೆ ಮಾಡಿದೆ.
ಸಾಮಾಜಿಕ ಸಮಸ್ಯೆಗಳಿಗೆ ನಾಯಕ ಹೇಗೆ ಲಗಾಮ್ ಹಾಕುತ್ತಾನೆ ಎನ್ನುವುದು ಚಿತ್ರದ ತಿರುಳು. ೪೦ ರಿಂದ ೫೦ ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ನಟಿ ಹರಿಪ್ರಿಯಾ, ಮೊದಲ ಬಾರಿಗೆ ಉಪೇಂದ್ರ ಅವರ ಜೊತೆ ನಟಿಸುತ್ತಿದ್ದೇನೆ. ಚಿತ್ರದಲ್ಲಿ ನನ್ನದು ತನಿಖಾ ವರದಿಗಾರ್ತಿಯ ಪಾತ್ರ. ಕಥೆ ಕೇಳುತ್ತಲೇ ಕುತೂಹಲ ಹೆಚ್ಚಿತು. ಯಾವುದಕ್ಕೂ ಭಯಪಡದ ದಿಟ್ಟ ಹುಡುಗಿಯ ಪಾತ್ರ. ನಾಯಕನ್ನು ಯಾವ ಕಾರಣಕ್ಕೆ ಭೇಟಿ ಆಗುತ್ತೇನೆ ಎನ್ನುದರ ಮೇಲೆ ಚಿತ್ರ ನಡೆಯಲಿದೆ .
ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿದ ಮೇಲೆ ಮೈಸೂರಿಗೆ ತೆರಳುತ್ತೇವೆ ಅಲ್ಲಿಂದ ಮಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಿ ಹಾಡಿನ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡುವ ಉದ್ದೇಶವಿದೆ ಎಂದು ಚಿತ್ರದ ನಿರ್ದೇಶಕ ಮಾದೇಶ್ ತಿಳಿಸಿದ್ದಾರೆ. ಚಿತ್ರವನ್ನು ಎ.ಕೇಶವ, ಎ. ನರಸಿಂಹ, ಎಂ.ಆರ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸುರೇಶ್ ಗೋಸ್ವಾಮಿ ಅವರ ಕಥೆಗೆ ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ.
ರಾಜೇಶ್ ಕಟ್ಟ ಛಾಯಾಗ್ರಾಹಣ, ಸುರಾಗ್ ಮತ್ತು ಸಾಧುಕೋಕಿಲ ಅಪ್ಪ-ಮಗನ ಜೋಡಿ ಚಿತ್ರಕ್ಕೆ ಸಂಗೀತ ನೀಡಿದೆ.ರವಿವರ್ಮಾ ಸಾಹಸವಿದೆ.