ಓದು ಒಕ್ಕಾಲು, ಬುದ್ಧಿ ಮುಕ್ಕಾಲು

Share

 

ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ

‌‌     ‌‌  ‌‌‌‌      ಸಿದ್ಧಸೂಕ್ತಿ :
ಓದು ಒಕ್ಕಾಲು, ಬುದ್ಧಿ ಮುಕ್ಕಾಲು.

ಕಾಲು=ಒಂದರ ಸಮ ನಾಲ್ಕು ಭಾಗ ಪೈಕಿ ಒಂದು. ಒಕ್ಕಾಲು= ಒಂದು ಕಾಲು. ಮುಕ್ಕಾಲು= ಮೂರು ಕಾಲು.ಓದಿಗಿಂತ ಬುದ್ಧಿ ದೊಡ್ಡದು.ಅದಕ್ಕೇ ಗೌರವ ಡಾಕ್ಟರೇಟ್! ಜ್ಞಾನ – ಸಾಧನೆಗೆ ಓದು ಬೇಕು. ಪದವಿ ಉದ್ಯೋಗ ಉನ್ನತ ಸ್ಥಾನ ಮಾನ ಅದರಿಂದ! ಓದು ಮಗು, ಬುದ್ಧಿ ತಾಯಿ! ಬುದ್ಧಿ ಜ್ಞಾನ ವಿಕಾಸವೇ ಕೃಷಿ ಪಶುಸಂಗೋಪನೆ ಕಟ್ಟಡ ರಸ್ತೆ ಸೇತುವೆ ಯಂತ್ರ ತಂತ್ರ ಮಂತ್ರ ಗ್ರಂಥ ವಿದ್ಯುತ್ ಜ್ಯೌತಿಷ ಖಗೋಳ ಭೂಗೋಳ ಗಣಿತ ಸಮಾಜ ವಿಜ್ಞಾನ ಗಣಕಯಂತ್ರ ಜಾಲತಾಣ ಶಿಲ್ಪ ನಾಟ್ಯ ಸಂಗೀತ ಮತ್ತೊಂದು! ಓದಿನ ಜಂಬ ಬೇಡ. ಓದಿಲ್ಲದೆಯೂ ಇತ್ತು ಇದೆ ಬದುಕು! ಬಾಯಿಂದ ಕಿವಿಗೆ ಹರಿದಿದೆ ವೇದ! ಓದಿಲ್ಲದಂದು ಧರೆಯೊಳಾಕಾಶದೆತ್ತರದಿ ಮೈದಳೆದವು ಅಖಂಡ ಶಿಲೆಯ ಗೊಮ್ಮಟನಂಥ ವಿಗ್ರಹ ದೇವಾಲಯಗಳು! ಹಂಪಿ ಬೇಲೂರುಗಳಂಥ ಶಿಲ್ಪಕಲೆಗಳು! ಅಂದೆಲ್ಲಿ ಇಂದಿನ ವಿವಿ, ಎಂಎ ಬಿಇ ಎಂಬಿಬಿಎಸ್ ಪಿಹೆಚ್ ಡಿ ಡಿಲೀಟ್ ಪದವಿ? ಚರಕ ಸುಶ್ರುತ ಆರ್ಯಭಟ ಪಾಣಿನಿ ಸಿದ್ಧಾರೂಢ ವಿವೇಕರದಾವ ಡಾಕ್ಟರೇಟ್? ಬುದ್ಧಿಯಿಂದ ಓದಿನ ಸಾಮಗ್ರಿ. ಓದು ಬುದ್ಧಿಗೆ ಪ್ರೇರಕ. ಬುದ್ಧಿ ನೀಡದ ಓದು ನಿಷ್ಫಲ. ಓದಿರದೆಯೂ ಬುದ್ಧಿ ಅರಳುವುದು!
ನಾವು ಎಲ್ಲ ಓದೋಣ, ಬುದ್ಧಿಗೆ ಇಂಬು ನೀಡೋಣ!!

Girl in a jacket
error: Content is protected !!