ಪ್ರಹ್ಲಾದ್ ಜೋಶಿ ,ಸಿ.ಟಿ.ರವಿ ಗೆ ಒಲಿಯಲಿದೆ ಸಿಎಂ ಪಟ್ಟ?

Share

ಬೆಂಗಳೂರು,ಜು,24:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದು ಕೂಡ ಸ್ಪಷ್ಟವಾಗುತ್ತದೆ.

ದೆಹಲಿಯ ಬಿಜೆಪಿ ಪಕ್ಷದಲ್ಲಿ ನಡೆದ ಕೆಲ ಸಂಭ್ರಮಗಳ ಗಮನಿಸಿದರೆ ರಾಜ್ಯದ ನಾಯಕರ ನಡುವಳಿಕೆಗಳ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ಖಚಿತಪಡಿಸುತಿತ್ತು..
ಹೌದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಿ.ಟಿ.ರವಿ ಅವರನ್ನು ರಾಜ್ಯ ನಾಯಕರು ಗೌಪ್ಯವಾಗಿ ಬೇಟಿಯಾಗಿ ಸಂಭ್ರಮಿಸಿದ್ದು ಪುಷ್ಟಿನೀಡುವಂತಿತ್ತು.

ವರಿಷ್ಠರು ‘ಅಚ್ಚರಿಯ ಅಭ್ಯರ್ಥಿ’ಯನ್ನೇ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು ಎಂಬ ಮಾತುಗಳೇ ಕೇಳಿ ಬಂದಿದ್ದು,ಅತ್ತ ಸಂಸತ್‌ನಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್‌ ಜೋಶಿ ಅವರತ್ತ ಮಧ್ಯಾಹ್ನದಿಂದಲೇ ಸಹೋದ್ಯೋಗಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು. ಕೇಂದ್ರದ ಅನೇಕ ಸಚಿವರು, ಬಿಜೆಪಿಯ ಸಂಸದರು ಶುಭ ಹಾರೈಸಿ ಕೈಕುಲುಕುತ್ತಿದ್ದುದು, ‘ಅವರಿಗೆ ರಾಜ್ಯದಲ್ಲಿ ಪ್ರಮುಖ ಸ್ಥಾನ ದೊರೆಯಲಿದೆ’ ಎಂಬ ಮುನ್ಸೂಚನೆಯನ್ನು ನೀಡುವಂತಿತ್ತು.

ಇತ್ತ ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೂ ಅನೇಕರ ಶುಭಾಶಯ ಸ್ವೀಕರಿಸುವುದರಲ್ಲೇ ತಲ್ಲೀನರಾಗಿದ್ದರು.

ಶಾಸಕ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಕೋಲಾರ ಸಂಸದ ಮುನಿಸ್ವಾಮಿ, ಕೇಂದ್ರ ಸಚಿವರಾಗಿರುವ ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಡಿ.ಮುರುಗನ್‌ ಮತ್ತಿತರರು ‘ಶುಭವಾಗಲಿ’ ಎಂದು ಸಿ.ಟಿ. ರವಿ ಅವರನ್ನು ಹಾರೈಸಿದ್ದು ವಿಶೇಷವಾಗಿತ್ತು.

ಪಕ್ಷದ ತಮಿಳುನಾಡು ಉಸ್ತುವಾರಿಯಾಗಿರುವ ರವಿ ಅವರ ಕಚೇರಿಗೆ ಬಂದಿದ್ದ ರಾಮೇಶ್ವರದ ದೇವಸ್ಥಾನದ ಮೂವರು ಅರ್ಚಕರು, ಪೂಜೆ ನೆರವೇರಿಸಿ, ಮಂತ್ರ ಪಠಿಸುವ ಮೂಲಕ ಶುಭ ಹಾರೈಸಿ ಪ್ರಸಾದ ನೀಡಿ ತೆರಳಿದರು.

ವಾರಾಣಸಿಯಿಂದ ದೆಹಲಿಗೆ ಬಂದಿರುವ ಶಾಸಕ ಅರವಿಂದ ಬೆಲ್ಲದ್‌ ಅವರೂ ನಂತರ ರವಿ ಅವರ ಕಚೇರಿಗೆ ಬಂದು ಪ್ರಸಾದ ವಿತರಿಸಿ ಸ್ವಲ್ಪ ಹೊತ್ತು ಚರ್ಚೆ ನಡೆಸಿದರಲ್ಲದೆ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಇದರಿಂದ ಬಹುತೇಕ ಪ್ರಹ್ಲಾದ್ ಜೋಶಿ ,ಅಥವಾ ಸಿ.ಟಿ.ರವಿ ಸಿಎಂ ಆಗುವುದು ಖಚಿತ ಎನ್ನುತ್ತವೆ ಮೂಲಗಳು

Girl in a jacket
error: Content is protected !!